ಅಣ್ಣಯ್ಯ ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಬಾಳ ಸಂಗಾತಿಯಾಗಲಿದ್ದಾರಾ ಶಿವು, ಪಾರು? ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಜೋಡಿ
ಕನ್ನಡ ಸುದ್ದಿ  /  ಮನರಂಜನೆ  /  ಅಣ್ಣಯ್ಯ ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಬಾಳ ಸಂಗಾತಿಯಾಗಲಿದ್ದಾರಾ ಶಿವು, ಪಾರು? ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಜೋಡಿ

ಅಣ್ಣಯ್ಯ ಧಾರಾವಾಹಿಯಲ್ಲಿ ಮಾತ್ರವಲ್ಲ, ನಿಜ ಜೀವನದಲ್ಲೂ ಬಾಳ ಸಂಗಾತಿಯಾಗಲಿದ್ದಾರಾ ಶಿವು, ಪಾರು? ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ಜೋಡಿ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವ ವಿಕಾಶ್‌ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ವಿಕಾಶ್ ಹಾಗೂ ನಿಶಾ
ರೋಮ್ಯಾಂಟಿಕ್ ವಿಡಿಯೋ ಹಂಚಿಕೊಂಡ ವಿಕಾಶ್ ಹಾಗೂ ನಿಶಾ

ಅಣ್ಣಯ್ಯ ಧಾರಾವಾಹಿಯಲ್ಲಿ ಒಟ್ಟಾಗಿ ಅಭಿನಯಿಸುತ್ತಿರುವ ವಿಕಾಶ್‌ ಉತ್ತಯ್ಯ ಹಾಗೂ ನಿಶಾ ರವಿಕೃಷ್ಣ ನಿಜ ಜೀವನದಲ್ಲೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರಾ? ಎಂಬ ಅನುಮಾನ ಆರಂಭವಾಗಿದೆ. ಸಾಕಷ್ಟು ಬಾರಿ ಈ ಪ್ರಶ್ನೆಯನ್ನು ಅವರಿಬ್ಬರಿಗೆ ಕೇಳಲಾಗಿದೆ. ಆದರೆ, ಯಾವುದೇ ಸ್ಪಷ್ಟ ಉತ್ತರ ಬಂದಿಲ್ಲ. ಆದರೂ, ಅವರಿಬ್ಬರು ಪ್ರೀತಿಸುತ್ತಿರಬಹುದು ಎಂಬ ಕೆಲ ಸೂಚನೆಗಳು ಲಭ್ಯವಾಗಿದೆ. ವಿಕಾಶ್‌ ಅವರ ಸಿನಿಮಾ ಬಿಡುಗಡೆಯಾದಾಗ ನಿಶಾ ನೀಡಿದ ಪ್ರತಿಕ್ರಿಯೆ ಹಾಗೂ ಚಿತ್ರಮಂದಿರದಲ್ಲಿ ಅವರಿಬ್ಬರು ಕೈ ಕೈ ಹಿಡಿದುಕೊಂಡ ವಿಡಿಯೋ ಒಂದು ವೈರಲ್ ಆಗಿತ್ತು. ಅದಾದ ನಂತರ ರಿಯಾಲಿಟಿ ಶೋದಲ್ಲಿ ಪ್ರಶ್ನೆ ಮಾಡಲಾಗಿತ್ತು.

ಒಮ್ಮೆ ಕಲರ್ಸ್ ಕನ್ನಡ ನಡೆಸಿದ ಕಾರ್ಯಕ್ರಮವೊಂದರಲ್ಲ ನಿಶಾ ಅವರ ತಾಯಿಗೆ ಕಾಲ್ ಮಾಡಿ “ನಾನು ಒಬ್ಬರನ್ನು ಪ್ರೀತಿಸ್ತಾ ಇದ್ದೀನಿ" ಎಂದು ಹೇಳುವ ಸವಾಲು ನೀಡಲಾಗಿತ್ತು ಆಗ ನಿಶಾ ಕಾಲ್ ಮಾಡಿದಾಗ ಅವರ ತಾಯಿ ಈ ಮಾತಿಗೆ ಆಶ್ಚರ್ಯ ವ್ಯಕ್ತಪಡಿಸಲಿಲ್ಲ. ಹೊರತಾಗಿ ಗಾಬರಿಯೂ ಆಗಿರಲಿಲ್ಲ. ಇದೇನು ಹೊಸ ವಿಷಯ ಅಲ್ಲ ನನಗೆ ಮೊದಲೇ ಗೊತ್ತಿದೆ ಎನ್ನುವ ರೀತಿಯಲ್ಲಿ ಮಾತಾಡಿದ್ದರು. ಈ ಎಲ್ಲ ಕಾರಣದಿಂದ ಅನುಮಾನ ಇನ್ನಷ್ಟು ಬಲಗೊಂಡಿತ್ತು.

ಒಟ್ಟಾಗಿ ವಿಡಿಯೋ ಹಂಚಿಕೊಂಡ ವಿಕಾಶ್, ನಿಶಾ

ಇದೀಗ ಇವರಿಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರೇ ಏಕಾಂತದಲ್ಲಿ ಸಮಯ ಕಳೆಯುತ್ತಿರುವ ರೀತಿಯ, ಅವರದೇ ಆದ ಪ್ರಪಂಚದಲ್ಲಿ ಮುಳುಗಿರುವ ಭಾವನೆಯ ದೃಶ್ಯಗಳನ್ನು ಹೊಂದಿರುವ ವಿಡಿಯೋ ಇದಾಗಿದೆ. ಸಾಕಷ್ಟು ಜನ ಈ ವಿಡಿಯೋಗೆ ಕಾಮೆಂಟ್ ಮಾಡಿ ನಿಮ್ಮಿಬ್ಬರ ಜೋಡಿ ನೋಡಲು ಚಂದ ಎಂದಿದ್ದಾರೆ. ಇನ್ನು ಕೆಲವರು ನಿಮ್ಮದು ನಿಜವಾಗಿಯೂ ಲವ್ ತಾನೇ? ಎಂದು ಪ್ರಶ್ನೆ ಮಾಡಿದ್ದಾರೆ.ಇನ್ನೊಂದಷ್ಟು ಜನ ಕ್ಯೂಟ್‌ ಎಂದು ಕಾಮೆಂಟ್ ಮಾಡಿದ್ದಾರೆ. ಧಾರಾವಾಹಿಯಲ್ಲಿ ಶಿವು, ಪಾರುವಾಗಿ ಮಾತ್ರವಲ್ಲ. ನಿಜ ಜೀವನದಲ್ಲಿ ವಿಕಾಶ್‌ ಮತ್ತು ನಿಶಾ ಜೋಡಿಯಾದರೂ ಸಾಕಷ್ಟು ಜನ ಖುಷಿ ಪಡುತ್ತಾರೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Suma Gaonkar

eMail
Whats_app_banner