Annayya Serial: ಪ್ರೀತಿ ವಿಚಾರವಾಗಿ ಮಾವನನ್ನು ಪ್ರಶ್ನೆ ಮಾಡಿದ ಪಾರು; ಉತ್ತರ ಕೊಡಲಾಗದೆ ತತ್ತರಿಸಿದ ಶಿವು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಪ್ರೀತಿ ವಿಚಾರವಾಗಿ ಮಾವನನ್ನು ಪ್ರಶ್ನೆ ಮಾಡಿದ ಪಾರು; ಉತ್ತರ ಕೊಡಲಾಗದೆ ತತ್ತರಿಸಿದ ಶಿವು

Annayya Serial: ಪ್ರೀತಿ ವಿಚಾರವಾಗಿ ಮಾವನನ್ನು ಪ್ರಶ್ನೆ ಮಾಡಿದ ಪಾರು; ಉತ್ತರ ಕೊಡಲಾಗದೆ ತತ್ತರಿಸಿದ ಶಿವು

Annayya Serial: ಶಿವು ಪ್ರೀತಿ ಮಾಡ್ತಾ ಇರೋದು ತನ್ನನ್ನೇ ಎಂದು ಅರ್ಥ ಮಾಡಿಕೊಂಡ ಪಾರು, ಅವನ ಬಾಯಿಂದಲೇ ಅವಳ ಪ್ರಶ್ನೆಗೆ ಉತ್ತರ ಬಯಸುತ್ತಿದ್ದಾಳೆ. ಆದರೆ ಶಿವು ಮಾತ್ರ ಪಾರು ಕೇಳಿದ ಪ್ರಶ್ನೆಗೆ ತತ್ತರಿಸಿ ಹೋಗಿದ್ದಾನೆ. ಉತ್ತರಿಸದೆ ಸುಮ್ಮನೆ ಮೌನವಾಗಿದ್ದಾನೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಜೀ ಕನ್ನಡ)

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಎಲ್ಲ ಸತ್ಯ ಗೊತ್ತಾಗಿದೆ. ಆದರೂ ಶಿವು ಬಾಯಿಂದಲೇ ಅವಳಿಗೆ ಬೇಕಾದ ಉತ್ತರ ಬರಲಿ ಎಂದು ಕಾಯುತ್ತಿದ್ದಾಳೆ. ತುಂಬಾ ತಾಳ್ಮೆ ತಂದುಕೊಂಡು ಮಾತಾಡುತ್ತಿದ್ದಾಳೆ. ರಾಣಿ ಅಣ್ಣನ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯ ಹೇಳಿದ್ದಾಳೆ. ಆ ಕಾರಣದಿಂದ ಪಾರು ಗಲಾಟೆ ಮಾಡದೆ ಸುಮ್ಮನೆ ಶಾಂತವಾಗಿ ಶಿವು ಹತ್ತಿರ ಪ್ರಶ್ನೆ ಮಾಡಿದ್ಧಾಳೆ. ‘ಮಾವ ನೀನು ಯಾರನ್ನಾದ್ರೂ ಪ್ರೀತಿ ಮಾಡ್ತಾ ಇದ್ದೀಯಾ?‘ ಎಂದು ಪ್ರಶ್ನಿಸಿದ್ದಾಳೆ. ಆಗ ಶಿವು ಒಂದೇ ಬಾರಿಗೆ ಗಾಬರಿಯಾಗಿದ್ದಾನೆ. ‘ಯಾಕೆ ಪಾರು ಏನಾಯ್ತು? ಒಂದೇ ಸಲ ಈ ತರ ಪ್ರಶ್ನೆ ಮಾಡ್ತಾ ಇದೀಯಾ?‘ ಎಂದು ಕೇಳುತ್ತಾನೆ.

ಪಾರು ಪ್ರಶ್ನೆಗೆ ಶಿವು ತತ್ತರ

ಆಗ ಪಾರು ‘ಏನಿಲ್ಲ ಮಾವ, ಸುಮ್ನೆ ಕೇಳ್ದೆ ನೀನು ಯಾವಾಗ್ಲೂ ಆಡೋ ಮಾತು ತುಂಬಾ ಅನುಭವದ ಮಾತು ಅಂತ ಅನಿಸುತ್ತೆ‘ ಎನ್ನುತ್ತಾಳೆ. ಆಗ ಅವನು ಇನ್ನಷ್ಟು ಗಾಬರಿಯಾದಂತೆ ಕಂಡು “ಯಾಕೆ ಗಾಬರಿಯಾದೆ ನೀನು? ನಿಜಕ್ಕೂ ಯಾರನ್ನಾದ್ರೂ ಪ್ರೀತಿ ಮಾಡಿದಿಯಾ?” ಎಂದು ಮತ್ತೆ ಪ್ರಶ್ನೆ ಮಾಡುತ್ತಾಳೆ. ಆಗ ಅವನು ಹಾಗೇನೂ ಇಲ್ಲ ಎಂಬಂತೆ ನಟನೆ ಮಾಡುತ್ತಾನೆ. ಇಬ್ಬರೂ ತಮ್ಮ ತಮ್ಮ ಪಾಡಿಗೆ ಮಲಗಿದಂತೆ ನಟಿಸುತ್ತಾರೆ. ಆದರೆ ಇಬ್ಬರ ಮನಸಿನಲ್ಲೂ ಪಾರು ಕೇಳಿದ ಪ್ರಶ್ನೆಯೇ ನೆನಪಾಗುತ್ತಾ ಇರುತ್ತದೆ.

ಶಿವು ತ್ಯಾಗ ನೆನೆದ ಪಾರು
ಶಿವು ತನಗಾಗಿ ಎಷ್ಟೆಲ್ಲ ತ್ಯಾಗ ಮಾಡಿದ್ದಾನೆ ಎಂಬುದನ್ನು ಪಾರು ನೆನಪು ಮಾಡಿಕೊಳ್ಳುತ್ತಾಳೆ. ತಾನು ಇನ್ಯಾರನ್ನೋ ಪ್ರೀತಿ ಮಾಡುತ್ತಾ ಇದ್ದೇನೆ ಎಂಬ ವಿಷಯ ಗೊತ್ತಾದಾಗಲೂ ಇವನು ನನ್ನ ಪ್ರೀತಿಯನ್ನೇ ಗೆಲ್ಲಿಸಲು ಮುಂದಾಗಿ ನನಗೆ ಸಹಾಯ ಮಾಡಿ, ಇವನ ಪ್ರೀತಿಯನ್ನು ಬಲಿ ಕೊಡಲು ಮುಂದಾಗಿದ್ದನಲ್ಲ ಎಂದು ಅಂದುಕೊಳ್ಳುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner