Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಅಮೃತಧಾರೆಯ ಭೂಮಿಕಾ; ಪಾರುಗೆ ಪ್ರೀತಿ ಪಾಠ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಅಮೃತಧಾರೆ ಧಾರಾವಾಹಿಯ ನಾಯಕಿ ಭೂಮಿಕಾ ಕಾಣಿಸಿಕೊಂಡಿದ್ದಾರೆ. ಪಾರುಗೆ ಅಣ್ಣಯ್ಯನ ಪ್ರೀತಿ ಬಗ್ಗೆ ಪಾಠ ಮಾಡಿದ್ದಾರೆ. ಪಾರು ಮನಸಿಗೆ ಈಗ ಸಮಾಧಾನ ಆದಂತಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಅನುಮಾನದಲ್ಲಿ ಮುಳುಗಿದ್ದಾಳೆ. ರಾಣಿ ಆಡಿದ ಮಾತು ಕೇಳಿ ಅವಳಿಗೆ ತಾನು ನಿಜವಾಗೂ ಪ್ರೀತಿಯಲ್ಲಿದ್ದೇನೋ? ಅಥವಾ ಇದು ತನ್ನ ಭ್ರಮೆಯೋ? ಎಂದು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಆ ಕಾರಣಕ್ಕಾಗಿ ಅವಳನ್ನು ಇನ್ನಷ್ಟು ಯಾರೊಂದಿಗಾದರೂ ಈ ಬಗ್ಗೆ ಮಾತಾಡಬೇಕು ಎಂದು ಅಂದುಕೊಂಡಿದ್ದಾಳೆ. ಆಗ ಅವಳಿಗೆ ಸಹಾಯ ಮಾಡಿದ್ದು ಅಮೃತಧಾರೆ ಧಾರಾವಾಹಿಯ ಭೂಮಿಕಾ.. ಹೌದು, ಈ ಬಾರಿ ಅಮೃತಧಾರೆ ಹಾಗೂ ಅಣ್ಣಯ್ಯ ಧಾರಾವಾಹಿಯ ಸಮ್ಮಿಲನವಾಗಿದೆ. ಹೋಟೆಲ್ ಒಂದಕ್ಕೆ ಪಾರು ಹಾಗೂ ಭೂಮಿಕಾ ಹೋಗಿದ್ದಾರೆ. ಅಲ್ಲಿ ಅವರಿಬ್ಬರು ಭೇಟಿಯಾಗಿದ್ದಾರೆ.
ಪಾರು ಮೊದಲೇ ಹೋಗಿ ಹೋಟೆಲ್‌ನಲ್ಲಿ ಕಾಯುತ್ತಾ ಕುಳಿತಿರುತ್ತಾಳೆ. ನಂತರ ಅಲ್ಲಿಗೆ ಭೂಮಿಕಾ ಬರುತ್ತಾಳೆ. ತುಂಬಾ ಸಮಯದಿಂದ ತಲೆಕೆಡಿಸಿಕೊಂಡು ಪಾರು ಅಲ್ಲೇ ಕುಳಿತಿರುವಂತೆ ತೋರುತ್ತದೆ. ಯಾಕೆಂದರೆ ಅವಳ ಕಣ್ಣಲ್ಲಿ ನೀರಿರುತ್ತದೆ. ಓಡಿ ಹೋಗಿ ಭೂಮಿಕಾಳನ್ನು ಅಪ್ಪಿಕೊಳ್ಳುತ್ತಾಳೆ. ಅಲ್ಲಿಂದಲೇ ಭೂಮಿಕಾ ಪಾರುಗೆ ಸಮಾಧಾನ ಮಾಡುತ್ತಾಳೆ. “ನನಗೆ ನನ್ನ ಪ್ರೀತಿಯನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ” ಎಂದು ಪಾರು ಹೇಳುತ್ತಾಳೆ. ಆಗ ಭೂಮಿಕಾ “ನನಗೂ ಕೂಡ ಹೀಗೆ ಆಗಿತ್ತು” ಎನ್ನುತ್ತಾಳೆ.
ಅದಾದ ನಂತರ ಐಸ್ಕ್ರೀಂ ಆರ್ಡರ್ ಮಾಡುತ್ತಾರೆ. ಆಗ ಪಾರು ಹೇಳುತ್ತಾಳೆ.. “ನಿಮಗೆ ವೆನಿಲ್ಲಾ ಐಸ್‌ಕ್ರೀಂ ಇಷ್ಟ ಅಲ್ವಾ?” ಎಂದು ಆಗ ಭೂಮಿಕಾ “ಈಗ ನನಗೆ ಚಾಕೊಲೇಟ್ ಐಸ್‌ಕ್ರೀಂ ಇಷ್ಟ. ಅದು ಗೌತಮ್ ಅವರ ಇಷ್ಟದ ಫ್ಲೇವರ್" ಎಂದು ಹೇಳುತ್ತಾಳೆ. ಕೆಲವೊಮ್ಮೆ ನಾವು ನಮಗಿಷ್ಟ ಆಗುವವರ ಸಲುವಾಗಿ ಬದಲಾಗಬೇಕಾಗುತ್ತದೆ ಎಂದು ಹೇಳುತ್ತಾಳೆ. ಆಗ ಪಾರು ತನಗಾಗುತ್ತಿರುವ ಗೊಂದಲದ ಬಗ್ಗೆ ಹೇಳುತ್ತಾಳೆ. ಆ ರೀತಿ ಹೇಳಿದಾಗ ಭೂಮಿಕಾ ಅದೆಲ್ಲದಕ್ಕೂ ಪರಿಹಾರ ಸೂಚಿಸುತ್ತಾಳೆ. ನಿನಗೆ ನಿಜವಾಗಿಯೂ ನಿನ್ನ ಮಾವನ ಮೇಲೆ ಪ್ರೀತಿ ಆಗಿದೆ ಎಂದು ಹೇಳುತ್ತಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
