Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಶಿವು ಪ್ರೀತಿಸಿದ ಹುಡುಗಿ ತಾನೇ ಎಂದು ತಿಳಿದ ಪಾರು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಶಿವು ಪ್ರೀತಿಸಿದ ಹುಡುಗಿ ತಾನೇ ಎಂದು ತಿಳಿದ ಪಾರು

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು; ಶಿವು ಪ್ರೀತಿಸಿದ ಹುಡುಗಿ ತಾನೇ ಎಂದು ತಿಳಿದ ಪಾರು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಎಲ್ಲ ಸತ್ಯ ಗೊತ್ತಾಗಿದೆ. ಜೀ ಕನ್ನಡ ಬಿಡುಗಡೆ ಮಾಡಿದ ಪ್ರೋಮೋ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪಾರುವಿನ ನವಿರಾದ ಪ್ರೀತಿಯ ಭಾವನೆ ಎದ್ದು ತೋರುತ್ತಿದೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು
ಅಣ್ಣಯ್ಯ ಧಾರಾವಾಹಿಯಲ್ಲಿ ಮಹಾ ತಿರುವು (Zee Kannada)

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಈಗ ಎಲ್ಲ ಸತ್ಯ ಗೊತ್ತಾಗಿದೆ. ಪಾರು ಮನೆಯಲ್ಲಿರುವ ತನ್ನ ನಾದಿನಿಯರಷ್ಟೇ ಯಾಕೆ ಕೆಲಸ ಮಾಡಬೇಕು? ನಾನೂ ಅವರಿಗೆ ಸಹಾಯ ಮಾಡುತ್ತೇನೆ ಎಂದುಕೊಂಡು ಕೆಲಸ ಮಾಡಲು ಮುಂದಾಗುತ್ತಾಳೆ. ಆಗ ಕೈಗೆಟುಕದ ಒಂದು ವಸ್ತುವನ್ನು ತೆಗೆಯುವ ಪ್ರಯತ್ನ ಮಾಡುತ್ತಾಳೆ. ಕಾಲ ಬಳಿ ಸ್ಟೂಲ್ ಇರುವುದಿಲ್ಲ. ಆ ಕಾರಣಕ್ಕಾಗಿ ಅಲ್ಲೇ ಪಕ್ಕದಲ್ಲಿದ್ದ ಒಂದು ಕಬ್ಬಿಣದ ಟ್ರಂಕ್ ತೆಗೆದುಕೊಂಡು ಕಾಲಡಿಯಲ್ಲಿ ಹಾಕಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆಗ ರಾಣಿ ಬಂದು “ಬೇಡ ಅತ್ಗೆ ಅದರ ಮೇಲೆ ಕಾಲಿಡಬೇಡಿ. ಅದರಲ್ಲಿ ನಮ್ಮ ಅಣ್ಣ ಚಿಕ್ಕಂದಿನಿಂದ ಪ್ರೀತಿಸಿದ ಹುಡುಗಿಯ ನೆನಪಿದೆ" ಎಂದು ಹೇಳುತ್ತಾಳೆ. ಆಗ ಅವಳು ತೆಗೆದು ನೋಡುತ್ತಾಳೆ.

ರಾಣಿ ನಗುವಲ್ಲೇ ಇತ್ತು ಉತ್ತರ

ತೆಗೆದು ನೋಡಿದರೆ ಪಾರು ಹಾಗೂ ಶಿವು ಚಿಕ್ಕಂದಿನಲ್ಲಿ ಆಟ ಆಡಿದ ವಸ್ತುಗಳು. ಪಾರು ಬಳಸಿದ ವಸ್ತು, ನವಿಲುಗರಿ ಹೀಗೆ ಸಾಕಷ್ಟು ವಸ್ತುಗಳು ಅಡಗಿರುತ್ತದೆ. ಆಗ ಪಾರುಗೆ ತಾನೇ ಶಿವು ಪ್ರೀತಿಸಿದ ಹುಡುಗಿ ಎಂದು ಅರ್ಥ ಆಗುತ್ತದೆ. “ಹಾಗಾದ್ರೇ ನಾನೇನಾ ಆ ಹುಡುಗಿ” ಎಂದು ಪ್ರಶ್ನೆ ಮಾಡಿಕೊಳ್ಳುತ್ತಾಳೆ. ರಾಣಿ ನಗುತ್ತಾಳೆ.

ದೇವಸ್ಥಾನಕ್ಕೆ ಹೋದ ಕುಟುಂಬ
ಅಣ್ಣಯ್ಯ ಹಾಗೂ ಎಲ್ಲ ತಂಗಿಯರ ಜೊತೆ ಪಾರು ಕೂಡ ದೇವಸ್ಥಾನಕ್ಕೆ ಹೋಗುತ್ತಾಳೆ. ಆದರೆ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಅವಳಿಗೆ ಏನೋ ತೋರಿಸ್ತೀನಿ ಬಾ ಎಂದು ರಶ್ಮಿ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ಒಂದು ದೊಡ್ಡ ಕಲ್ಲಿನ ಬಂಡೆ ಮೇಲೆ ಶಿವು, ಪಾರು ಎಂದು ಬರೆದುಕೊಂಡಿರುತ್ತದೆ. ಆದರೆ ಪಾರು ಎಂದು ಬರೆದ ಹೆಸರನ್ನು ಅಳಿಸಿರುತ್ತಾರೆ. ಅದನ್ನು ನೋಡಿ ಪಾರು ತನ್ನ ಹೆಸರನ್ನು ಇನ್ನಷ್ಟು ಅಚ್ಚಾಗಿಸಿಕೊಂಡು ಪ್ರೀತಿಯನ್ನು ಒಪ್ಪಿಕೊಂಡಿದ್ದಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner