ಚಿತ್ರಮಂದಿರ, ಒಟಿಟಿ ಬಳಿಕ ಈಗ ಕನ್ನಡದ ಕಿರುತೆರೆಗೆ ಬರ್ತಿದೆ ತಮಿಳಿನ ಅಮರನ್ ಸಿನಿಮಾ; ಯಾವ ವಾಹಿನಿ, ಪ್ರಸಾರ ಯಾವಾಗ?
ಕಳೆದ ವರ್ಷದ ದೀಪಾವಳಿ ಪ್ರಯುಕ್ತ ಬಿಡುಗಡೆ ಆದ ತಮಿಳಿನ ಅಮರನ್ ಸಿನಿಮಾ, ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದೆ. ಅದಾದ ಮೇಲೆ ಒಟಿಟಿಗೂ ಆಗಮಿಸಿ ಅಲ್ಲಿಯೂ ಹೆಚ್ಚು ಜನರಿಂದ ವೀಕ್ಷಣೆ ಪಡೆದಿದೆ. ಇದೀಗ ಇದೇ ಸಿನಿಮಾ ಕನ್ನಡ ಕಿರುತೆರೆಗೆ ಡಬ್ ಆಗಿ ಆಗಮಿಸುತ್ತಿದೆ.
Amaran Television Premier: ಕಳೆದ ವರ್ಷದ ದೀಪಾವಳಿ ಹಬ್ಬಕ್ಕೆ ಸೆನ್ಸೇಷನ್ ಎಂಬಂತೆ ಬಿಡುಗಡೆ ಆಗಿತ್ತು ತಮಿಳಿನ ಅಮರನ್ ಸಿನಿಮಾ. ಅಕ್ಟೋಬರ್ 31ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾದಲ್ಲಿ, ನಟ ಶಿವ ಕಾರ್ತಿಕೇಯನ್ ನಾಯಕನಾಗಿ ನಟಿಸಿದ್ದರೆ, ಸಾಯಿ ಪಲ್ಲವಿ ನಾಯಕಿಯಾಗಿದ್ದರು. ಚಿತ್ರಮಂದಿರಗಳಲ್ಲಿ ಭರ್ಜರಿ ಯಶಸ್ವಿ ಕಂಡ ಈ ಸಿನಿಮಾ, 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ, ಸೂಪರ್ ಹಿಟ್ ಎನಿಸಿಕೊಂಡಿತ್ತು. ಅದಾದ ಬಳಿಕ ಒಟಿಟಿಗೂ ಎಂಟ್ರಿಕೊಟ್ಟು ಅಲ್ಲೂ ಸದ್ದು ಮಾಡಿತ್ತು. ಇದೀಗ ಇದೇ ಸಿನಿಮಾ ಕಿರುತೆರೆಗೆ ಬರ್ತಿದೆ.
ಕಳೆದ ವರ್ಷದ ದೀಪಾವಳಿ ಪ್ರಯುಕ್ತ ಬಿಡುಗಡೆ ಆದ ತಮಿಳಿನ ಅಮರನ್ ಸಿನಿಮಾ, ಚಿತ್ರಮಂದಿರದಲ್ಲಿ ಅಕ್ಷರಶಃ ಅಬ್ಬರಿಸಿತ್ತು. ಅದಾದ ಮೇಲೆ ಒಟಿಟಿಗೂ ಆಗಮಿಸಿ ಅಲ್ಲಿಯೂ ಹೆಚ್ಚು ಜನರಿಂದ ವೀಕ್ಷಣೆ ಪಡೆದಿತ್ತು. ಇದೀಗ ಇದೇ ಸಿನಿಮಾ ಕನ್ನಡ ಕಿರುತೆರೆಗೆ ಡಬ್ ಆಗಿ ಆಗಮಿಸುತ್ತಿದೆ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು, ಒಟಿಟಿಯಲ್ಲೂ ನೋಡಲು ಆಗದಿದ್ದವರು, ಇದೀಗ ಮನೆಯಲ್ಲಿ ಕೂತು ಟಿವಿಯಲ್ಲಿಯೇ ಕಣ್ತುಂಬಿಕೊಳ್ಳಬಹುದು. ಯಾವ ವಾಹಿನಿ? ಯಾವಾಗಿನಿಂದ ಪ್ರಸಾರ? ಹೀಗಿದೆ ಮಾಹಿತಿ.
ಥಿಯೇಟರ್‌ಗಳಲ್ಲಿ ಸೂಪರ್ ಹಿಟ್ ಆದ ಅಮರನ್ ಸಿನಿಮಾದ ಒಟಿಟಿ ಹಕ್ಕನ್ನು, ನೆಟ್‌ಫ್ಲಿಕ್ಸ್ ಸಂಸ್ಥೆ 60 ಕೋಟಿಗೆ ಪಡೆದುಕೊಂಡಿದೆ ಎಂದು ಈ ಹಿಂದೆ ವರದಿಯಾಗಿತ್ತು. ಅದರಂತೆ, 120 ಕೋಟಿ ಬಜೆಟ್‌ನಲ್ಲಿ ಈ ಸಿನಿಮಾವನ್ನು ಕಮಲ್ ಹಾಸನ್ ತಮ್ಮ ರಾಜ್ ಕಮಲ್ ಇಂಟರ್ ನ್ಯಾಷನಲ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿದ್ದ ಈ ಸಿನಿಮಾ, ಕೇವಲ ತಮಿಳುನಾಡಿನಲ್ಲಿ ಮಾತ್ರವೇ 150 ಕೋಟಿ ಗಳಿಕೆ ಮಾಡಿತ್ತು. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಭಾಷೆಗಳಿಂದಲೂ ಕಲೆಕ್ಷನ್ ಸಂದಾಯವಾಗಿತ್ತು. ಈಗ ಇದೇ ಸಿನಿಮಾ ಟಿವಿಯಲ್ಲಿ ಪ್ರಸಾರ ಆಗಲಿದೆ.
ಶೀಘ್ರದಲ್ಲಿ ಕನ್ನಡದ ಸ್ಟಾರ್ ಸುವರ್ಣದಲ್ಲಿ
ಅಂದಹಾಗೇ ಈ ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಸ್ಟಾರ್ ಸಂಸ್ಥೆ ಪಡೆದುಕೊಂಡಿದೆ. ಅದರಂತೆ, ಇದೀಗ ಇದೇ ಚಿತ್ರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕನ್ನಡಕ್ಕೆ ಡಬ್ ಆಗಿ ಪ್ರಸಾರವಾಗಲಿದೆ. ಚಿತ್ರದ ಕಿರು ಝಲಕ್ ಬಿಡುಗಡೆ ಮಾಡಿರುವ ವಾಹಿನಿ, ಶೀಘ್ರದಲ್ಲಿ ಎಂದು ಹೇಳಿದೆ. ಸಂಕ್ರಾಂತಿ ಪ್ರಯುಕ್ತ ಈ ಚಿತ್ರ ಪ್ರಸಾರವಾಗುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗಬೇಕಿದೆ. ಇದೇ ಸಿನಿಮಾ ತಮಿಳಿನ ಸ್ಟಾರ್ ವಿಜಯ್ ವಾಹಿನಿಯಲ್ಲಿ ಜನವರಿ 14ರ ಸಂಜೆ 5:30ಕ್ಕೆ ಪ್ರಸಾರವಾಗಲಿದೆ.
ನೈಜ ಘಟನೆ ಆಧರಿತ ಸಿನಿಮಾ
ರಾಜ್‌ಕುಮಾರ್ ಪೆರಿಸ್ವಾಮಿ ಅಮರನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಶಿವ ಅರೋರಾ, ರಾಹುಲ್ ಸಿಂಗ್ ಬರೆದ India's Most Fearless: True Stories of Modern Military Heroes ಪುಸ್ತಕದಿಂದ ಈ ನೈಜ ಕಥೆಯನ್ನು ಆಯ್ದುಕೊಳ್ಳಲಾಗಿದೆ.