Annayya Serial: ಶಿವು ತನಗೆ ಮೋಸ ಮಾಡಿದ್ದಾನೆ ಎಂಬ ಭಾವನೆಯಲ್ಲೇ ಇದ್ದಾಳೆ ಪಾರು; ಅಣ್ಣಯ್ಯನ ಪ್ರೀತಿಸಿ ಅರ್ಥ ಆಗೋದು ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಶಿವು ತನಗೆ ಮೋಸ ಮಾಡಿದ್ದಾನೆ ಎಂಬ ಭಾವನೆಯಲ್ಲೇ ಇದ್ದಾಳೆ ಪಾರು; ಅಣ್ಣಯ್ಯನ ಪ್ರೀತಿಸಿ ಅರ್ಥ ಆಗೋದು ಯಾವಾಗ?

Annayya Serial: ಶಿವು ತನಗೆ ಮೋಸ ಮಾಡಿದ್ದಾನೆ ಎಂಬ ಭಾವನೆಯಲ್ಲೇ ಇದ್ದಾಳೆ ಪಾರು; ಅಣ್ಣಯ್ಯನ ಪ್ರೀತಿಸಿ ಅರ್ಥ ಆಗೋದು ಯಾವಾಗ?

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರುಗೆ ಶಿವು ಪ್ರೀತಿ ಮಾಡುತ್ತಿದ್ದ ಹುಡುಗಿ ಯಾರು ಎಂಬ ಸತ್ಯ ಅರಿವಾಗಿದೆ. ಆದರೆ ಅವಳು ಶಿವುವನ್ನು ಪ್ರೀತಿಸುವ ಬದಲಾಗಿ ಅವನನ್ನು ದ್ವೇಷ ಮಾಡಲು ಆರಂಭಿಸಿದ್ದಾಳೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (Zee Kannada)

ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಇಷ್ಟು ವರ್ಷದಿಂದ ತನ್ನೊಳಗಡೆಯೇ ಮುಚ್ಚಿಟ್ಟುಕೊಂಡಿದ್ದ ಪ್ರೀತಿ ಈಗ ಹೊರ ಬಂದಿದೆ. ಇದಕ್ಕೆ ಕಾರಣ ರಾಣಿ ಎಂದರೂ ತಪ್ಪಾಗಲಾರದು. ಎಲ್ಲ ಪರಿಸ್ಥಿತಿ ಸರಿ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಅವಳು ಹೇಳಿದ ಸತ್ಯದಿಂದ ಇನ್ನು ಮುಂದೆ ಮತ್ತೆ ಶಿವು ಹಾಗೂ ಪಾರು ನಡುವೆ ಬಿರುಕು ಮೂಡುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಹೀಗಿರುವಾಗ ಪಾರು ಏನು ಮಾಡಿದ್ದಾಳೆ ನೀವೇ ನೋಡಿ.

ಪಾರುಗೆ ತಿಳಿದಿದೆ ಸತ್ಯ

ಪಾರು ಆಭರಣ ಇಡುವ ಸಲುವಾಗಿ ಒಂದು ಕೋಣೆಗೆ ಹೋಗ್ತಾಳೆ. ಆ ಕೋಣೆಯಲ್ಲಿ ಒಂದು ಹಳೆಯ ಪೆಟ್ಟಿಗೆ ಇರುತ್ತದೆ. ಆ ಪೆಟ್ಟಿಗೆಯಲ್ಲಿ ಪಾರು ಎಲ್ಲ ನೆನಪನ್ನೂ ಶಿವು ಬಚ್ಚಿಟ್ಟುಕೊಂಡಿರುತ್ತಾನೆ. ಆ ಎಲ್ಲ ನೆನಪುಗಳಿಗೂ ಈಗ ಜೀವ ಇಲ್ಲ ಎನ್ನುವ ರೀತಿಯಲ್ಲಿ ಧೂಳು ಹಿಡಿದುಕೊಂಡಿರುತ್ತದೆ. ಆದರೆ ಪಾರು ಕುತೂಹಲಕ್ಕೆ ಎಲ್ಲವನ್ನೂ ತೆಗೆದ ನೋಡುತ್ತಾಳೆ. ಆಗ ಅವಳಿಗೆ ಶಿವು ಪ್ರೀತಿ ಮಾಡ್ತಾ ಇದ್ದಿದ್ದು ನನ್ನನ್ನೇ ಎನ್ನುವ ಸತ್ಯ ಅರ್ಥ ಆಗುತ್ತದೆ.

ರಾಣಿ ಎದೆಯಲ್ಲಿ ಹುಟ್ಟಿದೆ ನಡುಕ

ಅಷ್ಟಾದ ತಕ್ಷಣ ಅವಳು ತಡ ಮಾಡುವುದಿಲ್ಲ. ಸೀದಾ ರಾಣಿ ಇದ್ದಲ್ಲಿಗೆ ಬರುತ್ತಾಳೆ. ಬಂದು ಶಿವು ಮಾವ ಪ್ರೀತಿ ಮಾಡ್ತಾ ಇರೋ ಹುಡುಗಿ ಯಾರು ಅನ್ನೋ ಸತ್ಯ ನನಗೆ ಗೊತ್ತಾಗಿದೆ. ಅದು ನಾನೇ ಎಂದು ಹೇಳುತ್ತಾ, ಅವಳ ಕಾಲ್ಗೆಜ್ಜೆ ಹಾಗೂ ಶಿವು ಮತ್ತು ಪಾರು ಜೊತೆಗಿರುವ ಫೋಟೋವನ್ನು ತೋರಿಸುತ್ತಾಳೆ. ರಾಣಿ ಎದೆಯಲ್ಲಿ ಸಣ್ಣ ನಡುಕ ಹುಟ್ಟುತ್ತದೆ.

ಶಿವುವನ್ನು ಪ್ರಶ್ನಿಸಿದ ಪಾರು
ಶಿವು ಹಾಗೂ ಪಾರು ರಾತ್ರಿ ಮಲಗಲು ಕೋಣೆಗೆ ಹೋದಾಗ ನೀನು ನನ್ನ ಪ್ರೀತಿ ಮಾಡಿ ಬೇಕು ಎಂದೇ ಮೋಸದಿಂದ ಮದುವೆ ಆದೆ ಅಲ್ವಾ? ಎಂದು ಪಾರು ಶಿವುವನ್ನು ಪ್ರಶ್ನೆ ಮಾಡಿದ್ಧಾಳೆ. ಮುಂದೇನಾಗುತ್ತದೆ? ಶಿವು ಯಾವ ಉತ್ತರ ನೀಡುತ್ತಾನೆ? ಎಂದು ಕಾದು ನೋಡಬೇಕಿದೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner