Annayya Serial: ರತ್ನಾಳನ್ನು ನೋಡಲು ಬಂದ ಗಂಡಿನಕಡೆಯವರಿಗೆ ರಶ್ಮಿ ಬೇಕಂತೆ; ಅಂದು ಆಡಿದ ಮಾತು ಇಂದು ನಿಜವಾಗುತ್ತಾ?
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ರತ್ನಾಳನ್ನು ನೋಡಲು ಬಂದ ಗಂಡಿನಕಡೆಯವರಿಗೆ ರಶ್ಮಿ ಬೇಕಂತೆ; ಅಂದು ಆಡಿದ ಮಾತು ಇಂದು ನಿಜವಾಗುತ್ತಾ?

Annayya Serial: ರತ್ನಾಳನ್ನು ನೋಡಲು ಬಂದ ಗಂಡಿನಕಡೆಯವರಿಗೆ ರಶ್ಮಿ ಬೇಕಂತೆ; ಅಂದು ಆಡಿದ ಮಾತು ಇಂದು ನಿಜವಾಗುತ್ತಾ?

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ತಂಗಿ ರತ್ನಾಳನ್ನು ನೋಡಲು ಗಂಡಿನ ಕಡೆಯವರು ಬಂದಿದ್ದಾರೆ. ಆದರೆ ಈ ಬಾರಿ ರತ್ನಾಳಿಗೆ ಮತ್ತೆ ಅವಮಾನ ಆಗಿದೆ. ರಶ್ಮಿಗೂ ಆಶ್ಚರ್ಯ ಆಗಿದೆ. ಶಿವಣ್ಣ ಮುಂದೇನ್ಮಾಡ್ತಾನೆ ನೋಡಿ.

 ಅಣ್ಣಯ್ಯ ಧಾರಾವಾಹಿಯಲ್ಲಿ ರತ್ನಾಳನ್ನು ನೋಡಲು ಗಂಡಿನಕಡೆಯವರು ಬಂದಿದ್ದಾರೆ
ಅಣ್ಣಯ್ಯ ಧಾರಾವಾಹಿಯಲ್ಲಿ ರತ್ನಾಳನ್ನು ನೋಡಲು ಗಂಡಿನಕಡೆಯವರು ಬಂದಿದ್ದಾರೆ (Zee Kannada)

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವಣ್ಣನ ನಾಲ್ವರು ತಂಗಿಯರು ಮನೆಯಲ್ಲೇ ಇದ್ದಾರೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಮದುವೆ ಮಾಡಬೇಕಾದದ್ದು ಶಿವಣ್ಣನ ಜವಾಬ್ದಾರಿ ಆದರೆ ಮೊದಲನೇ ತಂಗಿ ರತ್ನಾಳನ್ನು ಮದುವೆ ಮಾಡಿ ಕೊಡದೇ ಇನ್ಯಾರಿಗೂ ಮದುವೆ ಮಾಡಬಾರದು ಎಂದು ಅವನು ಅಂದುಕೊಂಡಿದ್ದಾನೆ. ಆದರೆ ವಿಧಿ ಲಿಖಿತ ಬೇರೆಯೇ ಇದೆ. ಅದನ್ನು ಅವನು ಅರ್ಥ ಮಾಡಿಕೊಂಡರೆ ಮಾತ್ರ ಮುಂದೆಲ್ಲ ಸರಿಯಾಗುತ್ತದೆ.

ಶಿವು ಹಾಗೂ ಪಾರು ಇಬ್ಬರೂ ಮಾತಾಡ್ತಾ “ಕನಸಲ್ಲಿ ನಿಂತಿರುವ ನೀರು, ಹೂವು ಇವೆಲ್ಲ ಬಂದ್ರೆ ಒಳ್ಳೆದಾಗುತ್ತಂತೆ” ಎಂದು ಹೇಳುತ್ತಾ ಇರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಯಾರೋ ಒಬ್ಬರು ಬಂದು “ನೀನು ಹೇಳಿದ್ದು ನಿಜ. ನಿಂಗಿಂದು ಒಳ್ಳೆದಾಗುತ್ತೆ. ಯಾಕಂದ್ರೆ ಇಂದು ನಿನ್ನ ತಂಗಿಯನ್ನು ನೋಡಲು ಗಂಡಿನ ಕಡೆಯವರು ಬರ್ತಾರೆ” ಎಂದು ಹೇಳುತ್ತಾರೆ. ಆಗ ಖುಷಿಯಿಂದ ಮನೆಯವರೆಲ್ಲ ತಯಾರಿ ಮಾಡಿಕೊಳ್ಳುತ್ತಾರೆ. ಹೇಳಿದ ಹಾಗೇ ಗಂಡಿನ ಕಡೆಯವರು ಅವತ್ತೇ ಮನೆಗೆ ಬರ್ತಾರೆ.

ರತ್ನಾಳಿಗೆ ಮತ್ತೆ ಬೇಸರ
ಪೇಟೆಯಿಂದ ಬಂದ ಅವರು ಶಿವು ಮನೆಯಲ್ಲಿ ಹೆಣ್ಣು ನೋಡಲು ಬಂದು ಕುಳಿತಿರುತ್ತಾರೆ. ರತ್ನಾಳನ್ನು ಕರೆದುಕೊಂಡು ಬಾ ಎಂದು ಶಿವು, ರಾಣಿಯ ಬಳಿ ಹೇಳುತ್ತಾನೆ. ಅವನು ಹೇಳಿದಂತೆಯೇ ರಾಣಿ ಹೋಗಿ ರತ್ನಾಳನ್ನು ಕರೆದುಕೊಂಡು ಬರುತ್ತಾಳೆ. ಆಗ ಗಂಡಿನ ಕಡೆಯವರು ಅವಳನ್ನು ನಿರಾಕರಿಸುತ್ತಾರೆ. ಈ ಹುಡುಗಿಗೆ ಈಗಾಗಲೇ ತುಂಬಾ ಸಂಬಂಧ ಬಂದು ಅರ್ಧಕ್ಕೆ ಬಿಟ್ಟು ಹೋಗಿರುವ ಬಗ್ಗೆ ಕೇಳಿದ್ದೇವೆ ನಮಗೆ ನಿಮ್ಮ ಎರಡನೇ ತಂಗಿ ತೋರಿಸಬಹುದಾ? ಎಂದು ಪ್ರಶ್ನೆ ಮಾಡುತ್ತಾರೆ. ಆಗ ಅದನ್ನು ಕೇಳಿ ಎಲ್ಲರೂ ಶಾಕ್ ಆಗ್ತಾರೆ.

ರಶ್ಮಿ ಮದುವೆಯೇ ಮೊದಲು

ರಶ್ಮಿ ಮುಖದಲ್ಲಿ ಗಾಬರಿ ಇದ್ದು ಕಾಣುತ್ತದೆ. ಯಾಕೆಂದರೆ ಹಿಂದೆ ಸ್ವಾಮೀಜಿಯೊಬ್ಬರು ರಶ್ಮಿ ಮದುವೆ ರತ್ನಾಳ ಮದುವೆಗಿಂತ ಮೊದಲಾಗುತ್ತದೆ ಎಂದಿದ್ದರು. ಆ ಸಂದರ್ಭ ಈಗ ನೆನಪಾಗುತ್ತದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner