Kannada Serial TRP: ನಂಬರ್‌ 1 ಪಟ್ಟದಿಂದ ಕುಸಿತ ಕಂಡ ಹೊಸ ಸೀರಿಯಲ್‌, ʻಅಣ್ಣಯ್ಯʼನಿಗೆ ಮತ್ತೆ ಪಟ್ಟಾಭಿಷೇಕ
ಕನ್ನಡ ಸುದ್ದಿ  /  ಮನರಂಜನೆ  /  Kannada Serial Trp: ನಂಬರ್‌ 1 ಪಟ್ಟದಿಂದ ಕುಸಿತ ಕಂಡ ಹೊಸ ಸೀರಿಯಲ್‌, ʻಅಣ್ಣಯ್ಯʼನಿಗೆ ಮತ್ತೆ ಪಟ್ಟಾಭಿಷೇಕ

Kannada Serial TRP: ನಂಬರ್‌ 1 ಪಟ್ಟದಿಂದ ಕುಸಿತ ಕಂಡ ಹೊಸ ಸೀರಿಯಲ್‌, ʻಅಣ್ಣಯ್ಯʼನಿಗೆ ಮತ್ತೆ ಪಟ್ಟಾಭಿಷೇಕ

ಕಿರುತೆರೆ ಧಾರಾವಾಹಿಗಳ ವಾರದ ಏರಿಳಿತದ ಲೆಕ್ಕಾಚಾರ ತಿಳಿಸುವ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದಿದೆ. ಅದರಂತೆ 11ನೇ ವಾರದ ಟಿಆರ್‌ಪಿಯಲ್ಲಿ ಕನ್ನಡದ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಇನ್ನುಳಿದ ಧಾರಾವಾಹಿಗಳಿಗೆ ಸಿಕ್ಕ ನಂಬರ್‌ ಎಷ್ಟು? ಎಂಬ ಮಾಹಿತಿ ಇಲ್ಲಿದೆ.

11ನೇ ವಾರದ ಟಿಆರ್‌ಪಿಯಲ್ಲಿ ಯಾರು ಟಾಪ್‌?
11ನೇ ವಾರದ ಟಿಆರ್‌ಪಿಯಲ್ಲಿ ಯಾರು ಟಾಪ್‌?

Kannada Serial TRP: ಕನ್ನಡ ಕಿರುತೆರೆಯಲ್ಲಿ ಹೊಸ ಸೀರಿಯಲ್‌ಗಳ ಜತೆಗೆ ಹಳೇ ಧಾರಾವಾಹಿಗಳೂ ತಮ್ಮ ಖದರ್‌ ಮುಂದುವರಿಸಿವೆ. ಟಿವಿ ವೀಕ್ಷಕರಿಗೆ ಹಳೇ ಬೇರಿನ ಜತೆಗೆ ಹೊಸ ಚಿಗುರು ಇಷ್ಟವಾಗುತ್ತಿದೆ. ಅಂದರೆ ಹಳೇ ಕಥೆಗಳ ಜತೆಗೆ ಹೊಸತನ ಕಥೆಗಳಿಗೂ ಮನಸು ಮಾಡಿದ್ದಾನೆ. ಅದರಂತೆ, ಇದೀಗ ಕಿರುತೆರೆ ಧಾರಾವಾಹಿಗಳ ವಾರದ ಏರಿಳಿತದ ಲೆಕ್ಕಾಚಾರ ತಿಳಿಸುವ ಟಿಆರ್‌ಪಿ ಅಂಕಿ ಅಂಶ ಹೊರಬಿದ್ದಿದೆ. ಅದರಂತೆ 11ನೇ ವಾರದ ಟಿಆರ್‌ಪಿಯಲ್ಲಿ ಕನ್ನಡದ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿದೆ? ಇನ್ನುಳಿದ ಧಾರಾವಾಹಿಗಳಿಗೆ ಸಿಕ್ಕ ನಂಬರ್‌ ಎಷ್ಟು? ಎಂಬ ಮಾಹಿತಿ ಇಲ್ಲಿದೆ.

ಕಳೆದ ಎರಡ್ಮೂರು ವಾರಗಳಿಂದ ನಂಬರ್‌ 1 ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಇತ್ತೀಚೆಗಷ್ಟೇ ಶುರುವಾದ ಹೊಸ ಸೀರಿಯಲ್‌ ನಾ ನಿನ್ನ ಬಿಡಲಾರೆ. ಇದೀಗ ಈ ಸೀರಿಯಲ್‌ 11ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 7.5 ಟಿವಿಆರ್‌ ಪಡೆದು ಕುಸಿತ ಕಂಡಿದೆ. ಮೊದಲ ಸ್ಥಾನದ ಬದಲು ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ. ಇತ್ತ ಅಣ್ಣಯ್ಯನ ಕನ್ಸಿಸ್ಟನ್ಸಿ ಓಟಕ್ಕೆ ಮತ್ತೆ ಗೆಲುವು ದಕ್ಕಿದೆ. ಅಂದರೆ, 11ನೇ ವಾರ 8.4 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿದ್ದಾನೆ ಅಣ್ಣಯ್ಯ.

ಟಾಪ್‌ ಐದರಲ್ಲಿ ಜೀ ಕನ್ನಡ ಧಾರಾವಾಹಿಗಳು

ಇನ್ನು ಸದಾ ಮೊದಲ ಮೂರು ಸ್ಥಾನಗಳಲ್ಲಿಯೇ ಏರಿಳಿತ ಕಾಣುತ್ತಿದ್ದ ಶ್ರಾವಣಿ ಸುಬ್ರಮಣ್ಯ ಇದೀಗ ಎಂದಿನಂತೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 7.7 ಟಿವಿಆರ್‌ ಪಡೆದು, ಹೆಚ್ಚು ವೀಕ್ಷಕ ಬಳಗವನ್ನು ಪಡೆದಿದೆ ಈ ಸೀರಿಯಲ್. ಇದಾದ ಬಳಿಕ ಲಕ್ಷ್ಮೀ ನಿವಾಸ ಸೀರಿಯಲ್‌ 7.2 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಈ ಮೊದಲ ಹೆಚ್ಚು ಕಾಲ ನಂಬರ್‌ 1 ಸ್ಥಾನದಲ್ಲಿಯೇ ಈ ಸೀರಿಯಲ್‌ ಮುಂದುವರಿದಿತ್ತು. ಸದ್ಯ ಶ್ರೀಲಂಕಾ ಪ್ರವಾಸದ ಏಪಿಸೋಡ್‌ಗಳು ನೋಡುಗರನ್ನು ಸೆಳೆದಿವೆ.

ಹೆಚ್ಚಾಗುತ್ತಿದೆ ಬ್ರಹ್ಮಗಂಟು ವೀಕ್ಷಕ ಬಳಗ

ಅಮೃತಧಾರೆ ಸೀರಿಯಲ್‌ 6.9 ಟಿವಿಆರ್‌ ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಒಂದಷ್ಟು ಅಚ್ಚರಿಗಳ ಗುಚ್ಛವೇ ಈ ಸೀರಿಯಲ್‌ನಲ್ಲಿ ತೆರೆದರೂ, ಟಾಪ್‌ ಮೂರಕ್ಕೆ ಲಗ್ಗೆ ಇಡಲು ಈ ಸೀರಿಯಲ್‌ ಒದ್ದಾಡುತ್ತಿದೆ. ಅದೇ ರೀತಿ ಆರಂಭದಲ್ಲಿ ಕಡಿಮೆ ಟಿಆರ್‌ಪಿ ಪಡೆದಿದ್ದ ಬ್ರಹ್ಮಗಂಟು ಸೀರಿಯಲ್‌ ಇದೀಗ ಚೇತರಿಕೆ ಹಾದಿಯಲ್ಲಿದೆ. ವಾರದಿಂದ ವಾರಕ್ಕೆ ಪ್ರಗತಿ ಕಾಣುತ್ತಿದ್ದು, 11ನೇ ವಾರದ ಟಿಆರ್‌ಪಿಯಲ್ಲಿ ಬ್ರಹ್ಮಗಂಟು ಧಾರಾವಾಹಿ 6.6 ಟಿವಿಆರ್‌ ಪಡೆದು ಆರನೇ ಸ್ಥಾನದಲ್ಲಿದೆ.

ಭಾಗ್ಯಲಕ್ಷ್ಮೀ ಕುಸಿತ

ಅದೇ ರೀತಿ ಕಲರ್ಸ್‌ ಕನ್ನಡದಲ್ಲಿ 11ನೇ ವಾರ ಒಂದಷ್ಟು ಅಚ್ಚರಿಗಳು ಘಟಿಸಿವೆ. ಲಕ್ಷ್ಮೀ ಬಾರಮ್ಮ ಧಾರಾವಾಹಿ 5.0 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ. ನಿನಗಾಗಿ ಧಾರಾವಾಹಿಗೆ 4.9 ರೇಟಿಂಗ್‌ ಸಿಕ್ಕರೆ, ಇತ್ತೀಚೆಗಷ್ಟೇ ಶುರುವಾದ ಭಾರ್ಗವಿ ಎಲ್‌ಎಲ್‌ಬಿ 4.6 ನಂಬರ್‌ ಪಡೆದಿದೆ. ಕಲರ್ಸ್‌ ಕನ್ನಡದ ಟಾಪ್‌ ಸೀರಿಯಲ್‌ ಎನಿಸಿಕೊಂಡಿದ್ದ ಭಾಗ್ಯಲಕ್ಷ್ಮೀ 4.6 ಟಿವಿಆರ್‌ ಪಡೆದು ಕುಸಿತ ಕಂಡಿದ್ದು, 10ನೇ ಸ್ಥಾನದಲ್ಲಿದೆ. ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಸಹ 4.6 ರೇಟಿಂಗ್‌ ಪಡೆದಿದೆ.

ಯಜಮಾನನಿಗೆ ಹೊಸ ಕಳೆ

ರಾಮಾಚಾರಿ ಧಾರಾವಾಹಿಯೂ 11ನೇ ವಾರ ಕುಸಿತ ಕಂಡು, ಯಜಮಾನ ಸೀರಿಯಲ್‌ಗಿಂತಲೂ ಕೆಳಕ್ಕೆ ಇಳಿದಿದೆ. 3.0 ಟಿಆರ್‌ಪಿ ಪಡೆದು ಕನಿಷ್ಠ ಟಿಆರ್‌ಪಿ ದಾಖಲಿಸಿದೆ. ಇತ್ತ ಈ ಹಿಂದಿನ ಟಿಆರ್‌ಪಿಗೆ ಹೋಲಿಕೆ ಮಾಡಿದರೆ, ಯಜಮಾನ ಧಾರಾವಾಹಿ ಇದೀಗ 3.9 ಟಿಆರ್‌ಪಿ ಪಡೆದು ಜಿಗಿತ ಕಂಡಿದೆ. ವಾರಾಂತ್ಯಕ್ಕೆ ಪ್ರಸಾರವಾಗುವ ನೂರು ಜನ್ಮಕೂ ಸೀರಿಯಲ್‌ 2.4 ಟಿಆರ್‌ಪಿ ಸಂಪಾದಿಸಿದರೆ, ಸೀತಾ ರಾಮ ಮತ್ತು ಶ್ರೀರಸ್ತು ಶುಭಮಸ್ತು ಧಾರಾವಾಹಿಗಳು ಟಿಆರ್‌ಪಿಯಲ್ಲಿ ಆರಕ್ಕೇರದೇ ಮೂರಕ್ಕಿಳಿಯದೆ ತಟಸ್ಥವಾಗಿವೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner