Amruthadhaare: ರಹಸ್ಯ ಮದುವೆಗೆ ಹಠಹಿಡಿದ ದಿಯಾ, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಸ್ಥಾನ ತುಂಬ್ತಾಳ ಚಮಕ್‌ಚಲ್ಲೋ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ರಹಸ್ಯ ಮದುವೆಗೆ ಹಠಹಿಡಿದ ದಿಯಾ, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಸ್ಥಾನ ತುಂಬ್ತಾಳ ಚಮಕ್‌ಚಲ್ಲೋ

Amruthadhaare: ರಹಸ್ಯ ಮದುವೆಗೆ ಹಠಹಿಡಿದ ದಿಯಾ, ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಸ್ಥಾನ ತುಂಬ್ತಾಳ ಚಮಕ್‌ಚಲ್ಲೋ

Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಅಜ್ಜನ ಮನೆಗೆ ಹೋಗಿದ್ದಾಳೆ. ರಾಧಾ ಭಗವತಿ ಸೀರಿಯಲ್‌ ಬಿಟ್ಟಿರುವ ಕಾರಣ ಮಲ್ಲಿ ಸ್ಥಾನಕ್ಕೆ ದಿಯಾಳನ್ನು ಮನೆತುಂಬಿಸುವ ಯೋಜನೆ ಇರುವುದೇ? ನಿನ್ನೆಯ ಎಪಿಸೋಡ್‌ ಇಂತಹ ಸಂದೇಹಕ್ಕೆ ಕಾರಣವಾಗಿದೆ.

Amruthadhaare: ರಹಸ್ಯ ಮದುವೆಗೆ ಹಠಹಿಡಿದ ದಿಯಾ, ಒಪ್ಪಿದ ಜೈದೇವ್‌; ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಸ್ಥಾನ ತುಂಬ್ತಾಳ ಚಮಕ್‌ಚಲ್ಲೋ
Amruthadhaare: ರಹಸ್ಯ ಮದುವೆಗೆ ಹಠಹಿಡಿದ ದಿಯಾ, ಒಪ್ಪಿದ ಜೈದೇವ್‌; ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಸ್ಥಾನ ತುಂಬ್ತಾಳ ಚಮಕ್‌ಚಲ್ಲೋ

ಅಮೃತಧಾರೆ ಧಾರಾವಾಹಿಯಲ್ಲಿ ಭೂಪತಿಯು ಗೌತಮ್‌ಗೆ ಕರೆ ಮಾಡಿ ಭಯಪಡಿಸಲು ಪ್ರಯತ್ನಿಸುತ್ತಾನೆ. ಭೂಮಿಕಾ ಹೊಟ್ಟೆಯಲ್ಲಿರುವ ಮಗುವಿನ ಕುರಿತು ಭಯಪಡಿಸುವಂತೆ ಈತನ ಎಚ್ಚರಿಕೆ ಇರುತ್ತದೆ. "ನೋಡಿ ನಿಮ್ಮ ಬದುಕಿನಲ್ಲಿ ಆದ ದುಸ್ಥಿತಿಗೆ ನಾನು ಕಾರಣನಲ್ಲ. ಬೆಂಕಿ ಮೊದಲು ನಮ್ಮನ್ನೇ ಸುಡುತ್ತದೆ. ಇದು ಯಾರಿಗೂ ಒಳ್ಳೆಯದು ಮಾಡೋಲ್ಲ. ಇದು ನೀವೇ ಮಾಡಿಕೊಂಡ ತೊಂದರೆ, ದಯವಿಟ್ಟು ಮತ್ತೆ ಕಾಲ್‌ ಮಾಡುತ್ತಾರೆ" ಎಂದು ಗೌತಮ್‌ ಹೇಳುತ್ತಾರೆ. ಇದಾದ ಬಳಿಕ ಆನಂದ್‌ ಜತೆ ಮಾತನಾಡುತ್ತಾರೆ. "ಮನುಷ್ಯನಿಗೆ ಬುದ್ದಿ ಕೊಟ್ಟಿರೋದು ಇನ್ನೊಬ್ಬರಿಗೆ ಕೆಟ್ಟದು ಮಾಡೋಕ್ಕೆ ಅಲ್ಲ. ಆದರೆ, ಈ ಭೂಪತಿ ಈ ರೀತಿ ಬುದ್ದಿಯನ್ನು ಬಳಸ್ತಾನೆ" ಎನ್ನುತ್ತಾರೆ.

ಗುಂಡು ರೀತಿ ಇರುವ ಗಂಡು ಮಗುವೇ ಆಗಲಿ

ಅಜ್ಜಿ ಭೂಮಿಕಾಳ ಬಳಿ ಮಾತನಾಡುತ್ತಾರೆ. "ನಿನಗೆ ಒಂದು ಕಿವಿಮಾತು ಹೇಳಬೇಕು. ನೀನು ಎಚ್ಚರಿಕೆಯಿಂದ ಇರಬೇಕು. ನಿನಗೆ ಏನಾದರೂ ಹೆಚ್ಚುಕಮ್ಮಿಯಾದರೆ ಗುಂಡು ಆಕಾಶಭೂಮಿ ಒಂದು ಮಾಡ್ತಾನೆ. ನಿನ್ನ ಹೊಟ್ಟೆಯಲ್ಲಿ ಪುಟ್ಟ ಜೀವ ಬೆಳೆಯುತ್ತಿದೆ. ಗರ್ಭ ಗಟ್ಟಿಯಾಗುವವರೆಗೆ ಎಚ್ಚರಿಕೆಯಿಂದ ಇರಬೇಕು. ಹುಷಾರಾಗಿರಬೇಕು. ಶುರುವಿನಲ್ಲಿ ಕೆಲವು ತಿಂಗಳು ಎಚ್ಚರಿಕೆಯಿಂದ ಇದ್ದರೆ ಸಾಕು. ಮತ್ತೆ ತೊಂದರೆ ಇಲ್ಲ. ಆಮೇಲೆ ಹೊಟ್ಟೆ ಸ್ವಲ್ಪ ಭಾರ ಇರುತ್ತದೆ ಅಷ್ಟೇ" ಎಂದು ಅಜ್ಜಿ ಟಿಪ್ಸ್‌ ನೀಡಿದ್ದಾರೆ. "ಅಂದಹಾಗೆ ನಿನಗೆ ಯಾವ ಮಗು ಬೇಕು, ಎಂತಹ ಮಗು ಬೇಕು" ಎಂದು ಅಜ್ಜಿ ಕೇಳುತ್ತಾರೆ. "ನನಗೆ ಗೌತಮ್‌ ತರಹ ಗುಂಡುಗುಂಡಗೆ ಇರುವ ಮಗು ಬೇಕು. ಗೌತಮ್‌ಗೆ ಅವರ ಅಪ್ಪನೇ ಹುಟ್ಟಿಬರುತ್ತಾರೆ" ಎಂದು ಭೂಮಿಕಾ ಹೇಳುತ್ತಾಳೆ. "ನಾನು ಬದುಕಿರುವಾಗಲೇ ನನ್ನ ನಾಲ್ಕನೇ ತಲೆಮಾರನ್ನು ನೋಡಬೇಕು" ಎಂದು ಅಜ್ಜಿ ಖುಷಿ ವ್ಯಕ್ತಪಡಿಸುತ್ತಾರೆ. "ಗುಂಡು ರೀತಿ ಇರುವ ಗಂಡು ಮಗುವೇ ಆಗಲಿ" ಎಂದು ಅಜ್ಜಿ ಹಾರೈಸುತ್ತಾರೆ.

ರಹಸ್ಯ ಮದುವೆಗೆ ಹಠಹಿಡಿದ ದಿಯಾ

ಚಮಕ್‌ಚಲ್ಲೋ ಮನೆಯಲ್ಲಿ ಜೈದೇವ್‌ ಇದ್ದಾನೆ. "ಈಗಲೂ ನೀವು ಮನೆಯಲ್ಲಿ ಇದ್ದರೂ ನನಗೆ ನೀವು ಸಮಯ ನೀಡುವುದಿಲ್ಲ. ಮನೆ, ಅಧಿಕಾರ ಎಂದೆಲ್ಲ ಹೇಳ್ತಾ ಇರ್ತಿರಿ. ಇದು ಒಂದು ಕೋಟಿ, ಎರಡು ಕೋಟಿ ವ್ಯವಹಾರ ಅಲ್ಲ. ಸಾವಿರಾರು ಕೋಟಿಯ ಸಾಮ್ರಾಜ್ಯ ಅದು. ಹಾಗಿದ್ಮೆಲೆ ಟೆನ್ಷನ್‌ ಯಾವ ಮಟ್ಟಕ್ಕೆ ಇರುತ್ತದೆ ಎಂದು ನೀನೇ ಯೋಚನೆ ಮಾಡು" ಎಂದು ಜೈದೇವ್‌ ವಿವರಿಸುತ್ತಾನೆ. "ನನಗೆ ಅರ್ಥ ಆಗುತ್ತದೆ ಜೈ. ಆದರೆ, ಇದಕ್ಕೆಲ್ಲ ಎಂಡ್‌ ಇಲ್ವ. ಇನ್ನೆಷ್ಟು ದಿನ" ಎನ್ನುತ್ತಾಳೆ. "ಈಗ ನಾನು ಏನು ಮಾಡಲಿ ಬೇಬಿ" ಜೈದೇವ್‌ ಪ್ರಶ್ನಿಸುತ್ತಾನೆ. "ಜೈದೇವ್‌ ನಮಗೆ ಇನ್ನೊಂದು ದಾರಿಯಿದೆ. ಹೇಗಿದ್ರು ಆ ಮಲ್ಲಿ ಇನ್ನೂ ಬಂದಿಲ್ಲ ಅಲ್ವಾ. ಇದೇ ಗ್ಯಾಪ್‌ನಲ್ಲಿ ನಾವು ಮದುವೆ ಆಗಿ ಬಿಡೋಣ. ಆಮೇಲೆ ಏನು ಆಗುತ್ತೋ ನೋಡಿಕೊಳ್ಳೋಣ" ಎನ್ನುತ್ತಾಳೆ ದಿಯಾ.

"ಆಗುವ ಮಾತಾ ಇದು ದಿಯಾ? ದೊಡ್ಡ ಗಲಾಟೆ ಆಗುತ್ತದೆ ಮನೆಯಲ್ಲಿ" ಎನ್ನುತ್ತಾನೆ. "ಜಗಳ ಆಗಲಿ. ನಿಮ್ಮ ಜತೆ ನಾನು ಇರ್ತಿನಿ. ಫೈಟ್‌ ಮಾಡೋಣ" ಎನ್ನುತ್ತಾಳೆ ದಿಯಾ.. "ಆ ಮಲ್ಲಿ ಜತೆ ನನಗೆ ಬದುಕಲು ಇಷ್ಟವಿಲ್ಲ. ಆಕೆ ಬೇಡ ಎಂದು ನೀವು ಸ್ಟ್ರಾಂಗ್‌ ಆಗಿ ಹೇಳಿ. ಅದೇ ಕಾರಣ ಹೇಳಿ ಡಿವೋರ್ಸ್‌ ಪಡೆಯಿರಿ. ಆಮೇಲೆ ನಾವು ಫಾರ್ಮಲ್‌ ಆಗಿ ಮದುವೆಯಾಗೋಣ" ಎನ್ನುತ್ತಾಳೆ. "ನಮಗೆ ಫ್ರೀಡಮ್‌ ಬೇಕಿದ್ರೆ ನಾವು ಫೈಟ್‌ ಮಾಡಲೇಬೇಕು ಜೈ. ಇಲ್ಲಾಂದ್ರೆ ಇವಾಗ ಹೇಗೆ ಇದ್ದೇವೋ ಹಾಗೆ ಇರಬೇಕು" ಎನ್ನುತ್ತಾಳೆ. ಯಾಕೋ ಜೈದೇವ್‌ಗೆ ಕಿರಿಕಿರಿಯಾಗುತ್ತದೆ.

"ನಾನು ಇಷ್ಟು ಹೇಳ್ತಾ ಇದ್ದೀನಿ. ಆದರೂ ನಿಮಗೆ ಅರ್ಥ ಆಗುತ್ತಿಲ್ಲ. ನಿಮಗೆ ನಾನು ಹೆಂಡತಿಯಾಗುವುದು ಇಷ್ಟವಿಲ್ಲ. ಯಾಕೆಂದ್ರೆ ನಾನು ಟೈಂಪಾಸ್‌ಗೆ ತಾನೇ ಇರೋದು. ನನ್ನನ್ನು ಯಾಕೆ ಮದುವೆಯಾಗ್ತೀರ?" ಎಂದು ದಿಯಾ ರೋಷದಿಂದ ಹೇಳುತ್ತಾಳೆ. "ಥೋ ಏನು ಮಾತನಾಡ್ತಾ ಇದ್ದೀಯ. ನಾನು ಆಲ್‌ರೆಡಿ ಅಪ್‌ಸೆಟ್‌ ಆಗಿದ್ದೇನೆ. ಇನ್ನಷ್ಟು ಟೆನ್ಷನ್‌ ಕೊಡ್ತಿ" ಎನ್ನುತ್ತಾನೆ. "ಮತ್ತೆ ಮದುವೆಯಾಗಲು ಯಾಕೆ ರೆಡಿ ಇಲ್ಲ. ನನಗ ಹರ್ಟ್‌ ಆಗ್ತಾ ಇದೆ. ಅದು ನಿಮಗೆ ಕಾಣಿಸ್ತಾ ಇಲ್ಲ" ಎಂದೆಲ್ಲ ಕೋಪದಿಂದ ಹೇಳುತ್ತಾಳೆ ದಿಯಾ. ಆಕೆಯನ್ನು ಸಮಧಾನ ಪಡಿಸಲು ಯತ್ನಿಸುತ್ತಾನೆ. "ಲಾಸ್ಟ್‌ ಟೈಮ್‌ ಕೇಳ್ತಾ ಇದ್ದೀನಿ. ನನ್ನನ್ನು ಮದುವೆಯಾಗಲ ರೆಡಿ ಇದ್ದೀರಾ ಇಲ್ವಾ?. ನೀವು ರೆಡಿ ಇಲ್ಲಾಂದ್ರೆ ನಾನೇ ಇರೋಲ್ಲ ನೆನಪಿರಲಿ" ಎಂದು ಕೇಳುತ್ತಾಳೆ. ಬೇರೆ ಮಾತನಾಡಲು ಆಕೆ ರೆಡಿ ಇಲ್ಲ. ಓಕೆ ಬೇಬಿ ನಾನು ರೆಡಿ ಇದ್ದೀನಿ ಎನ್ನುತ್ತಾನೆ. ಖುಷಿಯಾಗುತ್ತಾಳೆ ದಿಯಾ. "ಓಕೆ ಎಂದು ಹೇಳಿಬಿಟ್ಟೆ. ಮುಂದಕ್ಕೆ ಹೇಗೆ ಮ್ಯಾನೇಜ್‌ ಮಾಡಲಿ" ಎಂದು ಯೋಚಿಸುತ್ತಾನೆ. ಮಲ್ಲಿ ಪಾತ್ರಧಾರಿ ಅಜ್ಜನ ಮನೆಗೆ ಹೋಗುವ ನೆಪದಲ್ಲಿ ಸೀರಿಯಲ್‌ ಬಿಟ್ಟಿದ್ದಾರೆ. ರಾಧಾ ಭಗವತಿ ಸೀರಿಯಲ್‌ ಬಿಟ್ಟಿರುವ ಕಾರಣ ಮಲ್ಲಿ ಸ್ಥಾನಕ್ಕೆ ದಿಯಾಳನ್ನು (ಶ್ವೇತಾ ಗೌಡ) ಮನೆತುಂಬಿಸುವ ಯೋಜನೆ ಇರುವುದೇ? ಅಮೃತಧಾರೆಯ ಮುಂದಿನ ಸಂಚಿಕೆಗಳಲ್ಲಿ ಇದಕ್ಕೆ ಉತ್ತರ ದೊರಕಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner