OTT Crime Thriller: ಒಂದೊಳ್ಳೆ ಕ್ರೈಂ ಥ್ರಿಲ್ಲರ್‌ ಸಿನಿಮಾ ಹುಡುಕ್ತಿದ್ದೀರಾ? ಈ ಒಟಿಟಿಯಲ್ಲಿದೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನೀಡುವ ಚಿತ್ರ
ಕನ್ನಡ ಸುದ್ದಿ  /  ಮನರಂಜನೆ  /  Ott Crime Thriller: ಒಂದೊಳ್ಳೆ ಕ್ರೈಂ ಥ್ರಿಲ್ಲರ್‌ ಸಿನಿಮಾ ಹುಡುಕ್ತಿದ್ದೀರಾ? ಈ ಒಟಿಟಿಯಲ್ಲಿದೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನೀಡುವ ಚಿತ್ರ

OTT Crime Thriller: ಒಂದೊಳ್ಳೆ ಕ್ರೈಂ ಥ್ರಿಲ್ಲರ್‌ ಸಿನಿಮಾ ಹುಡುಕ್ತಿದ್ದೀರಾ? ಈ ಒಟಿಟಿಯಲ್ಲಿದೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ನೀಡುವ ಚಿತ್ರ

OTT Crime Thriller: ಕಾಲಿವುಡ್ ನಟ ಪ್ರಶಾಂತ್ ಅಭಿನಯದ ಅಂಧಗನ್ ಸಿನಿಮಾ ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಈ ಸಿನಿಮಾವನ್ನು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಿಸಬಹುದು.

ಪ್ರೈಂನಲ್ಲಿ ಕ್ರೈಂ ಥ್ರಿಲ್ಲರ್‌ ಸಿನಿಮಾ
ಪ್ರೈಂನಲ್ಲಿ ಕ್ರೈಂ ಥ್ರಿಲ್ಲರ್‌ ಸಿನಿಮಾ

Andhagan Movie Ott Release Date: ಕಾಲಿವುಡ್ ಹೀರೋ ಪ್ರಶಾಂತ್ ಅಭಿನಯದ ಅಂಧಗನ್ ಸಿನಿಮಾ ಒಟಿಟಿಗೆ ಬರುತ್ತಿದೆ. ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ಇದೇ ಅಕ್ಟೋಬರ್ 30ರಿಂದ ಅಮೆಜಾನ್ ಪ್ರೈಮ್ ವೀಡಿಯೊ ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ವಿಶೇಷ ಏನೆಂದರೆ ಅದೇ ದಿನ ಅಂಧಗನ್ ಸಿನಿಮಾ ಟಿವಿಯಲ್ಲಿಯೂ ಪ್ರಸಾರ ಕಾಣಲಿದೆ. ಆಸ್ಟ್ರೋ ವಿನ್‌ಮೀನ್ ಚಾನೆಲ್‌ನಲ್ಲಿ ಈ ಸಿನಿಮಾ ಪ್ರೀಮಿಯರ್ ಆಗಲಿದೆ. ಆದರೆ ಈ ಟಿವಿ ಪ್ರೀಮಿಯರ್ ಅನ್ನು ಸಾಗರೋತ್ತರ ಪ್ರೇಕ್ಷಕರು ಮಾತ್ರ ನೋಡಬಹುದು.

ಅಂಧಗನ್ ಚಿತ್ರವು ಹಿಂದಿಯ ಅಂಧಾಧುನ್‌ ಸಿನಿಮಾದ ರಿಮೇಕ್ ಆಗಿದ್ದು, ರಾಷ್ಟ್ರ ಪ್ರಶಸ್ತಿಯ ಜತೆಗೆ ಬಾಲಿವುಡ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಸಹ ಮಾಡಿದೆ. ಈ ಸಿನಿಮಾ ಇತ್ತೀಚೆಗಷ್ಟೇ ತಮಿಳಿನಲ್ಲಿ ರಿಮೇಕ್‌ ಆಗಿ, ಆಗಸ್ಟ್‌ 9ರಂದು ಚಿತ್ರಮಂದಿರದಲ್ಲೂ ತೆರೆಕಂಡಿತ್ತು. ಈ ಸಿನಿಮಾದಲ್ಲಿ ಪ್ರಶಾಂತ್, ಸಿಮ್ರಾನ್, ಪ್ರಿಯಾ ಆನಂದ್, ಕಾರ್ತಿಕ್ ಜೊತೆಗೆ ಸಮುದ್ರಖನಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ತಡವಾಗಿ ಚಿತ್ರಮಂದಿರಕ್ಕೆ

ಈ ಕ್ರೈಮ್ ಥ್ರಿಲ್ಲರ್ ಸಿನಿಮಾವನ್ನು ಪ್ರಶಾಂತ್ ಅವರ ತಂದೆ ತ್ಯಾಗರಾಜನ್ ನಿರ್ದೇಶಿಸಿದ್ದಾರೆ. ನಿರ್ಮಾಣದ ಜವಾಬ್ದಾರಿಯೂ ಅವರದ್ದೇ. ಈ ಸಿನಿಮಾದ ಚಿತ್ರೀಕರಣ 2022ರಲ್ಲಿಯೇ ಪೂರ್ಣಗೊಂಡಿತ್ತು. ಅನಿವಾರ್ಯ ಕಾರಣಗಳಿಂದ ಎರಡು ವರ್ಷ ತಡವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು.

ಹತ್ತು ಕೋಟಿ ಬಜೆಟ್...

ಆಗಸ್ಟ್‌ನಲ್ಲಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಪಾಸಿಟಿವ್‌ ಟಾಕ್‌ ಪಡೆಯಿತು. ಸುಮಾರು 10 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 15 ಕೋಟಿಯವರೆಗೂ ಕಲೆಕ್ಷನ್ ಮಾಡಿದೆ. ನಿರ್ಮಾಪಕರಿಗೂ ಲಾಭ ತಂದುಕೊಟ್ಟಿದೆ.

ಇದು ಅಂಧಗನ್ ಕಥೆ…

ಕ್ರಿಶ್ (ಪ್ರಶಾಂತ್) ಒಬ್ಬ ಪಿಯಾನೋ ವಾದಕ. ತನ್ನ ಪಿಯಾನೋ ಕಲೆಯನ್ನು ಫೇಮಸ್‌ ಮಾಡಿಕೊಳ್ಳುವ ಉದ್ದೇಶದಿಂದ ಕುರುಡನಂತೆ ನಟಿಸುತ್ತಿರುತ್ತಾನೆ. ಹೀಗಿರುವಾಗಲೇ ಕ್ರಿಶ್, ಜೂಲಿ (ಪ್ರಿಯಾ ಆನಂದ್) ಹುಡುಗಿಯಡೆಗೆ ಮನಸು ವಾಲುತ್ತದೆ. ಪ್ರೀತಿಯಾಗಿಯೂ ಬದಲಾಗುತ್ತದೆ. ಆಕೆಯ ಒತ್ತಾಯದ ಮೇರೆಗೆ ಪಾರ್ಟಿಯೊಂದಕ್ಕೆ ಪಿಯಾನೋ ನುಡಿಸಲು ಒಪ್ಪಿಕೊಳ್ಳುತ್ತಾನೆ ಕ್ರಿಶ್. ‌ಹೀಗಿರುವಾಗ ಮನೆಗೆ ಬಂದು ಪಿಯಾನೋ ನುಡಿಸುತ್ತಿರುವಾಗಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವೂ ಆತನಿಗೆ ಕಾಣಿಸುತ್ತದೆ.

ಹೀಗೆ ಸಾಗುವ ಸಿನಿಮಾ, ಕೊನೆಗೆ ಆ ಕೊಲೆಗಾರನ ಪತ್ತೆ ಹೇಗೆ? ಅಂಧನಂತೆ ನಟಿಸಿದ ಕ್ರಿಶ್‌ ಸಿಕ್ಕಿಬೀಳ್ತಾನಾ? ಹೀಗೆ ರೋಚಕವಾಗಿಯೇ ಈ ಸಿನಿಮಾ ತೆರೆದುಕೊಳ್ಳಲಿದೆ. ಪೊಲೀಸ್‌ ಅಧಿಕಾರಿಯಾಗಿ ಸಮುದ್ರ ಖನಿ ನಟಿಸಿದರೆ, ಸಿಮಿ ಪಾತ್ರದಲ್ಲಿ ಸಿಮ್ರನ್‌, ಜ್ಯೂಲಿಯಾಗಿ ಪ್ರಿಯಾ ಆನಂದ್‌ ನಟಿಸಿದ್ದಾರೆ. ಇದೇ ಸಿನಿಮಾ ತೆಲುಗಿನಲ್ಲಿ ಮ್ಯಾಸ್ಟ್ರೋ ಹೆಸರಿನಲ್ಲಿ ರಿಮೇಕ್‌ ಆಗಿತ್ತು. ಆ ಚಿತ್ರದಲ್ಲಿ ನಿತಿನ್‌ ನಾಯಕನಾಗಿ ನಟಿಸಿದ್ದರು.