Amruthadhaare: ಸರದಲ್ಲಿ ಸಿಕ್ಕ ಮೈಕ್ ಅನ್ನು ಅತ್ತೆಗೆ ನೀಡಿದ ದಡ್ಡಿ ಭೂಮಿಕಾ; ಶಕುಂತಲಾದೇವಿ, ಲಕ್ಷ್ಮಿಕಾಂತ್‌ಗೆ ಶುರುವಾಗಿದೆ ನಡುಕ
Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾಳಿಗೆ ಸರದಲ್ಲಿ ಮೈಕ್ ದೊರಕಿದೆ. ಈ ಮೈಕ್ ಅತ್ತೆ ಇಟ್ಟಿರಬಹುದಾ ಎಂಬ ಅನುಮಾನ ಆಕೆಗೆ ಬಂದಿದೆ. ಆದರೆ, ಈ ಮೈಕ್ ಅನ್ನು ಅತ್ತೆಗೆ ನೀಡಿ ದಡ್ಡತನ ತೋರಿದ್ದಾರೆ.

Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಎಪಿಸೋಡ್‌ನ ಕಥೆ ಇಲ್ಲಿದೆ. ಭೂಮಿಕಾ ಕೊಠಡಿಯಲ್ಲಿ ಕ್ಲೀನಿಂಗ್ ಮಾಡುತ್ತಿದ್ದಾಳೆ. ಆಗ ಕೆಳಗೆ ಸರ ಇದೆ. ಸರದಿಂದ ಮೈಕ್ ಕಳಚಿ ಕೆಳಗೆ ಬಿದ್ದಿದೆ. ಇದನ್ನು ಅಚ್ಚರಿಯಿಂದ ನೋಡುತ್ತಾಳೆ. ಈ ಸರದಲ್ಲಿ ಮೈಕ್ ಹೇಗೆ ಬರಲು ಸಾಧ್ಯ. ನಮ್ಮ ಮಾತನ್ನು ಯಾರು ಕೇಳಿಸ್ಕೋತ್ತಾರೆ? ಏನು ನಡೆಯುತ್ತಿದೆ ಎಂಬ ಅಚ್ಚರಿ ಆಕೆಗೆ ಆಗಿದೆ. ಈ ಸರದಲ್ಲಿ ಮೈಕ್ ಬರಲು ಹೇಗೆ ಸಾಧ್ಯ ಎಂದು ಯೋಚಿಸುತ್ತಿರುವಾಗ ಗೌತಮ್ ಆಗಮಿಸುತ್ತಾರೆ. "ಗೌತಮ್ ಈ ಸರ ಶಕುಂತಲಾ ಅತ್ತೆ ನೀಡಿದ್ರಲ್ವ ನಿಮಗೆ" ಎಂದು ಕೇಳುತ್ತಾಳೆ. "ನನಗೆ ಹೆಂಡತಿಯಾಗಿ ಬರುವವಳಿಗೆ ನೀಡಬೇಕು ಎಂದು ಯಾವುದೋ ಕಾಲದಲ್ಲಿ ತಂದೆ ಮಾಡಿಸಿಕೊಟ್ಟಿದ್ದರಂತೆ" ಎಂದು ಗೌತಮ್ ಹೇಳುತ್ತಾರೆ.
"ಅತ್ತೆ ಈ ಸರ ನೀಡಿದ್ದಾರೆ ಅಂದ್ರೆ ಅತ್ತೆಗೂ ಈ ಮೈಕ್‌ಗೂ ಏನಾದರೂ ಸಂಬಂಧ ಇರಬಹುದು" ಎಂದು ಭೂಮಿಕಾ ಯೋಚಿಸುತ್ತಾರೆ. ನೇರ ಅತ್ತೆಯ ಕೊಠಡಿಗೆ ಹೋಗುತ್ತಾಳೆ. "ಅತ್ತೆ ಈ ಸರನ ನಿಮಗೆ ಯಾರು ಕೊಟ್ಟದ್ದು" ಎಂದು ಕೇಳುತ್ತಾಳೆ. ಸಡನ್ ಅತ್ತೆ ಬೆಚ್ಚಿಬೀಳುತ್ತಾಳೆ. ಶಕುಂತಲಾದೇವಿಗೆ ಅದರಲ್ಲಿ ಮೈಕ್ ಇರುವ ಸಂಗತಿ ನೆನಪಾಗುತ್ತದೆ. ಲಕ್ಕಿ ಲಕ್ಷ್ಮಿಕಾಂತ್ ಅದಕ್ಕೆ ಮೈಕ್ ಸಿಕ್ಕಿಸಿರುತ್ತಾನೆ. "ಯಾಕಮ್ಮ, ಇದು ಗೌತಮ್ ತಂದೆ ನೀಡಿದ್ದು. ಈಗ್ಯಾಕೆ ಕೇಳ್ತಾ ಇದ್ದಿಯಾ. ಇದರ ಬಗ್ಗೆ ನಿನಗೆ ಗೊತ್ತಿರಲಿಲ್ವ?" ಎಂದು ಶಕುಂತಲಾದೇವಿ ಕೇಳುತ್ತಾಳೆ.
"ಯಾಕೆಂದ್ರೆ ಇದರಲ್ಲಿ ಸಮಸ್ಯೆ ಇದೆ. ಯಾಕತ್ತೆ ಇಷ್ಟೊಂದು ಗಾಬರಿಯಾಗ್ತಾ ಇದ್ದೀರ?" ಎಂದು ಭೂಮಿಕಾ ಕೇಳುತ್ತಾರೆ. "ಸಮಸ್ಯೆ ಅಂದ್ಯಲ್ಲ, ಅದಕ್ಕೆ ಸ್ವಲ್ಪ ಟೆನ್ಷನ್ ಆದೆ. ಏನು ಸಮಸ್ಯೆ" ಎನ್ನುತ್ತಾರೆ ಶಕುಂತಲಾ. "ಇದು ಏನು ಅಂತ ಹೇಳಿ ಅತ್ತೆ" ಎಂದು ಕೇಳುತ್ತಾಳೆ. ನನಗೆ ಗೊತ್ತಾಗುವುದಿಲ್ಲ ಎನ್ನುತ್ತಾರೆ. "ಮುಂಚೆ ಈ ಸರದಲ್ಲಿ ಮೈಕ್ ಇರಲಿಲ್ಲ. ಈಗ ಈ ಮೈಕ್ ಇದೆ. ನನಗೆ ಇದನ್ನು ನೋಡಿ ಅಚ್ಚರಿಯಾಯಿತು. ಈ ಮೈಕ್ ಸರದಲ್ಲಿ ಹೇಗೆ ಬಂತು. ಯಾರು ಇಟ್ರು ಎಂದು ನನಗೆ ಗೊತ್ತಾಗುತ್ತಿಲ್ಲ " ಎಂದು ಭೂಮಿಕಾ ಹೇಳುತ್ತಾರೆ
ಸರದಲ್ಲಿ ಸಿಕ್ಕ ಮೈಕ್ ಅನ್ನು ಅತ್ತೆಗೆ ನೀಡಿದ ದಡ್ಡಿ ಭೂಮಿಕಾ
"ನೀನು ಹಾಕುವ ಸರದಲ್ಲಿ ಯಾರು ಇಡ್ತಾರೆ" ಎಂದು ಶಕುಂತಲಾದೇವಿ ಕೇಳುತ್ತಾರೆ. "ಯಾಕೆಂದ್ರೆ, ನಾನು ಏನು ಮಾತನಾಡ್ತಿನಿ ಎಂದು ಕೇಳಲು, ರಹಸ್ಯ ತಿಳಿಯಲು, ಈ ಮೈಕ್ ಹಾಕಿರ್ತಾರೆ" ಎಂದು ಭೂಮಿಕಾ ಹೇಳುತ್ತಾರೆ. "ಈ ಸರ ಎಲ್ಲಿ ಇಟ್ಟಿದ್ದೀರಿ ನನಗೆ ನೀಡುವ ಮೊದಲು" ಎಂದಾಗ "ಲಾಕರ್‌ನಲ್ಲಿ ಇಟ್ಟಿದ್ದೆ" ಎನ್ನುತ್ತಾರೆ. "ನೀವು ಈ ಸರ ಗೌತಮ್‌ಗೆ ನೀಡುವ ತನಕ ಈ ಸರ ಲಾಕರ್‌ನಲ್ಲಿ ಇತ್ತು. ಹಾಗಾದ್ರೆ, ಈ ಮೈಕ್ ಎಲ್ಲಿಂದ ಬಂತು?" ಎಂದು ಭೂಮಿಕಾ ಕೇಳುತ್ತಾಳೆ. "ನನಗೆ ಏನು ಗೊತ್ತಮ್ಮ. ಇದು ನಮ್ಮ ಮನೆತನದ ಹಾರ. ನಮ್ಮ ಹಿರಿಸೊಸೆಗೆ ನೀಡಬೇಕು ಎಂದು ಇಡಲಾಗಿದೆʼ ಎನ್ನುತ್ತಾರೆ. ಹೀಗಿದ್ದರೂ ಈಕೆಯ ವಿಚಾರಣೆ ಸಮಯದಲ್ಲಿ ತಡಬಡಾಯಿಸುವುದು ಮುಂದುವರೆಯುತ್ತದೆ.
ಭೂಮಿಕಾಳಿಗೆ ಏನೋ ನೆನಪಾಗುತ್ತದೆ. ಗೌತಮ್‌ನ ತಾಯಿ ಭಾಗ್ಯಮ್ಮನ ಕೊಠಡಿಗೆ ಅಂದು ಬಂದ ಮಹಿಳೆ ಇವರೇ ಎಂಬಂತೆ ಕಾಣಿಸುತ್ತದೆ. "ಈ ಮನೆಯಲ್ಲಿ ಏನೇನೋ ನಡೆದು ಹೋಗಿದೆ. ನಾನು ಅನಾವಶ್ಯಕವಾಗಿ ಅತ್ತೆ ಮೇಲೆ ಅನುಮಾನ ಪಡುತ್ತಿದ್ದೇನಾ?" ಎಂದು ಯೋಚಿಸುತ್ತಾರೆ ಭೂಮಿಕಾ. "ಭೂಮಿಕಾ ನೀನು ಒತ್ತಿಒತ್ತಿ ಕೇಳುವುದು ನೋಡಿದ್ರೆ ನೀನು ನನ್ನ ಮೇಲೆ ಅನುಮಾನ ಪಡ್ತಾ ಇದ್ದೀ ಎಂದು ಅನಿಸ್ತಾ ಇದೆ" ಎಂದು ಶಕುಂತಲಾದೇವಿ ನಾಟಕೀಯವಾಗಿ ಕೇಳುತ್ತಾರೆ. ಇದನ್ನು ಹೇಗಾದರೂ ತಿಳಿದುಕೊಳ್ಳಬೇಕು ಎಂದು ಭೂಮಿಕಾ ಹೇಳಿದಾಗ "ಇದನ್ನು ಗೌತಮ್‌ಗೆ ಹೇಳೋಣ" ಎನ್ನುತ್ತಾರೆ ಶಕುಂತಲಾದೇವಿ. "ಬೇಡ ಅವರ ತುಂಬಾ ದಿನದಿಂದ ಖುಷಿಯಲ್ಲಿದ್ದಾರೆ. ಅವರಿಗೆ ಟೆನ್ಷನ್ ನೀಡುವುದು ಬೇಡ" ಎನ್ನುತ್ತಾರೆ. "ನೀನು ನಿನ್ನ ಹೊಟ್ಟೆ ಕಡೆ ಗಮನಹರಿಸು. ಇದನ್ನು ನಾನು ನೋಡಿಕೊಳ್ಳುವೆ. ಇದನ್ನು ನಾನು ನೋಡಿಕೊಳ್ಳುವೆ" ಎನ್ನುತ್ತಾರೆ ಶಕುಂತಲಾದೇವಿ. ದಡ್ಡಿ ಭೂಮಿಕಾ ಆ ಮೈಕ್ ಅನ್ನು ಶಕುಂತಲಾದೇವಿಗೆ ನೀಡುತ್ತಾರೆ.
ಮೊದಲು ನನ್ನ ಅಣ್ಣನಿಗೆ ಬಯ್ಯಬೇಕು ಎಂದು ಶಕುಂತಲಾದೇವಿ ನೇರವಾಗಿ ಲಕ್ಕಿ ಲಕ್ಷ್ಮಿಕಾಂತ್ ಬಳಿಗೆ ಹೋಗುತ್ತಾಳೆ. "ಅಯ್ಯೋ ಸಿಸ್ಟರ್, ಏನು ಆಗಬಾರದು ಅದೇ ಆಗ್ತಾ ಇದೆ" ಎಂದು ಆತನೂ ಆತಂಕ ವ್ಯಕ್ತಪಡಿಸುತ್ತಾನೆ. ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಮಲ್ಲಿಗೆ ಸಂಬಂಧಪಟ್ಟಂತೆ ಹೊಸ ಟ್ವಿಸ್ಟ್ ನಡೆದಿದೆ. ಮಲ್ಲಿ ರಾಜೇಂದ್ರ ಭೂಪತಿ ಮಗಳು ಎಂಬ ವಿಷಯ ಗೌತಮ್‌ಗೆ ತಿಳಿಯುತ್ತದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

ವಿಭಾಗ