ಬೆಂಗಳೂರು ಕಾಲೇಜಿನಲ್ಲಿ ಕನ್ನಡ ಹಾಡುವಂತೆ ಸೋನು ನಿಗಮ್‌ಗೆ ಬೆದರಿಕೆ ಹಾಕಿದ ವಿದ್ಯಾರ್ಥಿ, ತಾಳ್ಮೆ ಕಳೆದುಕೊಂಡ ಗಾಯಕ
ಕನ್ನಡ ಸುದ್ದಿ  /  ಮನರಂಜನೆ  /  ಬೆಂಗಳೂರು ಕಾಲೇಜಿನಲ್ಲಿ ಕನ್ನಡ ಹಾಡುವಂತೆ ಸೋನು ನಿಗಮ್‌ಗೆ ಬೆದರಿಕೆ ಹಾಕಿದ ವಿದ್ಯಾರ್ಥಿ, ತಾಳ್ಮೆ ಕಳೆದುಕೊಂಡ ಗಾಯಕ

ಬೆಂಗಳೂರು ಕಾಲೇಜಿನಲ್ಲಿ ಕನ್ನಡ ಹಾಡುವಂತೆ ಸೋನು ನಿಗಮ್‌ಗೆ ಬೆದರಿಕೆ ಹಾಕಿದ ವಿದ್ಯಾರ್ಥಿ, ತಾಳ್ಮೆ ಕಳೆದುಕೊಂಡ ಗಾಯಕ

ನನಗೆ ಕನ್ನಡ ಹಾಡುಗಳನ್ನು ಹಾಡುವುದು ಇಷ್ಟ. ನಾನು ಕರ್ನಾಟಕದ ಜನರಿಗೆ ಗೌರವ ನೀಡುವೆ. ಆದರೆ, ನನಗೆ ಒಂದೊಮ್ಮೆ ಅಭಿಮಾನಿಯೊಬ್ಬರು ಕನ್ನಡ ಹಾಡನ್ನು ಹಾಡುವಂತೆ ಬೆದರಿಕೆ ಹಾಕಿದ್ದರು ಎಂದು ಸೋನು ನಿಗಮ್‌ ಹೇಳಿದ್ದಾರೆ.

ಬೆಂಗಳೂರು ಕಾಲೇಜಿನಲ್ಲಿ ಕನ್ನಡ ಹಾಡುವಂತೆ ಸೋನು ನಿಗಮ್‌ಗೆ ಬೆದರಿಕೆ ಹಾಕಿದ ವಿದ್ಯಾರ್ಥಿ
ಬೆಂಗಳೂರು ಕಾಲೇಜಿನಲ್ಲಿ ಕನ್ನಡ ಹಾಡುವಂತೆ ಸೋನು ನಿಗಮ್‌ಗೆ ಬೆದರಿಕೆ ಹಾಕಿದ ವಿದ್ಯಾರ್ಥಿ (AFP)

ಬೆಂಗಳೂರು: ಬೆಂಗಳೂರಿನ ಈಸ್ಟ್‌ ಪಾಯಿಂಟ್‌ ಕಾಲೇಜಿನಲ್ಲಿ ಇತ್ತೀಚೆಗೆ ಸೋನು ನಿಗಮ್‌ ಕಾರ್ಯಕ್ರಮ ನೀಡುತ್ತಿದ್ದರು. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಾನು ಕನ್ನಡಿಗರನ್ನು ಇಷ್ಟಪಡುವೆ ಎಂದು ಈ ವಿಡಿಯೋದಲ್ಲಿ ಸೋನು ನಿಗಮ್‌ ಹೇಳುತ್ತಿರುವುದನ್ನು ಕಾಣಬಹುದು. ಇವರು ಇಷ್ಟು ಹೇಳಿದರೂ ಹುಡುಗನೊಬ್ಬ ಕನ್ನಡದಲ್ಲಿ ಹಾಡಿ ಎಂದು ಕೆಟ್ಟದ್ದಾಗಿ ಹೇಳಿದಾಗ ಗಾಯಕ ತಾಳ್ಮೆ ಕಳೆದುಕೊಂಡಿದ್ದಾರೆ. ಪೆಹಲ್ಗಾಮ್‌ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.

ನಾನು ಕನ್ನಡ ಹಾಡುಗಳನ್ನು ಹಾಡಲು ಇಷ್ಟಪಡುವೆ. ನನಗೆ ಕರ್ನಾಟಕದ ಜನರ ಮೇಲೆ ಗೌರವವಿದೆ ಎಂದು ವಿಡಿಯೋದಲ್ಲಿ ಸೋನು ನಿಗಮ್‌ ಹೇಳಿದ್ದಾರೆ. "ನಾನು ಎಲ್ಲಾ ಭಾಷೆಗಳಲ್ಲಿಯೂ ಹಾಡುವೆ. ಆದರೆ, ನನ್ನ ಜೀವನದಲ್ಲಿ ಅತ್ಯುತ್ತಮ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದೇನೆ. ನಾನು ನಿಮ್ಮ ಕಡೆಗೆ ಅತ್ಯಂತ ಪ್ರೀತಿಯಿಂದ ಆಗಮಿಸುವೆ. ನಾನು ಪ್ರತಿದಿನ ಶೋಗಳನ್ನು ನೀಡುತ್ತಿರುತ್ತೇನೆ. ಆದರೆ, ಕರ್ನಾಟಕದಲ್ಲಿ ಎಲ್ಲಿಯಾದರೂ ಶೋ ನಡೆಸಲು ಇದ್ದರೆ ತುಂಬಾ ಗೌರವದಿಂದ ಬರುವೆ. ಏಕೆಂದರೆ, ನೀವೆಲ್ಲ ನಮ್ಮನ್ನು ನಿಮ್ಮ ಕುಟುಂಬದವರನ್ನಾಗಿ ಮಾಡಿದ್ದೀರಿ" ಎಂದು ಸೋನು ನಿಗಮ್‌ ಹೇಳಿದ್ದಾರೆ.

ಬಾಲಕನಿಂದ ಬೆದರಿಕೆ

ಕನ್ನಡದಲ್ಲಿ ಹಾಡುವಂತೆ ಅಭಿಮಾನಿಯೊಬ್ಬ ಹೇಗೆ ಬೆದರಿಕೆ ಹಾಕಿದ್ದಾನೆ ಎಂಬ ಅನುಭವವನ್ನು ಸೋನು ನಿಗಮ್‌ಹಂಚಿಕೊಂಡಿದ್ದಾರೆ. "ನನಗೆ ಬೆದರಿಕೆ ಹಾಕಿದ ಹುಡುಗ ಚಿಕ್ಕವ. ಅವ ಹುಟ್ಟುವ ಮೊದಲೇ ನಾನು ಕನ್ನಡ ಹಾಡುಗಳನ್ನು ಹಾಡುತ್ತಿದ್ದೆ. ಅವನು ಅತ್ಯಂತ ಕೆಟ್ಟದಾಗಿ ನನಗೆ ಬೆದರಿಕೆ ಹಾಕಿ. ಕನ್ನಡ ಕನ್ನಡ ಎಂದು ಬೊಬ್ಬೆ ಹೊಡೆಯುತ್ತಿದ್ದ. ಪೆಹಲ್ಗಾಮ್‌ನಲ್ಲಿ ಏನು ನಡೆಯಿತು. ನೀನು ಈಗ ಏನು ಮಾಡಿದೆ. ನಿನ್ನ ಮುಂದೆ ಯಾರು ನಿಂತಿದ್ದಾರೆ ಎಂದು ಮೊದಲು ನೋಡು" ಎಂದು ಸೋನು ನಿಗಮ್‌ ಆ ವಿದ್ಯಾರ್ಥಿಗೆ ಕಿವಿಮಾತು ಹೇಳಿದ್ದಾರೆ.

ನಾನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅಲ್ಲಿ ಕನ್ನಡ ಅಭಿಮಾನಿ ಇದ್ದರೆ ನಾನು ಯಾವ ರೀತಿ ಹಾಡುವೆ ಎಂದೂ ಅವರು ಹೇಳಿದ್ದಾರೆ. "ನಾನು ಜಗತ್ತಿನ ಎಲ್ಲೆಡೆ ಹೋದರೂ, ಅಲ್ಲಿ ಹದಿನಾಲ್ಕು ಸಾವಿರ ಜನರಿದ್ದರೂ ಅವರ ನಡುವೆ ಒಂದು ಧ್ವನಿ ಕನ್ನಡ ಎಂದು ಬಂದರೂ ನಾನು ಒಬ್ಬ ಕನ್ನಡಿಗ ಅಭಿಮಾನಿಗಾಗಿ ಕನ್ನಡ ಹಾಡು ಹಾಡುವೆ. ನಾನು ನಿಮ್ಮೆಲ್ಲರನ್ನು ತುಂಬಾ ಪ್ರೀತಿಸುವೆ ಮತ್ತು ಗೌರವಿಸುವೆ" ಎಂದು ಅವರು ಹೇಳಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in