Amruthadhaare Serial: ಕೊನೆಗೂ ಮಧುರಾ ವಧುವೆಂಬ ಸತ್ಯ ಗೌತಮ್‌ಗೆ ತಿಳಿಯಿತು, ರಾಜೇಶ್ ನಟರಂಗ ರೌದ್ರಾವತಾರ ನೋಡಲು ರೆಡಿಯಾಗಿ
Amruthadhaare Serial:ಕೊನೆಗೂ ಗೌತಮ್ ಎರಡನೇ ಮದುವ ಪ್ರಸಂಗ ಅಂತ್ಯವಾಗುವ ಸೂಚನೆ ದೊರಕಿದೆ. ಏಕೆಂದರೆ, ಗೌತಮ್ ದಿವಾನ್‌ಗೆ ಮಧುರಾ ತನ್ನನ್ನು ಮದುವೆಯಾಗಲು ಬಂದವಳು ಎಂಬ ಸತ್ಯ ತಿಳಿದಿದೆ. ಜೀ ಕನ್ನಡ ವಾಹಿನಿಯ ಇಂದಿನ ಎಪಿಸೋಡ್‌ನಲ್ಲಿ ಏನೇನು ಇರಲಿದೆ ಎಂದು ತಿಳಿಯೋಣ.

Amruthadhaare Serial: ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊವನ್ನು ಬಿಡುಗಡೆ ಮಾಡಿದೆ. ಗೌತಮ್ ಮತ್ತು ಮಧುರಾಳನ್ನು ಹತ್ತಿರವಾಗಿಸಲು ಭೂಮಿಕಾ ಪ್ಲ್ಯಾನ್ ಮಾಡಿದ್ದಾರೆ. ಮಧುರಾಳ ಕಾರ್ ಕೆಟ್ಟಿದೆ ಅವಳನ್ನು ಡ್ರಾಪ್ ಮಾಡಿ ಎಂದು ಭೂಮಿಕಾ ಹೇಳಿದ್ದಾರೆ. ಈ ಮೂಲಕ ಇಬ್ಬರು ಇನ್ನಷ್ಟು ಹತ್ತಿರವಾಗಲಿ ಎಂದುಕೊಂಡಿದ್ದಾರೆ. ಆದರೆ, ಏನೂ ವಿಷಯ ಗೊತ್ತಿಲ್ಲದ ಗೌತಮ್ ಮಧುರಾಳಿಗೆ ತನ್ನ ಕಾರಿನಲ್ಲಿ ಡ್ರಾಪ್ ನೀಡಿದ್ದಾರೆ. ಕಪ್ಪು ಕೋಟ್ ಧರಿಸಿರುವ ಗೌತಮ್ ಕಾರಿನಲ್ಲಿ ಆಕೆಯ ಕಾಫಿ ಶಾಪ್ ತನಕ ಹೋಗುತ್ತಾರೆ. "ಬನ್ನಿ ಕಾಫಿ ಕುಡಿಯೋಣ" ಎಂದು ಮಧುರಾ ಹೇಳುತ್ತಾರೆ. ಸಹಜವಾಗಿ ಕಾಫಿ ಕುಡಿಯಲು ಆ ಕಾಫಿ ಶಾಪ್‌ಗೆ ಗೌತಮ್ ಹೋಗುತ್ತಾರೆ. ಅಲ್ಲಿ ಮಧುರಾ ಮತ್ತು ಗೌತಮ್ ಮಾತನಾಡುತ್ತಾರೆ.
"ಭೂಮಿಕಾ ನಿಮಗೆ ಏನೂ ರಿಸ್ಟ್ರಿಕ್ಟ್ ಮಾಡೋದಿಲ್ವ?" ಎಂದು ಮಧುರಾ ಪ್ರಶ್ನಿಸುತ್ತಾರೆ.
"ನಿಮಗೆ ಹೇಗೆ ಇಷ್ಟಾನೋ ಹಾಗೇ ಇರಿ ಅಂತಾರೆ?" ಎಂದು ಗೌತಮ್ ದಿವಾನ್ ಉತ್ತರಿಸುತ್ತಾರೆ.
"ನಾಳೆ ದಿನ ನಾನು ಕೂಡ ಹೀಗೆ ಇರಬೇಕಲ್ವ?" ಎಂದು ನಾಚಿಕೆಯಿಂದ ಮಧುರಾ ಕೇಳುತ್ತಾರೆ. ವಿಷಯ ಗೊತ್ತಿಲ್ಲದ ಗೌತಮ್‌ಗೆ ಸಹಜವಾಗಿ ಅಚ್ಚರಿಯಾಗುತ್ತದೆ.
"ನೀವು ಯಾಕೆ ಹಾಗೆ ಇರಬೇಕು" ಎಂದು ಗೌತಮ್ ಅಚ್ಚರಿಯಿಂದ ಕೇಳುತ್ತಾರೆ.
"ಅಂದರೆ, ನಾವಿಬ್ಬರು ಮದುವೆಯಾಗ್ತಾ ಇದ್ದೇವೆ ಅಲ್ವಾ" ಎಂದು ಹೇಳುತ್ತಾಳೆ.
ಇದನ್ನು ಕೇಳಿದ ಗೌತಮ್ ಮುಖದಲ್ಲಿ ಆಘಾತ ಕಾಣಿಸಿಕೊಳ್ಳುತ್ತದೆ. ಭೂಮಿಕಾಳಿಗೆ ಮಗುವಾಗುವ ಸಾಮರ್ಥ್ಯ ಇಲ್ಲ ಎನ್ನುವುದು, ಇದಕ್ಕಾಗಿ ಎರಡನೇ ಮದುವೆಯಾಗುವ ಎಲ್ಲಾ ಕಥೆಯನ್ನು ಮಧುರಾ ಹೇಳಬಹುದು. ಇದನ್ನು ಕೇಳಿ ಗೌತಮ್ ಕೋಪಗೊಳ್ಳಬಹುದು. ಇದು ಮತ್ತು ನಾಳೆಯ ಎಪಿಸೋಡ್‌ನಲ್ಲಿ ಗೌತಮ್‌ನ ರೌದ್ರಾವತಾರ ಕಾಣಿಸಬಹುದು.
ಈ ಪ್ರೊಮೊಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. "ಗೌತಮ್ ಈಗಲೇ ಭೂಮಿಕಾಳ ಗ್ರಹಚಾರ ಬಿಡಿಸು. ಯಾರನ್ನು ಕೇಳಿ ಹುಡುಗಿ ನೋಡಿದ್ದಾಳೆ. ಅವಳಿಗೆ ಬೇಡ ಅಂದ್ರೆ ಬಿಟ್ಟೋಗೋದು. ಗೌತಮ್ ಒಳ್ಳೆತನ ನ ಮಿಸ್ ಯೂಸ್ ಮಾಡ್ಕೋತಿದ್ದಾಳೆ ಅನಿಸುತ್ತೆ" "ಧಾರಾವಾಹಿ ಮಾಡ್ತಾ ಮಾಡ್ತಾ ಕೆಲವು ಡೈರೆಕ್ಟರ್‌ಗಳಿಗೆ ತಲೆ ಕೆಡುತ್ತೆ! ಎಷ್ಟೂಂತ ಅವರಾದ್ರೂ ಕತೆ ಎಳೀಬಹುದು" "ಹುಚ್ಚಾಸ್ಪತ್ರೆ ನೋಡದೇ ಇರೋರಿಗೆ ಇದು ಒಳ್ಳೆ internship" "ಮೊದಲ ಹೆಂಡತಿಗೆ ಡೈವರ್ಸ್ ಕೊಡದೆ ಇನ್ನೊಂದು ಮದುವೆ ಹೇಗಾಗುತ್ತೆ" "ಮೊದಲು ನಾವುಗಳು ಕಮೆಂಟ್ ಹಾಕೋದನ್ನು ನಿಲ್ಲಿಸಬೇಕು, ಅದರ ಜೊತೆ ಗೆ ಧಾರಾವಾಹಿಗಳನ್ನು ನೋಡಬಾರದು, ಅವಾಗ ಅವರಿಗೆ ಧಾರಾವಾಹಿಗಳು ಮಾಡುವ ಯಾವುದೇ ಯೋಚನೆ ಬರಲ್ಲ" ಎಂದೆಲ್ಲ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.
ಅಮೃತಧಾರೆ ಸೀರಿಯಲ್ ಪಾತ್ರವರ್ಗ
ಛಾಯಾ ಸಿಂಗ್: ಭೂಮಿಕಾ (ನಾಯಕಿ)
ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ)
ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ)
ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ)
ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)
ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)
ರಣವ್: ಜೈದೇವ್
ಚಂದನ್: ಅಶ್ವಿನಿ
ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ)
ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ)
ವಿಭಾಗ