Sky Force Collection: ವಾರಾಂತ್ಯದ ನಂತರ ಕುಸಿತ ಕಂಡ ‘ಸ್ಕೈ ಫೋರ್ಸ್’ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  Sky Force Collection: ವಾರಾಂತ್ಯದ ನಂತರ ಕುಸಿತ ಕಂಡ ‘ಸ್ಕೈ ಫೋರ್ಸ್’ ಸಿನಿಮಾ

Sky Force Collection: ವಾರಾಂತ್ಯದ ನಂತರ ಕುಸಿತ ಕಂಡ ‘ಸ್ಕೈ ಫೋರ್ಸ್’ ಸಿನಿಮಾ

ಸ್ಕೈ ಫೋರ್ಸ್ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ 86.5 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ. ಶಾಹಿದ್ ಕಪೂರ್ ಅವರ 'ದೇವಾ' ಸಿನಿಮಾ ‘ಸ್ಕೈ ಫೋರ್ಸ್‌’ ಈ ಸಿನಿಮಾಗೆ ಪೈಪೋಟಿ ನೀಡುತ್ತಿದೆ.

ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ಅಭಿನಯದ ಸ್ಕೈ ಫೋರ್ಸ್‌ ಸಿನಿಮಾದ ಕಲೆಕ್ಷನ್ ವಿವರ
ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ಅಭಿನಯದ ಸ್ಕೈ ಫೋರ್ಸ್‌ ಸಿನಿಮಾದ ಕಲೆಕ್ಷನ್ ವಿವರ

ಬಾಲಿವುಡ್‌ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ ಸಿನಿಮಾ 'ಸ್ಕೈ ಫೋರ್ಸ್' ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಅಕ್ಷಯ್ ಕುಮಾರ್ ಮತ್ತು ವೀರ್ ಪಹರಿಯಾ ನಟಿಸಿದ ಸ್ಕೈ ಫೋರ್ಸ್ ಸಿನಿಮಾವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆಂಬುದು ಗಳಿಕೆಯಾದ ಹಣದ ಮೂಲಕವೇ ಸಾಬೀತಾಗಿದೆ. ವಾರಾಂತ್ಯದಲ್ಲಿ ಗಲ್ಲಾಪೆಟ್ಟಿಯನ್ನು ತುಂಬಿಸಿಕೊಂಡ ಸಿನಿಮಾ ಸೋಮವಾರದಿಂದ (ಫೆ 3) ಕುಸಿತ ಕಂಡಿದೆ. ಈ ಚಿತ್ರ ಸೋಮವಾರ 1.35 ಕೋಟಿ ರೂ.ಗಳನ್ನು ಗಳಿಸಿದೆ. ಸ್ಕೈ ಫೋರ್ಸ್ ಸಿನಿಮಾ ಬಿಡುಗಡೆಯಾದ ಮೊದಲ ವಾರದಲ್ಲೇ 86.5 ಕೋಟಿ ರೂಪಾಯಿ ಗಳಿಸಿತ್ತು ಎನ್ನಲಾಗಿದೆ.

ಶಾಹಿದ್ ಕಪೂರ್ ಅವರ 'ದೇವಾ' ಸಿನಿಮಾ ‘ಸ್ಕೈ ಫೋರ್ಸ್‌’ ಈ ಸಿನಿಮಾಗೆ ಪೈಪೋಟಿ ನೀಡುತ್ತಿದೆ. 'ದೇವಾ' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ದೊಡ್ಡ ಮಟ್ಟದಲ್ಲಿ ಇರದೇ ಇದ್ದರೂ, ಅಕ್ಷಯ್ ಕುಮಾರ್ ಸಿನಿಮಾದ ಹಣ ಗಳಿಕೆಯನ್ನು ಆ ಸಿನಿಮಾ ಕಡಿಮೆ ಮಾಡುತ್ತಿದೆ ‘ಟೈಮ್ಸ್‌ ಆಪ್ ಇಂಡಿಯಾ’ ವರದಿ ಮಾಡಿದೆ.

ಈ ಸಿನಿಮಾ ಬಿಡುಗಡೆಯಾಗಿ ಒಟ್ಟು 13 ದಿನಗಳು ಕಳೆದಿದೆ. 'ಸ್ಕೈ ಫೋರ್ಸ್' ಜನವರಿ 24ರಂದು ಬಿಡುಗಡೆಯಾಗಿದ್ದು, ಇಂದು ಫೆಬ್ರವರಿ 5ರಂದು 13ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆಗೆ ಸಿಕ್ಕ ಅಂಕಿ ಅಂಶಗಳ ಪ್ರಕಾರ ಸುಮಾರು 101.35 ಕೋಟಿ ಹಣವನ್ನು ‘ಸ್ಕೈ ಫೋರ್ಸ್’ ಸಿನಿಮಾ ಗಳಿಸಿದೆ. ಮುಂದಿನ ದಿನಗಳಲ್ಲಿ ಗಳಿಕೆ ಕುಸಿಯುವ ಸಂಭವ ಇದೆ.

ಇಲ್ಲಿದೆ ವಿವರ

ದಿನ 1 ಶನಿವಾರ: 22 ಕೋಟಿ

ದಿನ 3 ನೇ ಭಾನುವಾರ: 28 ಕೋಟಿ

ದಿನ 4 ಸೋಮವಾರ : 7 ಕೋಟಿ

ದಿನ 5 ಮಂಗಳವಾರ: 5.75 ಕೋಟಿ

ದಿನ 6 ಬುಧವಾರ: 6 ಕೋಟಿ

ದಿನ 7 ಗುರುವಾರ : 5.5 ಕೋಟಿ

ವಾರ 1 ಒಟ್ಟು: 86.5 ಕೋಟಿ

ದಿನ 8 ಶುಕ್ರವಾರ; 3 ಕೋಟಿ

ದಿನ 9 ಶನಿವಾರ: 5 ಕೋಟಿ

ದಿನ 10 ಭಾನುವಾರ: 5.5 ಕೋಟಿ

ದಿನ 11 ಸೋಮವಾರ: 1.35 ಕೋಟಿ

ಒಟ್ಟು ಸಂಗ್ರಹ: 101.35 ಕೋಟಿ ಎಂದು ಅಂದಾಜಿಸಲಾಗಿದೆ.

'ಸ್ಕೈ ಫೋರ್ಸ್' ಸಿನಿಮಾದ ಬಗ್ಗೆ

1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ದೇಶಪ್ರೇಮದ ಜೊತೆಗೆ ಆ್ಯಕ್ಷನ್ ಕೂಡ ಇದೆ. ಇದು ಭಾರತೀಯ ವಾಯುಪಡೆಯ ಧೈರ್ಯದ ಪ್ರತೀಕ ಎಂಬಂತೆ ಕಾಣಿಸುತ್ತದೆ.

ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್‌ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಮತ್ತು ಜ್ಯೋತಿ ದೇಶಪಾಂಡೆ ಈ ಸಿನಿಮಾ ನಿರ್ಮಿಸಿದ್ದಾರೆ. ಸಂದೀಪ್ ಕೇವಾಲಾನಿ ಮತ್ತು ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಮತ್ತು ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ವೀರ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರವು ಜನವರಿ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ.

Whats_app_banner