ಕಲೆಕ್ಷನ್‌ ವಿಚಾರದಲ್ಲಿ ಕಹಳೆಯೂದಿದ ಪುಷ್ಪರಾಜ್‌; ಮೂರು ದಿನಗಳಲ್ಲಿ ಪುಷ್ಪ 2 ಬಾಚಿಕೊಂಡಿದ್ದೆಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  ಕಲೆಕ್ಷನ್‌ ವಿಚಾರದಲ್ಲಿ ಕಹಳೆಯೂದಿದ ಪುಷ್ಪರಾಜ್‌; ಮೂರು ದಿನಗಳಲ್ಲಿ ಪುಷ್ಪ 2 ಬಾಚಿಕೊಂಡಿದ್ದೆಷ್ಟು?

ಕಲೆಕ್ಷನ್‌ ವಿಚಾರದಲ್ಲಿ ಕಹಳೆಯೂದಿದ ಪುಷ್ಪರಾಜ್‌; ಮೂರು ದಿನಗಳಲ್ಲಿ ಪುಷ್ಪ 2 ಬಾಚಿಕೊಂಡಿದ್ದೆಷ್ಟು?

Pushpa 2 Collection Day 3: ಬಾಕ್ಸ್‌ ಆಫೀಸ್‌ನಲ್ಲಿ ಮುಂದಡಿ ಇರಿಸಿರುವ ಪುಷ್ಪ 2 ಸಿನಿಮಾ ಕೇವಲ ಮೂರೇ ದಿನಕ್ಕೆ ವಿಶ್ವದಾದ್ಯಂತ 550 ಕೋಟಿ ಬಾಚಿಕೊಂಡಿದೆ. ಈ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ 500 ಕೋಟಿ ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯೂ ಈ ಸಿನಿಮಾ ಮುಡಿಗೇರಿದೆ.

ಮೂರು ದಿನಗಳಲ್ಲಿ ಪುಷ್ಪ 2 ಬಾಚಿಕೊಂಡಿದ್ದೆಷ್ಟು?
ಮೂರು ದಿನಗಳಲ್ಲಿ ಪುಷ್ಪ 2 ಬಾಚಿಕೊಂಡಿದ್ದೆಷ್ಟು?

Pushpa 2 Box Office Collection Day 3 : ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ 2: ದಿ ರೂಲ್' ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಹಿಂದಿನ ದಾಖಲೆಗಳನ್ನು ಧ್ವಂಸ ಮಾಡುವ ಮೂಲಕ ಹಲವು ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಸುಕುಮಾರ್ ನಿರ್ದೇಶನದ ಈ ಆಕ್ಷನ್ ಡ್ರಾಮಾ ಸಿನಿಮಾ 2021 ರ ಬ್ಲಾಕ್‌ಬಸ್ಟರ್ 'ಪುಷ್ಪ: ದಿ ರೈಸ್'ನ ಮುಂದುವರಿದ ಭಾಗವಾಗಿದೆ.

ಸದ್ಯ ಬಾಕ್ಸ್‌ ಆಫೀಸ್‌ ಲೆಕ್ಕಾಚಾರದ ಮಾಹಿತಿ ನೀಡುವ ಸ್ಯಾಕ್ನಿಲ್‌ (Sacnilk) ತಾಣದ ಅಂದಾಜಿನ ಪ್ರಕಾರ, ಪುಷ್ಪ 2 ಸಿನಿಮಾ ವಿಶ್ವಾದ್ಯಂತ 3ನೇ ದಿನ 550 ಕೋಟಿ ಕಲೆಕ್ಷನ್‌ ಗಡಿ ದಾಟಿದೆ. 3ನೇ ದಿನ ಎಲ್ಲಾ ಭಾಷೆಗಳ ಲೆಕ್ಕಾಚಾರ ಹಾಕಿದಾಗ, ಭಾರತದಾದ್ಯಂತ ಸುಮಾರು 115 ಕೋಟಿಗಳ ಕಲೆಕ್ಷನ್‌ ಆಗಿದೆ. ಈ ಮೂಲಕ ಏರಿಕೆಯತ್ತ ಸಾಗಿದೆ ಎಂದು ಸ್ಯಾಕ್ನಿಲ್‌ ತಿಳಿಸಿದೆ.

ಭಾರತದಲ್ಲಿ ಪುಷ್ಪ 2 ಬಾಕ್ಸ್ ಆಫೀಸ್ ಕಲೆಕ್ಷನ್

ಸ್ಯಾಕ್ನಿಲ್‌ ವರದಿಯ ಪ್ರಕಾರ, 2ನೇ ದಿನ ಶೇ 45% ಕುಸಿತ ಕಂಡಿತ್ತು. ಆದರೆ, 3ನೇ ದಿನ ಶೇ 22% ಏರಿಕೆ ಕಂಡಿತ್ತು. ಇತ್ತ ಎಲ್ಲ ಭಾಷೆಗಳಲ್ಲಿ 115 ಕೋಟಿ ಗಳಿಸಿದೆ ಪುಷ್ಪ. ತೆಲುಗಿನಲ್ಲಿ 31.5 ಕೋಟಿ, ಹಿಂದಿಯಲ್ಲಿ 73.5 ಕೋಟಿ, ತಮಿಳಿನಲ್ಲಿ 7.5 ಕೋಟಿ, ಕನ್ನಡದಲ್ಲಿ 0.8 ಕೋಟಿ ಮತ್ತು ಮಲಯಾಳಂನಲ್ಲಿ 1.7 ಕೋಟಿ ಗಳಿಸಿದೆ ಎಂದು ಸ್ಯಾಕ್ನಿಲ್‌ ಅಂದಾಜಿಸಿದೆ. ಚಿತ್ರದ ಒಟ್ಟು ಕಲೆಕ್ಷನ್ 4ನೇ ದಿನವಾದ ಭಾನುವಾರ ಭಾರತದಲ್ಲಿಯೇ ಸುಮಾರು 398.77 ಕೋಟಿಯ ತಲುಪುವ ನಿರೀಕ್ಷೆಯಿದೆ.

ವಿಶ್ವಾದ್ಯಂತ ಆದ ಕಲೆಕ್ಷನ್‌ ಎಷ್ಟು?

ಸ್ಯಾಕ್ನಿಲ್‌ ಮಾಹಿತಿಯ ಪ್ರಕಾರ, ಪುಷ್ಪ 2 ಎರಡನೇ ದಿನದಂದು ವಿಶ್ವಾದ್ಯಂತ ಒಟ್ಟು 400 ಕೋಟಿಯ ಗಡಿ ದಾಟಿದೆ. ಮೊದಲ ದಿನವೇ ದಾಖಲೆಯ 294 ಕೋಟಿ ಗಳಿಸಿ, ದಾಖಲೆ ಬರೆದಿತ್ತು. ಈಗ ಮೂರನೇ ದಿನದಲ್ಲಿ ವಿಶ್ವಾದ್ಯಂತ 550 ಕೋಟಿಯ ಗಡಿ ದಾಟಿ ಮತ್ತೊಂದು ಇತಿಹಾಸ ಸೃಷ್ಟಿಸಿದೆ.

ಪುಷ್ಪ 1ರ ದಾಖಲೆ ಪುಡಿ ಪುಡಿ

2021ರಲ್ಲಿ ಪುಷ್ಪ ಸಿನಿಮಾದ ಮೊದಲ ಭಾಗ ಬಿಡುಗಡೆ ಆಗಿತ್ತು. ಆ ಸಿನಿಮಾ ಸಾರ್ವಕಾಲಿಕ 350 ಕೋಟಿ ಗಳಿಸುವ ಮೂಲಕ ಕಲೆಕ್ಷನ್‌ ಕೊನೆಗೊಳಿಸಿತ್ತು. ಈಗ ಇದೇ ಕಲೆಕ್ಷನ್‌ ಅನ್ನು ಪುಷ್ಪ 2 ಸಿನಿಮಾ ಕೇವಲ ಎರಡನೇ ದಿನದಲ್ಲಿ ಮುರಿದಿದೆ. ಸದ್ಯ 550 ಕೋಟಿಯ ಗಡಿ ದಾಟಿರುವ ಈ ಸಿನಿಮಾ 1000 ಕೋಟಿಯ ಮೇಲೆ ಕಣ್ಣಿಟ್ಟಿದೆ.

2030ರಲ್ಲಿ ಪುಷ್ಪ ಪಾರ್ಟ್‌ 3

ಅಲ್ಲು ಅರ್ಜುನ್‍ ಮತ್ತು ಸುಕುಮಾರ್, ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸುವುದಕ್ಕೆ ಕನಿಷ್ಠ ನಾಲ್ಕು ವರ್ಷಗಳು ಬೇಕು. ಅದೂ ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರಗಳು ನಾಲ್ಕು ವರ್ಷಗಳಲ್ಲಿ ಮುಗಿಯುತ್ತವೆ. ಒಂದು ಪಕ್ಷ 2027ರಲ್ಲಿ ‘ಪುಷ್ಪ 3 - The Rampage’ ಚಿತ್ರ ಪ್ರಾರಂಭವಾದರೂ, ಬಿಡುಗಡೆಯಾಗುವುದು 2030ರಲ್ಲಿ. ಅಲ್ಲಿಗೆ, ‘ಪುಷ್ಪ 3 - The Rampage’ ಚಿತ್ರಕ್ಕಾಗಿ ಅಭಿಮಾನಿಗಳು ಆರು ವರ್ಷ ಕಾಯಬೇಕಂತೆ. ಈ ಲೆಕ್ಕಾಚಾರದಲ್ಲಿ ಸ್ವಲ್ಪ ಏರುಪೇರಾದರೂ, ಮೂರನೇ ಭಾಗ ಬರುವುದು ಎಷ್ಟು ವರ್ಷಗಳಾಗುತ್ತವೋ ಗೊತ್ತಿಲ್ಲ.

Whats_app_banner