Annayya Serial: ನಗ್ತಾ ನಗ್ತಾನೇ ಅಪ್ಪನಿಗೆ ತಿರುಗುತ್ತರ ಕೊಟ್ಟ ಪಾರು; ಸಿಟ್ಟಲ್ಲಿದ್ರೂ ನಗ್ತಿದ್ದಾನೆ ವೀರಭದ್ರ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ನಗ್ತಾ ನಗ್ತಾನೇ ಅಪ್ಪನಿಗೆ ತಿರುಗುತ್ತರ ಕೊಟ್ಟ ಪಾರು; ಸಿಟ್ಟಲ್ಲಿದ್ರೂ ನಗ್ತಿದ್ದಾನೆ ವೀರಭದ್ರ

Annayya Serial: ನಗ್ತಾ ನಗ್ತಾನೇ ಅಪ್ಪನಿಗೆ ತಿರುಗುತ್ತರ ಕೊಟ್ಟ ಪಾರು; ಸಿಟ್ಟಲ್ಲಿದ್ರೂ ನಗ್ತಿದ್ದಾನೆ ವೀರಭದ್ರ

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ವೀರಭದ್ರನಿಗೆ ಮುಖಕ್ಕೆ ಹೊಡೆದಂತೆ ಮಾತಾಡುತ್ತಿದ್ದಾಳೆ. ಆದರೂ ವೀರಭದ್ರ ಗತಿ ಇಲ್ಲದೆ ಸುಮ್ಮನೆ ನಿಂತಿದ್ದಾನೆ. ಆದರೆ ಒಳಗಿನಿಂದ ಅವನು ಸಿಟ್ಟಾಗಿದ್ದಾನೆ, ಮುಖದಲ್ಲಿ ಮಾತ್ರ ನಗು ಇದೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಜೀ ಕನ್ನಡ)

ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ನಿಶ್ಚಿತಾರ್ಥದ ಸಂದರ್ಭ ಬಂದಿದೆ. ಮನೆಯೆಲ್ಲ ಒಪ್ಪ ಓರಣವಾಗಿ ತಯಾರಾಗಿದೆ. ಹೀಗೆ ತಯಾರಾದ ಮನೆಯನ್ನು ಮಲ್ಲಪ್ಪಣ ಹೊಗಳುತ್ತಿದ್ದಾರೆ. ಮಲ್ಲಪ್ಪಣ್ಣ ಮನೆಯನ್ನು ಹೊಗಳುತ್ತಿದ್ದರೆ ಇತ್ತ ಅಣ್ಣಯ್ಯ ತನ್ನ ಮೊದಲ ತಂಗಿ ರತ್ನಾಳನ್ನು ಹೊಗಳುತ್ತಿದ್ದಾನೆ. ಆದರೆ ಮಲ್ಲಪ್ಪಣ್ಣನ ಹೆಂಡತಿ ಹೇಳುತ್ತಾಳೆ ರತ್ನಾಳ ಒಳ್ಳೆಯ ಗುಣವೇ ಇಷ್ಟಕ್ಕೆಲ್ಲ ಕಾರಣ ಬೇರೆ ಯಾರಾಗಿದ್ದರೂ ಈ ರೀತಿ ಮಾಡುತ್ತಿರಲಿಲ್ಲ ಎಂದು. ಆದರೆ ಆ ನಂತರದಲ್ಲಿ ರತ್ನಾ ಅದಕ್ಕೆ ಉತ್ತರಿಸುತ್ತಾ “ಇಲ್ಲ ನಮ್ಮ ಮನೆಯಲ್ಲಿ ಯಾರೇ ಆಗಿದ್ರೂ ಇದೇ ರೀತಿ ಮಾಡ್ತಾ ಇದ್ರು ಯಾಕೆಂದರೆ ನಮಗೆಲ್ಲ ಸಂಸ್ಕಾರ ಕೊಟ್ಟಿರುವುದು ನಮ್ಮ ಅಣ್ಣ” ಎಂದು ಆ ಮಾತನ್ನು ಕೇಳಿ ಎಲ್ಲರೂ ಸಂತೋಷಪಡುತ್ತಾರೆ. ಮನೆಗೆ ಹೊಸದಾಗಿ ಸೊಸೆಯಾಗಿ ಬಂದ ಪಾರು ಕೂಡ ಈ ಮನೆಯಲ್ಲಿ ಯಾರೂ ಯಾರನ್ನೂ ಬಿಟ್ಟು ಕೊಡುವುದಿಲ್ಲ ಎಂದು ಹೇಳುತ್ತಾಳೆ.

ವೀರಭದ್ರನ ಆಗಮನ

ಅದಾದ ನಂತರದಲ್ಲಿ ಮಾದಪ್ಪಣ್ಣ ನಿಮ್ಮ ಮಾವ ಯಾಕೆ ಇನ್ನೂ ಬಂದಿಲ್ಲ ಎಂದು ಕೇಳುತ್ತಾರೆ. ಹಾಗೆ ಪ್ರಶ್ನೆ ಮಾಡ್ತಾ ಇದ್ದಂತೆಯೇ ಬಾಗಿಲಿನಲ್ಲಿ ವೀರಭದ್ರನ ಕುಟುಂಬವೇ ಬಂದು ನಿಲ್ಲುತ್ತದೆ. ಆಗ ಶಿವು ಓಡಿ ಹೋಗಿ ಮಾವಾ ಎಂದು ಮಾತನಾಡಿಸುತ್ತಾನೆ. ಆದರೆ ಮೊದಲೆಲ್ಲ ಕಾಲಿಗೆ ಬಿದ್ದು ನಮಸ್ಕಾರ ಮಾಡುತ್ತಿದ್ದ ಅವನು ಈ ಬಾರಿ ಬರೀ ಮಾತನಾಡಿಸಿದ್ದನ್ನು ನೋಡಿ ಪಾರು ಅಣ್ಣ ಕೋಪ ಮಾಡಿಕೊಂಡು ಅಪ್ಪನ ಕಿವಿಯಲ್ಲಿ ಅದನ್ನೇ ಹೇಳುತ್ತಾನೆ. ಪಾರುವನ್ನು ತಾಯಂದಿರು ಮಾತ್ರ ಮಾತಾಡಿಸುತ್ತಾರೆ.

ಅದಾದ ನಂತರದಲ್ಲಿ ಪಾರು ಬೇಕು ಎಂದೇ ಪ್ರೀತಿಯಿಂದ ಅಪ್ಪಾ…..ಅಣ್ಣಾ ಎನ್ನುತ್ತಾ ಅಣಕವಾಗಿ ಮಾತಾಡಿಸುತ್ತಾಳೆ. ನೀವು ಮಾತಾಡ್ತಾ ಇರ್ಬೇಕು, ಇಲ್ಲ ಅಂದ್ರೆ ಏನಾದ್ರೂ ಮಾಡ್ತಾ ಇರ್ಬೇಕು ಹಾಗಿದ್ರೆ ಮಾತ್ರ ಚಂದ ಎಂದು ಟಾಂಟ್ ಮಾಡುತ್ತಾಳೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner