Annayya Serial: ವೀರಭದ್ರನ ಕಾಟ ಒಂದೆರಡಲ್ಲ; ಒಟ್ಟಿನಲ್ಲಿ ರಶ್ಮಿ ಮದುವೆ ನಡೆಯೋಕೆ ಇವರು ಬಿಡೋದಿಲ್ಲ
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿ ನಿಶ್ಚಿತಾರ್ಥಕ್ಕೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿದ್ದಾನೆ. ಆದರೆ ವೀರಭದ್ರ ಬಂದು ಎಲ್ಲವನ್ನೂ ಕೆಡಿಸುವ ಉಪಾಯ ಮಾಡಿಕೊಂಡಿದ್ದಾನೆ. ಮುಂದೇನಾಗುತ್ತದೆ ನೀವೇ ನೋಡಿ.
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ತನ್ನ ತಂಗಿಯ ನಿಶ್ಚಿತಾರ್ಥದ ಗಡಿಬಿಡಿಯಲ್ಲಿದ್ದಾನೆ. ಅವನು ಅಂದುಕೊಂಡಂತೆ ಎಲ್ಲವೂ ನಡೆದರೆ ಯಾವ ತೊಂದರೆಯೂ ಆಗೋದಿಲ್ಲ. ಆದರೆ ಅವನದೇ ಮಾವ ವೀರಭದ್ರ ಶಿವು ತಂಗಿ ಮದುವೆ ಆಗದಂತೆ ತಡೆಯುತ್ತಿದ್ದಾನೆ. ಜೂಜಾಡುವ ಹುಚ್ಚು ಇದ್ದ ಹುಡುಗನನ್ನು ಅಣ್ಣಯ್ಯನ ತಂಗಿಗೆ ಗಂಟು ಹಾಕಲು ನೋಡುತ್ತಿದ್ದಾನೆ. ಇನ್ನು ವೀರಭದ್ರ ತನ್ನ ಮಗನ ಬಳಿ ಕಾಲ್ ಮಾಡಿಸಿ, ನಾಳೆಯೇ ನಿಶ್ಚಿತಾರ್ಥ ಇಟ್ಟುಕೊಳ್ಳಲು ಹೇಳು ಎಂದು ಹೇಳುತ್ತಾನೆ. ಆಗ ಅವನು ಕಾಲ್ ಮಾಡಿ ಅಣ್ಣಯ್ಯನ ಬಳಿ ಮಾತನಾಡಿ ನಾಳೆಯೇ ನಿಶ್ಚಿತಾರ್ಥ ಎನ್ನುತ್ತಾನೆ.
ಅಪ್ಪನಿಗೆ ಪಾರು ಹೇಳಿದ್ದೇನು?
ಗಡಿಬಿಡಿ ಎನಿಸಿದರೂ ಆಗುವ ಕೆಲಸವೊಂದು ಆಗಿಬಿಡಲಿ ಎಂದು ಒಪ್ಪಿಕೊಳ್ಳುತ್ತಾನೆ. ಪಾರು ಎಲ್ಲದಕ್ಕೂ ಸಹಾಯ ಮಾಡುತ್ತಾಳೆ. ಮಾರನೇ ದಿನ ಗಂಡಿನ ಕಡೆಯವರು ಬರುವುದಕ್ಕೂ ಮುನ್ನ ವೀರಭದ್ರ ಬಂದು ಅಣ್ಣಯ್ಯನ ಮನೆಯಲ್ಲಿ ಕುಳಿತುಕೊಳ್ಳುತ್ತಾನೆ. ಆದರೆ ಪಾರು ಅಡ್ಡಗಟ್ಟಿ “ಬಂದ್ರಾ? ನನ್ನ ಮದುವೆ ಆದ ಮೇಲೆ ನೀವು ಇದೇ ಮೊದಲ ಸಲ ನಿಮ್ಮ ಅಳಿಯನ ಮನೆಗೆ ಬರ್ತಾ ಇರೋದು” ಎಂದು ಕೊಂಕಾಡುತ್ತಾಳೆ. ಅದಾದ ನಂತರ ಅವರು ಒಳಗಡೆ ಬರ್ತಾರೆ. ಅವರು ಬಂದ ಸ್ವಲ್ಪ ಹೊತ್ತಿನಲ್ಲೇ ಗಂಡಿನ ಕಡೆಯವರು ಬರುತ್ತಾರೆ. ಬಂದ ತಕ್ಷಣ ಅವರನ್ನು ಸತ್ಕರಿಸುತ್ತಾರೆ.
ವರದಕ್ಷಿಣೆ ವಿಚಾರ
ಮದುವೆ ಗಂಡು ಹಾಗೂ ಅವರ ಮನೆಯವರ ಬಳಿ ವೀರಭದ್ರ ಎಲ್ಲದಕ್ಕೂ ಮೊದಲು ನೀವು ಕೊಡು ಕೊಳ್ಳುವ ವಿಚಾರವನ್ನು ಮಾತಾಡಿಕೊಂಡು ಬಿಡಿ ಎನ್ನುತ್ತಾನೆ. ಆಗ ಪರೋಕ್ಷವಾಗಿ ವರದಕ್ಷಿಣೆ ವಿಚಾರ ಹೊರ ಬರುತ್ತದೆ. ಅಣ್ಣಯ್ಯನ ಮುಖ ಚಿಕ್ಕದಾಗುತ್ತದೆ. ಅವನ ಬಳಿ ಎಷ್ಟಾದರೂ ಹಣ ಕೇಳಿದರೆ ಕೊಡಲು ಸಾಧ್ಯವಿಲ್ಲ ಅನ್ನೋ ಕೀಳರಿಮೆ ಇದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.