ಅಮೃತಧಾರೆಯಲ್ಲಿ ಬದಲಾದ ಜೀವ, ಮಹಿಮಾ ಮಿಸ್ಸಿಂಗ್! ಭೂಪತಿ ಜತೆ ಸೇರಿದ ಭೂಮಿಕಾ ಸಹೋದರ, ಪಾತ್ರ ಜತೆಗೆ ಗುಣ ಬದಲಾಯಿಸಿದ್ದಕ್ಕೆ ವೀಕ್ಷಕರಿಗೆ ಬೇಸರ
ಅಮೃತಧಾರೆ ಧಾರಾವಾಹಿಯ ಹೊಸ ಪ್ರೊಮೊ ನೋಡಿ ಕಿರುತೆರೆ ವೀಕ್ಷಕರು ಅಚ್ಚರಿಗೊಂಡಿದ್ದಾರೆ. ಜೀವ ಪಾತ್ರದಾರಿ ಶಶಿ ಹೆಗ್ಗಡೆ ಬದಲು ಹೊಸ ಜೀವ ಕಾಣಿಸಿಕೊಂಡಿದ್ದಾರೆ. ಪಾತ್ರ ಮಾತ್ರ ಬದಲಾಯಿಸದೆ ಪಾತ್ರದಾರಿಯ ಗುಣವನ್ನೂ ಬದಲಾಯಿಸಿರುವುದು ವೀಕ್ಷಕರ ಬೇಸರಕ್ಕೆ ಕಾರಣವಾಗಿದೆ. ಏನಿದು ಹೊಸ ಟ್ವಿಸ್ಟ್?

ಅಮೃತಧಾರೆ ಧಾರಾವಾಹಿ: ಟಿಆರ್‌ಪಿಯಲ್ಲಿ ಮೊದಲ ಸ್ಥಾನಕ್ಕೆ ನೆಗೆದಿರುವ ಅಮೃತಧಾರೆ ಧಾರಾವಾಹಿಯಲ್ಲಿ ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಹೊಸ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಇದೇ ಸಮಯದಲ್ಲಿ ಜೀವ ಪಾತ್ರದಾರಿ ಶಶಿ ಹೆಗ್ಗಡೆ ಸೀರಿಯಲ್‌ನಿಂದ ಹೊರಹೋಗಿದ್ದಾರೆ. ಜೀವ ಪಾತ್ರದಲ್ಲಿ ಹೊಸ ನಟರೊಬ್ಬರು ಕಾಣಿಸಿಕೊಂಡಿದ್ದಾರೆ. ಇಲ್ಲಿ ಜೀವ ಪಾತ್ರದಾರಿಯನ್ನು ಮಾತ್ರ ಬದಲಾಯಿರುವುದಲ್ಲ. ಇಲ್ಲಿಯವರೆಗೆ ಸಭ್ಯ, ಒಳ್ಳೆಯ ನಡತೆಯಿಂದ ಹೆಸರುವಾಸಿಯಾಗಿದ್ದ ಜೀವ ಇದೀಗ ನೆಗೆಟಿವ್ ಪಾತ್ರಕ್ಕೆ ತಿರುಗಿದ್ದಾನೆ. ಮಹಿಮಾಳ ಗಂಡ, ಭೂಮಿಕಾಳ ಸಹೋದರ ಜೀವ ಇದೀಗ ಗೌತಮ್‌ನ ವೈರಿ ರಾಜೇಂದ್ರ ಭೂಪತಿ ಜತೆ ಸೇರಿದ್ದಾನೆ. ಗೃಹ ಪ್ರವೇಶಕ್ಕೆ ಆಗಮಿಸಿದ ಗೌತಮ್‌ಗೆ ಈ ಬದಲಾವಣೆ ನೋಡಿ ಅಚ್ಚರಿ, ಆಘಾತವಾಗಿದೆ.
ಬದಲಾದ ಜೀವ, ಮಹಿಮಾನೂ ಇಲ್ಲ!
ಇತ್ತೀಚೆಗಷ್ಟೇ ಅಮೃತಧಾರೆ ಧಾರಾವಾಹಿಯಲ್ಲಿ "ಕಾಣೆಯಾಗಿದ್ದ" ಸದಾಶಿವ ಗೌತಮ್ ಮನೆಗೆ ಬಂದು ಗೃಹ ಪ್ರವೇಶದ ಆಮಂತ್ರಣ ನೀಡಿದ್ದರು. ನನ್ನ ಮಗ ಕಟ್ಟಿರುವ ಹೊಸ ಮನೆಗೆ ಬನ್ನಿ ಎಂದು ಪ್ರೀತಿಯಿಂದ ಆಹ್ವಾನಿಸಿದ್ದರು. ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೊಮೊದಲ್ಲಿ ತವರುಮನೆಗೆ ಭೂಮಿಕಾ ಕುಟುಂಬ ಸಮೇತ ಗೃಹ ಪ್ರವೇಶಕ್ಕೆ ಹೋಗುವ ಸನ್ನಿವೇಶ ಇದೆ. ಗೌತಮ್ ದಿವಾನ್ ತನ್ನ ತಾಯಿ ಮತ್ತು ಪತ್ನಿಯ ಜತೆಗೆ ಜೀವನ ಮನೆಗೆ ಆಗಮಿಸಿದ್ದಾನೆ. ಈ ಸಮಯದಲ್ಲಿ ಜೀವ ಪಾತ್ರದಾರಿ ಬದಲಾಗಿರುವ ಅಂಶವನ್ನು ಗಮನಿಸಬಹುದು.
ಜೀವ ಪಾತ್ರದಾರಿ ಬದಲಾಗಿದ್ದಾನೆ. ಹೊಸ ಕಲಾವಿದರೊಬ್ಬರು ಈಗ ಜೀವ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇಷ್ಟಾಗಿದ್ದರೆ ಪ್ರೇಕ್ಷಕರು ಸಹಿಸಿಕೊಳ್ಳುತ್ತಿದ್ದರು. "ಜೀವ ಮನೆ ತುಂಬಾ ಚೆನ್ನಾಗಿದೆ. ಕೊನೆಗೂ ನೀನು ಅಂದುಕೊಂಡಿರುವುದನ್ನ ಸಾಧಿಸಿದೆ" ಎಂದು ಗೌತಮ್ ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಈ ಸಮಯದಲ್ಲಿ "ಈಗ ನಾನು ಹಳೆಯ ಜೀವ ಅಲ್ಲ" ಎನ್ನುತ್ತಾನೆ ಹೊಸ ಜೀವ. ಅದ ಸಮಯದಲ್ಲಿ ಗೃಹ ಪ್ರವೇಶದ ಮನೆಗೆ ರಾಜೇಂದ್ರ ಭೂಪತಿ ಎಂಟ್ರಿಯಾಗುತ್ತದೆ.
ಮನೆಗೆ ಬಂದ ರಾಜೇಂದ್ರ ಭೂಪತಿಯ ಕಾಲಿಗೆ ಬಿದ್ದು ಹೊಸ ಜೀವ ಆಶೀರ್ವಾದ ಪಡೆಯುತ್ತಾನೆ. ಜೀವನಿಗೆ ರಾಜೇಂದ್ರ ಭೂಪತಿ ಹತ್ತಿರವಾಗಿರುವುದನ್ನು ನೋಡಿ ಗೌತಮ್‌ಗೆ ಅಚ್ಚರಿಯಾಗಿದೆ. ಗೌತಮ್ ವೈರಿಯ ಜತೆ ಸೇರಿ ಜೀವ ಹಣ ಸಂಪಾದನೆ ಮಾಡಿರುವಂತೆ ಭಾಸವಾಗುತ್ತದೆ. ಅಚ್ಚರಿಯೆಂದರೆ, ಜೀವನ ಪಕ್ಕ ಮಹಿಮಾ ಕೂಡ ಇರುವುದಿಲ್ಲ. ಮಹಿಮಾ ಪಾತ್ರಧಾರೆ ಸಾರಾ ಅಣ್ಣಯ್ಯ ಕೂಡ ಅಮೃತಧಾರೆ ಸೀರಿಯಲ್ ಬಿಟ್ರ ಎಂಬ ಅನುಮಾನ ಕೂಡ ಮೂಡಿದೆ. ಮಹಿಮಾ ಪಾತ್ರಕ್ಕೆ ಬೇರೆ ಕಲಾವಿದೆ ಎಂಟ್ರಿ ನೀಡ್ತಾರ ಅಥವಾ ಸಾರಾ ಅಣ್ಣಯ್ಯ ಮತ್ತೆ ಆಗಮಿಸ್ತಾರ ಎಂಬ ಪ್ರಶ್ನೆ ಮೂಡಿದೆ.
ಏನಿದು ಹೊಸ ಟ್ವಿಸ್ಟ್?
ಅಮೃತಧಾರೆಯಲ್ಲಿ ಏನಿದು ಹೊಸ ಟ್ವಿಸ್ಟ್? ಇದು ವೀಕ್ಷಕರಿಗೆ ಸಂಕ್ರಾಂತಿ ಗಿಫ್ಟಾ? ಎಂದು ಪ್ರೊಮೋಗೆ ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ. ಪ್ರೇಕ್ಷಕರ ಕೆಲವು ಕಾಮೆಂಟ್‌ಗಳು ಈ ಮುಂದಿನಂತೆ ಇವೆ. "ಜೀವ ಎಷ್ಟು ಒಳ್ಳೆ ಕ್ಯಾರೆಕ್ಟರ್. ಈ ಧಾರಾವಾಹಿಯಲ್ಲಿ ಯಾಕೆ ಇದ್ದಕ್ಕಿದ್ದ ಹಾಗೆ ಜೀವನ ಬದಲಾಯಿಸಿದೀರ? ಜೀವನ ಕ್ಯಾರೆಕ್ಟರನ್ನು ಬದಲಾಯಿಸಿದ್ದೀರಾ> ಧಾರಾವಾಹಿ ತುಂಬಾ ಚೆನ್ನಾಗಿದೆ ಅನ್ನುವಷ್ಟರಲ್ಲಿ ಮತ್ತೇನಾದರೂ ಒಂದು ಎಡವಟ್ಟು ಮಾಡಿ ನೋಡುಗರಿಗೆ ಬೇಸರ ತರಿಸ್ತಿರಿ" "ಹಳೆ ಜೀವನನ್ನು ಹಾಕಿ, ಆತ ಚಂದ ಇದ್ದ" "ಇಷ್ಟು ದಿನ ಮನೆ ಕಟ್ಟುತ್ತಿರುವ ವಿಷಯಾನೇ ಗೊತ್ತಿರಲಿಲ್ಲ ಜೀವನು ಕಾಣಿಸ್ತಾ ಇರಲಿಲ್ಲ" "ಭೂಮಿಕಾ ಒಬ್ಬಳು ಮಾತ್ರ ತಂದೆ ತಾಯಿಗೆ ತಕ್ಕ ಮಗಳು, ಅವರ ಮಾನ ಮರ್ಯಾದೆ ಉಳಿಸುವವಳು" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
"ಇವನ್ಯಾರೋ ಜೀವಾನೆ ಇಲ್ದೆ ಇರೋನ್ನಾ ಕರ್ಕೊಂಡು ಬಂದು ಜೀವ ತುಂಬೋ ಪ್ರಯತ್ನ ಮಾಡಿದ್ದೀರಿ, ಬಟ್ ಆ ಕ್ಯಾರೆಕ್ಟರ್ ಗೆ ಸೂಟ್ ಆಗಲ್ಲ. ಅವನ ಹೆಂಡ್ತಿ ಮಹಿನು ಚೇಂಜ್ ಆಗಿದಾಳೆ ಅಂತಾ ಗೊತ್ತು ಅವಳನ್ನು ತೋರಿಸಿ" "ಇವ ಯಾವ ಜೀವ. ಇವನ್ನ ಇನ್ನು ಮುಂದೆ ವಿಲನ್ ಮಾಡತೀರಾ. ಹಳೇ ಜೀವ ಚನ್ನಾಗಿ ಇದ್ದರು.. ಮುಗಿತು ಧಾರಾವಾಹಿ ಕಥೆ" ಹೀಗೆ ಈ ಪ್ರೊಮೊಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು "ಜೀವ ಕ್ಯಾರೆಕ್ಟರ್" ಬದಲಾಯಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ವಿಭಾಗ