ಸಾಯಿ ಪಲ್ಲವಿ ಮೊಬೈಲ್‌ ನಂಬರ್‌ ವಿವಾದ: 1.1 ಕೋಟಿ ರೂ ಕಾನೂನು ಹೋರಾಟಕ್ಕೆ ಕಾರಣವಾದ ವಿವಾದಾತ್ಮಕ ದೃಶ್ಯ ಪರಿಷ್ಕರಿಸಿದ ಅಮರನ್‌ ಚಿತ್ರತಂಡ
ಕನ್ನಡ ಸುದ್ದಿ  /  ಮನರಂಜನೆ  /  ಸಾಯಿ ಪಲ್ಲವಿ ಮೊಬೈಲ್‌ ನಂಬರ್‌ ವಿವಾದ: 1.1 ಕೋಟಿ ರೂ ಕಾನೂನು ಹೋರಾಟಕ್ಕೆ ಕಾರಣವಾದ ವಿವಾದಾತ್ಮಕ ದೃಶ್ಯ ಪರಿಷ್ಕರಿಸಿದ ಅಮರನ್‌ ಚಿತ್ರತಂಡ

ಸಾಯಿ ಪಲ್ಲವಿ ಮೊಬೈಲ್‌ ನಂಬರ್‌ ವಿವಾದ: 1.1 ಕೋಟಿ ರೂ ಕಾನೂನು ಹೋರಾಟಕ್ಕೆ ಕಾರಣವಾದ ವಿವಾದಾತ್ಮಕ ದೃಶ್ಯ ಪರಿಷ್ಕರಿಸಿದ ಅಮರನ್‌ ಚಿತ್ರತಂಡ

Amaran Movie Sai Pallavi: ಅಮರನ್‌ ಸಿನಿಮಾದಲ್ಲಿ ನಾಯಕಿಯ ಮೊಬೈಲ್‌ ನಂಬರ್‌ ಎಂದು ತೋರಿಸಲಾದ ಸಂಖ್ಯೆ ವಿದ್ಯಾರ್ಥಿಯೊಬ್ಬನ ನಿಜವಾದ ಮೊಬೈಲ್‌ ನಂಬರ್‌ ಆಗಿತ್ತು. ಸಾಯಿ ಪಲ್ಲವಿ ನಂಬರ್‌ ಎಂದು ಸಾವಿರಾರು ಜನರು ಆ ವಿದ್ಯಾರ್ಥಿಗೆ ಕರೆ ಮಾಡಿದ್ದರು. ಇದೀಗ ಅಮರನ್‌ ಚಿತ್ರತಂಡ ಆ ದೃಶ್ಯವನ್ನು ಪರಿಷ್ಕರಣೆ ಮಾಡಿದೆ.

ಸಾಯಿ ಪಲ್ಲವಿ ಮೊಬೈಲ್‌ ನಂಬರ್‌ ವಿವಾದ
ಸಾಯಿ ಪಲ್ಲವಿ ಮೊಬೈಲ್‌ ನಂಬರ್‌ ವಿವಾದ

Amaran Movie Sai Pallavi: ಅಮರನ್‌ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾದಲ್ಲಿ ವಿವಾದಕ್ಕೆ ಕಾರಣವಾದ ದೃಶ್ಯವೊಂದನ್ನು ಅಮರನ್‌ ಚಿತ್ರತಂಡ ಪರಿಷ್ಕರಿಸಿದೆ. ಅಮರನ್‌ ಸಿನಿಮಾದಲ್ಲಿ ನಾಯಕಿಯ ಮೊಬೈಲ್‌ ನಂಬರ್‌ ಎಂದು ಸಾಂಕೇತಿಕವಾಗಿ ಒಂದು ಮೊಬೈಲ್‌ ಸಂಖ್ಯೆ ತೋರಿಸಲಾಗಿತ್ತು. ಆದರೆ, ಆ ಸಂಖ್ಯೆ ಚೆನ್ನೈನ ವಿದ್ಯಾರ್ಥಿಯೊಬ್ಬನ ಅಸಲಿ ಸಂಖ್ಯೆಯಾಗಿತ್ತು. ಸಿನಿಮಾದಲ್ಲಿ ಕಾಣಿಸಿರುವುದು ಸಹಜ ಸುಂದರಿ ಸಾಯಿ ಪಲ್ಲವಿ ಸಂಖ್ಯೆ ಎಂದು ಸಾಕಷ್ಟು ಜನರು ಆ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದ್ದರು. ಇದರಿಂದ ಚೆನ್ನೈನ ವಿದ್ಯಾರ್ಥಿಯ ನೆಮ್ಮದಿ ಹಾಳಾಗಿತ್ತು. ಇದರಿಂದ ರೋಸಿ ಹೋದ ಆ ವಿದ್ಯಾರ್ಥಿ ಅಮರನ್‌ ಚಿತ್ರತಂಡದ ವಿರುದ್ಧ 1.1 ಕೋಟಿ ರೂಪಾಯಿ ಪರಿಹಾರ ಆಗ್ರಹಿಸಿ ಕೇಸ್‌ ದಾಖಲಿಸಿದ್ದನು. ನನ್ನ ಅನುಮತಿ ಇಲ್ಲದೆ ನನ್ನ ಮೊಬೈಲ್‌ ಸಂಖ್ಯೆಯನ್ನು ಬಳಸಿರುವುದಕ್ಕೆ ದೂರು ದಾಖಲಿಸಿದ್ದನು. ಇದೀಗ ಚಿತ್ರತಂಡ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ಅಮರನ್‌ ಸಿನಿಮಾದ ಆ ದೃಶ್ಯದಲ್ಲಿ ಆ ಮೊಬೈಲ್‌ ಸಂಖ್ಯೆ ಕಾಣಿಸುವ ದೃಶ್ಯದಲ್ಲಿ ಒಂದಿಷ್ಟು ಮಾರ್ಪಾಡು ಮಾಡಿದೆ. ಆ ಮೊಬೈಲ್‌ ಸಂಖ್ಯೆಯನ್ನು ಮಸುಕಾಗಿಸಿದೆ.

ಆಕಸ್ಮಿಕವಾಗಿ ಚೆನ್ನೈ ವಿದ್ಯಾರ್ಥಿಯ ಮೊಬೈಲ್‌ ಸಂಖ್ಯೆ ಕಾಣಿಸಿಕೊಂಡ ಕಾರಣ ಆ ವಿದ್ಯಾರ್ಥಿಗೆ 4 ಸಾವಿರಕ್ಕೂ ಹೆಚ್ಚು ಜನರು ಕರೆ ಮಾಡಿದ್ದರು. ಸಾಯಿ ಪಲ್ಲವಿ ಅಮರನ್‌ ಸಿನಿಮಾದಲ್ಲಿ ಇಂದು ರೆಬೆಕಾ ವರ್ಗೀಸ್‌ ಪಾತ್ರದಲ್ಲಿ ನಟಿಸಿದಾರೆ. ಮೇಜರ್‌ ಮುಕುಂದ್‌ ಮೇಲೆ ಫೋನ್‌ ನಂಬರ್‌ ಇರುವ ಮಡುಚಿದ ಕಾಗದವನ್ನು ಎಸೆಯುವ ದೃಶ್ಯವಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಟಿಯರ ಫೋನ್‌ ನಂಬರ್‌ ಹುಡುಕುತ್ತಾ ಇರುತ್ತಾರೆ. ಈ ಸಿನಿಮಾದಲ್ಲಿ ಇದು ಸಾಯಿ ಪಲ್ಲವಿಯ ನಂಬರ್‌ ಎಂದೇ ಅಭಿಮಾನಿಗಳು ಭಾವಿಸಿದ್ದರು. ಅದೇ ಸಂಖ್ಯೆಗೆ ಕರೆ ಮಾಡಿದ್ದರು. ಈ ವಿದ್ಯಾರ್ಥಿಗೆ ಪ್ರತಿದಿನ ನೂರಾರು ಕರೆಗಳು ಬರಲು ಆರಂಭಿಸಿವೆ.

ಚೆನ್ನೈನ ವಾಗೀಶನ್‌ ಎಂಬ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ ಆರಂಭದಲ್ಲಿ ಯಾಕೆ ನನಗೆ ಇಷ್ಟೊಂದು ಕಾಲ್ಸ್‌ ಬರುತ್ತಿವೆ ಎಂದು ಗೊತ್ತಾಗಿಲ್ಲ. ಕರೆ ಮಾಡಿದವರೆಲ್ಲ ಸಾಯಿ ಪಲ್ಲವಿ ಅವರಿಗೆ ಫೋನ್‌ ಕೊಡಿ ಎಂದಾಗ ಎಲ್ಲೋ ಮಿಸ್‌ ಹೊಡೆದಿದೆ ಎನ್ನುವುದು ಅರಿವಾಗಿದೆ. ಬಳಿಕ ಇದು ಅಮರನ್‌ ಸಿನಿಮಾದಲ್ಲಿ ಕಾಣಿಸಿರುವ ನಂಬರ್‌ನಿಂದ ಫೋನ್‌ ಬಂತು ಎಂದು ತಿಳಿದುಕೊಂಡಿದ್ದಾರೆ. "ನನಗೆ ಶೈಕ್ಷಣಿಕ ಕಾರ್ಯಗಳು ಮಾಡಲಾಗದಷ್ಟು ತೊಂದರೆಯಾದೆ. ವೈಯಕ್ತಿಕ ಜೀವನದ ಮೇಲೂ ಪರಿಣಾಮ ಬೀರಿದೆ. ದೀಪಾವಳಿ ಹಬ್ಬವನ್ನು ನೆಮ್ಮದಿಯಾಗಿ ಆಚರಿಸಲು ಸಾಧ್ಯವಾಗಲಿಲ್ಲ. ಕುಟುಂಬದ ಜತೆ ಸರಿಯಾಗಿ ಸಮಯ ಕಳೆಯಲು ಸಾಧ್ಯವಾಗಿಲ್ಲ" ಎಂದು ವಾಗೀಶನ್‌ ಹೇಳಿದ್ದಾರೆ.

ವಾಗೀಶನ್‌ ಈ ಸಿನಿಮಾದ ನಿರ್ಮಾಪಕರ ವಿರುದ್ಧ 1.1 ಕೋಟಿ ರೂಪಾಯಿ ಪರಿಹಾರ ಆಗ್ರಹಿಸಿ ದೂರು ದಾಖಲಿಸಿದ್ದಾನೆ. ಈ ಪ್ರಕರಣ ಈಗ ಕೋರ್ಟ್‌ನಲ್ಲಿದೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿರುವ ಅಮರನ್‌ ಸಿನಿಮಾದಲ್ಲಿ ಫೋನ್‌ ಸಂಖ್ಯೆ ಕಾಣಿಸುವ ಕಡೆ ಬ್ಲರ್‌ಮಾಡಲಾಗಿದೆ. ಯೂಟ್ಯೂಬ್‌ನಲ್ಲಿರುವ ಹೇ ಮಿನಾಲಿ ಮ್ಯೂಸಿಕ್‌ ವಿಡಿಯೋದಲ್ಲೂ ಈ ರೀತಿ ಬ್ಲರ್‌ ಮಾಡಲಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿದೆ ಅಮರನ್‌ ಸಿನಿಮಾ

ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿರುವ ಅಮರನ್ ಚಿತ್ರವು ದಿವಂಗತ ಮೇಜರ್ ಮುಕುಂದ್ ವರದರಾಜನ್ ಅವರ ಜೀವನಚರಿತ್ರೆಯಾಗಿದೆ. ಹಿರಿಯ ನಟ ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಬ್ಯಾನರ್ ಅಡಿಯಲ್ಲಿ ಸೋನಿ ಪಿಕ್ಚರ್ಸ್ ಜೊತೆ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸು ಪಡೆದಿದೆ. ಇದೀಗ ಒಟಿಟಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಸಾಯಿ ಪಲ್ಲವಿ ಅಭಿನಯಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಸಾಯಿ ಪಲ್ಲವಿ ಅಭಿಮಾನಿಗಳು ಅದೇ ಸಿನಿಮಾದಲ್ಲಿ ಕಾಣಿಸಿದ ಮೊಬೈಲ್‌ ಸಂಖ್ಯೆ ಹೆಕ್ಕಿಕೊಂಡು ವಿದ್ಯಾರ್ಥಿಯ ನೆಮ್ಮದಿ ಹಾಳು ಮಾಡಿದ್ದಾರೆ. ಈ ಘಟನೆ ಕುರಿತು ಕೋರ್ಟ್‌ ಯಾವ ತೀರ್ಪು ನೀಡಲಿದೆ ಎಂದು ಕಾದು ನೋಡಬೇಕಿದೆ.

ಅಮರನ್‌ ಸಿನಿಮಾದ ಟ್ರೇಲರ್‌

Whats_app_banner