OTT Top 5 Movies this Week: ಈ ವಾರ ಒಟಿಟಿಯಲ್ಲಿ ನೋಡಲೇಬೇಕಾದ ಟಾಪ್ 5 ಸಿನಿಮಾಗಳಿವು, ನಿಮ್ಮ ಮೊದಲ ಆಯ್ಕೆ ಯಾವುದು?
OTT Top 5 Movies this Week: ಈ ವಾರವೂ ಕೆಲವು ಸಿನಿಮಾಗಳು ಒಟಿಟಿ ಅಂಗಳ ಪ್ರವೇಶಿಸಲಿವೆ. ಆ ಪೈಕಿ ತೆಲುಗು ಸಿನಿಮಾವೊಂದು ನೇರವಾಗಿ ಒಟಿಟಿಗೆ ಬರುತ್ತಿದ್ದರೆ, ವಿಮರ್ಶಕರ ಮೆಚ್ಚುಗೆ ಪಡೆದ ಮಲಯಾಳಂ ಚಿತ್ರವೂ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ವಾರ ಒಟಿಟಿಗಳಲ್ಲಿ ವೀಕ್ಷಿಸಬಹುದಾದ ಟಾಪ್ 5 ಸಿನಿಮಾಗಳು ಇಲ್ಲಿವೆ.
OTT Top 5 Movies this Week: ಹೊಸ ವರ್ಷದನ ಪ್ರಯುಕ್ತ ಈ ವಾರ ಒಟಿಟಿಯಲ್ಲಿ ಸಾಲು ಸಾಲು ಹೊಸ ಸಿನಿಮಾಗಳು ಮತ್ತು ವೆಬ್‌ಸಿರೀಸ್‌ಗಳು ಪ್ರಸಾರವಾಗಲಿವೆ. ಆ ಪೈಕಿ ಐದು ಸಿನಿಮಾಗಳು ವಿಶೇಷ ಎನಿಸಿಕೊಂಡಿವೆ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಮಲಯಾಳಂ ಸಿನಿಮಾ ಸಹ ಈ ಲಿಸ್ಟ್‌ನಲ್ಲಿದೆ. ಹಾಗಾದರೆ, ಆ ಟಾಪ್ ಐದು ಸಿನಿಮಾಗಳು ಯಾವುವು? ಇಲ್ಲಿದೆ ಪಟ್ಟಿ.
ಕಥಾ ಕಮಾಮಿಶು
ತೆಲುಗಿನ ಕಥಾ ಕಮಾಮಿಶು ಸಿನಿಮಾ ನಾಳೆ (ಜನವರಿ 2) ಆಹಾ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳ ಬದಲು ನೇರವಾಗಿ ಒಟಿಟಿಗೆ ಆಗಮಿಸುತ್ತಿದೆ. ಇಂದ್ರಜಾ, ಕರುಣಾ ಕುಮಾರ್, ಕೃತಿಕಾ ರಾಯ್, ಕೃಷ್ಣ ಪ್ರಸಾದ್, ಹರ್ಷಿಣಿ ಕೊಡೂರು, ವೆಂಕಟೇಶ್ ಕಾಕುಮಾನು, ಶ್ರುತಿ ರೈ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಈ ಚಿತ್ರವನ್ನು ಗೌತಮ್- ಕಾರ್ತಿಕ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯೂ ಹೊಸದಾಗಿ ಮದುವೆಯಾದ ನಾಲ್ಕು ಜೋಡಿಗಳ ಮೊದಲ ರಾತ್ರಿಯ ಸುತ್ತ ಸುತ್ತುತ್ತದೆ.
ಆಲ್ ವಿ ಇಮ್ಯಾಜಿನ್ ಆಸ್ ಲೈಟ್
ಕಾನ್ ಪ್ರಶಸ್ತಿ ವಿಜೇತ ಸಿನಿಮಾ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಜನವರಿ 3ರಂದು ಡಿಸ್ನಿ + ಹಾಟ್‌ಸ್ಟಾರ್ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಮೂಲ ಮಲಯಾಳಂ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಕಾನಿ ಕುಶ್ರುತಿ ಮತ್ತು ದಿವ್ಯಾ ಪ್ರಭಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು ಪಾಯಲ್ ಕಪಾಡಿಯಾ ನಿರ್ದೇಶಿಸಿದ್ದಾರೆ. ಈ ಚಿತ್ರವು ಮುಂಬೈ ನಗರದಲ್ಲಿ ವಾಸಿಸುವ ಇಬ್ಬರು ದಾದಿಯರ ಸುತ್ತ ಸುತ್ತುತ್ತದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ.
ಲವ್ ರೆಡ್ಡಿ
ಲವ್ ರೆಡ್ಡಿ' ಜನವರಿ 3 ರಂದು ಆಹಾ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಈ ಲವ್ ರೊಮ್ಯಾಂಟಿಕ್ ಚಿತ್ರದಲ್ಲಿ ಅಂಜನ್ ರಾಮಚಂದ್ರ ಮತ್ತು ಸರ್ವನಿ ಕೃಷ್ಣವೇಣಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನಿರ್ದೇಶಕ ಸಮ್ರಾನ್ ರೆಡ್ಡಿ ಈ ಚಿತ್ರವನ್ನು ರಾಯಲಸೀಮಾ ಸೊಗಡಿನಲ್ಲಿ, ಆ ಭಾಗದ ಲವ್ ಸ್ಟೋರಿಯ ಸುತ್ತ ಮಾಡಿದ್ದಾರೆ. 2024ರ ಅಕ್ಟೋಬರ್ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಹೇಳಿಕೊಳ್ಳುವ ಗಳಿಕೆ ಕಂಡಿಲ್ಲ. ಈಗ ಈ ಚಿತ್ರವು ಜನವರಿ 3ರಂದು ಒಟಿಟಿಗೆ ಆಗಮಿಸಲಿದೆ.
ಟ್ರ್ಯಾಪ್
ಹಾಲಿವುಡ್ ಚಿತ್ರ 'ಟ್ರ್ಯಾಪ್'. ನಾಳೆ (ಜನವರಿ 2) ಜಿಯೋ ಸಿನೆಮಾ ಒಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆಗಲಿದೆ. ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವು ಈಗಾಗಲೇ ಕೆಲವು ಒಟಿಟಿ ವೇದಿಕೆಗಳಲ್ಲಿ ಬಾಡಿಗೆ ರೂಪದಲ್ಲಿ ಲಭ್ಯವಿದೆ. ಈಗ ಬಾಡಿಗೆ- ಮುಕ್ತವಾಗಿ ಜಿಯೋ ಸಿನೆಮಾ ಒಟಿಟಿಯನ್ನು ಪ್ರವೇಶಿಸಲಿದೆ. ಟ್ರ್ಯಾಪ್ ಚಿತ್ರದಲ್ಲಿ ಜೋಶ್ ಹಾರ್ಟ್ನೆಟ್ ಮುಖ್ಯ ಪಾತ್ರದಲ್ಲಿದ್ದಾರೆ. ನೈಟ್ ಶ್ಯಾಮಲನ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
ಕದಕನ್
ಮಲಯಾಳಂ ಆಕ್ಷನ್ ಥ್ರಿಲ್ಲರ್ ಚಿತ್ರ 'ಕದಕನ್' ಜನವರಿ 3 ರಂದು ಸನ್ ನೆಕ್ಸ್ಟ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗಲಿದೆ. ಈ ಚಿತ್ರದಲ್ಲಿ ಹಕೀಮ್ ಶಹಜಹಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಸಜಿಲ್ ಮಾಂಪಾಡ್ ನಿರ್ದೇಶಿಸಿದ್ದಾರೆ. ಈ ಚಿತ್ರವು 2024ರ ಮಾರ್ಚ್ ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ನೋಡುಗರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಈಗ ಈ ಸಿನಿಮಾ ಸನ್ ನೆಕ್ಸ್ಟ್ ಒಟಿಟಿಗೆ ಬರುತ್ತಿದೆ.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope