Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಪರಿಸ್ಥಿತಿ ಏನಾಗಿದೆ ನೋಡಿ
ಕನ್ನಡ ಸುದ್ದಿ  /  ಮನರಂಜನೆ  /  Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಪರಿಸ್ಥಿತಿ ಏನಾಗಿದೆ ನೋಡಿ

Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಪರಿಸ್ಥಿತಿ ಏನಾಗಿದೆ ನೋಡಿ

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ಗೌತಮ್‌ ಮತ್ತು ಭೂಮಿಕಾ ಮತ್ತೆ ಒಂದಾಗಿರುವುದು, ಇನ್ನೊಂದು ಭೂಮಿಕಾ ಗರ್ಭಿಣಿ ಎಂದು ತಿಳಿದುಬಂದಿರುವುದು. ಮೂರನೆಯ ಬೆಳವಣಿಗೆ ಶತ್ರುಗಳ ಮುಖಭಂಗ. ಈ ಮೂರನೇ ಬೆಳವಣಿಗೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಪರಿಸ್ಥಿತಿ
Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಶಕುಂತಲಾದೇವಿ, ಜೈದೇವ್‌, ಲಕ್ಕಿ ಲಕ್ಷ್ಮಿಕಾಂತ್‌ ಪರಿಸ್ಥಿತಿ

Amruthadhaare serial Yesterday Episode: ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ಗೌತಮ್‌ ಮತ್ತು ಭೂಮಿಕಾ ಮತ್ತೆ ಒಂದಾಗಿರುವುದು, ಇನ್ನೊಂದು ಭೂಮಿಕಾ ಗರ್ಭಿಣಿ ಎಂದು ತಿಳಿದುಬಂದಿರುವುದು. ಮೂರನೆಯ ಬೆಳವಣಿಗೆ ಶತ್ರುಗಳ ಮುಖಭಂಗ. ಈ ಮೂರನೇ ಬೆಳವಣಿಗೆ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ.

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಶತ್ರುಗಳಿಗೆ ಮುಖಭಂಗವಾಗಿದೆ. ಹೌದು, ಗೌತಮ್‌ ದಿವಾನ್‌ಗೆ ಇನ್ನೊಂದು ಮದುವೆ ಮಾಡಿಸುವ, ಭೂಮಿಕಾಳನ್ನು ಮನೆಯಿಂದ ಓಡಿಸುವ, ಜೈದೇವ್‌ನನ್ನು ಎಂಡಿ ಮಾಡುವ, ಅಪಾರ ಆಸ್ತಿಗೆ ತಾನೇ ರಾಣಿಯಾಗುವ ಶಕುಂತಲಾದೇವಿ ಯೋಜನೆಗಳೆಲ್ಲವೂ ಠುಸ್‌ ಆಗಿವೆ. ಈಗ ಅವರ ಸ್ಥಿತಿ ಯಾರಿಗೂ ಹೇಳುವಂತೆಯೂ ಇಲ್ಲ. ಸದ್ಯ ರೋಷದಿಂದ ಬುಸುಗುಡುವುದಷ್ಟೇ ಅವರ ಕೆಲಸ.

ಅಮೃತಧಾರೆ ಧಾರಾವಾಹಿಯಲ್ಲಿ ನಿನ್ನೆಯ ಸಂಚಿಕೆಯಲ್ಲಿ ಮೂರು ಪ್ರಮುಖ ಬೆಳವಣಿಗೆಗಳು ಆಗಿವೆ. ಒಂದು ಗೌತಮ್‌ ಮತ್ತು ಭೂಮಿಕಾ ಮತ್ತೆ ಒಂದಾಗಿರುವುದು, ಇನ್ನೊಂದು ಭೂಮಿಕಾ ಗರ್ಭಿಣಿ ಎಂದು ತಿಳಿದುಬಂದಿರುವುದು. ಮೂರನೆಯ ಬೆಳವಣಿಗೆ ಶತ್ರುಗಳ ಮುಖಭಂಗ.

ಲಬೋ ಲಬೋ ಎನ್ನುತ್ತಿದ್ದಾರೆ ಶತ್ರುಗಳು

ಲಕ್ಕಿ ಲಕ್ಷ್ಮಿಕಾಂತ್‌, ಶಕುಂತಲಾದೇವಿ ಮತ್ತು ಜೈದೇವ್‌ ಕೊಠಡಿಯಲ್ಲಿ ಟೆನ್ಷನ್‌ನಲ್ಲಿದ್ದಾರೆ. "ಏನೂ ಸಿಸ್ಟರ್‌, ಹೀಗೆ ಆಯ್ತು. ಗೌತಮ್‌ ನಮ್ಮ ತಲೆಯ ಮೇಲೆ ಚಪ್ಪಡಿ ಹಾಕಿದ್ನಲ್ವ" ಎಂದು ಲಕ್ಕಿ ಲಕ್ಷ್ಮಿಕಾಂತ್‌ ಹೇಳುತ್ತಾನೆ. "ಯಾರು ಸತ್ತು ಹೋಗಿದ್ದಾರೆ ಎಂದು ಹೀಗೆ ಬಡಿದುಕೊಳ್ತಿ ಮಾಮ್‌" ಎಂದು ಜೈದೇವ್‌ ತನ್ನ ಮಾವನಿಗೆ ಬಯ್ಯುತ್ತಾನೆ. "ಆಗಬೇಕಾಗಿರುವ ವಿಷಯದ ಬಗ್ಗೆ ಮಾತನಾಡೋಣ. ನಮ್ಮ ಟೈಮೇ ಸರಿ ಇಲ್ಲ. ಖರಾಬ್‌ ಅಂದ್ರೆ ಖರಾಬ್‌ ಆಗಿದೆ. ಎಷ್ಟು ಕೇರ್‌ಫುಲ್‌ ಆಗಿ ಸ್ಕಚ್‌ ಆಗಿ ಪ್ಲ್ಯಾನ್‌ ಮಾಡಿದ್ರೂ ನಮ್ಮ ಬುಡಕ್ಕೆ ಬಂದು ಬೀಳ್ತಾ ಇದೆ" ಎಂದು ಜೈದೇವ್‌ ಹೇಳುತ್ತಾನೆ.

"ಎಂತಹ ಸ್ಥಿತಿ ಬಂತು. ಎಂತಹ ವಿಲನ್‌ಗಳು ನಾವು. ನಮಗೆ ಬರಬಾರದ ಸ್ಥಿತಿ ಬಂತು ಅಲ್ವ" ಎಂದು ಲಕ್ಷ್ಮಿಕಾಂತ್‌ ಅಳು ಮುಂದುವರೆಯುತ್ತದೆ. "ಅವಳನ್ನು ಮನೆಯಿಂದ ಹೊರಗೆ ಹಾಕಬೇಕು ಅಂದುಕೊಂಡ್ರೆ ಎಲ್ಲಾ ಉಲ್ಟಾ ಆಯ್ತಲ್ವಾ ಅಳಿಮಯ್ಯ" ಎನ್ನುತ್ತಾನೆ. "ನನಗೆ ತುಂಬಾ ಟೆನ್ಷನ್‌ ಆಗ್ತಿದೆ. ಸ್ವಲ್ಪ ತೀರ್ಥ ಸೇವನೆ ಮಾಡ್ತಿನಿ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. "ಈ ಗೌತಮ್‌ ಮತ್ತು ಮಧುರಾ ಮೊದಲೇ ಮ್ಯಾಚ್‌ ಫಿಕ್ಸಿಂಗ್‌ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು. ಸಾಲದು ಅಂತ ಈ ಮಗು ಬೇರೆ" ಎಂದು ಶಕುಂತಲಾದೇವಿ ಕೋಪದಿಂದ ಹೇಳುತ್ತಾರೆ. "ಏನೆಲ್ಲ ಅಂದುಕೊಂಡೆವು, ಏನೆಲ್ಲ ಆಗೋಯ್ತು. ಅವಳ ಹೊಟ್ಟೆಯಲ್ಲಿ ಮಗು ಈಗಲೇ ಹುಟ್ಟಬೇಕಿತ್ತ?" ಎನ್ನುತ್ತಾರೆ.

"ಭೂಮಿಕಾಳಿಗೆ ಮೊದಲೇ ಎಲ್ಲಾ ಗೊತ್ತಿರಬಹುದು ಅಲ್ವಾ. ಅವಳು ಎಲ್ಲವೂ ಗೊತ್ತಿದ್ದೂ ನಮ್ಮ ಪ್ಲ್ಯಾನ್‌ ಪ್ಲಾಪ್‌ ಮಾಡಬೇಕೆಂದು ಹೀಗೆ ಮಾಡಿರಬಹುದು ಅಲ್ವಾ?. ಕೇಸ್‌ ಸ್ಟಡಿ ಮಾಡಿ ನಮ್ಮನ್ನು ಲಾಕ್‌ ಮಾಡಿರಬಹುದು ಅಲ್ವಾ?" ಎಂದು ಜೈದೇವ್‌ ಹೊಸ ಸಂದೇಹ ವ್ಯಕ್ತಪಡಿಸುತ್ತಾನೆ. "ಸಾಧ್ಯವೇ ಇಲ್ಲ, ಹಾಗಿದ್ರೆ ಅವರ ಬಾಡಿ ಲಾಂಗ್ವೇಜ್‌ನಲ್ಲಿ, ಮಾತುಕತೆಯಲ್ಲಿ ಎಲ್ಲವೂ ಗೊತ್ತಾಗುತ್ತಿತ್ತು. ಅವಳ ಬಾಡಿ ಲ್ಯಾಂಗ್ವೇಜ್‌ ನಮಗೆ ಎಲ್ಲವೂ ಗೊತ್ತಿತ್ತು ಅನ್ನುವ ರೀತಿ ಇರಲಿಲ್ಲ. ಇದು ಗ್ಯಾರಂಟಿ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ.

"ಮದುವೆ ಸಮಯದಲ್ಲಿಯೇ ಅವಳಿಗೆ ಏನಾದರೂ ಕುಡಿಸಿ ಮೂರ್ಚೆ ಹೋಗುವಂತೆ ಮಾಡಬೇಕಿತ್ತು. ಈಗ ಎಲ್ಲಾ ಐಡಿಯಾ ಹೇಳುವೆ. ಎಲ್ಲಾ ನಾನೇ ಮಾಡಬೇಕು. ನಿಮಗೆಲ್ಲ ಜವಾಬ್ದಾರಿ ಇಲ್ವಾ?" ಎಂದು ಶಕುಂತಲಾ ಬಯ್ಯುತ್ತಾರೆ. "ಮೂರು ಗಂಟು ಇದ್ದದ್ದು ಆರು ಗಂಟು ಆಯ್ತಲ್ವಾ? ಅವರನ್ನು ಇನ್ನು ಬೇರ್ಪಡಿಸಲು ಸಾಧ್ಯವೇ? ಹಣೆ ಬರಹ ಬರೆದ ವಿದಾತನಿಂದಲೂ ಅಸಾಧ್ಯ" ಎಂದು ಲಕ್ಷ್ಮಿಕಾಂತ್‌ ಹೇಳುತ್ತಾನೆ. ಕೋಪದಿಂದ ಜೈದೇವ್‌ ಹೋಗುತ್ತಾನೆ. ನೀನೂ ಹೋಗು ಎಂದು ಲಕ್ಷ್ಮಿಕಾಂತ್‌ನನ್ನೂ ಕಳುಹಿಸುತ್ತಾಳೆ.

"ಈಗಲೇ ಇವರನ್ನು ಹಿಡಿಯಲು ಆಗೋದಿಲ್ಲ. ಮಗುವಾದರೆ, ಸಾಧ್ಯವೇ ಇಲ್ಲ" ಎಂದು ಶಕುಂತಲಾದೇವಿ ಯೋಚಿಸುತ್ತಾರೆ. "ನಾನು ನೋಡ್ತಿನಿ, ಅವಳಿಗೆ ಹೇಗೆ ಮಗುವಾಗುತ್ತದೆ" ಎಂದು ರೋಷದಿಂದ ಯೋಚಿಸುತ್ತಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner