ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಸಿನಿಮಾದ ಟೀಸರ್ ಬಿಡುಗಡೆ; ಹಾಲಿವುಡ್ ಮೂವಿಗಿಂತ ಏನೂ ಕಮ್ಮಿ ಇಲ್ಲ ಎಂದ ಫ್ಯಾನ್ಸ್
ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಎಲ್ಲರೂ ಸಿನಿಮಾದ ಬಗ್ಗೆ ಇನ್ನಷ್ಟು ಹೆಚ್ಚಿನ ನಿರೀಕ್ಷೆಸೃಷ್ಟಿಸಿಕೊಂಡಿದ್ದಾರೆ. ಟೀಸರ್ ನೋಡಿದರೆ ಈ ಸಿನಿಮಾ ಹಾಲಿವುಡ್ ಮೂವಿಗೆ ಸಮನಾಗಿದೆ ಎಂದಿದ್ದಾರೆ.
ಅಜಿತ್ ಕುಮಾರ್ ನಾಯಕನಾಗಿ ನಟಿಸಿರುವ ವಿದಾಮುಯರ್ಚಿ ಚಿತ್ರದ ಬಹು ನಿರೀಕ್ಷಿತ ಟೀಸರ್ ಅನಾವರಣಗೊಂಡಿದ್ದು, ಚಿತ್ರಕ್ಕಾಗಿ ಉತ್ಸುಕರಾಗಿರುವ ಅಭಿಮಾನಿಗಳಲ್ಲಿ ಈಗ ಇನ್ನಷ್ಟು ಉತ್ಸಾಹ ಎದ್ದು ಕಾಣುತ್ತಿದೆ. ಟೀಸರ್ ನೋಡಿದ ವೀಕ್ಷಕರು ಇದು ಯಾವ ಹಾಲಿವುಡ್ ಮೂವಿಗೂ ಕಡಿಮೆ ಇಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ. ತುಂಬಾ ಭಾವನಾತ್ಮಕ ಹಾಗೂ ಆಕ್ಷನ್ ಸೀನ್‌ಗಳನ್ನು ಹೊಂದಿದೆ. ಟೀಸರ್ ನೋಡಿದ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ. ಮುಂದಿನ ವರ್ಷ ಜನವರಿಯಲ್ಲಿ ಸಂಕ್ರಾತಿ ಸಮಯದಲ್ಲಿ ಈ ಸಿನಿಮಾ ರಿಲೀಸ್ ಆಗಬಹುದು ಎಂದು ಹೇಳಲಾಗುತ್ತಿದೆ.
ಲೈಕಾ ಪ್ರೊಡಕ್ಷನ್ಸ್ ವಿದಾಮುಯರ್ಚಿ ಟೀಸರ್ ಬಿಡುಗಡೆಯ ಘೋಷಣೆ ಮಾಡಿತ್ತು. ಆ ಪ್ರಕಾರ ಈಗಾಗಲೇ ಟೀಸರ್ ರಿಲೀಸ್ ಆಗಿದೆ. ಅಜಿತ್ ಕುಮಾರ್ ಜೊತೆಗೆ, ತ್ರಿಶಾ ಕೃಷ್ಣನ್ ಈ ಬಹು ನಿರೀಕ್ಷಿತ ಚಿತ್ರದಲ್ಲಿ ಅಭಿನಯಿಸಿದ್ದಾರೆ. ರೆಜಿನಾ ಕಸ್ಸಂದ್ರ, ಮತ್ತು ನಿಖಿಲ್ ಸೇರಿದಂತೆ ಪ್ರತಿಭಾವಂತ ತಾರಾಗಣವನ್ನು ಈ ಸಿನಿಮಾ ಹೊಂದಿದೆ.
ಟೀಸರ್‌ನಲ್ಲಿದೆ ವಿಶೇಷತೆ
ಒಂದು ನಿಮಿಷದ 48 ಸೆಕೆಂಡುಗಳ ಕಾಲ ಟೀಸರ್ ಇದೆ. ಯಾವುದೇ ಸಂಭಾಷಣೆಯಿಲ್ಲ. ಒಂದೇ ಒಂದು ಡೈಲಾಗ್ ಕೂಡ ಈ ಟೀಸರ್‌ನಲ್ಲಿ ಇಲ್ಲದೆ ಬಿಡುಗಡೆ ಮಾಡಿರುವುದು ವಿಶೇಷ. ಇದನ್ನು ನೋಡಿದ ಅಭಿಮಾನಿಗಳು ಹಾಲಿವುಡ್ ಮಟ್ಟದಲ್ಲಿ ಆಕ್ಷನ್ ಇದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಪಾತ್ರವರ್ಗ
ವಿದಾಮುಯಾರ್ಚಿ ಟೀಸರ್‌ನಲ್ಲಿ ಕಥೆಯನ್ನು ಬಹಿರಂಗಪಡಿಸದಿದ್ದರೂ, ಮುಖ್ಯ ಪಾತ್ರಗಳನ್ನು ಪರಿಚಯಿಸಲಾಗಿದೆ. ಮುಖ್ಯ ಭೂಮಿಕೆಯಲ್ಲಿರುವ ಅಜಿತ್ ಮತ್ತು ತ್ರಿಷಾ ಜೊತೆಗೆ ನೆಗೆಟಿವ್ ಪಾತ್ರಗಳಲ್ಲಿ ನಟಿಸುತ್ತಿರುವ ಅರ್ಜುನ್ ಸರ್ಜಾ ಮತ್ತು ರೆಜಿನಾ ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ನಿಮಿಷ 48 ಸೆಕೆಂಡ್ ಇರುವ ಈ ಟೀಸರ್ ನಲ್ಲಿ ಒಂದೇ ಒಂದು ಡೈಲಾಗ್ ಇಲ್ಲ. ಒಂದು ಹಂತದಲ್ಲಿ ಅರ್ಜುನ್ ಮತ್ತು ರೆಜಿನಾ ಜೋರಾಗಿ ನಗುವ ಸದ್ದು ಬಿಟ್ಟರೆ ಎಲ್ಲವೂ ಹಿನ್ನೆಲೆ ಸಂಗೀತದೊಂದಿಗೆ ಸಾಗುತ್ತದೆ.
ಆದರೆ ಪಾತ್ರಗಳು ಮತ್ತು ಲೊಕೇಶನ್ ಗಳನ್ನು ನೋಡಿದರೆ ಈ ಸಿನಿಮಾ ನಮ್ಮನ್ನು ಒಂದು ವಿಚಿತ್ರ ಲೋಕಕ್ಕೆ ಕೊಂಡೊಯ್ಯಲಿದೆ ಎಂಬುದು ಸ್ಪಷ್ಟವಾಗುತ್ತದೆ. ಹಾಲಿವುಡ್ ಸೆಟಪ್ ಕಾಣಿಸುತ್ತಿದೆ. ಇದರಲ್ಲಿ ಅಜಿತ್ ಲುಕ್ ಕೂಡ ಭರ್ಜರಿಯಾಗಿದೆ. ಕಪ್ಪು ಟಿ-ಶರ್ಟ್, ಕಂದು ಬಣ್ಣದ ಜಾಕೆಟ್ ಮತ್ತು ಅಷ್ಟೇ ಘಾಡ ಬಣ್ಣದ ಸನ್‌ಗ್ಲಾಸ್ ಧರಿಸಿದ್ದಾರೆ. ತ್ರಿಷಾ ಜೊತೆ ಲವ್ ಸ್ಟೋರಿ, ನಂತರ ಫುಲ್ ಆಕ್ಷನ್, ಕೊನೆಗೆ ಅಜಿತ್ ಮುಖದ ತುಂಬೆಲ್ಲಾ ರಕ್ತ ಕಾಣಿಸುತ್ತದೆ.