Pushpa 3 The Rampage ಬರೋದು ಹೌದು, ಆದರೆ ಯಾವಾಗ? ಈ ಚಿತ್ರಕ್ಕೆ ನೀವು ಇನ್ನೂ ಇಷ್ಟೊಂದು ವರ್ಷ ಕಾಯಬೇಕು
ಕನ್ನಡ ಸುದ್ದಿ  /  ಮನರಂಜನೆ  /  Pushpa 3 The Rampage ಬರೋದು ಹೌದು, ಆದರೆ ಯಾವಾಗ? ಈ ಚಿತ್ರಕ್ಕೆ ನೀವು ಇನ್ನೂ ಇಷ್ಟೊಂದು ವರ್ಷ ಕಾಯಬೇಕು

Pushpa 3 The Rampage ಬರೋದು ಹೌದು, ಆದರೆ ಯಾವಾಗ? ಈ ಚಿತ್ರಕ್ಕೆ ನೀವು ಇನ್ನೂ ಇಷ್ಟೊಂದು ವರ್ಷ ಕಾಯಬೇಕು

Pushpa 3 The Rampage: ಪುಷ್ಪ 2 ಈಗಾಗಲೇ ಚಿತ್ರಮಂದಿರದಲ್ಲಿ ಅಬ್ಬರಿಸುತ್ತಿದೆ. ಗಳಿಕೆ ವಿಚಾರದಲ್ಲಿ ಮೊದಲ ದಿನವೇ ಸಾರ್ವಕಾಲಿಕ ಕಲೆಕ್ಷನ್‌ ಮಾಡಿದ ಈ ಸಿನಿಮಾ, ಮುಂದಿನ ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕ್ಲಬ್‌ ಸೇರಲಿದೆ. ಈ ನಡುವೆ ಇದೇ ಸಿನಿಮಾದ ಮೂರನೇ ಭಾಗವೂ ಕುತೂಹಲ ಮೂಡಿಸಿದೆ. ಹಾಗಾದರೆ 3ನೇ ಪಾರ್ಟ್‌ ಬರೋದು ಯಾವಾಗ? ಇಲ್ಲಿದೆ ಮಾಹಿತಿ.

Pushpa 3 The Rampage
Pushpa 3 The Rampage

Pushpa 3: The Ramgage: ಅಲ್ಲು ಅರ್ಜುನ್‍ ಅಭಿನಯದ ‘ಪುಷ್ಪ 2’ ಬಿಡುಗಡೆಯಾಗಿ ಬಾಕ್ಸ್ ಆಫೀಸ್‍ ಲೂಟಿ ಮಾಡುತ್ತಿದೆ. ಈ ಚಿತ್ರದ ಬಿಡುಗಡೆಗೂ ಮುನ್ನವೇ ಇದರ ಮುಂದುವರೆದ ಭಾಗವಾಗಿ ‘ಪುಷ್ಪ 3 - The Rampage’ ಎಂಬ ಚಿತ್ರ ಬಿಡುಗಡೆ ಆಗುತ್ತದೆ ಮತ್ತು ಅದರಲ್ಲಿ ವಿಜಯ್‍ ದೇವರಕೊಂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದೀಗ ನಿಜವಾಗಿದೆ. ‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಇನ್ನೊಂದು ಭಾಗ ಬರುವ ಕುರಿತು ಅಧಿಕೃತವಾಗಿ ಸುಳಿವು ನೀಡಲಾಗಿದೆ.

ಅಲ್ಲಿಗೆ ‘ಪುಷ್ಪ 3 - The Rampage’ ಬರುವುದು ಖಚಿತವಾಗಿದ್ದು, ಅಭಿಮಾನಿಗಳು ಬಹಳ ಖುಷಿಯಾಗಿದ್ದಾರೆ. ಆದರೆ, ಚಿತ್ರ ಬಿಡುಗಡೆಯಾಗೋದು ಯಾವಾಗ? ಎಂಬ ಪ್ರಶ್ನೆ ಸಹಜ. ಇದಕ್ಕೆ ಮಿನಿಮಮ್ ಆರು ವರ್ಷ ಬೇಕು ಎಂದು ಹೇಳಲಾಗುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ, 2030ರ ಹೊತ್ತಿಗೆ ಚಿತ್ರ ಬಿಡುಗಡೆಯಾಗಬಹುದು. ತಡವಾದರೆ, ಚಿತ್ರ ಮುಂದಿನ ದಶಕದಲ್ಲಿ ಬಿಡುಗಡೆಯಾದರೆ ಆಶ್ಚರ್ಯವಿಲ್ಲ.

ಎರಡು ಚಿತ್ರಕ್ಕೆ ಐದು ವರ್ಷ

‘ಪುಷ್ಪ’ ಚಿತ್ರದ ಎರಡು ಭಾಗಗಳಿಗಾಗಿ ಅಲ್ಲು ಅರ್ಜುನ್‍ ಕಳೆದ ಐದು ವರ್ಷಗಳನ್ನು ಮೀಸಲಿಟ್ಟಿದ್ದಾರೆ. ಈ ಐದು ವರ್ಷಗಳಲ್ಲಿ ಅವರು ಬೇರೆ ಯಾವುದೇ ಚಿತ್ರದಲ್ಲೂ ನಟಿಸಿಲ್ಲ. 2019ರಲ್ಲಿ ಚಿತ್ರದ ಮುಹೂರ್ತವಾಗಿತ್ತು. ಅಲ್ಲಿಂದ ಅವರು ಸತತ ಐದು ವರ್ಷಗಳ ಕಾಲ ‘ಪುಷ್ಪ’ ಚಿತ್ರದ ಎರಡು ಭಾಗಗಳಲ್ಲಿ ನಟಿಸಿದ್ದಾರೆ. ಈ ಎರಡರ ಹೊರತಾಗಿ ಯಾವ ಚಿತ್ರದಲ್ಲೂ ಅವರು ನಟಿಸಿರಲಿಲ್ಲ. ಈ ಎರಡೂ ಚಿತ್ರಗಳಲ್ಲಿ ಅವರು ಬ್ಯಾಕ್‍ ಟು ಬ್ಯಾಕ್‍ ನಟಿಸಿದರು. ಆದರೆ, ಮುಂದೆ ಅದೇ ಮಾತನ್ನು ಹೇಳುವುದು ಕಷ್ಟ.

ಈ ನಡುವೆ, ಅವರು ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಈ ಪೈಕಿ ತ್ರಿವಿಕ್ರಮ್‍ ಶ್ರೀನಿವಾಸ್‍ ನಿರ್ದೇಶನದ ಚಿತ್ರವೂ ಒಂದು. ಇನ್ನು, ನಿರ್ದೇಶಕ ಸುಕುಮಾರ್ ಸಹ ರಾಮ್‍ಚರಣ್‍ ತೇಜ ಅಭಿನಯದ ಇನ್ನೊಂದು ಚಿತ್ರವನ್ನು ನಿರ್ದೇಶಿಸುವುದಕ್ಕೆ ಮುಂದಾಗಿದ್ದಾರೆ.

2030ರಲ್ಲಿ ಪುಷ್ಪ ಪಾರ್ಟ್‌ 3

ಅಲ್ಲು ಅರ್ಜುನ್‍ ಮತ್ತು ಸುಕುಮಾರ್, ಈಗ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸುವುದಕ್ಕೆ ಕನಿಷ್ಠ ನಾಲ್ಕು ವರ್ಷಗಳು ಬೇಕು. ಅದೂ ಎಲ್ಲವೂ ಅಂದುಕೊಂಡಂತೆ ಆದರೆ, ಚಿತ್ರಗಳು ನಾಲ್ಕು ವರ್ಷಗಳಲ್ಲಿ ಮುಗಿಯುತ್ತವೆ. ಒಂದು ಪಕ್ಷ 2027ರಲ್ಲಿ ‘ಪುಷ್ಪ 3 - The Rampage’ ಚಿತ್ರ ಪ್ರಾರಂಭವಾದರೂ, ಬಿಡುಗಡೆಯಾಗುವುದು 2030ರಲ್ಲಿ. ಅಲ್ಲಿಗೆ, ‘ಪುಷ್ಪ 3 - The Rampage’ ಚಿತ್ರಕ್ಕಾಗಿ ಅಭಿಮಾನಿಗಳು ಆರು ವರ್ಷ ಕಾಯಬೇಕಂತೆ. ಈ ಲೆಕ್ಕಾಚಾರದಲ್ಲಿ ಸ್ವಲ್ಪ ಏರುಪೇರಾದರೂ, ಮೂರನೇ ಭಾಗ ಬರುವುದು ಎಷ್ಟು ವರ್ಷಗಳಾಗುತ್ತವೋ ಗೊತ್ತಿಲ್ಲ.

ಮೊದಲ ದಿನ 294 ಕೋಟಿ ಗಳಿಕೆ

ಸದ್ಯಕ್ಕಂತೂ ‘ಪುಷ್ಪ 2’ ಚಿತ್ರವು ಭಾರತೀಯ ಚಿತ್ರರಂಗದಲ್ಲಿದ್ದ ಹಿಂದಿನ ದಾಖಲೆಗಳನ್ನೆಲ್ಲಾ ಪುಡಿಪುಡಿ ಮಾಡಿ ಮುನ್ನುಗುತ್ತಿದೆ. ಚಿತ್ರವು ಮೊದಲ ದಿನ 294 ಕೋಟಿ ರೂ. ಗಳಿಕೆ ಮಾಡುವ ಮೂಲಕ ‘RRR’ ಚಿತ್ರದ ಹಳೆಯ ದಾಖಲೆಗಳನ್ನೆಲ್ಲಾ ಮುರಿದು ಹಾಕಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರುವ ‘ಪುಷ್ಪ 2’ ಚಿತ್ರಕ್ಕೆ ಸುಕುಮಾರ್ ಕಥೆ- ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ರಾವ್‍ ರಮೇಶ್‍, ತಾರಕ್‍ ಪೊನ್ನಪ್ಪ, ಫಹಾದ್‍ ಫಾಸಿಲ್‍, ಸುನೀಲ್, ಅನುಸೂಯ ಭಾರದ್ವಾಜ್‍, ಜಗಪತಿ ಬಾಬು, ಧನಂಜಯ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ದೇವಿ’ ಶ್ರೀಪ್ರಸಾದ್‍ ಸಂಗೀತ ಸಂಯೋಜಿಸಿದ್ದಾರೆ.

Whats_app_banner