ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿ ಪ್ಯಾರಿಸ್‌ ಪ್ರಣಯ; ಬಿಗಿಭದ್ರತೆ ನಡುವೆ ಕೈ ಹಿಡಿದು ಸಾಗಿದ ದಂಪತಿ, ಇದು ಹನಿಮೂನ್‌ ಅಲ್ವಂತೆ
ಕನ್ನಡ ಸುದ್ದಿ  /  ಮನರಂಜನೆ  /  ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿ ಪ್ಯಾರಿಸ್‌ ಪ್ರಣಯ; ಬಿಗಿಭದ್ರತೆ ನಡುವೆ ಕೈ ಹಿಡಿದು ಸಾಗಿದ ದಂಪತಿ, ಇದು ಹನಿಮೂನ್‌ ಅಲ್ವಂತೆ

ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿ ಪ್ಯಾರಿಸ್‌ ಪ್ರಣಯ; ಬಿಗಿಭದ್ರತೆ ನಡುವೆ ಕೈ ಹಿಡಿದು ಸಾಗಿದ ದಂಪತಿ, ಇದು ಹನಿಮೂನ್‌ ಅಲ್ವಂತೆ

Anant Ambani radhika merchant in paris: ಇತ್ತೀಚೆಗೆ ಮದುವೆಯಾದ ರಾಧಿಕಾ ಮರ್ಚೆಂಟ್‌-ಅನಂತ್‌ ಅಂಬಾನಿಗೆ ಇದು ಹನಿಮೂನ್‌ ಸಮಯ. ದಂಪತಿ ಈಗ ಪ್ಯಾರಿಸ್‌ನಲ್ಲಿದ್ದಾರೆ. ಆದ್ರೆ, ಈ ಬಾರಿ ಪ್ಯಾರಿಸ್‌ಗೆ ಹೋಗಿರುವುದು ಹನಿಮೂನ್‌ಗೆ ಅಲ್ವಂತೆ. ಇವರಿಬ್ಬರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಕಣ್ತುಂಬಿಕೊಳ್ಳಲು ಅಲ್ಲಿದ್ದಾರೆ.

ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿ ಪ್ಯಾರಿಸ್‌ ಪ್ರಣಯ
ರಾಧಿಕಾ ಮರ್ಚೆಂಟ್‌- ಅನಂತ್‌ ಅಂಬಾನಿ ಪ್ಯಾರಿಸ್‌ ಪ್ರಣಯ (Instant Bollywood )

ಬೆಂಗಳೂರು: ಸುಮಾರು 5 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಗತ್ತೇ ತಿರುಗಿ ನೋಡುವಂತೆ ಅದ್ಧೂರಿಯಾಗಿ ವಿವಾಹವಾದ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಈಗ ಹನಿಮೂನ್‌ ಮೂಡ್‌ನಲ್ಲಿದ್ದಾರೆ. ಸದ್ಯ ದಂಪತಿ ಪ್ಯಾರಿಸ್‌ನಲ್ಲಿ ಸುತ್ತಾಡುತ್ತ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಶತಕೋಟ್ಯಧಿಪತಿಗಳಾಗಿದ್ದರೂ ಸರಳ ಉಡುಗೆ ಧರಿಸಿ ಪ್ಯಾರಿಸ್‌ ಬೀದಿಗಳಲ್ಲಿ ಸುತ್ತುತ್ತಿರುವ ಈ ಜೋಡಿಗಳನ್ನು ನೆಟ್ಟಿಗರು ಹಾಡಿ ಹೊಗಳುತ್ತಿದ್ದಾರೆ. ಇದೇ ಸಮಯದಲ್ಲಿ ದಂಪತಿಗೆ ತೊಂದರೆಯಾಗದಂತೆ ಸುತ್ತಲೂ ಬಿಗಿಭದ್ರತೆಯನ್ನು ಅವರ ಟೀಮ್‌ ನೀಡುತ್ತಿದೆ.

ಆದ್ರೆ, ಇವರಿಬ್ಬರು ಪ್ಯಾರಿಸ್‌ಗೆ ತೆರಳಿರುವುದು ಹನಿಮೂನ್‌ಗೆ ಅಲ್ವಂತೆ. ಇವರಿಬ್ಬರು ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಕಣ್ತುಂಬಿಕೊಳ್ಳಲು ಅಲ್ಲಿದ್ದಾರೆ. ಭಾರತದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಯುವ ದಂಪತಿ ಪ್ಯಾರಿಸ್‌ಗೆ ತೆರಳಿದ್ದಾರೆ. ಅನಂತ್‌ ಅಂಬಾನಿ ಕೈಹಿಡಿದುಕೊಂಡು ಖುಷಿಖುಷಿಯಿಂದ ರಾಧಿಕಾ ಹೆಜ್ಜೆ ಹಾಕುತ್ತಿದ್ದಾರೆ. ಸದ್ಯ ಇವರ ಈ ವಿಡಿಯೋಗಳು ವೈರಲ್‌ ಆಗಿವೆ.

ಇನ್‌ಸ್ಟಾಂಟ್‌ ಬಾಲಿವುಡ್‌ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ ಅವರ ಪ್ಯಾರಿಸ್‌ ಪ್ರಣಯದ ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ. ರಾಧಿಕಾ ಮರ್ಚೆಂಟ್‌ ಖುಷಿಯಿಂದ ಅನಂತ್‌ ಕೈ ಹಿಡಿದುಕೊಂಡು ಪ್ಯಾರಿಸ್‌ ಬೀದಿಗಳಲ್ಲಿ ಸಾಗುವ ದೃಶ್ಯ ಕಂಡುಬಂದಿದೆ.

ಇನ್ನೊಂದು ವಿಡಿಯೋದಲ್ಲಿ ರಾಧಿಕಾ ಮತ್ತು ಅನಂತ್‌ ಕೈ ಹಿಡಿದುಕೊಂಡು ಸಾಗುತ್ತಿದ್ದಾರೆ. ಅನಂತ್‌ ಪತ್ನಿಯ ಜತೆ ಮಾತನಾಡಿಕೊಂಡು ಸಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಧಿಕಾ ವಿಡಿಯೋಗ್ರಾಫರ್‌ಗಳತ್ತ ನೋಡುತ್ತಿದ್ದಾರೆ.

ಅಂದಹಾಗೆ ಇವರು ಬಂದಿರುವುದು ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ ವೀಕ್ಷಣೆಗೆ. ಭಾರತ ತಂಡವನ್ನು ಪ್ರೋತ್ಸಾಹಿಸುವ ಸಲುವಾಗಿ ಆಗಮಿಸಿದ್ದಾರೆ. ಈ ವಿಡಿಯೋಗಳಿಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ನವ ಜೋಡಿ ಖುಷಿಯಿಂದ ಒಲಿಂಪಿಕ್ಸ್‌ ನೋಡಲು ಹೋಗುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಅನಂತ್‌ ಅಂಬಾನಿಯ ಪ್ರಾಣಿ ಪ್ರೇಮ, ಸಮಾಜ ಸೇವೆಗಳನ್ನೂ ಕೆಲವರು ನೆನಪಿಸಿಕೊಂಡಿದ್ದಾರೆ.

ಇನ್ನೊಂದು ವಿಡಿಯೋದಲ್ಲಿ ಪ್ಯಾರಿಸ್‌ನಲ್ಲಿ ತನ್ನ ಮಗನಿಗೆ ನೀತಾ ಅಂಬಾನಿ ಸಿಹಿ ಮುತ್ತು ನೀಡುವ ಸುಂದರ ದೃಶ್ಯವಿದೆ.

ಪ್ಯಾರಿಸ್‌ನಲ್ಲಿ ಊಟ ಮುಗಿಸಿ ಹೋಟೆಲ್‌ನಿಂದ ಹೊರಬರುತ್ತಿರುವ ದಂಪತಿ.

ಜುಲೈನಲ್ಲಿ ಮುಕೇಶ್‌ ಅಂಬಾನಿ ಮಗ ಅನಂತ್‌ ಅಂಬಾನಿಗೂ ರಾಧಿಕಾ ಮರ್ಚೆಂಟ್‌ಗೂ ವಿವಾಹ ನಡದಿತ್ತು. ಮುಖೇಶ್‌ ಮತ್ತು ನೀತಾ ಅಂಬಾನಿಯ ಕಿರಿಯ ಪುತ್ರನ ಮದುವೆ ಕಾರ್ಯಕ್ರಮ ಜುಲೈ 12ರಿಂದ ವೈಭವದಿಂದ ಜರುಗಿತ್ತು. ಮುಂಬೈನ ಜಿಯೋ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆದ ಮದುವೆಗೆ ದೇಶ-ವಿದೇಶದ ಗಣ್ಯರು ಸಾಕ್ಷಿಯಾಗಿದ್ದರು. ಜುಲೈ 14ರಂದು ಮಂಗಳ್‌ ಉತ್ಸವ್‌ ನಡೆದಿತ್ತು. ಹಲವು ತಿಂಗಳುಗಳಿಂದ ಅಂಬಾನಿ ಮದುವೆಯ ವಿವಿಧ ಕಾರ್ಯಕ್ರಮಗಳು ಜರುಗಿದ್ದವು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಈ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Whats_app_banner