ಅಮೃತಧಾರೆಯಲ್ಲಿ ಉಪಕಥೆಗಳ ಮುಸಲಧಾರೆ: ಸುಧಾ, ಗೌತಮ್‌ ದಿವಾನ್‌ ಸಹೋದರಿಯೇ? ಡುಮ್ಮಸರ್‌ ಮನಸ್ಸು ಕೆಡಿಸಿದೆ ಮಾನ್ಯ ಸಾವಿನ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅಮೃತಧಾರೆಯಲ್ಲಿ ಉಪಕಥೆಗಳ ಮುಸಲಧಾರೆ: ಸುಧಾ, ಗೌತಮ್‌ ದಿವಾನ್‌ ಸಹೋದರಿಯೇ? ಡುಮ್ಮಸರ್‌ ಮನಸ್ಸು ಕೆಡಿಸಿದೆ ಮಾನ್ಯ ಸಾವಿನ ಸುದ್ದಿ

ಅಮೃತಧಾರೆಯಲ್ಲಿ ಉಪಕಥೆಗಳ ಮುಸಲಧಾರೆ: ಸುಧಾ, ಗೌತಮ್‌ ದಿವಾನ್‌ ಸಹೋದರಿಯೇ? ಡುಮ್ಮಸರ್‌ ಮನಸ್ಸು ಕೆಡಿಸಿದೆ ಮಾನ್ಯ ಸಾವಿನ ಸುದ್ದಿ

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಉಪಕಥೆಗಳತ್ತ ಹೊರಳಿಕೊಂಡಿದೆ. ಗೌತಮ್‌ ಹಳೆ ಗೆಳತಿ ಮಾನ್ಯಳ ಸಾವಿನ ಸುದ್ದಿಯನ್ನು ಧನ್ಯ ತಿಳಿಸಿದ್ದಾಳೆ. ಆನಂದ್‌ ಮನೆಗೆ ಬಂದಿರುವ ಸುಧಾಳ ಗುಣಗಳು ಗೌತಮ್‌ ಗುಣಗಳನ್ನೂ ಹೋಲುತ್ತವೆ.

ಅಮೃತಧಾರೆ ಧಾರಾವಾಹಿಯಲ್ಲಿ ಉಪಕಥೆಗಳು ಆರಂಭ
ಅಮೃತಧಾರೆ ಧಾರಾವಾಹಿಯಲ್ಲಿ ಉಪಕಥೆಗಳು ಆರಂಭ

ಅಮೃತಧಾರೆಯಲ್ಲಿ ಕಥೆಗಳು ಬದಲಾಗಿವೆ. ಉಪಕಥೆಗಳು ಸೇರುತ್ತಿವೆ. ಗೌತಮ್‌ ಮತ್ತು ಭೂಮಿಕಾರ ಪ್ರೇಮ ಕಥೆಯು ಈಗ ಗೌತಮ್‌ ಅವರ ಹಳೆಯ ಲವ್‌ ಸ್ಟೋರಿಯತ್ತ ತಿರುಗಿದೆ. ಅಪರ್ಣಾ ಮನೆಗೆ ಕರೆದುಕೊಂಡು ಬಂದ ಮಹಿಳೆ ಮಾಡಿಕೊಟ್ಟ ಕಾಫಿ ಆನಂದ್‌ ಮತ್ತು ಅಪರ್ಣಾಗೆ ಇಷ್ಟವಾಗಿದೆ. ಇದನ್ನು ಅಮ್ಮ ಹೇಳಿಕೊಟ್ರು ಎಂದು ಆಕೆ ಹೇಳುತ್ತಾಳೆ. ಗಂಡ ಏನು ಮಾಡುತ್ತಿದ್ದಾರೆ ಎಂದು ಕೇಳಿದಾಗ ಅವರು ಇಲ್ಲ ಎನ್ನುತ್ತಾಳೆ. ಅಮ್ಮನ ಆರೋಗ್ಯ ಸರಿ ಇಲ್ಲ, ಮನೆ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾಳೆ. "ನಾಲ್ಕು ಮನೆಯಲ್ಲಿ ಕೆಲಸ ಮಾಡಿ ಅಷ್ಟೋ ಇಷ್ಟೋ ದುಡಿಯುವೆ" ಎನ್ನುತ್ತಾಳೆ. ಹೋಗುವಾಗ ಆನಂದ್‌ ದುಡ್ಡು ಕೊಡುತ್ತಾನೆ. ಬೇಡ ಎಂದರೂ ಒತ್ತಾಯ ಮಾಡುತ್ತಾರೆ. "ನಾನು ಬಡವಳೇ ಆಗಿರಬಹುದು, ಕೈಚಾಚುವಷ್ಟು ಬಡತನ ಇಲ್ಲ" ಎನ್ನುತ್ತಾಳೆ. "ಸುಧಾ ನಿನ್ನ ನಂಬರ್‌ ಕೊಡ್ತಿಯಾ" ಎಂದು ಕೇಳಿದಾಗ ಕೊಡುತ್ತಾಳೆ. ಈ ಮೂಲಕ ಮುಂದಿನ ದಿನಗಳಲ್ಲಿ ಈ ಸೀರಿಯಲ್‌ನಲ್ಲಿ ಸುಧಾಳ ಪಾತ್ರ ಇರೋದು ಪಕ್ಕಾ ಆಗಿದೆ. "ಇವಳನ್ನು ನೋಡಿದರೆ ಗೆಳೆಯನ ನೋಡಿದಂತೆ ಆಗುತ್ತದೆ. ಸ್ವಲ್ಪನೂ ಫೇಕ್‌ ಇಲ್ಲ, ಎಷ್ಟು ಸಹಜವಾಗಿದ್ದಾಳೆ" ಎಂದು ಇಬ್ಬರೂ ಮಾತನಾಡುತ್ತಾರೆ. ಹಾಗಾದರೆ, ಇವಳು ಗೌತಮ್‌ ದಿವಾನ್‌ನ ತಂಗಿಯಾ? ನಿರ್ದೇಶಕರೇ ಹೇಳಬೇಕು.

ಮಲ್ಲಿ ಗುಡ್‌ನ್ಯೂಸ್‌ ಕೇಳುತ್ತಾಳೆ. "ಸಿಎಫ್‌ಒ ಪೋಸ್ಟ್‌ ಖಾಲಿ ಇತ್ತು. ಆದರೆ, ನನ್ನ ಬ್ಯಾಡ್‌ಲಕ್‌ ಅನ್ಸುತೆ. ಬಿಗ್‌ಬ್ರದರ್‌ ನನ್ನ ಬದಲು ಪಾರ್ಥನ ಸೆಲೆಕ್ಟ್‌ ಮಾಡಿದ್ದಾನೆ" ಎಂದು ಹೇಳುತ್ತಾನೆ. "ನಿಮಗೆ ಮುಂದೆ ಒಳ್ಳೆಯ ಪೋಸ್ಟ್‌ ಸಿಗುತ್ತದೆ" ಎನ್ನುತ್ತಾಳೆ. "ಡ್ಯಾಮೇಜ್‌ ಆಗಿರೋ ನನ್ನ ಇಮೇಜ್‌ ಬದಲಾಯಿಸಿಕೊಳ್ಳಬೇಕು" ಎನ್ನುತ್ತಾನೆ. ಈ ಮೂಲಕ ಹೆಂಡತಿಯ ಮುಂದೆ ಒಳ್ಳೆಯತನದ ನಾಟಕ ಮುಂದುವರೆಸುತ್ತಾನೆ ಜೈದೇವ್‌. ಈ ಸಮಯದಲ್ಲಿ ಮಲ್ಲಿ ಕಾಲು ಒತ್ತುತ್ತಾನೆ. "ಮುಂದೊಂದು ದಿನ ಯಾರ್ಯಾರನ್ನು ನನ್ನ ಕಾಲಬುಡಕ್ಕೆ ತರ್ತಿನಿ" ಎಂದು ಮನಸ್ಸಲ್ಲಿ ದ್ವೇಷದ ಯೋಚನೆ ಮಾಡುತ್ತಾನೆ.

ಅಮೃತಧಾರೆ ಧಾರಾವಾಹಿಯಲ್ಲಿ ಧನ್ಯ ಎಂಬವಳ ಎಂಟ್ರಿಯೂ ಆಗಿದೆ. ಅಕ್ಕನ ಭಾವಚಿತ್ರದ ಮುಂದೆ ಅಳುತ್ತಾಳೆ. "ಅಕ್ಕಾ ನನಗೆ ಯಾರೂ ಇಲ್ಲ. ನಾನು ಯಾಕೆ ಬದುಕಿದ್ದೇನೆ" ಎಂದೆಲ್ಲ ಅಳುತ್ತಾಳೆ. "ಆದರೆ, ನೀನು ಅರ್ಧಕ್ಕೆ ಬಿಟ್ಟು ಹೋದ ಕೆಲಸ ಇದೆಯಲ್ವ ಅಕ್ಕಾ, ಅದನ್ನು ಬಿಟ್ಟು ನಾನು ಹೇಗೆ ಬರಲಿ, ಎಷ್ಟೇ ಕಷ್ಟ ಆದರೂ ಆ ಕೆಲಸವನ್ನೂ ಪೂರ್ತಿ ಮಾಡ್ತಿನಿ" ಎನ್ನುತ್ತಾಳೆ. ಅಂದಹಾಗೆ, ಈಕೆ ಗೌತಮ್‌ ದಿವಾನ್‌ನ ಮಾಜಿ ಪ್ರೇಯಸಿಯ ಸಹೋದರಿ. ಇದಾದ ಬಳಿಕ ಗೌತಮ್‌ಗೆ ಕಾಲ್‌ ಮಾಡುತ್ತಾಳೆ. "ನಾನು ಮಾನ್ಯ ತಂಗಿ ಧನ್ಯ ಮಾತನಾಡುತ್ತ ಇದ್ದೀನಿ" ಎಂದಾಗ ಗೌತಮ್‌ಗೆ ಅಚ್ಚರಿ. ಯಾಕೆ ಏನು ಮಾತನಾಡುತ್ತಿಲ್ಲ ಎಂದು ಅವಳು ಕೇಳಿದಾಗ "ಮಾತನಾಡುವುದಕ್ಕೆ ಏನೂ ಇಲ್ಲ, ಅದಕ್ಕೆ ಮಾತನಾಡುತ್ತಿಲ್ಲ" ಎನ್ನುತ್ತಾರೆ ಗೌತಮ್‌.

"ನೋಡಿ, ನಿಮ್ಮ ಅಕ್ಕನಿಗೆ ನನ್ನ ತಂಟೆಗೆ ಬರಬೇಡಿ ಎಂದು ಎಷ್ಟೋ ಸಲ ಹೇಳಿದ್ದೀನಿ, ಈಗ ನೋಡಿದ್ರೆ ನಿನ್ನ ಮೂಲಕ ಕಾಲ್‌ ಮಾಡಿಸಿದ್ದಾಳೆ" ಎಂದು ಗೌತಮ್‌ ಕೋಪದಿಂದ ಹೇಳುತ್ತಾರೆ. "ಗೌತಮ್‌ ಅವರೇ ನಾನು ಹೇಳೋದನ್ನ ಒಮ್ಮೆ ಕೇಳಿ, ಈಗ ಅಕ್ಕ ಬದುಕಿಲ್ಲ" ಎಂಬ ಸತ್ಯ ಹೇಳುತ್ತಾಳೆ ಧನ್ಯ. ಗೌತಮ್‌ಗೆ ಆಘಾತ ಆಗುತ್ತದೆ. "ಅವಳು ನಮ್ಮನ್ನೆಲ್ಲ ಬಿಟ್ಟು ಹೋಗಿ ತುಂಬಾ ದಿನ ಆಯ್ತು. ರೋಡ್‌ ಆಕ್ಸಿಡೆಂಟ್‌ನಲ್ಲಿ ಬಿಟ್ಟು ಹೋದ್ಲು. ಆದರೆ, ಅದು ಆಕ್ಸಿಡೆಂಟ್‌ ಅಲ್ಲ, ಯಾರೋ ಪ್ಲ್ಯಾನ್‌ ಮಾಡಿದ್ದು. ನಾನು ಈ ಕುರಿತು ನಿಮ್ಮಲ್ಲಿ ಮಾತನಾಡಬೇಕು" ಎಂದು ಹೇಳುತ್ತಾಳೆ.

"ಅಕ್ಕನಿಗೆ ಹೀಗೆ ಆಗಿರೋದಕ್ಕೆ ನನಗೆ ಬೇಸರವಿದೆ. ಆದರೆ, ಅದನ್ನು ಮಾತನಾಡಲು ನನಗೆ ಮನಸ್ಸಿಲ್ಲ. ನಾನು ನೆಮ್ಮದಿಯಾಗಿದ್ದೇನೆ. ನೆಮ್ಮದಿಯಾಗಿರಲು ಬಿಟ್ಟುಬಿಡಿ" ಎಂದು ಗೌತಮ್‌ ಕಾಲ್‌ ಕಟ್‌ ಮಾಡುತ್ತಾನೆ. ಗೌತಮ್‌ಗೆ ಮಾನ್ಯಳ ನೆನಪಾಗುತ್ತದೆ. "ನಾನು ನಿಮಗೆ ತೊಂದರೆ ನೀಡಲು ಬಂದಿಲ್ಲ ಗೌತಮ್‌, ಎಲ್ಲಾ ಹೇಳಲು ಬಂದಿದ್ದೇನೆ" ಎಂದು ಆಕೆ ಹೇಳಿದ್ದು ನನೆಪಾಗುತ್ತದೆ.

ಭೂಮಿಕಾ ಕಾಫಿ ತರುತ್ತಾಳೆ. "ನಿನ್ನೆಯದರ ಕುರಿತು ಇನ್ನೂ ಚಿಂತಿಸುತ್ತಿದ್ದೀರ" ಎಂದು ಹೇಳುತ್ತಾಳೆ. "ಗೌತಮ್‌ ಅವರು ತನ್ನ ತಪ್ಪು ತಿದ್ದಿಕೊಂಡರೆ, ಅವರಿಗೆ ಸಿಗೋದೆಲ್ಲ ಸಿಗುತ್ತದೆ" ಎನ್ನುತ್ತಾಳೆ. ಅದನ್ನು ಮರೆಯಲ್ಲಿ ನಿಂತು ಜೈದೇವ್‌ ಕೇಳಿಸಿಕೊಳ್ಳುತ್ತಾನೆ. "ಜೆಡಿ ನೀನು ಎಷ್ಟು ಒಳ್ಳೆಯವನಾಗಿ ನಟಿಸ್ತಿಯೋ ಅಷ್ಟು ನಿನಗೆ ಒಳ್ಳೆಯದು ಕಣೋ" ಎಂದು ಜೈದೇವ್‌ನ ಸ್ವಗತ ಇರುತ್ತದೆ.

ಅಮೃತಧಾರೆ ಸೀರಿಯಲ್‌ ಪಾತ್ರವರ್ಗ

ಛಾಯಾ ಸಿಂಗ್‌: ಭೂಮಿಕಾ (ನಾಯಕಿ)

ರಾಜೇಶ್ ನಟರಂಗ್: ಗೌತಮ್‌ ದಿವಾನ್‌ (ನಾಯಕ)

ವನಿತಾ ವಾಸು: ಶಕುಂತಳಾ (ಗೌತಮ್‌ ಮಲತಾಯಿ)

ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್‌ ತಂದೆ)

ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ)

ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ)

ಸಾರಾ ಅಣ್ಣಯ್ಯ : ಮಹಿಮಾ (ಗೌತಮ್‌ ತಂಗಿ, ಶಂಕುತಳಾ ಮಗಳು, ಜೀವನ್‌ ಹೆಂಡತಿ)

ಶಶಿ ಹೆಗ್ಗಡೆ: ಜೀವನ್‌ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ)

ರಣವ್‌: ಜೈದೇವ್‌

ಚಂದನ್‌: ಅಶ್ವಿನಿ

ಸ್ವಾತಿ: ಅಪರ್ಣಾ (ಆನಂದ್‌ ಹೆಂಡತಿ)

ಆನಂದ್‌: ಆನಂದ್‌ (ಗೌತಮ್‌ ಸ್ನೇಹಿತ, ಅಪರ್ಣಾ ಗಂಡ)

Whats_app_banner