ಜೂನ್‌ನಿಂದ ಮತ್ತಷ್ಟು ದುಬಾರಿಯಾಗಲಿದೆ ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ; ಅಷ್ಟಕ್ಕೂ ನೀವೇನು ಮಾಡಬಹುದು?
ಕನ್ನಡ ಸುದ್ದಿ  /  ಮನರಂಜನೆ  /  ಜೂನ್‌ನಿಂದ ಮತ್ತಷ್ಟು ದುಬಾರಿಯಾಗಲಿದೆ ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ; ಅಷ್ಟಕ್ಕೂ ನೀವೇನು ಮಾಡಬಹುದು?

ಜೂನ್‌ನಿಂದ ಮತ್ತಷ್ಟು ದುಬಾರಿಯಾಗಲಿದೆ ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ; ಅಷ್ಟಕ್ಕೂ ನೀವೇನು ಮಾಡಬಹುದು?

ಜೂನ್‌ನಿಂದ ಅಮೆಜಾನ್‌ ಪ್ರೈಂ ವಿಡಿಯೋ ಒಟಿಟಿ ಚಂದಾದಾರರಿಗೆ ಶಾಕಿಂಗ್‌ ಸುದ್ದಿಯೊಂದು ಬರಲಿದೆ. ಇಲ್ಲಿಯವರೆಗೂ ಜಾಹೀರಾತು ಮುಕ್ತ ಸಿನಿಮಾ, ಸಿರೀಸ್‌ ವೀಕ್ಷಿಸುತ್ತಿದ್ದ ಬಳಕೆದಾರರು, ಜೂನ್‌ನಿಂದ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಿದೆ. ಇಲ್ಲಿದೆ ವಿವರ.

ಜೂನ್‌ನಿಂದ ಮತ್ತಷ್ಟು ದುಬಾರಿಯಾಗಲಿದೆ ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ; ಅಷ್ಟಕ್ಕೂ ನೀವೇನು ಮಾಡಬಹುದು?
ಜೂನ್‌ನಿಂದ ಮತ್ತಷ್ಟು ದುಬಾರಿಯಾಗಲಿದೆ ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ; ಅಷ್ಟಕ್ಕೂ ನೀವೇನು ಮಾಡಬಹುದು? (Image\ Amazon Prime Video)

ನೀವು ಅಮೆಜಾನ್‌ ಪ್ರೈಂ ವಿಡಿಯೋ ಚಂದಾದಾರಿಕೆ ಪಡೆದು ಕಂಟೆಂಟ್‌ಗಳನ್ನು ವೀಕ್ಷಿಸುತ್ತಿದ್ದೀರಾ? ಹಾಗಾದರೆ, ಜೂನ್‌ನಿಂದ ನಿಮಗೆ ಇದೇ ಒಟಿಟಿ ಕಡೆಯಿಂದ ಶಾಕಿಂಗ್‌ ಸುದ್ದಿಯೊಂದು ಬರಲಿದೆ. ಇಲ್ಲಿಯವರೆಗೂ ಜಾಹೀರಾತು ಮುಕ್ತ ಸಿನಿಮಾ, ಸಿರೀಸ್‌ ವೀಕ್ಷಿಸುತ್ತಿದ್ದ ಬಳಕೆದಾರರು, ಜೂನ್‌ನಿಂದ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಿದೆ! ಅಂದರೆ, ವೀಕ್ಷಣೆ ವೇಳೆ ಜಾಹೀರಾತುಗಳ ಅಡಚಣೆ ಬೇಡ ಎಂದರೆ ಹೆಚ್ಚುವರಿ ಹಣವನ್ನು ನೀಡಬೇಕಿದೆ. ಸದ್ಯ ಪ್ರೈಂ ವಿಡಿಯೋ ಕಂಪನಿಯ ಈ ನಡೆಗೆ ಚಂದಾದಾರರಿಂದ ವಿರೋಧ ವ್ಯಕ್ತವಾಗುತ್ತಿದೆ.

ಜೂನ್‌ 17ರಿಂದ ಅಮೆಜಾನ್‌ ಪ್ರೈಂ ತನ್ನ ಎಲ್ಲ ಕಂಟೆಂಟ್‌ಗಳ ನಡುವೆ ಸೀಮಿತ ಜಾಹೀರಾತುಗಳನ್ನು ಪ್ರಸಾರ ಮಾಡಲಿದೆ. ಈ ಜಾಹೀರಾತನ್ನು ತಪ್ಪಿಸಲು ಹೊಸ ಪ್ಯಾಕ್‌ವೊಂದನ್ನೂ ಪರಿಚಯಿಸಿದೆ ಅಮೆಜಾನ್‌ ಪ್ರೈಂ ವಿಡಿಯೋ. ಈ ಮೂಲಕ ಬಳಕೆದಾರರಿಂದ ಹೆಚ್ಚುವರಿ ಹಣ ಪಡೆಯಲಿದೆ ಈ ಸಂಸ್ಥೆ. ಹಾಗಾದರೆ, ಹಳೇ ಮತ್ತು ಹೊಸ ಚಂದಾದಾರರು ಪ್ರತಿ ತಿಂಗಳು ಮತ್ತು ವರ್ಷದ ಲೆಕ್ಕದಲ್ಲಿ ಎಷ್ಟೆಷ್ಟು ಹೆಚ್ಚುವರಿ ಹಣ ಪಾವತಿಸಬೇಕು? ಇಲ್ಲಿದೆ ನೋಡಿ ವಿವರ.

ಹೆಚ್ಚುವರಿ ಹಣ ಎಷ್ಟು?

ಹೌದು ಜೂನ್‌ 17ರಿಂದ ಅಮೆಜಾನ್‌ ಪ್ರೈಂ ಕಂಟೆಂಟ್‌ಗಳ ನಡುವೆ ಜಾಹೀರಾತುಗಳು ಪ್ರಸಾರ ಶುರುವಾಗಲಿದೆ. ಈಗಾಗಲೇ ತಿಂಗಳ ಮತ್ತು ವಾರ್ಷಿಕ ಪ್ಲಾನ್‌ನಲ್ಲಿ ನೀವು ಪ್ರೈಂ ಚಂದಾದಾರರಾಗಿದ್ದರೆ, ಜಾಹೀರಾತು ಬೇಡ ಎಂದಾದರೆ, ಈಗಿನ ಪ್ಲಾನ್‌ ಹೊರತುಪಡಿಸಿ ವಾರ್ಷಿಕ ಹೆಚ್ಚುವರಿಯಾಗಿ 699 ರೂಪಾಯಿ ಪಾವತಿಸಬೇಕು. ಅದೇ ರೀತಿ ಪ್ರತಿ ತಿಂಗಳಿಗೆ ಹೆಚ್ಚುವರಿಯಾಗಿ 129 ರೂಪಾಯಿ ಪಾವತಿಸಬೇಕಾಗುತ್ತದೆ. ಒಂದು ವೇಳೆ ಜಾಹೀರಾತು ಸಹಿತ ವೀಕ್ಷಿಸಬಹುದಾದರೆ, ಯಾವುದೇ ಹಣ ಪಾವತಿಸುವಂತಿಲ್ಲ. ಹೊಸ ಬಳಕೆದಾರರು ಜಾಹೀರಾತು ಮುಕ್ತ ಚಂದಾದಾರಿಕೆಗಾಗಿ ವಾರ್ಷಿಕವಾಗಿ 2198 ರೂ. ಮತ್ತು ತಿಂಗಳಿಗೆ 498 ರೂ. ವ್ಯಯಿಸಬೇಕಾಗುತ್ತದೆ.

ಭಾರತದಲ್ಲಿ ಅಮೆಜಾನ್ ಪ್ರೈಮ್

ಪ್ರಪಂಚದಾದ್ಯಂತ 10 ಕೋಟಿಗಿಂತಲೂ ಹೆಚ್ಚು ಫಾಲೋವರ್ಸ್‌ ಹೊಂದಿರುವ, ಅತ್ಯಂತ ಜನಪ್ರಿಯ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಅಮೆಜಾನ್‌ ಪ್ರೈಂ ಒಂದಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋ ಪ್ರಪಂಚದಾದ್ಯಂತ 240ಕ್ಕೂ ಹೆಚ್ಚು ದೇಶಗಳಲ್ಲಿ ಪ್ರಸಾರವಾಗುತ್ತಿದ್ದು, ಜಾಗತಿಕವಾಗಿ ದೊಡ್ಡ ವ್ಯಾಪ್ತಿ ಹೊಂದಿದೆ. ಅದರಲ್ಲೂ ಈ ಒಟಿಟಿಯ ಪ್ರಮುಖ ಮಾರುಕಟ್ಟೆ ಭಾರತವಾಗಿದ್ದು, ಇಲ್ಲಿ ಹೆಚ್ಚು ಸ್ಥಳೀಯ ಜಾಹೀರಾತುಗಳನ್ನು ಕಂಟೆಂಟ್‌ ನಡುವೆ ಸೇರಿಸಲು ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲು ಈ ಕಾಮರ್ಸ್‌ ಸಂಸ್ಥೆಗಳು ಮುಂದಾಗಿವೆ. ಭಾರತದಲ್ಲಿ ಶೇ. 60ಕ್ಕಿಂತ ಹೆಚ್ಚು ವೀಕ್ಷಕರು ನಾಲ್ಕಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರೈಂ ಕಂಟೆಂಟ್‌ಗಳನ್ನು ವೀಕ್ಷಿಸುತ್ತಾರೆ.

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.