Annayya Serial: ಜಿಮ್ ಸೀನ ಹಾಗೂ ಪಿಂಕಿ ಪ್ರಣಯ ಪ್ರಸಂಗ; ಶಿವು ಬಚ್ಚಿಟ್ಟ ಗುಟ್ಟು ರಟ್ಟಾಗುವ ಸಮಯ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಜಿಮ್ ಸೀನ ತನ್ನ ಪ್ರೇಯಸಿ ಜತೆ ಇರುವುದನ್ನು ರಶ್ಮಿ ಕಂಡಿದ್ದಾಳೆ. ಇತ್ತ ಶಿವು ಗುಟ್ಟಾಗಿ ಹಣದ ವಿಚಾರ ಮಾತಾಡುವಾಗ ಪಾರು ಅವನ ಹಿಂದೆ ಹೋಗಿ ನಿಂತಿದ್ದಾಳೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿ ಮದುವೆ ಮಾಡಿಸಲು ಒಂದಷ್ಟು ಹಣ ಕೂಡಿಸುತ್ತಿದ್ದಾನೆ. ಆದರೆ ಮನೆಯಲ್ಲಿ ಯಾರಿಗೂ ವರದಕ್ಷಿಣೆ ವಿಚಾರ ಗೊತ್ತಾಗದ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾನೆ, ಆದರೆ ಶಿವು ಬರುತ್ತಿದ್ದ ಪೋನ್ ಗಮನಿಸಿ ಪಾರುಗೆ ಈಗಾಗಲೇ ಅನುಮಾನ ಆರಂಭ ಆಗಿತ್ತು. ಶಿವು ಯಾರದೋ ಜತೆ ಗುಟ್ಟು ಗುಟ್ಟಾಗಿ ಮಾತಾಡುತ್ತಾನೆ ಎಂದು ಪಾರು ಈ ಹಿಂದೆಯೇ ಗಮನಿಸಿದ್ದಳು. ಇತ್ತ ರಶ್ಮಿ ತಾನು ಮದುವೆ ಆಗುವುದರೊಳಗೆ ಸಣ್ಣ ಆಗಬೇಕು ಎಂದು ತುಂಬಾ ಪ್ರಯತ್ನ ಮಾಡುತ್ತಿದ್ದಾಳೆ. ಅವಳಿಗೆ ಈಗ ಜಿಮ್‌ಗೆ ಹೋಗಬೇಕು ಎಂದೆನಿಸಿದೆ. ಆದರೆ ಅಲ್ಲಿ ಮತ್ತೆ ಜಿಮ್ ಸೀನ ಏನಾದರೂ ಮಾತಾಡಿದರೆ ಎಂದು ಅಂಜಿಕೆಯೂ ಇದೆ. ಹಾಗಿದ್ದರೂ ಅವಳು ಜಿಮ್‌ಗೆ ಹೋಗುತ್ತಾಳೆ.
ಜಿಮ್ ಸೀನ ಹಾಗೂ ಪಿಂಕಿ ಪ್ರಣಯ
ಜಿಮ್ ಸೀನ ತನ್ನ ಪ್ರೇಯಸಿ ಜತೆ ಅಲ್ಲಿ ಏಕಾಂತದಲ್ಲಿರುತ್ತಾನೆ. ರಶ್ಮಿಗೆ ಈ ಯಾವ ವಿಚಾರವೂ ಗೊತ್ತಿರೋದಿಲ್ಲ. ಸೀನ ಅಲ್ಲಿ ಇದ್ದಾನೆ ಎಂದೂ ಅವಳಿಗೆ ಮೊದಲು ತಿಳಿದಿರುವುದಿಲ್ಲ, ಆದರೆ ಸೀನ ಮತ್ತು ಪಿಂಕಿ ಇಬ್ಬರೂ ಮಾತಾಡುತ್ತಾ ನಿಂತಿರುತ್ತಾರೆ. “ಪಿಂಕಿ ಬೇಬಿ ಅಂತೂ ನಾವ್ ಅಂದ್ಕೊಂಡಾಗೇ ಒಂದಾಗ್ತಾ ಇದೀವಿ ಅಲ್ವಾ?” ಎಂದು ಅವನು ಪ್ರಶ್ನೆ ಮಾಡುತ್ತಾನೆ. ಆಗ ಅವಳು “ಇದೇ ಖುಷಿಗೆ ಏನೂ ಇಲ್ವಾ? ಒಂದು ಮುತ್ ಕೊಡೋ” ಎಂದು ಕೇಳುತ್ತಾಳೆ. ಆಗ ಅಲ್ಲಿಗೆ ರಶ್ಮಿ ಬರುತ್ತಾಳೆ. ನಾಚಿಕೆ ಆಗುತ್ತದೆ ಎಂದು ಸೀನ ಕಣ್ಣು ಮುಚ್ಚಿಕೊಂಡು ಪಿಂಕಿಗೆ ಮುತ್ತು ಕೊಡುತ್ತಾ ಇರುತ್ತಾನೆ. ಅದನ್ನು ರಶ್ಮಿ ನೋಡಿದ್ದಾಳೆ.
ಇತ್ತ ಮಾದಪ್ಪಣ್ಣನಿಗೆ ಶಿವು ಕಾಲ್ ಮಾಡಿ ಹಣದ ವಿಚಾರ ಮಾತಾಡುತ್ತಾ ಇರುತ್ತಾನೆ. ಪಾರು ವಿದೇಶಕ್ಕೆ ಹೋಗುತ್ತಾಳೆ ಎಂದು ಆಗ ಅಡ ಇಟ್ಟಿದ್ದ ಮನೆ ಪತ್ರ ಕೂಡ ಈಗ ತನ್ನ ಬಳಿಯೇ ಇದೆ ಎಂದ ಹೇಳುತ್ತಿರುತ್ತಾನೆ ಆಗ ಹಿಂದಿನಿಂದ ಪಾರು ಬಂದಿದ್ದಾಳೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
