Annayya Serial: ಅತ್ತರೂ ಕರಗದ ಪ್ರೀತಿ; ಪಾರು ಒಡಲ ಸಂಕಟ ನೋಡಿ ಶಿವು ಬೇಸರ - ಹಣಕ್ಕಾಗಿ ಪ್ರೀತಿ ಮಾರಿಕೊಂಡ ಸಿದ್ದಾರ್ಥ್
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಅಳುತ್ತಿದ್ದಾಳೆ. ಅವಳ ಪ್ರೀತಿಯ ಅರಮನೆ ಕುಸಿದು ಹೋಗಿದೆ. ಅವಳು ಇಷ್ಟು ದಿನ ಸಿದ್ದಾರ್ಥ್ ಬರುತ್ತಾನೆ ಎಂಬ ನಂಬಿಕೆಯಲ್ಲಿ ಜೀವನ ನಡೆಸುತ್ತಿದ್ದಳು ಆದರೆ ಈಗ ಎಲ್ಲ ಮಾಯ.
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತುಂಬಾ ನೊಂದಿದ್ದಾಳೆ. ಸಾಕಷ್ಟು ದಿನ ಕಾದರೂ ಸಿದ್ದಾರ್ಥ್ ಬಾರದೇ ಇರುವುದು ಅವಳಿಗೆ ತುಂಬಾ ಕಷ್ಟ ಆಗಿತ್ತು. ಆದರೆ ಮೆಡಿಕಲ್ ಕ್ಯಾಂಪ್ ನೆಪದಲ್ಲಿ ಅವಳು ಪೇಟೆಗೆ ಹೋಗಿದ್ದಕ್ಕಾಗಿ ಅವಳಿಗೆ ಸತ್ಯ ಗೊತ್ತಾಗುವ ಹಾಗಾಯ್ತು. ಸತ್ಯ ತಿಳಿದ ನಂತರ ಅವಳನ್ನು ಅವಳ ಹತ್ತಿರವೇ ನಿಯಂತ್ರಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರೀತಿಸಿ ಮೋಸ ಮಾಡಿದ ಸಿದ್ದಾರ್ಥ್ ಎಂದು ಅವಳ ಹತ್ತಿರ ನಂಬಲು ಕಷ್ಟವಾಗುತ್ತಿದೆ.
ಅಣ್ಣಯ್ಯ ಅವಳಿಗೆ ಸಮಾಧಾನ ಮಾಡಿಕೊಂಡು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಕರೆದುಕೊಂಡು ಬರ್ತಾನೆ. ಆದರೆ ಅವಳು ದಾರಿಯುದ್ದಕ್ಕೂ ಸಿದ್ದಾರ್ಥ್ ಮೋಸ ಮಾಡಿದ ಅನ್ನೋದನ್ನು ನೆನೆಸಿಕೊಂಡು ಕೊರಗುತ್ತಾಳೆ. ಒಮ್ಮೆಲೆ ಅವಳ ಅಳುವು ನಗುವಾಗಿ ಪರಿವರ್ತನೆ ಆಗುತ್ತದೆ. ತುಂಬಾ ಕಷ್ಟಪಡುತ್ತಾಳೆ. ಅಂಕಲ್ ಆಡಿದ ಮಾತೇ ಅವಳಲ್ಲಿ ಪ್ರತಿಧ್ವನಿಸುತ್ತಾ ಇರುತ್ತದೆ.
ಪಾರು ಅಳುತ್ತಲೇ ಸೋತಳು
“ಅವನು ಹಣಕ್ಕಾಗಿ ನಿಮ್ಮ ಪ್ರೀತಿಯನ್ನು ಮಾರಿಬಿಟ್ಟ” ಎಂದು ಅಂಕಲ್ ಹೇಳಿದ ಮಾತು ಅವಳಿಗೆ ಅಪಾರ ನೋವು ಉಂಟುಮಾಡಿದೆ. ಇಲ್ಲ ಇಲ್ಲ ಎಂದು ಹೇಳುತ್ತಾ ನಗುತ್ತಾಳೆ. ಆಗ ಅಣ್ಣಯ್ಯ ಸ್ಕೂಟರ್ ನಿಲ್ಲಿಸುತ್ತಾನೆ. “ಯಾಕೆ ಏನಾಯ್ತು ಪಾರು” ಎಂದು ಪ್ರಶ್ನೆ ಮಾಡುತ್ತಾನೆ. ಆಗ ಅವಳು ಇಲ್ಲ ಸಿದ್ದಾರ್ಥ್ ನನಗೆ ಮೋಸ ಮಾಡಿಲ್ಲ. ನಾನೇ ಮೋಸ ಹೋದೆ. ಪಾರು ದಡ್ಡಿ ಎಂದು ದೊಡ್ಡದಾಗಿ ಹೇಳುತ್ತಾ ಅಳುತ್ತಾಳೆ. ಅದನ್ನು ನೋಡಲು ಶಿವುಗೆ ತುಂಬಾ ಕಷ್ಟವಾಗುತ್ತದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.