ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ನೋಡಲು ಕಾದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌; ಈ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಮೂವಿ
ಕನ್ನಡ ಸುದ್ದಿ  /  ಮನರಂಜನೆ  /  ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ನೋಡಲು ಕಾದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌; ಈ Ott ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಮೂವಿ

ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ನೋಡಲು ಕಾದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌; ಈ OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಮೂವಿ

ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಒಟಿಟಿಗೆ ಬರಲಿದೆ. ಈಗ ಥಿಯೇಟರ್‌ನಲ್ಲಿ ಸಿನಿಮಾ ನೋಡಿದವರೂ ಸಹ ಮತ್ತೊಮ್ಮೆ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಲು ಕಾಯುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.

ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ನೋಡಲು ಕಾದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌
ಪುಷ್ಪ 2 ಸಿನಿಮಾ ಒಟಿಟಿಯಲ್ಲಿ ನೋಡಲು ಕಾದವರಿಗೆ ಇಲ್ಲಿದೆ ಗುಡ್‌ ನ್ಯೂಸ್‌

ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಭರ್ಜರಿ ಕಲೆಕ್ಷನ್ ಕೂಡ ಆಗಿದೆ. ಹೀಗಿರುವಾಗ ಸಾಕಷ್ಟು ಅಭಿಮಾನಿಗಳು ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದ್ದರು ಮತ್ತೊಮ್ಮೆ ಒಟಿಟಿಯಲ್ಲಿ ವೀಕ್ಷಿಸಬೇಕು ಎಂದು ಕಾದಿದ್ದಾರೆ. ಹೀಗಿರುವಾಗ ಪುಷ್ಪ 2: ದ ರೂಲ್ ಸಿನಿಮಾವು ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗುತ್ತದೆ ಎಂದು ಕುತೂಹಲ ಹೊಂದಿದ್ದ ವಿಕ್ಷಕರಿಗೆ ನೆಟ್‌ಫ್ಲಿಕ್ಸ್‌ ಉತ್ತರಿಸಿದೆ.

ಪುಷ್ಪ 2: ದಿ ರೂಲ್ ಅನ್ನು ಭಾರತ ಮತ್ತು ಹೊರ ದೇಶಗಳಲ್ಲೂ ಬಿಡುಗಡೆ ಮಾಡಲಾಗಿದೆ. ಸಾಕಷ್ಟು ಜನ ಈಗಾಗಲೇ ಸಿನಿಮಾವನ್ನು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಇನ್ನು ಮುಂದಿನ ದಿನಗಳಲ್ಲಿ ಪುಷ್ಪಾ 3: ದಿ ರೈಸ್‌ ಸಿನಿಮಾ ಕೂಡ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಕಥಾಹಂದರದ ಜೊತೆ ಸಿನಿಮಾದಲ್ಲಿ ನೀಡಲಾದ ರಿಚ್‌ನೆಸ್‌ ಜನರನ್ನು ಆಕರ್ಶಿಸುತ್ತದೆ. ಆಕ್ಷನ್-ಪ್ಯಾಕ್ಡ್ ಸೀಕ್ವೆಲ್ ಹೊಂದಿರುವ ಈ ಸಿನಿಮಾ ತುಂಬಾ ದಿನಗಳ ಕಾಲ ಚರ್ಚೆಯಾಗುತ್ತಲೇ ಇರುತ್ತದೆ.

ಈಗ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಪುಷ್ಪ: ದಿ ರೈಸ್ ಅನ್ನು ಪ್ರೈಮ್ ವೀಡಿಯೊದಲ್ಲಿ ಬಿಡುಗಡೆ ಮಾಡಲಾಗಿತ್ತು ಈಗ ಪುಷ್ಪ 2: ದಿ ರೂಲ್ ಸಿನಿಮಾವನ್ನು ನೀವು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.

ಮಲಯಾಳಂ, ಕನ್ನಡ, ಹಿಂದಿ ಈ ಮೂರು ಭಾಷೆಗಳಲ್ಲಿ ರಿಲೀಸ್‌ ಆಗಲಿದೆ ಎಂದು ಹೇಳಲಾಗುತ್ತಿದೆ. ಗಂಗಮ್ಮ ಜಾತ್ರೆಯ ಸೀನ್‌ನ ಪೋಸ್ಟರ್‌ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಅಧಿಕೃತವಾಗಿ ತಾವು ಹಕ್ಕು ಪಡೆದುಕೊಂಡಿರುವುದನ್ನು ನೆಟ್‌ಫ್ಲಿಕ್ಸ್‌ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪೋಸ್ಟರ್ ಹಂಚಿಕೊಂಡಿದೆ.

ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಮಾಹಿತಿ

ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಸಿನಿಮಾ ಇದೀಗ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವಿಚಾರದಲ್ಲಿ ಹೊಸ ದಾಖಲೆ ಬರೆದಿದೆ. ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಡಿಸೆಂಬರ್ 5 ರಂದು (ಗುರುವಾರ) ವಿಶ್ವದಾದ್ಯಂತ ತೆರೆಕಂಡಿದೆ. ಆರು ಭಾಷೆಗಳಲ್ಲಿ ಜಗತ್ತಿನಾದ್ಯಂತ ಒಟ್ಟು12,500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಪುಷ್ಪ 2, ಮೊದಲ ದಿನವೇ ದಾಖಲೆಯ 294 ಕೋಟಿ ರೂಪಾಯಿ ಗಳಿಸಿದೆ ಎಂದು 'ಮೈತ್ರಿ ಮೂವಿ ಮೇಕರ್ಸ್' ಅಧಿಕೃತವಾಗಿ ಘೋಷಿಸಿದೆ. ಮೊದಲ ದಿನ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ ಪುಷ್ಪ 2 ಸಿನಿಮಾ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್, ಜಗಪತಿ ಬಾಬು, ರಾವ್ ರಮೇಶ್, ಸುನಿಲ್ ಮತ್ತು ಅನಸೂಯಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಐಟಂ ಸಾಂಗ್ ಮೂಲಕ ಶ್ರೀಲೀಲಾ ಗಮನ ಸೆಳೆದಿದ್ದಾರೆ. 2021 ರಲ್ಲಿ ಬಿಡುಗಡೆಯಾದ 'ಪುಷ್ಪ: ದಿ ರೈಸ್' ಸಿನಿಮಾ ಎಲ್ಲಾ ಭಾಷೆಗಳಲ್ಲಿ ಸೂಪರ್ ಹಿಟ್ ಆಗಿತ್ತು. ಈಗ ಅದೇ ಚಿತ್ರದ ಸೀಕ್ವೆಲ್‌ ಪುಷ್ಪ 2 ಸಹ ಹೊಸ ದಾಖಲೆಗಳ ಸರಮಾಲೆಯನ್ನೇ ಧರಿಸಿದೆ. ಅದರಲ್ಲೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ಹತ್ತು ಹಲವು ರೆಕಾರ್ಡ್‌ ಬ್ರೇಕ್‌ ಮಾಡಿದ ಸೌತ್‌ ಸಿನಿಮಾ ಆಗಿದೆ.

Whats_app_banner