Annayya Serial: ಮದುವೆ ಬಗ್ಗೆ ನಾಚಿಕೊಂಡೇ ಸಮ್ಮತಿಸಿದ ರಶ್ಮಿ; ತಾಯಿ ಸ್ಥಾನದಲ್ಲಿ ನಿಂತ ಪಾರುಗೆ ಎಲ್ಲವೂ ಅರ್ಥ ಆಗುತ್ತೆ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರತ್ನಾ ತನ್ನ ಸುಖಕ್ಕಿಂತ ಉಳಿದರವ ಸುಖವೇ ಮುಖ್ಯ ಎಂಬ ಒಳ್ಳೆಯ ವಿಚಾರವನ್ನು ಹೊಂದಿದ್ದಾಳೆ. ಈಗ ರಶ್ಮಿ ಮದುವೆ ಆಗುವ ಎಲ್ಲ ಲಕ್ಷಣ ತೋರುತ್ತಿದೆ.
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಗಂಡಿನ ಕಡೆಯವರು ಬಂದು ಕೊನೆಗೂ ರಶ್ಮಿಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಈಗ ರಶ್ಮಿಗೆ ಗಂಡು ಒಪ್ಪಿಗೆ ಆಗಿದ್ದಾನಾ? ಇಲ್ಲವಾ? ಎಂದು ತಿಳಿದುಕೊಳ್ಳುವ ಸಮಯ ಬಂದಿದೆ. ಅಣ್ಣಯ್ಯ ಈ ಬಗ್ಗೆ ಮಾತನಾಡುತ್ತಾ ತನ್ನ ಎಲ್ಲ ತಂಗಿಯರನ್ನು ಕರೆದಿದ್ದಾನೆ. ಮೊದಲಿಗೆ ಶಿವು, ಪಾರು ಮತ್ತು ರತ್ನಾ ಮಾತಾಡುತ್ತಾ ಇರುತ್ತಾರೆ. ರತ್ನ ಆಡಿದ ಮಾತುಗಳಿಂದ ಪಾರು ತುಂಬಾ ಸಂತೋಷಪಟ್ಟಿರುತ್ತಾಳೆ. “ನೋಡು ಮಾವಾ ಇಂದು ರತ್ನ ಒಂದು ಅಕ್ಕನಾಗಿ ಮಾತ್ರ ಅಲ್ಲ, ಒಂದು ತಾಯಿಯಾಗಿ ಕೂಡ ಮಾತನಾಡಿದ್ದಾಳೆ” ಎನ್ನುತ್ತಾಳೆ. ಆಗ ಶಿವು ತನ್ನ ತಂಗಿಯರನ್ನು ಯಾರಾದರೂ ಹೊಗಳಿದರೆ ಕೇಳುತ್ತಲೇ ಇರಬೇಕು ಎನಿಸುತ್ತದೆ ಎಂದು ಹೇಳುತ್ತಾನೆ.
ಶಿವು ಪ್ರಶ್ನೆಗೆ ರಶ್ಮಿ ಉತ್ತರ ಏನು?
ಅದಾದ ನಂತರದಲ್ಲಿ ರತ್ನಾ ಮುಂದುವರೆದು ಈಗ ರಶ್ಮಿಗೆ ಹುಡುಗ ಇಷ್ಟ ಆಗಿದ್ದಾನಾ? ಇಲ್ಲವಾ? ಎಂದು ಕೇಳಬೇಕು. ಅವಳ ಅಭಿಪ್ರಾಯವನ್ನು ನಾವು ಗಂಡಿನ ಮನೆಯವರಿಗೆ ತಿಳಿಸಬೇಕು ಎಂದು ಹೇಳುತ್ತಾರೆ. ಅದಾದ ನಂತರದಲ್ಲಿ ಶಿವು ಹೌದು ಇದು ಮೊದಲು ಆಗಬೇಕಾದ ಕೆಲಸ ಎಂದು ತನ್ನ ತಂಗಿಯರನ್ನು ಕರೆಯುತ್ತಾನೆ. ಆಗ ಎಲ್ಲರೂ ಬರುತ್ತಾರೆ. ಬಂದ ನಂತರ ಶಿವು ರಶ್ಮಿಯನ್ನು ಪ್ರಶ್ನೆ ಮಾಡುತ್ತಾನೆ “ಏನವ್ವ ನಿಂಗೆ ಹುಡ್ಗ ಇಷ್ಟ ಆದ್ನಾ?” ಎಂದು ಕೇಳುತ್ತಾನೆ. ಆಗ ರಶ್ಮಿ ಏನೂ ಮಾತಾಡದೆ ಸುಮ್ಮನೆ ನಾಚಿಕೊಳ್ಳುತ್ತಾಳೆ.
ನಾಚಿಕೊಂಡ ರಶ್ಮಿ, ಮದುವೆಗೆ ಒಪ್ಪಿಗೆ
ಆಗ ಪಾರುಗೆ ಅವಳನ್ನು ನೋಡಿ ಹುಡುಗ ಇಷ್ಟ ಆಗಿದ್ದಾನೆ ಎಂದು ಅರ್ಥ ಆಗುತ್ತದೆ. ಶಿವುಗೆ ಮಾತ್ರ ಈ ಸೂಕ್ಷ್ಮ ಅರ್ಥ ಆಗುವುದಿಲ್ಲ. ಮಾತಾಡು, ಏನಾದ್ರೂ ಹೇಳು ಎಂದು ಅವನು ರಶ್ಮಿ ಹತ್ತಿರ ಕೇಳುತ್ತಾ ಇರುತ್ತಾನೆ. ಅವಳು ನಾಚಿಕೊಂಡು ಕಾಲಲ್ಲೇ ಚಿತ್ರ ಬರೆಯುತ್ತಿರುವುದನ್ನು ನೋಡಿ ಪಾರು ಇವಳಿಗೆ ಹುಡುಗ ಒಪ್ಪಿಗೆ ಆಗಿದ್ದಾನೆ ಎಂದು ಹೇಳುತ್ತಾಳೆ. ಅದನ್ನು ಕೇಳಿ ಎಲ್ಲರೂ ಖುಷಿ ಆಗುತ್ತಾರೆ. ಶಿವು ತುಂಬಾ ಸಂತೋಷಪಟ್ಟಿದ್ದಾನೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope