ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ ಕೊಠಡಿಯಲ್ಲಿ ಭೂಮಿಕಾಗೆ ಸಿಗ್ತು ನಿಗೂಢ ವಸ್ತು; ಪಂಕಜಾಳ ಐಡೆಂಟೆಟಿ ಹುಡುಕಾಟ
ಅಮೃತಧಾರೆ ಧಾರಾವಾಹಿಯ ಮೇ 12 ಸಂಚಿಕೆಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿವೆ. ಚಪ್ಪಲಿ ಹುಡುಕಲು ಭೂಮಿಕಾ, ಶಕುಂತಲಾದೇವಿ ಕೊಠಡಿಗೆ ಹೋಗುತ್ತಾಳೆ. ಅಲ್ಲಿ ಸಿಕ್ಕ ನಿಗೂಢ ವಸ್ತುವಿನ ಕುರಿತು ಆಲೋಚಿಸುತ್ತಾಳೆ. ಪಂಕಜಾ ಎಂಬ ಮಹಿಳೆಯ ಕುರಿತು ಭೂಮಿಕಾ ಯೋಚಿಸುತ್ತಾರೆ.

ಅಮೃತಧಾರೆ ಧಾರಾವಾಹಿ: ಶಕುಂತಲಾದೇವಿ ತನ್ನ ಕೊಠಡಿಗೆ ಬಾಗಿಲು ಹಾಕಿ ಹೊರಬರುತ್ತಿದ್ದಾರೆ. ದಾರಿಯಲ್ಲಿ ಸೃಜನ್ ಕುಳಿತು ಕೆಲಸ ಮಾಡುತ್ತಿದ್ದಾನೆ. ಇನ್ನೊಂದೆಡೆ ದಾರಿಯಲ್ಲಿ ಸುಧಾ ತನ್ನ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದಾಳೆ. ಶಕುಂತಲಾ ಹೋದಂತೆ ಇವರಿಬ್ಬರು ಭೂಮಿಕಾಗೆ ಅಪ್‌ಡೇಟ್ ನೀಡಿದ್ದಾರೆ. ಶಕುಂತಲಾದೇವಿಯ ಚಲನವಲನಗಳ ಮೇಲೆ ನಿಗಾ ಇಡಲು ಇವರಿಬ್ಬರು ಇದ್ದಾರೆ. ತಿಂಡಿ ತಿನ್ನಲು ಶಕುಂತಲಾ ಬಂದಾಗ ಅಲ್ಲಿ ಮಲ್ಲಿ ಇದ್ದಾಳೆ. ಕೆಲಸದವರು ಎಲ್ಲಿ ಎಂದು ಕೇಳಿದಾಗ ಅವರೆಲ್ಲ ಮಾರ್ಕೆಟ್‌ಗೆ ಹೋಗಿದ್ದಾರೆ ಎಂದು ಮಲ್ಲಿ ಹೇಳುತ್ತಾಳೆ. ಈ ಸಮಯದಲ್ಲಿ ಭೂಮಿಕಾ ಶಕುಂತಲಾದೇವಿಯ ಕೊಠಡಿ ಪ್ರವೇಶಿಸುತ್ತಾಳೆ. ಅಲ್ಲಿ ಎಲ್ಲಾ ಕಡೆ ಹುಡುಕುತ್ತಾಳೆ. ತಿಂಡಿ ತಿನ್ನಲು ಲಕ್ಕಿ ಲಕ್ಷ್ಮಿಕಾಂತ ಕೂಡ ಬರುತ್ತಾನೆ. ಈ ಸಮಯದಲ್ಲಿ ಮಲ್ಲಿ ಆಚೆ ಹೋದಾಗ ಲಕ್ಷ್ಮಿಕಾಂತ್ ಅನುಮಾನ ವ್ಯಕ್ತಪಡಿಸುತ್ತಾನೆ. "ಏನೋ ಮಿಸ್ ಹೊಡಿತಿದಿಯಲ್ವ. ದಾರಿಯಲ್ಲಿ ಸೃಜನ್ ಇದ್ದ.ಯಾವಾಗಲೂ ಮನೆಯ ಒಳಗೆ ಲಚ್ಚಿಗೆ ತಿನ್ನಿಸುತ್ತಿದ್ದ ಸುಧಾ ಇಂದು ಹೊರಗಿದ್ದಳು. ಮಲ್ಲಿ ಬಡಿಸುತ್ತಿದ್ದಾಳೆ. ಏನೋ ರಾಂಗ್ ಹೊಡಿತಿದ್ದಿಯಲ್ವ" ಎಂದು ಕೇಳುತ್ತಾನೆ. ಶಕಂತಲಾ ಮನದಲ್ಲಿ ಹಲವು ಘಟನೆಗಳು ನೆನಪಾಗುತ್ತವೆ.
ತಕ್ಷಣ ಶಕುಂತಲಾದೇವಿ ತಿಂಡಿ ಬಿಟ್ಟು ಎದ್ದು ನಿಲ್ಲುತ್ತಾಳೆ. ತನ್ನ ಕೊಠಡಿಯತ್ತ ಧಾವಿಸುತ್ತಾಳೆ. ದಾರಿಯಲ್ಲಿ ಸುಧಾ ಮತ್ತು ಸೃಜನ್ ಅಲರ್ಟ್ ಆಗಿ ಈ ವಿಷಯವನ್ನು ಭೂಮಿಕಾಗೆ ವಿಷಯ ತಿಳಿಸುತ್ತಾರೆ. ಭೂಮಿಕಾಳಿಗೆ ಅಲ್ಲಿಂದ ಎಸ್ಕೇಪ್ ಆಗಲು ಸಮಯ ಸಾಕಾಗುವುದಿಲ್ಲ. ಕೋಣೆಗೆ ಬಂದ ಶಕುಂತಲಾದೇವಿ ತನ್ನ ಬೀರುವಿನ ಕೀ ತೆಗೆದುಕೊಂಡು ವಾಪಸ್ ಹೋಗುತ್ತಾಳೆ. ಕೋಣೆಗೆ ಬೀಗ ಹಾಕಿ ಶಕುಂತಲಾದೇವಿ ಹೋಗುತ್ತಾರೆ. ಭೂಮಿಕಾ ಕೊಠಡಿಯಲ್ಲಿ ಬಂಧಿಯಾಗಿದ್ದಾಳೆ.
ಹೊರಗೆ ಬಂದ ಶಕುಂತಲಾದೇವಿ ಚಪ್ಪಲಿಗೆ ಬೆಂಕಿ ಹಚ್ಚುತ್ತಾಳೆ. ಈ ಮೂಲಕ ತನ್ನ ಸದ್ಯದ ಪ್ರಾಬ್ಲಂಗೆ ಬೆಂಕಿ ಹಚ್ಚುತ್ತಾಳೆ. ಇದನ್ನು ಕಿಟಕಿಯಿಂದ ಭೂಮಿಕ ನೋಡುತ್ತಾಳೆ. "ಥ್ಯಾಂಕ್ಸ್ ಅಣ್ಣಾ, ನೀನು ಸರಿಯಾದ ಸಮಯಕ್ಕೆ ಎಚ್ಚರಿಸಿದ್ದೀ" ಎಂದು ಲಕ್ಷ್ಮಿಕಾಂತ್‌ನನ್ನು ಹೊಗಳುತ್ತಾಳೆ. ಹೀಗೆ ಇವರಿಬ್ಬರು ಈ ವಿಷಯದ ಕುರಿತು ಖುಷಿಯಿಂದ ಮಾತನಾಡುತ್ತಾರೆ.
ಹೊರಗೆ ಶಕುಂತಲಾದೇವಿಯ ಕೋಣೆಯ ಬಾಗಿಲು ತೆರೆಯಲು ಎಲ್ಲರೂ ಯತ್ನಿಸುತ್ತಿದ್ದಾರೆ. ಆದರೆ, ಯಶಸ್ವಿಯಾಗುವುದಿಲ್ಲ. ಇದೇ ಸಮಯದಲ್ಲಿ ಭೂಮಿಕಾಗೆ ಪಂಕಜ ಎಂಬ ಮಹಿಳೆಯ ಬರ್ತ್‌ಡೇ ಸರ್ಟಿಫಿಕೇಟ್ ದೊರಕುತ್ತದೆ. ಶಕುಂತಲಾದೇವಿಯ ಹುಟ್ಟಿದ ದಿನವೂ ಪಂಕಜನ ಹುಟ್ಟಿದ ದಿನವೂ ಒಂದೇ ರೀತಿ ಇದೆಯಲ್ವ ಎಂದು ಯೋಚಿಸುತ್ತಾಳೆ. ಇದೇ ಸಮಯದಲ್ಲಿ ಹೇಗೋ ಬಾಗಿಲು ತೆರೆಯುತ್ತಾರೆ. ಭೂಮಿಕಾ ಹೊರಗೆ ಬರುತ್ತಾರೆ. "ಚಪ್ಪಲಿ ಸಿಕ್ಕಿಲ್ಲ" ಎಂದು ಭೂಮಿಕಾ ಹೇಳುತ್ತಾಳೆ. "ಪ್ರಯತ್ನ ಮಾಡುವುದಷ್ಟೇ ನಮ್ಮ ಕೈಯಲ್ಲಿದೆ. ಸಿಕ್ಕಿಬಿದ್ದಿದ್ದರೆ ನಾವು ಅಪರಾಧಿಗಳಾಗ್ತಿದ್ವಿ" ಎಂದು ಹೇಳುತ್ತಾಳೆ.
"ಅತ್ತೆ ಬಳಸುವ ಚಪ್ಪಲಿಯಲ್ಲಿ ಅಂತಹ ಚಪ್ಪಲಿ ಇಲ್ಲ. ನಾವು ಸುಮ್ಮನೆ ಅಂದಾಜಿಸಿದ್ದು ತಪ್ಪಾಗಿರಬಹುದು" ಎಂದು ಭೂಮಿಕಾ ಹೇಳುತ್ತಾಳೆ. "ಈ ವಿಷಯ ಇಲ್ಲೇ ಬಿಟ್ಟುಬಿಡೋಣ. ನಮ್ಮ ಹತ್ತಿರ ಸಾಕ್ಷಿ ಇಲ್ಲ. ಸಾಕ್ಷಿ ಇಲ್ಲದೆ ಏನೂ ಮಾತನಾಡುವ ಹಾಗೇ ಇಲ್ಲ" ಎಂದು ಭೂಮಿಕಾ ಹೇಳುತ್ತಾಳೆ. ಸೃಜನ್ ಮತ್ತು ಸುಧಾ ಹೋದ ಬಳಿಕ ತನ್ನ ಕೈಯಲ್ಲಿರುವ ಪಂಕಜಳ ಬರ್ತ್ ಸರ್ಟಿಫಿಕೇಟ್‌ನ ಕುರಿತು ಯೋಚಿಸುತ್ತಾಳೆ. ಈ ಪಂಕಜ ಯಾರು ಎಂದು ಹುಡುಕಬೇಕು ಎಂದುಕೊಳ್ಳುತ್ತಾಳೆ.
ಧಾರಾವಾಹಿ ಹೆಸರು: ಅಮೃತಧಾರೆ.
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ವರ್ಷ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).
ವಿಭಾಗ