Amruthadhaare Serial: ವಾಪಸ್ ಹೊಡೆಯಲು ನನಗೂ ಬರುತ್ತದೆ, ಹೆತ್ತ ತಾಯಿಗೆ ಜೀವ ಅವಾಜ್; ಮಗನ ವರ್ತನೆಯಿಂದ ಕಂಗೆಟ್ಟ ಸದಾಶಿವ
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಕುಡಿದು ಜೀವನ್ ಹಾಳಾಗಿದ್ದಾನೆ. ಮಂದಾಕಿನಿ, ಸದಾಶಿವ, ಮಹಿಮಾಳನ್ನು ಕೀಳಾಗಿ ನಡೆಸಿಕೊಳ್ಳುತ್ತಾನೆ. ಮನೆಯಲ್ಲಿ ನೀವೆಲ್ಲ ಬಿಟ್ಟಿಯಾಗಿ ಬಿದ್ದಿರುವವರು ಎನ್ನುತ್ತಾನೆ. ವಾಪಸ್ ಹೊಡೆಯಲು ನನಗೂ ಬರುತ್ತದೆ ಎಂದು ತಾಯಿಗೆ ಹೇಳುತ್ತಾನೆ.

Amruthadhaare Serial: ಜೀವನ್ ಇನ್ನೂ ಮನೆಗೆ ಬಂದಿಲ್ಲ ಎಂದು ಮಂದಾಕಿನಿ ಆತಂಕದಲ್ಲಿದ್ದಾರೆ. ಸದಾಶಿವ ಕೂಡ ಚಿಂತೆಯಲ್ಲಿದ್ದಾರೆ. "ಬರ್ತಾರೆ, ಟೆನ್ಷನ್ ಮಾಡೋದು ಬೇಡ" ಎಂದು ಮಹಿಮಾ ಹೇಳುತ್ತಾಳೆ. "ನಾವು ಬೈದದ್ದು ಸರಿ ಇದೆ. ಅವನಿಗೆ ಬುದ್ಧಿ ಹೇಳೋದು ನಮ್ಮ ಕರ್ತವ್ಯ" ಎಂದು ಸದಾಶಿವ ಹೇಳುತ್ತಾನೆ. ಆಗ ಕಾಲಿಂಗ್ ಬೆಲ್ ಸದ್ದಾಗುತ್ತದೆ. ಹೊರಗಡೆ ಜೀವ ಇದ್ದಾನೆ. ಟೈಟ್ ಆಗಿದ್ದಾನೆ. ಮಹಿಮಾ ಬಾಗಿಲು ತೆರೆಯುತ್ತಾಳೆ. "ಬಾಗಿಲು ತೆಗೆದದ್ದಕ್ಕೆ ಥ್ಯಾಂಕ್ಸ್. ಇದು ನನ್ನ ಮನೆ. ಯಾವಾಗ ಬೇಕಾದ್ರೂ ಬರ್ತಿನಿ. ಯಾವಾಗ ಬೇಕಾದ್ರೂ ಹೋಗ್ತಿನಿ" ಎಂದೆಲ್ಲ ತೊದಲುತ್ತಾ ಮಾತನಾಡುತ್ತಾನೆ. "ಓಕೆ ಗುಡ್‌ನೈಟ್" ಎಂದು ಹೋಗಲು ರೆಡಿಯಾದಗ ಸದಾಶಿವ "ನಿಂತ್ಕೋ" ಎನ್ನುತ್ತಾರೆ. "ಒಂದು ಇಡೀ ದಿನ ಮನೆಯಲ್ಲಿ ಹೊರಗಡೆ ಇದ್ಯಾ? ಕುಡಿಯೋದು ಕಲಿತಿದ್ದೀ. ಈಗಲೂ ಕುಡಿದಿರುವೆ. ಯಾಕೋ ಹೀಗೆ ಹೊಟ್ಟೆ ಉರಿಸ್ತಿಯಾ?" ಎಂದು ಸದಾಶಿವ ಬೇಸರದಲ್ಲಿ ಹೇಳುತ್ತಾರೆ.
"ನನಗೆ ನೀವು ಮೇಸ್ಟ್ರು ಅಂತ ಗೊತ್ತು. ಭಾಷಣ ಮಾಡಬೇಡಿ" ಎಂದು ಜೀವ ಹೇಳುತ್ತಾನೆ. "ಜೀವಾ..." ಎಂದು ಮಂದಾಕಿನಿ ಹೇಳುತ್ತಾರೆ. "ನೀನು ಮಾತನಾಡಬೇಡ. ನಿನ್ನಲ್ಲಿ ಮಾತನಾಡಿಲ್ಲ" ಎಂದು ತಾಯಿಗೆ ಎದುರು ಮಾತನಾಡುತ್ತಾನೆ. "ನೀವೆಲ್ಲ ಫ್ಯಾಮಿಲಿ ಪಾಲಿಟಿಕ್ಸ್ ಮಾಡ್ತಾ ಇದ್ದೀರಿ" ಎಂದು ಜೀವ ಹೇಳುತ್ತಾನೆ. "ಯಾಕೋ ಇಂತಹ ಕೆಟ್ಟ ಚಟ ಕಲಿತಾ ಇದ್ಯಾ" ಎಂದು ಮಂದಾಕಿನಿ ಬೇಸರದಲ್ಲಿ ಹೇಳುತ್ತಾರೆ. ಆತ ಕುಡಿದು ಏನೇನೋ ಮಾತನಾಡುತ್ತಾನೆ. "ಕುಡಿದು ಏನು ನಾಶ ಆಗುತ್ತೋ ಗೊತ್ತಿಲ್ಲ. ಆದರೆ, ನನಗೆ ಫ್ರೀಡಂ ಇಲ್ಲ. ನನಗೆ ಕುಡಿಯುವ ಫ್ರೀಡಂ ಇಲ್ಲ. ಅದನ್ನು ಕೇಳಲು ನೀವ್ಯಾರು. ಹೂ ಆರ್ ಯು" ಎಂದೆಲ್ಲ ಹೇಳುತ್ತಾನೆ.
"ಯಾಕೋ ಹೀಗೆ ಮಾತನಾಡ್ತಾ ಇದ್ದೀಯಾ. ನಾವು ಸಾಕಿ ಬೆಳೆಸಿದ ಮಗ ತಾನೇ. ದುಡ್ಡು ಅನ್ನೋದು ಕಿಸೆಯಲ್ಲಿ ಇರಬೇಕು. ತಲೆಗೆ ಏರಿಸಬಾರದು" ಎಂದು ಸದಾಶಿವ ಹೇಳುತ್ತಾನೆ. "ನನಗೆ ಸಾವಿರ ಟೆನ್ಷನ್ ಇರುತ್ತದೆ. ಅದಕ್ಕೆ ಕುಡಿಯುತ್ತೇನೆ. ಟೆನ್ಷನ್‌ಗೆ ಅದು ಮೆಡಿಸಿನ್. ನೀವು ಮನೆಯಲ್ಲಿ ಇರ್ತೀರಾ. ನಿಮಗೆ ಟೆನ್ಷನ್ ಇರೋದಿಲ್ಲ. ನಿಮ್ಮ ಲೈಫ್ ಬೇರೆ, ನನ್ನ ಲೈಫ್ ಬೇರೆ" ಎಂದು ಜೀವ ಹೇಳುತ್ತಾನೆ. ಕೋಪಗೊಂಡ ಮಂದಾಕಿನಿ ಮಗನಿಗೆ ಹೊಡೆಯಲು ಕೈ ಎತ್ತುತ್ತಾರೆ. ಆ ಕೈಯನ್ನು ಜೀವ ತಡೆಯುತ್ತಾನೆ. "ನೀವು ಹೇಳಿದ್ದನ್ನು ಕೇಳಿಕೊಂಡು, ಹೊಡೆದಾಗ ಹೊಡೆಸಿಕೊಂಡು ಇರಲು ನಾನು ಬಿಟ್ಟಿಯಾಗಿ ಬಿದ್ದಿಲ್ಲ. ನನಗೂ ಕೈ ಇದೆ. ವಾಪಸ್ ಹೊಡೆಯಲು ನನಗೂ ಬರುತ್ತದೆ" ಎಂದು ಇವರೆಲ್ಲ ಈ ಮನೆಯಲ್ಲಿ ಬಿಟ್ಟಿಯಾಗಿ ಬಿದ್ದಿದಾರೆ ಅನ್ನುವ ರೀತಿ ಮಾತನಾಡುತ್ತಾನೆ. ಇದನ್ನು ಕೇಳಿ ಎಲ್ಲರಿಗೂ ಆಘಾತವಾಗುತ್ತದೆ.
ಸದಾಶಿವ ದುಃಖದಲ್ಲಿದ್ದಾರೆ. "ಇದ್ದರೆ ಇಂತಹ ಮಗ ಇರಬೇಕು ಎಂದು ಮೊದಲು ಅಂದುಕೊಂಡಿದ್ದೆ. ಆದರೆ, ಈಗ ಪರಿಸ್ಥಿತಿ ಏನಾಗಿದೆ. ನಮ್ಮ ಮಗನನ್ನು ಬೆಳೆಸುವಲ್ಲಿ ಏನೋ ಯಡವಟ್ಟಾಗಿದ್ದೆ. ಕ್ಷಮಿಸು ಕಂದಾ" ಎಂದು ಮಹಿಮಾಳ ಬಳಿ ಸದಾಶಿವ ಕ್ಷಮೆ ಕೇಳುತ್ತಾರೆ. "ಅವನು ಮಾಡುವ ತಪ್ಪಿಗೆ ನೀವು ಯಾಕೆ ನಿಮ್ಮನ್ನು ಬ್ಲೇಮ್ ಮಾಡಿಕೊಳ್ಳುತ್ತೀದ್ದೀರಿ. ನನ್ನ ಹಣೆಬರಹ. ಒಳ್ಳೆ ಹುಡುಗ ಅಂತ ಮದುವೆಯಾದ್ರೆ ಈಗ ನನ್ನ ಹೊಟ್ಟೆ ಉರಿಸ್ತಾನೆ. ನಾನು ಈ ಮನೆ ಸೊಸೆ ಮಾತ್ರವಲ್ಲ. ಮಗಳು. ಈ ವಿಚಾರ ಅಣ್ಣ ಅತ್ತಿಗೆಗೆ ಹೇಳೋದಿಲ್ಲ" ಎಂದು ಮಹಿಮಾ ಭರವಸೆ ನೀಡುತ್ತಾಳೆ. ಒಂದಿಷ್ಟು ಬೇಸರದ ಮಾತುಗಳನ್ನು ಸದಾಶಿವ ಆಡುತ್ತಾರೆ. ಮಗನ ವರ್ತನೆ ಅವರಿಗೆ ಸಾಕಷ್ಟು ನೋವು ತಂದಿದೆ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ಏಪ್ರಿಲ್ 09, 2025
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ