Annayya Serial: ನಾಳೆಯೇ ರಶ್ಮಿ ನಿಶ್ಚಿತಾರ್ಥ; ವೀರಭದ್ರನ ಹೊಸ ಉಪಾಯ ಅಣ್ಣಯ್ಯನ ಕುಟುಂಬಕ್ಕೆ ಹಾನಿ ಮಾಡುತ್ತಾ?
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ನಾಳೆಯೇ ರಶ್ಮಿ ನಿಶ್ಚಿತಾರ್ಥ; ವೀರಭದ್ರನ ಹೊಸ ಉಪಾಯ ಅಣ್ಣಯ್ಯನ ಕುಟುಂಬಕ್ಕೆ ಹಾನಿ ಮಾಡುತ್ತಾ?

Annayya Serial: ನಾಳೆಯೇ ರಶ್ಮಿ ನಿಶ್ಚಿತಾರ್ಥ; ವೀರಭದ್ರನ ಹೊಸ ಉಪಾಯ ಅಣ್ಣಯ್ಯನ ಕುಟುಂಬಕ್ಕೆ ಹಾನಿ ಮಾಡುತ್ತಾ?

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ನಿಶ್ಚಯವಾಗಿದೆ. ಹೀಗಿರುವಾಗ ನಿಶ್ಚತಾರ್ಥ ಮಾಡಿಕೊಳ್ಳಲು ವೀರಭದ್ರನೇ ಗಂಡಿನ ಕಡೆಯವರಿಗೆ ಸೂಚನೆ ನೀಡುತ್ತಾನೆ. ಇದರ ಹಿಂದೆ ವೀರಭದ್ರನ ಕುತಂತ್ರವೂ ಇದೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ರತ್ನಾಳ ಮದುವೆ ನಿಂತಿದ್ದರೂ ರಶ್ಮಿ ಮದುವೆ ನಡೆಯಲಿದೆ. ಹುಡುಗನ ಕಡೆಯವರು ರಶ್ಮಿಯನ್ನು ಒಪ್ಪಿಕೊಂಡಿದ್ದಾರೆ. ರಶ್ಮಿ ಕೂಡ ಮದುವೆಗೆ ಒಪ್ಪಿಗೆ ಸೂಚಿಸಿದ್ದಾಳೆ. ಆದರೆ ಈ ವಿಚಾರದ ಚರ್ಚೆ ಮೊದಲು ಆಗಿದ್ದು ಅಣ್ಣಯ್ಯನ ಮನೆಯಲ್ಲಿ ಹೀಗೆಲ್ಲ ಆಗಿದೆ ಎನ್ನುವ ವಿಚಾರವನ್ನು ಮೊದಲು ಶಿವು ತನ್ನ ಮಾವನಿಗೆ ತಿಳಿಸಿರಲಿಲ್ಲ. ಹೀಗಿರುವಾಗ ಹೋಗಿ ಮಾವನಿಗೂ ಈ ವಿಚಾರವನ್ನು ತಿಳಿಸಿಬರೋಣ ಎಂದು ಹೊರಡುತ್ತಾನೆ. ಅಲ್ಲಿ ವೀರಭದ್ರ ಇವನ ಬರುವಿಕೆಗಾಗಿ ಕಾದಿರುತ್ತಾನೆ. ಯಾಕೆಂದರೆ ಇದೆಲ್ಲವೂ ವೀರಭದ್ರನದೇ ಉಪಾಯ ಆಗಿರುತ್ತದೆ.

ವೀರಭದ್ರನಿಗೆ ಆಹ್ವಾನ

ಗಂಡಿನ ಕಡೆಯವರಿಗೆ ಕಾಲ್ ಮಾಡಿಸಿ ನಾಳೆಯೇ ನಿಶ್ಚಿತಾರ್ಥ ಇಟ್ಟುಕೊಳ್ಳಿ ಎಂದು ವೀರಭದ್ರನೇ ಹೇಳಿಸಿರುತ್ತಾನೆ. ಹೀಗಿರುವಾಗ ಗಂಡಿನ ಕಡೆಯವರು ಶಿವುಗೆ ಕಾಲ್ ಮಾಡಿ ನಿಶ್ಚಿತಾರ್ಥವನ್ನು ನಾಳೆಯೇ ಇಟ್ಟುಕೊಳ್ಳೋಣ ಎಂದಿರುತ್ತಾರೆ. ಶಿವು ವೀರಭದ್ರನ ಮನೆಗೆ ಬಂದು “ನಾಳೆಯೇ ನಿಶ್ಚಿತಾರ್ಥ ಮಾವಾ, ನಮ್ಮ ರಶ್ಮಿ ನಿಶ್ಚಿತಾರ್ಥವನ್ನು ನೀವೇ ಮುಂದೆ ನಿಂತು ಮಾಡಿಕೊಡಬೇಕು” ಎಂದು ಆಹ್ವಾನ ಹಾಗೂ ಜವಾಬ್ಧಾರಿ ಕೊಟ್ಟು ಬಂದಿರುತ್ತಾನೆ.

ವೀರಭದ್ರನ ಕುತಂತ್ರ
ವೀರಭದ್ರನ ಕುತಂತ್ರದಿಂದ ರಶ್ಮಿ ನಿಶ್ಚಿತಾರ್ಥದಲ್ಲಿ ಏನೋ ಅವಾಂತರ ಆಗಲಿದೆ ಎಂದು ತೋರುತ್ತದೆ. ಯಾಕೆಂದರೆ ರಶ್ಮಿ ಮದುವೆ ನಿಶ್ಚಯವಾದಾಗಿನಿಂದ ಅಣ್ಣಯ್ಯ ಕಣ್ಣು ಮುಚ್ಚಬಾರದು ಆ ರೀತಿ ಮಾಡುತ್ತೇನೆ ಎಂದು ಅವನು ಹೇಳಿದ್ದಾನೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner