Ananya Serial: ಪಾರು ಎಲ್ಲಿ ಎಂದು ಹುಡುಕಲು ಬಂದ ಅಣ್ಣಂದಿರು, ಮೂಟೆಯಲ್ಲಿ ಕಟ್ಟಿ ಹೊತ್ತೊಯ್ದ ಶಿವು
Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಶಿವು ಹಾಗೂ ಪಾರ್ವತಿ ಸಂಕಷ್ಟದಲ್ಲಿದ್ದಾರೆ. ಶಿವು ಮಾಡಬೇಕಾದ ಕೆಲಸ ಮಾಡಿ ಮುಗಿಸಿದರೂ ಅವನೊಳಗೆ ಆತಂಕ ಇದೆ. ಪಾರುವನ್ನು ಹೇಗೆ ಪಾರ್ ಮಾಡ್ತಾನೆ? ಎಂದು ಕಾದು ನೋಡಬೇಕಿದೆ.
ಪಾರ್ವತಿ ತನ್ನ ಕರ್ತವ್ಯ ಮಾಡಿದ್ದಾಳೆ
ಪಾರ್ವತಿ ತನ್ನ ಕರ್ತವ್ಯ ಮಾಡಿದ್ದಾಳೆ. ಅವಳು ಹೆರಿಗೆ ಮಾಡಿಸಿದ್ದಾಳೆ. ಶಿವು ಅದಕ್ಕೆ ಸಹಾಯ ಮಾಡಿದ್ದಾನೆ. ಅಲ್ಲಿ ಬಂದ ರೌಡಿಗಳನ್ನು ಹೊಡೆಯುತ್ತಾ, ಆ ಸ್ಥಳದ ರಕ್ಷಣೆ ಮಾಡಿದ್ದಾನೆ. ಇನ್ನು ಇತ್ತ ರಶ್ಮಿ ಸೀನ ಯಾರಿಗೆ ಚಾಕ್ಲೇಟ್ ತಗೊಂಡು ಹೋಗುತ್ತಾನೆ ಎಂದು ಅವನ ಹಿಂದೆ ಬಿದ್ದಿದ್ದಾಳೆ. ಆಗ ಅವನು ಭಯವಾಗಿ ಚಾಕ್ಲೇಟ್ ಕೊಟ್ಟಿದ್ದಾನೆ. ಅವಳ ಜೊತೆ ತುಂಬಾನೇ ನಯವಾಗಿ ಮಾತನಾಡಿದ್ದಾನೆ. ಅದನ್ನು ನೋಡಿ ಅವಳಿಗೆ ಅನುಮಾನ ಬರುತ್ತದೆ. ಇವನು ಯಾಕೆ ಈ ರೀತಿ ಆಡ್ತಾ ಇದ್ದಾನೆ ಅಂತ. “ಇರು ನಾನು ಮಾದಪ್ಪನಿಗೆ ಹೇಳ್ತೀನಿ” ನೀನು ಏನ್ ಮಾಡ್ತಾ ಇದ್ದೀಯಾ ಅಂತ ಎಂದು ಹೇಳುತ್ತಾಳೆ.
ಪಾರು ತನ್ನ ಪ್ರಿಯತಮನನ್ನು ಪರಿಚಯಿಸಿದ್ದಾಳೆ
ಅದಕ್ಕೆ ಅವನ ಭಯಪಟ್ಟುಕೊಂಡು ಅಲ್ಲಿಂದ ಓಡಿ ಹೋಗುತ್ತಾನೆ. ಪಾರು ಶಿವನಿಗೆ ತನ್ನ ಹುಡುಗ ಯಾರು ಎಂಬುದನ್ನು ತಿಳಿಸಿಕೊಟ್ಟಿದ್ದಾಳೆ. ಇವರೇ ಸಿದ್ದಾರ್ಥ ನಾನು ತುಂಬಾ ಇಷ್ಟ ಪಡುತ್ತಿದ್ದೇನೆ, ನಿನ್ನ ಹತ್ತಿರವೂ ಈ ಹಿಂದೆ ಹೇಳಿದ್ದೇನೆ. ನಾವು ಇಷ್ಟಪಟ್ಟವರನ್ನು ಮದುವೆಯಾಗಲು ಸಿಗುವುದು ಅದೃಷ್ಟ ಅಂತ ನಾನು ಹೇಳ್ತಾ ಇರೋದು ಇವರ ಬಗ್ಗೇನೇ ಎಂದು ಹೇಳುತ್ತಾಳೆ. ಇವರೇ ನಾನು ಮದುವೆಯಾಗಬೇಕಿರುವ ಹುಡುಗ ಎಂದು ಅವಳು ಹೇಳುತ್ತಾಳೆ. ಅದನ್ನ ಕೇಳಿ ಅಣ್ಣನಿಗೆ ತುಂಬಾ ಬೇಸರಾಗುತ್ತದೆ. ಅವನು ಕಂಡ ಕನಸುಗಳೆಲ್ಲ ನುಚ್ಚು ನೂರಾದ ಹಾಗೆ ಅವನಿಗೆ ಭಾಸವಾಗುತ್ತದೆ.
ಮನೆಯಲ್ಲಿ ಮದುವೆ ವಿಚಾರ
ಇನ್ನು ಇತ್ತ ಮನೆಯಲ್ಲಿ ಪಾರು ಮದುವೆ ವಿಚಾರವನ್ನು ಎಲ್ಲರೂ ಮಾತನಾಡುತ್ತಾ ಇರುತ್ತಾರೆ. ಆದರೆ ಸೋಮೇಗೌಡ ಮಾತ್ರ ಪಾರ್ವತಿಯನ್ನೇ ಹುಡುಕುತ್ತಾ ಇರುತ್ತಾನೆ. ಅದು ಪಾರು ತಂದೆಗೆ ಅರ್ಥವಾಗುತ್ತದೆ. ಆಗ ನನ್ನ ಮಗಳು ದೇವಸ್ಥಾನಕ್ಕೆ ಹೋಗಿದ್ದಾಳೆ ಎಂದು ಹೇಳುತ್ತಾನೆ. ಅವರ ಮನೆ ಅಜ್ಜಿ ಹೇಳುತ್ತಾರೆ, “ಈ ರೀತಿ ಸಂಸ್ಕಾರ ಇರಬೇಕು ನಾನು ಕಲಿತಿದ್ದೇನೆ ಅನ್ನೋ ದರ್ಪ ಇರ್ಬಾರ್ದು. ಇದೇ ರೀತಿ ಹುಡುಗಿನೆ ನಮಗೆ ಬೇಕಾಗಿರೋದು. ಒಳ್ಳೇದಾಯ್ತು ಅವಳು ದೇವಸ್ಥಾನಕ್ಕೆ ಹೋಗಿದ್ದು” ಎಂದು ಹೇಳುತ್ತಾರೆ.
ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.