Annayya Serial: ಅಣ್ಣನ ಮಾತು ಕೇಳಿ ಬೇಸರಗೊಂಡ ತಂಗಿಯರು; ಇಷ್ಟಕ್ಕೆಲ್ಲ ಕಾರಣ ಪಾರು ನಿರ್ಧಾರ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣನ ಮಾತು ಕೇಳಿ ಬೇಸರಗೊಂಡ ತಂಗಿಯರು; ಇಷ್ಟಕ್ಕೆಲ್ಲ ಕಾರಣ ಪಾರು ನಿರ್ಧಾರ

Annayya Serial: ಅಣ್ಣನ ಮಾತು ಕೇಳಿ ಬೇಸರಗೊಂಡ ತಂಗಿಯರು; ಇಷ್ಟಕ್ಕೆಲ್ಲ ಕಾರಣ ಪಾರು ನಿರ್ಧಾರ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ತಾನು ಕಲಿಯಲು ವಿದೇಶಕ್ಕೆ ಹೋಗಬೇಕು ಎಂದು ಅಂದುಕೊಳ್ಳುತ್ತಾ ಇದ್ದಾಳೆ. ಆ ಆಸೆಯನ್ನು ಶಿವು ಬಳಿ ಹೇಳಿಕೊಂಡಿದ್ದಾಳೆ. ಆದರೆ ಶಿವು ತಲೆಕೆಡಿಸಿಕೊಂಡಿದ್ದಾನೆ. ಅವಳನ್ನು ಕಳಿಸುವ ವ್ಯವಸ್ಥೆ ಮಾಡುತ್ತಿದ್ದಾನೆ.

ಅಣ್ಣನ ನಿರ್ಧಾರ ಕೇಳಿ ಬೇಸರಗೊಂಡ ತಂಗಿಯರು
ಅಣ್ಣನ ನಿರ್ಧಾರ ಕೇಳಿ ಬೇಸರಗೊಂಡ ತಂಗಿಯರು

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಈಗ ತಾನು ಕಲಿಯಲು ವಿದೇಶಕ್ಕೆ ಹೋಗಬೇಕು ಎಂದು ಶಿವು ಹತ್ತಿರ ಬೇಡಿಕೊಂಡಿದ್ದಾಳೆ. ಅಷ್ಟೇ ಅಲ್ಲ ನೀನು ನನ್ನನ್ನು ಮುಂದಿನ ಓದಿಗೆ ವಿದೇಶಕ್ಕೆ ಕಳಿಸಿಕೊಡ್ತೀನಿ ಅಂತ ಮಾತು ಕೊಡು ಎಂದು ಹೇಳಿದ್ದಾಳೆ. ಅವಳು ಮಾತು ಕೊಡು ಎಂದಾಗ ಶಿವು ಮಾತು ಕೊಟ್ಟೂ ಆಗಿದೆ. ಆದರೆ ಅಷ್ಟೊಂದು ಹಣ ಈಗ ಅವನ ಹತ್ತಿರ ಎಲ್ಲಿಂದ ಬರಬೇಕು. ಅವನಿಗೆ ತುಂಬಾ ಕಷ್ಟ ಆಗುತ್ತಿದೆ. ಆದರೂ ಎಲ್ಲ ಹಣ ಹೊಂದಾಣಿಕೆ ಮಾಡುತ್ತಾ ಕುಳಿತಿದ್ದಾನೆ.

ಅಂಗಡಿಯಿಂದ ಬಂದ ಆದಾಯವನ್ನೆಲ್ಲ ಅವನು ಲೆಕ್ಕ ಹಾಕುತ್ತಾ ಇದ್ದಾನೆ. ಆದರೆ ಆ ಹಣ ಸಾಲುತ್ತಿಲ್ಲ. ಆಗ ತನ್ನ ತಂಗಿಯರನ್ನು ಕರೆದು ನಿಮ್ಮ ಬಳಿ ಇನ್ನಷ್ಟು ಹಣ ಇದ್ದರೆ ಕೊಡಿ ಎಂದು ಕೇಳಿದ್ಧಾನೆ. ಆಗ ಅವರು ಯಾಕೆ ಹಣ ಬೇಕು ಎಂದು ಕೇಳಿದ್ದಾರೆ. ಆಗ ಪಾರು ಇನ್ನು ಮುಂದೆ ಓದಲು ವಿದೇಶಕ್ಕೆ ಹೋಗಬೇಕು ಎಂದುಕೊಂಡಿದ್ದಾಳೆ ಎಂದು ಹೇಳುತ್ತಾನೆ. ಅದಕ್ಕಾಗಿ ಹಣ ಹೊಂದಿಸುತ್ತಿದ್ಧೇನೆ ಎಂದು ಹೇಳುತ್ತಾನೆ.

ಶಾಕ್ ಆದ ತಂಗಿಯರು
ಅವನ ಮಾತನ್ನು ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ. ಅಣ್ಣನ ಈ ನಿರ್ಧಾರ ಅವರಿಗೆ ಸರಿ ಅನಿಸುವುದಿಲ್ಲ. ಅತ್ತಿಗೆ ನಮ್ಮನ್ನೆಲ್ಲ ಬಿಟ್ಟು ಹೋಗ್ತಾರೆ ಅಂದ್ರೆ ನೀನು ಯಾಕೆ ಒಪ್ಪಿಕೊಂಡೆ ಆಗೋದಿಲ್ಲ ಎಂದು ಹೇಳಬೇಕಿತ್ತು ಎಂದು ಹೇಳುತ್ತಾರೆ.ಆದರೆ ನಾನು ಆರೀತಿ ಮಾಡಲು ಆಗೋದಿಲ್ಲ ಎಂದು ಅಣ್ಣಯ್ಯ ಪ್ರತ್ಯುತ್ತರ ನೀಡಿದ್ದಾನೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner