Kannada Serial TRP: ಅಣ್ಣಯ್ಯನಿಗೆ ಖುಲಾಯಿಸಿದ ಅದೃಷ್ಟ, ಚೇತರಿಸಿಕೊಂಡ ಸೀತಾ ರಾಮ; ಹೀಗಿದೆ ಟಾಪ್ 10 ಕನ್ನಡ ಧಾರಾವಾಹಿಗಳ ಟಿಆರ್‌ಪಿ
Kannada Serial TRP: 2025ರ ಎರಡನೇ ವಾರದ ಕನ್ನಡ ಸೀರಿಯಲ್ ಟಿಆರ್‌ಪಿ ಲೆಕ್ಕಾಚಾರದಲ್ಲಿ ಟಾಪ್ 10ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ? ಅವುಗಳಲ್ಲಿ ಜೀ ಕನ್ನಡದ ಧಾರಾವಾಹಿಗಳೆಷ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳೆಷ್ಟು? ಇಲ್ಲಿದೆ ವಿವರ.

Kannada Serial TRP: ಕನ್ನಡ ಕಿರುತೆರೆ ಧಾರಾವಾಹಿಗಳ ಎರಡನೇ ವಾರದ ಟಿಆರ್‌ಪಿ ರೇಟಿಂಗ್ ಹೊರಬಿದ್ದಿದೆ. ಘಟಾನುಘಟಿ ಸೀರಿಯಲ್‌ಗಳನ್ನೇ ಹಿಂದಿಕ್ಕಿ ಇತ್ತೀಚಿಷ್ಟೇ ಶುರುವಾದ ಕಥೆಯೊಂದು ನಂಬರ್ 1 ಪಟ್ಟಕ್ಕೇರಿದೆ. ಅಚ್ಚರಿಯ ವಿಚಾರ ಏನೆಂದರೆ, ರೇಟಿಂಗ್‌ನಲ್ಲಿ ಕುಸಿತ ಕಾಣುತ್ತಿದ್ದ ಸೀತಾ ರಾಮ ಸೀರಿಯಲ್ ಕೊಂಚ ಚೇತರಿಕೆ ಕಂಡಿದೆ. ಹಾಗಾದರೆ, 2025ರ ಎರಡನೇ ವಾರದ (Kannada Serial TRP Rating 2025 Week 2) ಟಿಆರ್‌ಪಿಯಲ್ಲಿ ಟಾಪ್ 10ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ? ಅವುಗಳಲ್ಲಿ ಜೀ ಕನ್ನಡದ ಧಾರಾವಾಹಿಗಳೆಷ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳೆಷ್ಟು? ಇಲ್ಲಿದೆ ವಿವರ.
ಅಣ್ಣಯ್ಯ: ಜೀ ಕನ್ನಡದ ಪ್ರಮುಖ ಧಾರಾವಾಹಿ ಎನಿಸಿಕೊಂಡಿರುವ ಅಣ್ಣಯ್ಯ (Annayya Serial) ಈಗ ಮೊದಲ ಸಲ ನಂ 1 ಸೀರಿಯಲ್ ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಈ ಸೀರಿಯಲ್ 7.9 ಟಿಆರ್‌ಪಿ ರೇಟಿಂಗ್ ಪಡೆದು ಮೊದಲ ಸ್ಥಾನಕ್ಕೆ ಜಿಗಿದಿದೆ.
ಲಕ್ಷ್ಮೀ ನಿವಾಸ: ಜೀ ಕನ್ನಡದ ಮತ್ತೊಂದು ಒಂದು ಗಂಟೆಯ ಅವಧಿಯ ಹಿಟ್ ಸೀರಿಯಲ್ ಲಕ್ಷ್ಮೀ ನಿವಾಸ (Lakshmi Nivasa Serial), ಸದಾ ಮೊದಲ ಸ್ಥಾನದಲ್ಲಿಯೇ ಇತ್ತು. ಇದೀಗ ಇತ್ತೀಚಿನ ಕೆಲ ವಾರಗಳಿಂದ ಅದೇ ಸೀರಿಯಲ್‌ಗೆ ಟಫ್ ಕಾಂಪಿಟೇಷನ್ ನೀಡುತ್ತಿವೆ ಹಲವು ಸೀರಿಯಲ್. ಅದರಂತೆ ಎರಡನೇ ವಾರ ಈ ಸೀರಿಯಲ್‌ಗೆ 7.7 ರೇಟಿಂಗ್ ಸಿಕ್ಕಿದ್ದು ಎರಡನೇ ಸ್ಥಾನದಲ್ಲಿದೆ.
ಅಮೃತಧಾರೆ: ಅಮೃತಧಾರೆ ಸೀರಿಯಲ್ (Amruthadhaare Serial) ಸದ್ಯ ಕಿರುತೆರೆ ವೀಕ್ಷಕರ ಸೆನ್ಸೆಷನ್ ಆಗಿ ಬದಲಾಗಿದೆ. ಅಚ್ಚರಿಯ ಕಥೆ, ಬೆರಗುಗೊಳಿಸುವ ಟ್ವಿಸ್ಟ್‌ಗಳಿಂದ ನೋಡುಗರ ಗಮನ ಸೆಳೆದಿದೆ. ಈಗ ಇದೇ ಸೀರಿಯಲ್ 7.6 ಟಿಆರ್‌ಪಿ ಪಡೆದು, ಮೂರನೇ ಸ್ಥಾನದಲ್ಲಿದೆ.
ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಮತ್ತೊಂದು ನವಿರು ಕಥೆಯ ಸೀರಿಯಲ್ ಅದು ಶ್ರಾವಣಿ ಸುಬ್ರಮಣ್ಯ (Shravani Subramanya Serial) . ಸದ್ಯ ಈ ಸೀರಿಯಲ್ ಟಿಆರ್‌ಪಿಯಲ್ಲಿ 7.0 ರೇಟಿಂಗ್ ಪಡೆದು ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ರಾಮಾಚಾರಿ: ಟಾಪ್ ಐದರಲ್ಲಿ ಕಲರ್ಸ್ ಕನ್ನಡದ ರಾಮಾಚಾರಿ ಸೀರಿಯಲ್ (Ramachari Serial) ಸ್ಥಾನ ಪಡೆದುಕೊಂಡಿದೆ. ಈ ಸೀರಿಯಲ್ 6.2 ರೇಟಿಂಗ್ ಪಡೆದು ಐದನೇ ಸ್ಥಾನದಲ್ಲಿದೆ.
ಸೀತಾ ರಾಮ ಮತ್ತು ಭಾಗ್ಯಲಕ್ಷ್ಮೀ ಸರಿಸಮ
ಜೀ ಕನ್ನಡದ ಸೀತಾ ರಾಮ ಸೀರಿಯಲ್ (Seetha Rama Serial) ಮತ್ತು ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ (Bhagyalakshmi Serial) ಎರಡನೇ ವಾರದ ಟಿಆರ್‌ಪಿಯಲ್ಲಿ 5.9 ರೇಟಿಂಗ್ ಪಡೆವ ಮೂಲಕ ಆರನೇ ಸ್ಥಾನದಲ್ಲಿವೆ. ಈ ಹಿಂದೆ ಸೀತಾ ರಾಮ ಸೀರಿಯಲ್ 10 ನೇ ಸ್ಥಾನದಲ್ಲಿತ್ತು. ಈಗ ಟ್ವಿಸ್ಟ್‌ಗಳ ಮೂಲಕ ಮೇಲಕ್ಕೆ ಜಿಗಿತ ಕಂಡಿದೆ.
ಪುಟ್ಟಕ್ಕನ ಮಕ್ಕಳು; ಜೀ ಕನ್ನಡದಲ್ಲಿ ಒಂದು ಕಾಲದ ನಂಬರ್ 1 ಸೀರಿಯಲ್ ಆಗಿದ್ದ ಪುಟ್ಟಕ್ಕನ ಮಕ್ಕಳು (Puttakkana Makkalu Serial), ಸ್ಲಾಟ್ ಬದಲಾವಣೆ ಆಗಿದ್ದರಿದ ಕುಸಿತ ಕಂಡಿತ್ತು. ಆದರೂ ತನ್ನ ಸ್ಪರ್ಧೆ ಮುಂದುವರಿಸಿದೆ. ಅಂದಹಾಗೆ ಈ ಸೀರಿಯಲ್ 5.8 ಟಿಆಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
ಲಕ್ಷ್ಮೀ ಬಾರಮ್ಮ, ನಿನಗಾಗಿ: ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ (Lakshmi Baramma Serial) ಮತ್ತು ನಿನಗಾಗಿ (Ninagagi Serial) ಧಾರಾವಾಹಿಗಳು ಈ ತಿಂಗಳ ಎರಡನೇ ವಾರದಲ್ಲಿ ಸರಿ ಸಮಯ ಟಿಆರ್‌ಪಿ ಸಾಧಿಸಿವೆ. 5.2 ಟಿಆರ್‌ಪಿ ಪಡೆವ ಮೂಲಕ ಎಂಟನೇ ಸ್ಥಾನದಲ್ಲಿವೆ.
ಬ್ರಹ್ಮಗಂಟು: ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿರುವ ಬ್ರಹ್ಮಗಂಟು (Bramhagantu Serial) ಸೀರಿಯಲ್ 5.0 ಟಿಆರ್‌ಪಿ ಪಡೆದು ಏರಿಕೆಯತ್ತ ಸಾಗುತ್ತಿದೆ. ಈ ಸೀರಿಯಲ್ 9ನೇ ಸ್ಥಾನದಲ್ಲಿದೆ.
ನೂರು ಜನ್ಮಕೂ: ಇನ್ನು ಕಲರ್ಸ್ ಕನ್ನಡದಲ್ಲಿ ಕಳೆದ ತಿಂಗಳು ಆರಂಭವಾದ ನೂರು ಜನ್ಮಕೂ (Nooru Janmaku Serial) ಸೀರಿಯಲ್ 4.6 ಟಿಆರ್‌ಪಿ ಪಡೆದು, ಹತ್ತನೇ ಸ್ಥಾನದಲ್ಲಿದೆ.

ವಿಭಾಗ