Annayya Serial: ಅತ್ತಿಗೆ ಮನೆಗೆ ವಾಪಸ್ ಬಂದ ಖುಷಿಯಲ್ಲಿದ್ದಾರೆ ಶಿವಣ್ಣನ ತಂಗಿಯರು; ಶಿವು ಪ್ರೀತಿಸಿದ ಹುಡುಗಿ ಯಾರು, ರಾಣಿ ಏನಂದ್ಲು?
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಮತ್ತೆ ಖುಷಿಯ ದಿನಗಳು ಆರಂಭವಾಗಿದೆ. ತಾನು ಈ ಮನೆಯಿಂದ ದೂರ ಹೋಗ್ತೀನಿ ಎಂದಿದ್ದ ಪಾರು ಮತ್ತೆ ಮನೆಗೆ ಮರಳಿದ್ದಾಳೆ. ಅವಳು ಮನೆಗೆ ಬಂದಿರುವುದು ಎಲ್ಲರಿಗೂ ಖುಷಿ ತಂದಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಮತ್ತೆ ಮನೆಗೆ ಮರಳಿದ್ದಾಳೆ. ಅಣ್ಣ ಹಾಗೂ ಅತ್ತಿಗೆ ಒಟ್ಟಿಗೇ ಇರಬೇಕು. ಅತ್ತಿಗೆಯೂ ನಮ್ಮ ಜೊತೆ ಇದೇ ಮನೆಯಲ್ಲಿರಬೇಕು ಎನ್ನುವುದು ನಾದಿನಿಯರ ಆಸೆಯಾಗಿತ್ತು. ಆದರೆ ಆ ಆಸೆಗೆ ತಣ್ಣೀರು ಸುರಿದಂತಾಗಿತ್ತು. ನಾದಿನಿಯರೆಲ್ಲ ಪಾರು ಇಲ್ಲ ಎಂದು ಬೇಸರ ಮಾಡಿಕೊಂಡು ಅಳುತ್ತಾ ಕುಳಿತಿದ್ದರು. ಹೀಗಿರುವಾಗ ಶಿವು ಬಂದು ನೋಡ್ತಾನೆ. ಅವನ ಎಲ್ಲ ತಂಗಿಯರು ಅಳುತ್ತಿರುತ್ತಾರೆ. “ನಿಮ್ಮ ಅಳು ಇನ್ನೂ ಮುಗಿದಿಲ್ವಾ? ಅಳಿ” ಎಂದು ಹೇಳುತ್ತಾನೆ. ಆಗ ರತ್ನ “ಅಣ್ಣ ಅತ್ತಿಗೆ ಇಲ್ಲ ಅನ್ನೋದು ನಿನಗೆ ನಿಜಕ್ಕೂ ಬೇಸರ ಆಗ್ತಾ ಇಲ್ವಾ?” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಅವನು “ಇಲ್ಲ ಈ ಮಾರಿಗುಡಿನಾ ಯಾರೂ ಕಂಟ್ರೋಲ್ ಮಾಡೋಕಾಗಲ್ಲ” ಅಂತಾನೆ.
ವೀರಭದ್ರನ ಕೋಪ ಹೆಚ್ಚಾಯ್ತು
ಅಷ್ಟರಲ್ಲಿ ನಾನಿದೀನಿ ಎನ್ನುತ್ತಾ ಪಾರು ಬರುತ್ತಾಳೆ. ಅವಳು ಬಂದದನ್ನು ಕಂಡು ಎಲ್ಲ ನಾದಿನಿಯರಿಗೂ ಖುಷಿಯಾಗುತ್ತದೆ. ಎಲ್ಲರೂ ಹೋಗಿ ಅವಳನ್ನು ಅಪ್ಪಿಕೊಳ್ಳುತ್ತಾರೆ. ಶಿವುಗೂ ಇದನ್ನೆಲ್ಲ ನೋಡಿ ತುಂಬಾ ಖುಷಿಯಾಗುತ್ತದೆ. ಇನ್ನು ವೀರಭದ್ರ ಮಾತ್ರ ಈ ವಿಷಯ ತಿಳಿದಾಗಿನಿಂದ ತುಂಬಾ ಕೋಪಗೊಂಡಿದ್ದಾನೆ. ಅವನಿಗೆ ಬೇಕಾಗಿದ್ದು ಅಣ್ಣಯ್ಯನ ಜೀವನ ಹಾಳಾಗುವುದು. ಅವನು ಯಾವಾಗಲೂ ವೀರಭದ್ರನ ಮನೆ ಜೀತದಾಳಿನಂತೆ ಬದುಕುವುದು. ಆದರೆ ಈಗ ಪಾರು ಬಂದು ಅವನ ಬೆಂಬಲಕ್ಕೆ ನಿಲ್ಲುತ್ತಿದ್ದಾಳೆ ಎಂದು ಸಿಟ್ಟಾಗಿದ್ದಾನೆ.
ರಾಣಿ ಉತ್ತರ ಕೊಡ್ತಾಳಾ?
ಪಾರು ಬಂದು ಎಲ್ಲರಿಗೂ ಸಮಾಧಾನ ಮಾಡಿ. ತಾನು ಇನ್ನು ಮುಂದೆ ಇದೇ ಮನೆಯಲ್ಲಿ ಇರುತ್ತೇನೆ ಎಂದು ಹೇಳಿದ್ದಾಳೆ. ಅದರಿಂದ ಎಲ್ಲರೂ ಖುಷಿಯಾಗಿದ್ದಾರೆ. ಹೀಗಿರುವಾಗ ಮನೆ ಕೆಲಸಕ್ಕೆ ರಾಣಿಗೆ ಸಹಾಯ ಮಾಡುತ್ತಾ ಪಾರು ಕುಳಿತಿರುವಾಗ ಶಿವು ಪ್ರೀತಿಸಿದ ಹುಡುಗಿಯ ವಿಚಾರ ಬರುತ್ತದೆ. ಆದರೆ ಪಾರುಗೆ ತಾನೇ ಅವನು ಪ್ರೀತಿಸಿದ ಹುಡುಗಿ ಎಂಬ ವಿಚಾರ ಇನ್ನೂ ಗೊತ್ತಾಗಿಲ್ಲ. ರಾಣಿ ಸತ್ಯ ಹೇಳ್ತಾಳಾ ಇಲ್ವಾ? ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.