Alia Bhatt Feeding Baby: ಮಗುವಿಗೆ ಹಾಲುಣಿಸುತ್ತಿರುವ ಆಲಿಯಾ ಭಟ್‌ ಫೋಟೋ ವೈರಲ್‌...ಇದರ ಅಸಲಿಯತ್ತೇನು?
ಕನ್ನಡ ಸುದ್ದಿ  /  ಮನರಂಜನೆ  /  Alia Bhatt Feeding Baby: ಮಗುವಿಗೆ ಹಾಲುಣಿಸುತ್ತಿರುವ ಆಲಿಯಾ ಭಟ್‌ ಫೋಟೋ ವೈರಲ್‌...ಇದರ ಅಸಲಿಯತ್ತೇನು?

Alia Bhatt Feeding Baby: ಮಗುವಿಗೆ ಹಾಲುಣಿಸುತ್ತಿರುವ ಆಲಿಯಾ ಭಟ್‌ ಫೋಟೋ ವೈರಲ್‌...ಇದರ ಅಸಲಿಯತ್ತೇನು?

ಆಲಿಯಾ ಭಟ್‌, ಪಕ್ಕಾ ಭಾರತೀಯ ನಾರಿಯಂತೆ ಕೆಂಪು ಬಣ್ಣದ ರೇಷ್ಮೆ ಸೀರೆ ಉಟ್ಟು, ಅಲಂಕಾರ ಮಾಡಿಕೊಂಡು, ಹಣಗೆ ಕುಂಕುಮ ಇಟ್ಟು ರೆಡಿಯಾಗಿದ್ದಾರೆ. ಜೊತೆಗೆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುತ್ತಿದ್ದಾರೆ.

ಆಲಿಯಾ ಭಟ್‌ ಫೋಟೋ ವೈರಲ್‌
ಆಲಿಯಾ ಭಟ್‌ ಫೋಟೋ ವೈರಲ್‌ (PC: Facebook)

ಬಾಲಿವುಡ್‌ ನಟಿ ಆಲಿಯಾ ಭಟ್‌ ಇತ್ತಿಚೆಗೆ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ರಣಬೀರ್‌ ಕಪೂರ್‌ ಹಾಗೂ ಆಲಿಯಾ ಪ್ರೀತಿಸುತ್ತಿದ್ದಾರೆ ಎಂದು ತಿಳಿದಾಗಿನಿಂದ, ಆಲಿಯಾಗೆ ಮಗು ಆಗುವವರೆಗೂ ಅಭಿಮಾನಿಗಳು ಅವರ ಪ್ರತಿ ಅಪ್‌ಡೇಟ್‌ ಪಡೆಯಲು ಕಾಯುತ್ತಿದ್ದಾರೆ. ಸದ್ಯಕ್ಕೆ ಆಲಿಯಾ ಸಿನಿಮಾಗಳಿಂದ ದೂರವಿದ್ದು ತಾಯ್ತನ ಎಂಜಾಯ್ ಮಾಡುತ್ತಿದ್ದಾರೆ.

ಆಲಿಯಾ ಭಟ್‌, ಮಗುವಿಗೆ ಜನ್ಮ ನೀಡಿದ ನಂತರ ದಂಪತಿಗೆ ಶುಭ ಕೋರಿದ್ದ ಅಭಿಮಾನಿಗಳು ಆದಷ್ಟು ಬೇಗ ಮಗುವನ್ನು ತೋರಿಸಿ ಎಂದು ಮನವಿ ಮಾಡುತ್ತಲೇ ಇದ್ದಾರೆ. ಆದರೆ ಆಲಿಯಾ ಹಾಗೂ ರಣಬೀರ್‌ ಮಾತ್ರ ಇನ್ನೂ ಅಭಿಮಾನಿಗಳ ಕರೆಗೆ ಸ್ಪಂದಿಸಿಲ್ಲ. ಆಸ್ಪತ್ರೆಯಿಂದ ಮನೆಗೆ ಮಗುವನ್ನು ಕರೆತಂದಾಗಲೂ ಪಾಪರಾಜಿಗಳ ಕ್ಯಾಮರಾಗೆ ಬೀಳದಂತೆ ಬಹಳ ಎಚ್ಚರಿಕೆಯಿಂದ ಇದ್ದರು. ಮತ್ತೊಂದೆಡೆ ಫ್ಯಾನ್ಸ್‌ ಅಂತೂ ಪ್ರತಿದಿನ ಅಮ್ಮ-ಮಗುವಿನ ಯೋಗಕ್ಷೇಮ ವಿಚಾರಿಸುತ್ತಲೇ ಇದ್ದಾರೆ. ಈ ನಡುವೆ ಆಲಿಯಾ ಹಾಗೂ ಮಗುವಿನ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಬಹಳ ವೈರಲ್‌ ಆಗುತ್ತಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ.

ಆಲಿಯಾ ಭಟ್‌, ತನ್ನ ಮಗುವಿಗೆ ಹಾಲುಣಿಸುತ್ತಿರುವ ಫೋಟೋ ಅದು. ಆಲಿಯಾ ಭಟ್‌, ಪಕ್ಕಾ ಭಾರತೀಯ ನಾರಿಯಂತೆ ಕೆಂಪು ಬಣ್ಣದ ರೇಷ್ಮೆ ಸೀರೆ ಉಟ್ಟು, ಅಲಂಕಾರ ಮಾಡಿಕೊಂಡು, ಹಣಗೆ ಕುಂಕುಮ ಇಟ್ಟು ರೆಡಿಯಾಗಿದ್ದಾರೆ. ಜೊತೆಗೆ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ಹಾಲುಣಿಸುತ್ತಿದ್ದಾರೆ. ಈ ಫೋಟೋ ರಿವೀಲ್‌ ಆಗುತ್ತಿದ್ದಂತೆ ಆಲಿಯಾ ಹಾಗೂ ರಣಬೀರ್‌ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಎಲ್ಲರೂ ಈ ಫೋಟೋವನ್ನು ತಮ್ಮ ವಾಟ್ಸಾಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್‌ ಸ್ಟೋರಿಗೆ ಹಂಚಿಕೊಂಡರು. ಆಲಿಯಾ ಭಟ್‌ ಸ್ಟಾರ್‌ ನಟಿ ಆದರೂ ಮಗುವಿನ ಆರೈಕೆಯಲ್ಲಿ ಪಕ್ಕಾ ಸಂಪ್ರದಾಯ ಪಾಲಿಸುವ ಹೆಣ್ಣು ಮಗಳು ಎಂದೂ ಕಮೆಂಟ್‌ ಮಾಡಿದ್ದರು. ಆದರೆ ನಂತರ ಇದು ಎಡಿಟ್‌ ಮಾಡಿರುವ ಫೋಟೋ ಎಂದು ತಿಳಿದು ಎಲ್ಲರೂ ನಿರಾಸೆ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಇದು ಮಾರ್ಪಿಂಗ್‌ ಮಾಡಿರುವ ಫೋಟೋ, ಬೇರೆ ಮಹಿಳೆಯೊಬ್ಬರ ಫೋಟೋಗೆ ಆಲಿಯಾ ಭಟ್‌ ಮುಖವನ್ನು ಇಟ್ಟು ಸ್ವಲ್ಪವೂ ಅನುಮಾನ ಬಾರದಂತೆ ಕ್ಲಿಯರ್‌ ಆಗಿ ಎಡಿಟ್‌ ಮಾಡಲಾಗಿದೆ.

ಅಸಲಿ ಫೋಟೋ
ಅಸಲಿ ಫೋಟೋ (PC: Facebook)

ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಇದೇ ವರ್ಷ ಏಪ್ರಿಲ್‌ 14 ರಂದು ಮದುವೆಯಾಗಿದ್ದರು. ಆಲಿಯಾ ಹಾಗೂ ರಣಬೀರ್‌ಗೆ ಬಹಳ ವರ್ಷಗಳಿಂದ ಪರಿಚಯ ಇದ್ದರೂ 'ಬ್ರಹ್ಮಾಸ್ತ್ರ' ಸಿನಿಮಾ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದೆ. 3 ವರ್ಷ ಪ್ರೀತಿಯಲ್ಲಿದ್ದ ಈ ಜೋಡಿ ಕಳೆದ ಏಪ್ರಿಲ್ 14 ರಂದು ಮುಂಬೈನಲ್ಲಿ ಆಪ್ತರ ಸಮ್ಮುಖದಲ್ಲಿ ಕೈ ಹಿಡಿದಿದ್ದರು.

ಮದುವೆಯಾದ 2 ತಿಂಗಳಲ್ಲಿ ಅಂದರೆ, ಜೂನ್ 27 ರಂದು ಆಲಿಯಾ ,ರಣಬೀರ್ ತಾವು ಅಪ್ಪ-ಅಮ್ಮನಾಗುತ್ತಿರುವ ವಿಚಾರವನ್ನು ರಂದು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಮದುವೆಯಾದ ಎರಡೇ ತಿಂಗಳಿಗೆ ಪ್ರೆಗ್ನೆನ್ಸಿ ಘೋಷಿಸಿದ್ದ ಆಲಿಯಾ ಹಾಗೂ ರಣಬೀರ್ ಬಗ್ಗೆ ಅನೇಕರು ವ್ಯಂಗ್ಯವಾಡಿದ್ದರು. ನವೆಂಬರ್‌ 6 ರಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Whats_app_banner