ಮಾವನವ್ರು ಬಂದ್ರೋ, ಬಾವನವ್ರು ಬಂದ್ರೋ ಹಿಡಿಯೋ.. ಮಜವಾಗಿದೆ ಪುಷ್ಪ 2 ದಿ ರೂಲ್ ಚಿತ್ರದ ಕಿಸ್ಸಿಕ್ ಸಾಂಗ್ ಕನ್ನಡ ಲಿರಿಕ್ಸ್
Kissik Lyrical Video Kannada Lyrics: ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಕಾಂಬಿನೇಷನ್‌ನಲ್ಲಿನ ಕಿಸ್ಸಿಕ್ ಹಾಡು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಡಿಎಸ್‌ಪಿ ಸಂಗೀತ ನೀಡಿರುವ ಈ ಹಾಡು ಕನ್ನಡದಲ್ಲಿಯೂ ಬಿಡುಗಡೆ ಆಗಿದೆ. ವರದರಾಜ್ ಚಿಕ್ಕಬಳ್ಳಾಪುರ ಬರೆದ ಆ ಹಾಡಿನ ಸಾಹಿತ್ಯ ಅಷ್ಟೇ ಮಜವಾಗಿದೆ.
KISSIK Lyrical Video: ಪುಷ್ಪ 2 ದಿ ರೂಲ್ ಚಿತ್ರದ ಕಿಸ್ಸಿಕ್ ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಗಿದೆ. ಅಲ್ಲು ಅರ್ಜುನ್ ಮತ್ತು ಶ್ರೀಲೀಲಾ ಕಾಂಬಿನೇಷನ್‌ನಲ್ಲಿನ ಈ ಹಾಡಿಗೆ ಡಿಎಸ್‌ಪಿ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಸುಬ್ಲಾಶಿನಿ ಕಂಠದಲ್ಲಿ ಮೂಡಿಬಂದಿರುವ ಕಿಸ್ ಕಿಸ್ ಕಿಸ್ ಕಿಸಿಕ್.. ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್.. ಹಾಡನ್ನು ಕನ್ನಡದಲ್ಲಿ ಬರೆದಿದ್ದಾರೆ ವರದರಾಜ್ ಚಿಕ್ಕಬಳ್ಳಾಪುರ.
ಸುಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾ, ಇದೇ ಡಿಸೆಂಬರ್ 5ರಂದು ತೆಲುಗು ಜತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ತೆರೆಗೆ ಬರಲಿದೆ. ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಮಲಯಾಳಂ ನಟ ಫಹಾದ್ ಫಾಸಿಲ್ ವಿಲನ್ ಆಗಿ ನಟಿಸಿದರೆ, ಸುನೀಲ್, ಜಗಪತಿ ಬಾಬು ಮತ್ತು ಅನಸೂಯ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಕಿಸ್ಸಿಕ್ ಹಾಡಿಗೆ ಹೊಗಳಿಕೆಯ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ನೆಗೆಟಿವ್ ಕಾಮೆಂಟ್‌ಗಳೂ ತೂರಿ ಬರುತ್ತಿವೆ. ಪುಷ್ಪ 2 ಚಿತ್ರದ ಸಂಪೂರ್ಣ ಕಥೆಯು 1990 ರ ಹಿನ್ನೆಲೆಯಲ್ಲಿ ನಡೆಯುತ್ತದೆ. ಆದರೆ ಕಿಸ್ಸಿಕ್ ಹಾಡಿನ ಸಾಹಿತ್ಯ ಇಂದಿನ ಟ್ರೆಂಡ್‌ನಂತಿದೆ. ಈ ಹಾಡಿಗಿಂತ ಊ ಅಂಟಾವಾ ಹಾಡೇ ಎಷ್ಟೋ ಪಾಲು ಮೇಲು ಎಂದೂ ಕೆಲವರು ಹೇಳುತ್ತಿದ್ದಾರೆ.
ಪುಷ್ಪ 2 ದಿ ರೂಲ್ ಚಿತ್ರದ ಕಿಸಿಕ್ ಹಾಡಿನ ಕನ್ನಡ ವರ್ಷನ್
ಕಿಸ್ ಕಿಸ್ ಕಿಸ್ ಕಿಸಿಕ್..
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್..
ಹಿಡಿಯೋ ಹಿಡಿಯೋ ಮಾವೌನವ್ರು ಬಂದ್ರೋ ಹಿಡಿಯೋ
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್
ಹಿಡಿಯೋ ಹಿಡಿಯೋ ಬಾವನೌವ್ರು ಬಂದ್ರೋ ಹಿಡಿಯೋ
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್
---
ಚಿಚ್ಚಾ ಬದ್ನೋ ಹಿಡಿಯೋ, ಮಚ್ಚಾ ಬದ್ನೋ ಹಿಡಿಯೋ
ಗೆಳಯ ಬಂದ್ನೋ ಹಿಡಿಯೋ, ಅಳಿಯಾ ಬಂದ್ನೋ ಹಿಡಿಯೋ
ನಮ್ಮೋನ್ ಬಂದ್ನೋ, ನಿಮ್ಮೋನ್ ಬಂದ್ನೋ, ನೂಕ್ಕೊಂಡು ಬಂದ್ನೋ ಹಿಡಿಯೋ
---
ಅವರ ಫೋಟೋ.. ಇವರ ಫೋಟೋ ಆಲ್ಬಮಿಗೆ ನೀ ಹಾಕೋ
ಮತ್ ನನ್ ಜೊತೆ ಹಿಡಿದ ಫೋಟೋ ಮಾತ್ರ ಸ್ವಾಮಿ ನೀ ಲಾಕರ್‌ನಲ್ಲೇ ಇಟ್ಕೋ
ಓ ಪುಸಕ್ಕಂತ ಈ ಕಿಸ್ಸಕ್ಕೇನಾರ್ ಈಚೆಕ ಬಂತಂದ್ರೆ,
ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ
---
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್
ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್
ಪಕ್ಕನೇ ನಿಂತು ಫೋಟೋ ತಕ್ಕೋ
ಭುಜಕ್ಕೆ ಭುಜವ ತೀಡೋಕೆ ಬಂದ್ರೆ
ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ಕಿಸಕ್
ಆಯ್ತು, ಆಯ್ತು ಹೆಗಲ ಮೇಲೆ ಕೈ ಹಾಕೇ ತಕ್ಕೋ
ಕೈಗಳು ಸುಮ್ಮನೆ ಇರದೇ ಇದ್ರೆ, ರಪ್ಪನೇ ಬೀಳುತ್ತೋ.. ರಪ್ಪನೇ ಬೀಳುತ್ತೋ
---
ಸಿಂಗಲ್ ಫೋಟೋ ತಪ್ಪಿಲ್ಲ, ಮಿಂಗಲ್ ಫೋಟೋ ತಪ್ಪಿಲ್ಲ
ಗ್ರೂಪ್ ಫೋಟೋ ತಕ್ಕೋಳಾಕ ಅಭ್ಯಂತರವಿಲ್ಲ..
ಆದ್ರೆ ಪಬ್ಲಿಕ್‌ನಲ್ಲಿ ನನ್ ಫೋಟೋ ಹಾಕಿ ಕೆಟ್ ಕೆಟ್ ಕಾಮೆಂಟ್ಸ್ ಮಾಡಿದ್ರೆ
ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ
---
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್
ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸಿಕ್
----
ಯಾವ ಪೋಸಲ್ಲೇ ಫೋಟೋ ತಕ್ಕೋ
ಎಕ್ಸ್‌ಪೋಸಿಂಗ್ ಥರ ಕಾಣಿಸ್ತಂದ್ರೆ
ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ಕಿಸಕ್
---
ಯಾವ ಆಂಗಲ್‌ನಲ್ಲಾದ್ರೂ ತಕ್ಕೋ,
ಬ್ಯಾಡ್ ಆಂಗಲ್‌ನಲ್ಲಿ ಯೋಚಿಸ್ತಿದ್ರೆ
ರಪ್ಪನೇ ಬೀಳುತ್ತೋ ಕಿಸಕ್ ರಪ್ಪನೇ ಬೀಳುತ್ತೋ ಕಿಸಕ್
---
ಪೋಟೋ ನೀ ಬಚ್ಚಿಟ್ಟುಕೋ,
ಬೇಕಾದಷ್ಟು ನೋಡಿಕೋ, ಕಣ್ಣಿಗೆ ಹಬ್ಬ ಮಾಡಿಕೋ, ಬೇಡ ಅನ್ನಲ್ಲ..
ಆದ್ರೆ ಫೇಸನ್ ಗೀಸನ್, ಮಾರ್ಫಿಂಗ್ ಮಾಡಿ, ಹುಚ್ಚ ಹುಚ್ಚ ಆಟ ಆಡಿದ್ರೆ..
ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ
----
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸ್ ಕಿಸಿಕ್
ರಪ್ಪನೇ ಬೀಳುತ್ತೋ ರಾಜ, ರಪ್ಪನೇ ಬೀಳುತ್ತೋ ರಪರಪನೇ ರಪ್ಪನೇ ಬೀಳುತ್ತೋ
ಕಿಸ್ ಕಿಸ್ ಕಿಸ್ ಕಿಸಿಕ್
ಕಿಸ್ಸಾ ಕಿಸ್ಸಾ ಕಿಸ್ ಕಿಸ್ ಕಿಸಿಕ್