ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಅಜಯ್ ದೇವ್‌ಗನ್ ಅಭಿನಯದ ಸಿನಿಮಾ ‘ಸಿಂಗಂ ಅಗೇನ್‌’; ಈ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ
ಕನ್ನಡ ಸುದ್ದಿ  /  ಮನರಂಜನೆ  /  ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಅಜಯ್ ದೇವ್‌ಗನ್ ಅಭಿನಯದ ಸಿನಿಮಾ ‘ಸಿಂಗಂ ಅಗೇನ್‌’; ಈ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ

ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಅಜಯ್ ದೇವ್‌ಗನ್ ಅಭಿನಯದ ಸಿನಿಮಾ ‘ಸಿಂಗಂ ಅಗೇನ್‌’; ಈ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಿ

ಅಜಯ್ ದೇವ್‌ಗನ್ ಅಭಿನಯದ ‘ಸಿಂಗಂ ಅಗೇನ್‌’ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ನೀವೂ ಈ ಸಿನಿಮಾವನ್ನು ನಿಮ್ಮ ಮನೆಯಲ್ಲೇ ಕುಳಿತು ನೋಡಬಹುದು. ಕಲಾವಿದ ದಂಡೇ ಅಭಿನಯಿಸಿದ ಈ ಸಿನಿಮಾ ಬಗ್ಗೆ ಈಗಾಗಲೇ ಸಾಕಷ್ಟು ಪಾಸಿಟಿವ್ ಟಾಕ್ ಇದೆ.

‘ಸಿಂಗಂ ಅಗೇನ್‌’ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯ
‘ಸಿಂಗಂ ಅಗೇನ್‌’ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯ

ಅಜಯ್ ದೇವ್‌ಗಬ್ ಅಭಿನಯದ ಆಕ್ಷನ್ ಸಿಂಗಂ ಅಗೇನ್‌ ಸಿನಿಮಾವನ್ನು ಸಾಕಷ್ಟು ಜನ ಈಗಾಗಲೇ ಥಿಯೇಟರ್‌ನಲ್ಲಿ ನೋಡಿ ಇಷ್ಟಪಟ್ಟಿದ್ದಾರೆ. ಈ ಬಾರಿ ದೀಪಾವಳಿ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಬಾಕ್ಸ್‌ ಆಫೀಸ್‌ ಕಲೆಕ್ಷನ್ ಕೂಡ ಜೋರಾಗಿಯೇ ಇತ್ತು. ಈ ಸಿನಿಮಾ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ನೀವು ಮನೆಯಲ್ಲೇ ಕುಳಿತು ಈಗ ಸಿನಿಮಾ ವೀಕ್ಷಿಸಬಹುದು. ಉತ್ತಮ ಕಲಾವಿದರ ದಂಡೇ ಈ ಸಿನಿಮಾದಲ್ಲಿ ಅಭಿನಯಿಸಿದೆ.

ಸಿಂಗಂ ಸಿನಿಮಾ 2011ರಲ್ಲಿ ಮೊದಲು ಬಿಡುಗಡೆಯಾಗಿತ್ತು. ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು, ನಂತರ 2014ರಲ್ಲಿ ಸಿಂಗಂ ರಿಟರ್ನ್ಸ್ ಸಿನಿಮಾ ಆಗಮಿಸಿತ್ತು. ಈ ಎರಡೂ ಪ್ರಾಜೆಕ್ಟ್‌ಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಇದಾದ ಬಳಿಕ ನವೆಂಬರ್‌ 1, 2024ರಂದು ಸಿಂಗಂ ಅಗೇನ್‌ ಸಿನಿಮಾ ಬಿಡುಗಡೆಯಾಗಿತ್ತು. ಈಗ ಈ ಸಿನಿಮಾ ಒಟಿಟಯಲ್ಲೂ ವೀಕ್ಷಣೆಗೆ ಲಭ್ಯವಿದೆ.

ಈ ಒಟಿಟಿಯಲ್ಲಿ ನೋಡಬಹುದು

ಸಿಂಗಂ ಅಗೇನ್ ಸಿನಿಮಾವನ್ನು ನೀವು ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ನೋಡಬಹುದು. ಮುಂದಿನ ವಾರವೇ ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಒಟಿಟಿ ಪ್ಲೇ ವರದಿಮಾಡಿದೆ. ನೀವು ನಿಮ್ಮ ಮನೆಯಲ್ಲೇ ಕುಳಿತು ಈ ಸಿನಿಮಾ ವೀಕ್ಷಿಸಬಹುದು. ಡಿಸೆಂಬರ್ 13ರಂದು ಈ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ತಾರಾಗಣ

ಅಜಯ್‌ ದೇವ್‌ಗನ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಜಾಕಿ ಶ್ರಾಫ್, ಕರೀನಾ ಕಪೂರ್ ಹೀಗೆ ಸಾಕಷ್ಟು ಕಲಾವಿದರು ಮುನ್ನಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲರೂ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಸಿಂಗಂ ಅಗೇನ್‌ ಸಹ ಒಂದಾಗಿತ್ತು. ಈ ಸಿನಿಮಾವನ್ನು ಇನ್ನೂ ವೀಕ್ಷಿಸದವರು ಈಗ ಒಟಿಟಿಯಲ್ಲಿ ನೋಡಬಹುದು. ತೆರೆಯ ಮೇಲೆ ವಿಭಿನ್ನ ಪಾತ್ರಗಳನ್ನು ಮಾಡಲು ಸದಾ ಹಂಬಲಿಸುವ ವ್ಯಕ್ತಿ ನಾನು. ಸಿಂಗಂ ಎಗೇನ್‌ನಲ್ಲಿ ಪೊಲೀಸರ ಪ್ರಬಲ ಶತ್ರುವಾಗಿ ನಟಿಸುವುದು ನನಗೆ ದೊರಕಿರುವ ರೋಮಾಂಚಕ ಅವಕಾಶವಾಗಿದೆ ಎಂದು ಅರ್ಜುನ್‌ ಕಪೂರ್ ಹೇಳಿದ್ದರು. ಅವರು ಇಷ್ಟಪಟ್ಟು ಈ ಸಿನಿಮಾದಲ್ಲಿ ಅಭಿನಯಿಸಿದ್ದರು.

ಹೇಗಿದೆ ಕಥೆ
ಇದು ಗಡಿ ರಕ್ಷಣೆ ಮಾಡಲು ಹೋರಾಡುವ ಕಥೆಯಾಗಿದೆ. ಇದೊಂದು ಆಕ್ಷನ್ ಸಿನಿಮಾ. ಇದರಲ್ಲಿ ಪ್ರತಿಯೊಬ್ಬರು ತಮ್ಮ ಉತ್ತಮ ಪ್ರದರ್ಶನವನ್ನು ಅಭಿನಯದ ಮೂಲಕ ನೀಡಿದ್ದಾರೆ. ನಾಯಕ ಭಯೋತ್ಪಾದನೆ ತಡೆಗಟ್ಟಲು ಹೋರಾಡುವ ಕಥೆಯಾಗಿದೆ. ತುಂಬಾ ಗ್ಯ್ರಾಂಡ್ ಟ್ರೇಲರ್ ಮಾಡಿದ್ದು ವೀಕ್ಷಕರು ಅದನ್ನು ನೋಡಿಯೇ ಈ ಸಿನಿಮಾ ಭಾರೀ ಸದ್ದು ಮಾಡಲಿದೆ ಎಂದು ಭವಿಷ್ಯ ನುಡಿದಿದದ್ದರು.

Whats_app_banner