ಕನ್ನಡ ಸುದ್ದಿ  /  Entertainment  /  Akanksha Dubey: Bhojpuri Actor Akanksha Dubey Dies, Suicide Suspected

Akanksha Dubey: ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ನಿಧನ; ಆತ್ಮಹತ್ಯೆ ಶಂಕೆ

Akanksha Dubey: ಭೋಜ್‌ಪುರಿ ನಟಿ ಹಾಗೂ ಡ್ಯಾನ್ಸರ್‌ ಆಕಾಂಕ್ಷಾ ದುಬೆ ಅವರ ಮೃತದೇಹ ಇಂದು ವಾರಾಣಸಿಯ ಹೋಟೆಲ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದನ್ನು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಇಂದು ಬೆಳಿಗ್ಗೆ 7.45ಕ್ಕೆ ಈ ನಟಿಯ ವಿಡಿಯೊ ಸಾಂಗ್‌ ಬಿಡುಗಡೆಯಾಗಿತ್ತು.

ಆಕಾಂಕ್ಷಾ ದುಬೆ
ಆಕಾಂಕ್ಷಾ ದುಬೆ

ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಅವರ ಮೃತದೇಹ ಇಂದು (ಮಾರ್ಚ್‌ 26) ವಾರಾಣಸಿಯ ಹೋಟೆಲ್‌ವೊಂದರಲ್ಲಿ ಪತ್ತೆಯಾಗಿದೆ. ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹೋಟೆಲ್‌ ಸಿಬ್ಬಂದಿ ಅವರನ್ನು ಗುರುತಿಸಿದ್ದರು.

ಭಾನುವಾರ ವಾರಾಣಾಸಿಯ ಹೋಟೆಲ್‌ವೊಂದರಲ್ಲಿಆಕಾಂಕ್ಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಈಕೆಯ ಹೊಸ ವಿಡಿಯೊ ಸಾಂಗ್‌ ʼಯೇ ಯಾರಾ ಕಭೀ ಹರಾ ನಹೀ ಹೇʼ ಇಂದು ಬೆಳಿಗ್ಗೆ 7.45ಕ್ಕೆ ಬಿಡುಗಡೆಯಾಗಿತ್ತು.

ಈಕೆ ಈ ಹಾಡು ಬಿಡುಗಡೆಯಾಗುವ ಮೊದಲೇ ನೇಣಿಗೆ ಕೊರಳೊಡ್ಡಿದ್ದಾರಾ ಅಥವಾ ನಂತರ ಸಾವಿನ ಹಾದಿ ಹಿಡಿದಿದ್ದಾ? ಎಂಬ ವಿಷಯ ಇನ್ನೂ ಸ್ಪಷ್ಟವಾಗಿಲ್ಲ. ಇವರ ಸಾವಿನ ಬಗ್ಗೆ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.

ಶನಿವಾರ (ಮಾರ್ಚ್‌ 25)ಈಕೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಡಾನ್ಸ್‌ ವಿಡಿಯೊವೊಂದನ್ನು ಅಪ್‌ಲೋಡ್‌ ಮಾಡಿದ್ದರು. ಕಪ್ಪು ಉಡುಪಿನಲ್ಲಿ ಭೋಜ್‌ಪುರಿ ಹಾಡಿಗೆ ಬೆಲ್ಲಿ ಡಾನ್ಸ್‌ ಮಾಡಿದ್ದರು ಈ ಬೆಡಗಿ. ತಮ್ಮ ಕೈಯಲ್ಲಿ ಫೋನ್‌ ಹಿಡಿದುಕೊಂಡು ತಾವೇ ವಿಡಿಯೊ ಮಾಡಿದ್ದರು.

ಇವರ ಸಾವಿನಿಂದ ಅಭಿಮಾನಿಗಳು ಶಾಕ್‌ ಆಗಿದ್ದಾರೆ.

ಅಲ್ಲದೆ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ಗೆ ಕಮೆಂಟ್‌ ಮಾಡುತ್ತಿದ್ದಾರೆ. ʼನಂಬಲಾಗುತ್ತಿಲ್ಲ... ಕೆಲ ಗಂಟೆಗಳ ಹಿಂದೆ ಅವರು ಡಾನ್ಸ್‌ ಮಾಡುತ್ತಿದ್ದರು, ಈಗ ಬದುಕಿಲ್ಲ!ʼ ಎಂದು ಕಮೆಂಟ್‌ ಮಾಡುವ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ. ಅವರು ಇನ್‌ಸ್ಟಾಗ್ರಾಂನಲ್ಲಿ 1.7 ಮಿಲಿಯನ್‌ ಫಾಲೋವರ್ಸ್‌ ಹೊಂದಿದ್ದಾರೆ.

ಇಂದು ಬಿಡುಗಡೆಗೊಂಡ ಆಕಾಂಕ್ಷಾ ಅವರ ಹಾಡಿಗೆ ಪವನ್‌ ಹಾಗೂ ಶಿಲ್ಪಿ ರಾಜ್‌ ಧನಿಯಾಗಿದ್ದಾರೆ. ಚಿತ್ರ ಹಾಡಿಗೆ ಜಾಹಿದ್‌ ಅಕ್ತರ್‌ ಹಾಗೂ ಇಮಾಮುದ್ದಿನ್‌ ಸಾಹಿತ್ಯ ಬರೆದಿದ್ದಾರೆ. ಪಿಯಾಂಶು ಸಿಂಗ್‌ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಹಾಡಿನಲ್ಲಿ ಆಕಾಂಕ್ಷ ಕೆಂಪು ಬಣ್ಣದ ಬಟ್ಟೆ ಧರಿಸಿದ್ದರು.

ಆಕಾಂಕ್ಷಾ ನಟ ಸಮರ್‌ ಸಿಂಗ್‌ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಯೂ ಇತ್ತು. ಕಳೆದ ತಿಂಗಳು ಪ್ರೇಮಿಗಳ ದಿನದಂದು ಆಕೆ ಸಮರ್‌ ಸಿಂಗ್‌ ಜೊತೆಗಿನ ಫೋಟೊ ಹಂಚಿಕೊಂಡು ಅವರಿಗೆ ವಿಶ್‌ ಮಾಡಿದ್ದರು.

ಎಕಾನಾಮಿಕ್‌ ಟೈಮ್ಸ್‌ ವರದಿಯ ಪ್ರಕಾರ ಅವರ ಮುಂದಿನ ಮಿಟ್ಟಿ ಚಿತ್ರದ ಶೂಟಿಂಗ್‌ ಕೂಡ ಮುಗಿಸಿದ್ದರು. ಇದರಲ್ಲಿ ಯಶ್‌ ಕುಮಾರ್‌ ಹಾಗೂ ರಕ್ಷಾ ಗುಪ್ತಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಚಂದನ್‌ ಉಪಾಧ್ಯಾಯ ನಿರ್ದೇಶನದ ಈ ಸಿನಿಮಾಕ್ಕೆ ಅರವಿಂದ್‌ ಪ್ರಸಾದ್‌ ಹಾಗೂ ಪ್ರೇಮ್‌ ಶಂಕರ್‌ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾ ಸುದ್ದಿಗಳನ್ನೂ ಓದಿ

NTR 30: ʼಎನ್‌ಟಿಆರ್‌30ʼ ಸಿನಿಮಾಕ್ಕೆ ಹಾಲಿವುಡ್‌ ಆಕ್ಷನ್‌ ಕೊರಿಯೊಗ್ರಾಫರ್‌ ಎಂಟ್ರಿ

NTR 30: ಜೂನಿಯರ್‌ ಎನ್‌ಟಿಆರ್‌ ನಟನೆಯ ಕೊರಟಾಲ ಶಿವ ನಿರ್ದೇಶನದ ʼಎನ್‌ಟಿಆರ್‌30ʼ ಚಿತ್ರದಿಂದ ಹೊಸದೊಂದು ಅಪ್‌ಡೇಟ್‌ ಸಿಕ್ಕಿದೆ. ಚಿತ್ರದ ಆಕ್ಷನ್‌ ದೃಶ್ಯಗಳ ಸಂಯೋಜನೆಗಾಗಿ ಹಾಲಿವುಡ್‌ನ ಖ್ಯಾತ ಆಕ್ಷನ್‌ ಕೊರಿಯೊಗ್ರಾಫರ್‌ ಕೆನ್ನಿ ಬೇಟ್ಸ್‌ ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.

Meena on Wedding Rumour: ‘ಏನೆನೋ ಕಲ್ಪಿಸಿಕೊಳ್ಳಬೇಡಿ.. ನನ್ನ ಗಮನವೀಗ ಮಗಳ ಮೇಲಿದೆ..’; ಧನುಷ್‌ ಜತೆಗಿನ ಮದುವೆ ಬಗ್ಗೆ ಮೀನಾ ಸಿಡಿಮಿಡಿ!

ಬಹುಭಾಷಾ ನಟಿ ಮೀನಾ ಕಳೆದ ಕೆಲ ದಿನಗಳಿಂದ ಮದುವೆ ವಿಚಾರವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಪತಿಯ ನಿಧನವಾಗಿ ಕೆಲ ತಿಂಗಳ ಬಳಿಕ ಮದುವೆ ವಿಚಾರವೇ ಸದ್ದು ಮಾಡಿತ್ತು. ಇದೀಗ ಅದ್ಯಾವ ಮಟ್ಟಿಗೆ ಎಂದರೆ, 46ರ ಪ್ರಾಯದ ಮೀನಾ, 39 ವಯಸ್ಸಿನ ತಮಿಳಿನ ಸ್ಟಾರ್‌ ನಟ ಧನುಷ್‌ ಅವರನ್ನು ಇನ್ನೇನು ಮದುವೆ ಆಗಲಿದ್ದಾರೆ ಎಂಬ ಗುಲ್ಲು ಕಾಲಿವುಡ್‌ ಅಂಗಳದಲ್ಲಿ ಸದ್ದು ಮಾಡಿತ್ತು. ಈಗ ಇದೆಲ್ಲದಕ್ಕೂ ಉತ್ತರ ಸಿಕ್ಕಿದೆ.

IPL_Entry_Point

ವಿಭಾಗ