ಕನ್ನಡ ಸುದ್ದಿ  /  Entertainment  /  Andhra Tehsildar Wore Kantara Getup In State Revenue Sports And Cultural Association Event

Tehsildar in Kantara getup: 'ಕಾಂತಾರ' ದೈವ ನರ್ತಕನ ವೇಷ ತೊಟ್ಟು ಮೊದಲ ಬಹುಮಾನ ಪಡೆದ ಆಂಧ್ರ ತಹಶಿಲ್ದಾರ್..ಫೋಟೋ ವೈರಲ್‌

'ಕಾಂತಾರ' ಕರ್ನಾಟಕದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲೂ ಕೂಡಾ ಸದ್ದು ಮಾಡುತ್ತಿದೆ. ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಯೊಬ್ಬರು ಪಂಜುರ್ಲಿ ದೈವದ ವೇಷ ತೊಡುವಷ್ಟರ ಮಟ್ಟಿಗೆ ಕ್ರೇಜ್‌ ಹುಟ್ಟುಹಾಕಿದೆ.

ದೈವ ನರ್ತಕನ ಪಾತ್ರದಲ್ಲಿ ಆಂಧ್ರ ತಹಶಿಲ್ದಾರ್‌ ಪ್ರಸಾದ್‌ ರಾವ್
ದೈವ ನರ್ತಕನ ಪಾತ್ರದಲ್ಲಿ ಆಂಧ್ರ ತಹಶಿಲ್ದಾರ್‌ ಪ್ರಸಾದ್‌ ರಾವ್ (PC: Facebook)

'ಕಾಂತಾರ' ಸಿನಿಮಾ ತೆರೆ ಕಂಡು 50 ದಿನಗಳಾದರೂ ಪ್ರತಿದಿನ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಲೇ ಇದೆ. ಭಾರತೀಯ ಚಿತ್ರರಂಗದ ಗಣ್ಯಾತಿ ಗಣ್ಯರು ಈ ಸಿನಿಮಾ ನೋಡಿ ಭೇಷ್‌ ಎಂದಿದ್ದಾರೆ. ಇಂತ ಸುಂದರ ಸಿನಿಮಾವೊಂದನ್ನು ನಿರ್ಮಿಸಿದ ಹೊಂಬಾಳೆ ಚಿತ್ರ ನಿರ್ಮಾಣ ಸಂಸ್ಥೆಗೂ , ಸಿನಿಮಾ ನಿರ್ದೇಶನ ಮಾಡಿದ ರಿಷಬ್‌ ಶೆಟ್ಟಿಗೂ, ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಕಾಂತಾರ' ಕರ್ನಾಟಕದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲೂ ಕೂಡಾ ಸದ್ದು ಮಾಡುತ್ತಿದೆ. ಆಂಧ್ರ ಪ್ರದೇಶದ ಸರ್ಕಾರಿ ಅಧಿಕಾರಿಯೊಬ್ಬರು ಪಂಜುರ್ಲಿ ದೈವದ ವೇಷ ತೊಡುವಷ್ಟರ ಮಟ್ಟಿಗೆ ಕ್ರೇಜ್‌ ಹುಟ್ಟುಹಾಕಿದೆ. ಇತ್ತೀಚೆಗೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ನಾಗಾರ್ಜುನ ವಿಶ್ವವಿದ್ಯಾನಿಲಯದಲ್ಲಿ ಆರನೇ ಆಂಧ್ರಪ್ರದೇಶ ರಾಜ್ಯ ಕಂದಾಯ ಕ್ರೀಡೆ ಮತ್ತು ಸಾಂಸ್ಕೃತಿಕ ಕೂಟವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಪರವಾಗಿ ಎಲ್ಲಾ ನೌಕರರು ಉತ್ಸಾಹದಿಂದ ಭಾಗವಹಿಸಿದ್ದರು. ತಹಶಿಲ್ದಾರ್‌ ಪ್ರಸಾದ್‌ ರಾವ್‌ ಎನ್ನುವವರು 'ಕಾಂತಾರ' ಚಿತ್ರದ ಪಂಜುರ್ಲಿ ದೈವದ ಗೆಟಪ್‌ ಧರಿಸಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇದು ಅಲ್ಲಿ ನೆರೆದಿದ್ದವರನ್ನು ಇಂಪ್ರೆಸ್‌ ಮಾಡಿದೆ.

ವೈರಲ್‌ ಫೋಟೋ
ವೈರಲ್‌ ಫೋಟೋ (PC: Facebook)

ಕಾರ್ಯಕ್ರಮದಲ್ಲಿ ಎಲ್ಲಾ ಜಿಲ್ಲೆಗಳ ಕಂದಾಯ ಸಿಬ್ಬಂದಿ ವಿವಿಧ ವೇಷಭೂಷಣ ತೊಟ್ಟು ಭಾಗವಹಿಸಿದ್ದರು. ಆದರೆ ಅಲ್ಲಿ ಗಮನ ಸೆಳೆದಿದ್ದು ತಹಶಿಲ್ದಾರ್‌ ಧರಿಸಿದ್ದ ದೈವನರ್ತಕನ ವೇಷ. 'ಕಾಂತಾರ' ಗೆಟಪ್‌ ಧರಿಸಿ ಏಕಪಾತ್ರಾಭಿನಯ ಮಾಡಿ ಅಲ್ಲಿದ್ದವರನ್ನು ಪ್ರಸಾದ್‌ ರಾವ್‌ ರಂಜಿಸಿದರು. ಪ್ರಸಾದ್‌ ರಾವ್ ಅವರನ್ನು ಎನ್‌ಟಿಆರ್ ಜಿಲ್ಲಾಧಿಕಾರಿ ಢಿಲ್ಲಿರಾವ್ ಶ್ಲಾಘಿಸಿದರು. ಅಷ್ಟೇ ಅಲ್ಲ, ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಈ ಸ್ಪರ್ಧೆಯಲ್ಲಿ ಪ್ರಸಾದ್‌ ರಾವ್ ಅವರಿಗೆ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ದೊರೆತಿದೆ. ದೈವ ನರ್ತಕನ ವೇಷ ತೊಟ್ಟ ತಹಸೀಲ್ದಾರ್ ಅವರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಿಷಬ್‌ ಶೆಟ್ಟಿಗೆ ಸನ್ಮಾನಿಸಿ ಚಿನ್ನದ ಸರ ಗಿಪ್ಟ್‌ ನೀಡಿದ ರಜನಿಕಾಂತ್‌

'ಕಾಂತಾರ' ಸಿನಿಮಾ ನೋಡಿ, ರಜನಿಕಾಂತ್‌ ಅವರು ತಮ್ಮೊಂದಿಗೆ ಮಾತನಾಡಿದ್ದ ವಿಚಾರವನ್ನು ರಿಷಬ್‌ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ತಮ್ಮ ಮನೆಗೆ ಆಹ್ವಾನಿಸಿದ್ದ ವಿಚಾರವನ್ನು ಮಾತ್ರ ರಿಷಬ್‌ ಹೇಳಿಕೊಂಡಿರಲಿಲ್ಲ. ಆದರೆ ಸೋಷಿಯಲ್‌ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದ ರಜನಿಕಾಂತ್‌ ಜೊತೆಗಿನ ಫೋಟೋಗಳನ್ನು ನೋಡಿ ಎಲ್ಲರಿಗೂ ಶಾಕ್‌ ಆಗಿತ್ತು. ಇನ್ನು ಎಲ್ಲಾ ಕಾರ್ಯಕ್ರಮಗಳಿಗೂ ಪಂಚೆ ಧರಿಸಿ ಹೋಗುವ ರಿಷಬ್‌ ಶೆಟ್ಟಿ, ರಜನಿಕಾಂತ್‌ ಅವರನ್ನು ಭೇಟಿ ಮಾಡಲು ಹೋದಾಗ ಪ್ಯಾಂಟ್‌ ಧರಿಸಿದ್ದರು. ಅವರನ್ನು ಭೇಟಿ ಮಾಡಲು ಹೋಗುವಾಗ ಪಂಚೆ ಧರಿಸಬೇಕಿತ್ತು ಎಂದು ಎಲ್ಲರೂ ಕಮೆಂಟ್‌ ಮಾಡಿದ್ದರು. ರಜನಿಕಾಂತ್‌ ಭೇಟಿ ಸಮಯ ಹೇಗಿತ್ತು..? ಅವರು ಏನು ಗಿಫ್ಟ್‌ ನೀಡಿದರು..? ಅವರನ್ನು ಭೇಟಿ ಮಾಡಲು ಹೋದಾಗ ಏಕೆ ಪಂಚೆ ಧರಿಸಿರಲಿಲ್ಲ ಎಂಬ ವಿಚಾರವನ್ನು ರಿಷಬ್‌ ಶೆಟ್ಟಿ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅಕುಲ್‌ ಬಾಲಾಜಿ ನಡೆಸಿಕೊಡುತ್ತಿರುವ ಸ್ಟಾರ್‌ ಸುವರ್ಣ ವಾಹಿನಿಯ ಗಾನ ಬಜಾನ ಕಾರ್ಯಕ್ರಮದಲ್ಲಿ ಇತ್ತೀಚೆಗೆ ರಿಷಬ್‌ ಶೆಟ್ಟಿ, ಸಪ್ತಮಿ ಗೌಡ ಹಾಗೂ ಇನ್ನಿತರರು ಭಾಗವಹಿಸಿದ್ದರು. ಈ ವೇಳೆ ರಜನಿಕಾಂತ್‌ ಹಾಗೂ ತಮ್ಮ ಭೇಟಿ ಹೇಗಿತ್ತು ಎಂದು ರಿಷಬ್‌ ಹೇಳಿಕೊಂಡಿದ್ದಾರೆ. ರಜನಿಕಾಂತ್‌ ಅವರನ್ನು ಭೇಟಿ ಮಾಡಿದಾಗ ಪಂಚೆ ಧರಿಸದಿರುವುದು ನನಗೂ ಬೇಸರದ ವಿಚಾರ. ಆದರೆ ಅಲ್ಲಿ ಹೋಗುವ ಮುನ್ನ ನಾನು ಕೊಚ್ಚಿ, ತಿರುಪತಿ, ವೈಜಾಗ್‌, ಚೆನ್ನೈ ಥಿಯೇಟರ್‌ ವಿಸಿಟ್‌ ಮಾಡಬೇಕಿತ್ತು. ಒಂದು ಪ್ರೈವೇಟ್‌ ಜೆಟ್‌ ಬುಕ್‌ ಮಾಡಿ ನನ್ನನ್ನು ಕಳಿಸಿದ್ದರು. ಆದರೆ ಫ್ಲೈಟ್‌ನಲ್ಲಿ ಹೋಗುವಾಗ ಫ್ಯಾನ್‌ ತಿರುಗಿ ಪಂಚೆ ಹಾರಿ ಹೋದರೆಕಷ್ಟ, ಆದ್ದರಿಂದ ರಜನಿ ಸರ್‌ ಅವರನ್ನು ಭೇಟಿ ಮಾಡುವಾಗ ಪಂಚೆ ಬಿಟ್ಟು ಪ್ಯಾಂಟ್‌ ಧರಿಸಿದ್ದೆ. ಸೋಷಿಯಲ್‌ ಮೀಡಿಯಾದಲ್ಲಿ ಕೂಡಾ ಎಷ್ಟೋ ಮಂದಿ ನೀವೂ ಕೂಡಾ ಪಂಚೆ ಹಾಕಬೇಕಿತ್ತು ಎಂದು ಕಮೆಂಟ್‌ ಮಾಡುತ್ತಿದ್ದರು ಎಂದು ರಿಷಬ್‌ ಶೆಟ್ಟಿ ತಮಾಷೆಯಾಗಿ ಪಂಚೆ ಪ್ರಸಂಗವನ್ನು ವಿವರಿಸಿದರು.

ಹಾಗೇ ರಜನಿಕಾಂತ್‌, ತಮಗೆ ನೀಡಿದ ಚಿನ್ನದ ಸರವನ್ನು ಕೂಡಾ ರಿಷಬ್‌ ಶೆಟ್ಟಿ ತೋರಿಸಿದರು. ಅದರಲ್ಲಿ ಬಾಬಾ ಪೆಂಡೆಂಟ್‌ ಇರೋದನ್ನು ಕೂಡಾ ಹೇಳಿದರು. ರಜನಿಕಾಂತ್‌ ಬಹಳ ಆರಾಧಿಸುವ ಬಾಬಾ, ಹಾಗೂ ರಜನಿಕಾಂತ್‌ ಅವರ ಕೈ ಬೆರಳ ಚಿಹ್ನೆ ಈ ಪೆಂಡೆಂಟ್‌ನಲ್ಲಿದೆ. ಇದನ್ನು ನೋಡಿದಾಗಲೇ ಬಾಬಾ, ಒಂದು ಸಿನಿಮಾ ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚು ಅನ್ನೋದು ಅರ್ಥ ಆಯ್ತು. ಸುಮಾರು ಒಂದು ಗಂಟೆ ಕುಳಿತು ನನ್ನೊಂದಿಗೆ ಮಾತನಾಡಿದರು ಎಂದು ರಿಷಬ್‌ ಶೆಟ್ಟಿ ರಜನಿಕಾಂತ್‌ ಅವರನ್ನು ಭೇಟಿ ಮಾಡಿದ್ದ ಕ್ಷಣವನ್ನು ನೆನಪಿಸಿಕೊಂಡರು.

IPL_Entry_Point