ಪುಷ್ಪ 2 ಸಿನಿಮಾದಲ್ಲಿ ಸೀರೆಯುಟ್ಟ ಅಲ್ಲು ಅರ್ಜುನ್; ಬಾಲಿವುಡ್‌ನಲ್ಲಿ ಮತ್ತೆ ಬದಲಾಗಬಹುದು ಫ್ಯಾಷನ್‌ಸೆನ್ಸ್
ಪುಷ್ಪ 2 ಸಿನಿಮಾದಲ್ಲಿ ಗಂಗಮ್ಮ ಜಾತ್ರೆ ಸನ್ನಿವೇಷದಲ್ಲಿ ಅಲ್ಲು ಅರ್ಜುನ್ ಸೀರೆಯುಟ್ಟಿರುವ ದೃಶ್ಯ ವೈರಲ್ ಆಗಿದೆ. ಇನ್ನು ಸಿನಿಮಾ ನೋಡಲು ಬಂದ ಅಭಿಮಾನಿಗಳೂ ಸಹ ಕೆಲವೆಡೆ ಸೀರೆಯುಟ್ಟು ಬಂದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹಿಂದೆ ನಟಿಯರೆಲ್ಲ ಸೀರೆಯುಟ್ಟು ಸಿನಿಮಾಗಳಲ್ಲಿ ಮಿಂಚುತ್ತಿದ್ದರು. ಪ್ಯಾಂಟ್ ಶರ್ಟ್ ಹಾಕುವುದು ಎಷ್ಟು ಸುಲಭವೋ ಅಷ್ಟೇ ಸುಲಭ ಸೀರೆ ಉಡುವುದು ಕೂಡ ಎಂಬಂತೆ ಆಗಿನ ಕಾಲದ ಹಿರೋಯಿನ್‌ಗಳು ಸೀರೆಯುಡುತ್ತಿದ್ದರು. ಆದರೆ ಇತ್ತೀಚಿಗೆ ಸಿನಿಮಾಗಳಲ್ಲಿ ಹಾಗೂ ಸಮಾಜದಲ್ಲಿ ಸೀರೆ ಬಳಕೆ ಕಡಿಮೆ ಆಗಿದೆ. ಅದರೆ ಮತ್ತೆ ಆ ಟ್ರೆಂಡನ್ನು ಮರು ಸೃಷ್ಟಿ ಮಾಡುವಲ್ಲಿ ಪುಷ್ಪ 2 ಗೆದ್ದಿದೆ ಎಂದೇ ಹೇಳಬಹುದು. ಯಾಕೆಂದರೆ ಗಂಗಮ್ಮ ಜಾತ್ರೆಯ ಸೀನ್‌ನಲ್ಲಿ ಅಲ್ಲು ಅರ್ಜುನ್ ಸೀರೆಯುಟ್ಟಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಕೂಡ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹಲವು ಪ್ರಮೋಷನ್ ಕಾರ್ಯಕ್ರಮಗಳಲ್ಲೂ ಚಿತ್ರದ ನಾಯಕಿ ಹಾಗೂ ಶ್ರೀಲೀಲಾ ಸೀರೆಯುಟ್ಟಿರುವುದನ್ನು ಕಾಣಬಹುದು. ಇದು ಚಿತ್ರರಂಗದಲ್ಲಿ ಬದಲಾವಣೆ ತರಬಹುದು.
1950ರ ದಶಕದ ಸಿನಿಮಾಗಳಲ್ಲಿ ಎಲ್ಲರೂ ಸೀರೆಯನ್ನೇ ಉಡುತ್ತಿದ್ದರು. ಆದರೆ ಕಾಲ ಕ್ರಮೇಣ ಸೀರೆ ಬಳಕೆ ಕಡಿಮೆಯಾಗುತ್ತಾ ಬಂತು. ಈಗಿನ ಕಾಲದಲ್ಲಿ ಸೀರೆ ಮಾರಾಟ ಹೆಚ್ಚಾಗುವಂತೆ ಮಾಡಿದವರು ವಿದ್ಯಾ ಬಾಲನ್ ಮತ್ತು ಅಲ್ಲು ಅರ್ಜುನ್. ಅಷ್ಟೇ ಅಲ್ಲ ಈಗ ಮತ್ತೆ ಸೀರೆ ಉಟ್ಟು ಫೋಟೋಶೂಟ್ ಮಾಡಿಸಿಕೊಳ್ಳುವವರು ಹಲವರಿದ್ದಾರೆ.
ಆಶಾ ಪರೇಖ್, ಸಾಯಿರಾ ಬಾನು, ಸಾಧನಾ ಮತ್ತು ಶರ್ಮಿಳಾ ಟ್ಯಾಗೋರ್ 1960 ರ ದಶಕದಲ್ಲಿ ಸೀರೆಯುಟ್ಟು ಮಿಂಚಿದ್ದರು. ಇಂದಿಗೂ ಅವರ ಹೆಸರು ನೆನಪಾದರೆ ಅವರ ಚಿತ್ರ ಸೀರೆಯುಟ್ಟು ಎದುರು ನಿಂತಂತೆ ಇರುತ್ತದೆ. 1970ರ ದಶಕದಲ್ಲಿ, ಹೇಮಾ ಮಾಲಿನಿ ಸೀರೆಯಲ್ಲಿ ಎಲ್ಲರ ಡ್ರೀಮ್ ಗರ್ಲ್ ಆಗಿದ್ದರು. 1980 ರ ದಶಕದಲ್ಲಿ, ಶ್ರೀದೇವಿ ಮತ್ತು ರೇಖಾ ಹೀಗೆ ಹಲವರು ಸೀರೆಯಲ್ಲೇ ಕಂಗೊಳಿಸಿದ್ದರು. ಆದರೆ ನಂತರದಲ್ಲಿ MTV ಮತ್ತು ಚಾನೆಲ್ V ಯಲ್ಲಿ ಹಗಲಿರುಳು ಪ್ರಸಾರವಾಗುವ ಸಂಗೀತ ವೀಡಿಯೋಗಳಿಂದ ಫ್ಯಾಷನ್‌ಗಳು ನಿರ್ದೇಶಿಸಲ್ಪಟ್ಟವು. ಉಡುಗೆ ತೊಡುಗೆಗಳೇ ಬದಲಾಗಿ ಹೋಯ್ತು.
ಕೆಲ ದಿನಗಳಿಂದ ಫ್ಯಾಷನ್ ವಾಕ್ ಇರಲಿ, ಸಿನಿಮಾ ಇರಲಿ, ಕಾರ್ಯಕ್ರಮ ಇರಲಿ ಎಲ್ಲೂ ಸೀರೆಗಳೇ ಕಾಣದಾದವು. ಎಲ್ಲರ ಕಪಾಟಿನಲ್ಲಿರುವ ಉಡುಪುಗಳೂ ಬದಲಾದಲು. ಪ್ಯಾಂಟ್ ಶರ್ಟ್, ಸೀಳಿರುವ ಸ್ಕರ್ಟ್, ಗೌನ್ ಹೀಗೆ ಸೀರೆ ಉಡುವುದೇ ಒಂದು ಪ್ರಮಾದ ಎನ್ನುವ ರೀತಿಯಲ್ಲಿ ಫ್ಯಾಷನ್ ಸೆನ್ಸ್ ಬದಲಾಗಿಬಿಟ್ಟಿತ್ತು.
ಸೀರೆಯುಟ್ಟು ಪ್ರಶಸ್ತಿ ಪಡೆದ ನಟಿ
ಪೂಜಾ ಭಟ್, ರವೀನಾ ಟಂಡನ್, ಟಬು, ಕರಿಷ್ಮಾ ಕಪೂರ್ ಮತ್ತು ವಿದ್ಯಾ ಬಾಲನ್ ಮತ್ತೆ ಸೀರೆಯುಟ್ಟರು. ಹಿಂದೆ ಪೂಜಾ ಭಟ್ ಅವರು ಒಂದು ಮಾತು ಹೇಳಿದ್ದರು ನಾನು ಈಗ ಅಂದರೆ ಸೀರೆಯುಟ್ಟಮೇಲೆ ಹೊಸ ಜನ್ಮ ಪಡೆದಿದ್ದೇನೆ ಎಂದು. ಅವರು ಸೀರೆಯುಟ್ಟೇ ಪ್ರಶಸ್ತಿ ಸ್ವೀಕರಿಸಿದ್ದರು. ನಂತರ ಆಲಿಯಾ, ಕಂಗನಾ ಇವರೂ ಸೀರೆಯುಟ್ಟು ಪ್ರಶಸ್ತಿ ಸ್ವೀಕರಿಸಿದ್ದಾರೆ. ಈಗ ಮತ್ತೆ ಸೀರೆ ಟ್ರೆಂಡ್ ಮರಳುತ್ತಿದೆ. ಪುಷ್ಪ 2 ಸಿನಿಮಾ ಆದ ನಂತರದಲ್ಲಿ ಸಾಕಷ್ಟು ಜನ ಸಾಮಾಜಿಕ ಜಾಲತಾಣಗಳಲ್ಲಿ ಸೀರೆಯುಟ್ಟು ಫೋಟೋ ಪೋಸ್ಟ್ ಮಾಡಿದ್ದಾರೆ.