Annayya Serial: ಹೆಣ್ಣಿನ ಮಹತ್ವ ತಿಳಿಸಿದ ಅಣ್ಣಯ್ಯನ ಒಳ್ಳೆ ಮನಸ್ಸಿಗೆ ಕರಗಿ ಹೋದ ಪಾರು; ಶಿವು ಬದುಕಲ್ಲಿ ಮತ್ತೆ ಚಿಗುರೊಡೆಯುತಿದೆ ಪ್ರೀತಿ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ನ್ಯಾಯ ಪಂಚಾಯ್ತಿ ನಡೆಯುತ್ತಿದೆ. ವೀರಭದ್ರನ ಎದುರೇ ಅಣ್ಣಯ್ಯ ತುಂಬಾ ಮಾತಾಡಿದ್ದಾನೆ. ಪಾರು ಕೂಡ ಶಿವು ಪಕ್ಕದಲ್ಲೇ ನಿಂತಿದ್ದಾಳೆ. ಹೆಣ್ಣಿನ ಮಹತ್ವದ ಬಗ್ಗೆ ಶಿವು ಮಾತನಾಡಿದ್ದಾನೆ.
ಅಣ್ಣಯ್ಯ ಧಾರಾವಾಹಿಯಲ್ಲಿ ನ್ಯಾಯ ಪಂಚಾಯ್ತಿ ನಡೆಯುತ್ತಿದ್ದು, ಊರಿನ ಯಾರೋ ಒಬ್ಬ ನಾಗರಿಕ ತನ್ನ ಹೆಂಡತಿಯನ್ನು ಮನೆಯಿಂದ ಹೊರ ಹಾಕುವ ನಿರ್ಧಾರ ಮಾಡಿರುತ್ತಾನೆ. ಆದರೆ ಶಿವು ಆ ನಿರ್ಧಾರವನ್ನು ಒಪ್ಪುವುದಿಲ್ಲ. ಅವನ ತಪ್ಪನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾನೆ. ಆಗ ಅಲ್ಲಿದ್ದ ಎಲ್ಲರ ಮನಸನ್ನು ಶಿವು ಗೆದ್ದಿದ್ದಾನೆ. ಹೆಣ್ಣು ಈ ಸಮಾಜಕ್ಕೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಡುತ್ತಾ ಶಿವು ಈ ನೆಲ, ಜಲ, ಭಾಷೆ ಎಲ್ಲವೂ ಹೆಣ್ಣು “ನಿನ್ನನ್ನು ಹೆತ್ತವಳು ಹೆಣ್ಣು, ನಿನಗೆ ಜವಾಬ್ದಾರಿ ಬರುವಂತೆ ನಡೆದುಕೊಂಡವಳು ಹೆಣ್ಣು, ನಿನಗೆ ಅಪ್ಪ ಎಂಬ ಪಟ್ಟ ಕೊಟ್ಟವಳು ಹೆಣ್ಣು, ನಿನ್ನ ಕಾಳಜಿ ಮಾಡುವ ಜೀವ ಹೆಣ್ಣು, ನೀನು ಕುಡಿಯುವ ನೀರು ಕಾವೇರಿ ಹೆಣ್ಣು, ನೀನು ಮೆಟ್ಟಿರುವ ನೆಲ ಕನ್ನಡಾಂಬೆ ಹೆಣ್ಣು, ನಮ್ಮ ದೇಶ ಭಾರತಾಂಬೆ ಹೆಣ್ಣು ಹೀಗಿರುವಾಗ ನೀನು ಹೆಣ್ಣು ಬೇಡ ಎಂದು ಹೇಳ್ತಾ ಇದೀಯಲ್ಲ ಇದು ತಪ್ಪು” ಎಂದು ಶಿವು ಮನವರಿಕೆ ಮಾಡಿಸುವ ಪ್ರಯತ್ನ ಮಾಡುತ್ತಾನೆ.
ವೀರಭದ್ರನ ಮುಂದೆ ಶಿವು ಮಾತು
ಯಾಕೆಂದರೆ ಅಲ್ಲಿದ್ದವನು ತನ್ನ ಹೆಂಡತಿ ಮೂರು ಜನ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ ಎಂದು ಅವಳನ್ನು ಬಿಡುವ ಆಲೋಚನೆ ಮಾಡುತ್ತಾ ಇರುತ್ತಾನೆ. ಆದರೂ ಅವನು ಈ ಯಾವ ಮಾತಿಗೂ ಅಷ್ಟೊಂದು ಬಗ್ಗುವುದಿಲ್ಲ. ನಂತರ ಅಲ್ಲೇ ಇದ್ದ ಒಂದು ಕಲ್ಲನ್ನು ಅಣ್ಣಯ್ಯ ತೋರಿಸುತ್ತಾನೆ. ಈ ಕಲ್ಲನ್ನು ಎತ್ತಿಕೊಂಡು ಈ ಪಂಚಾಯ್ತಿಯನ್ನು ನೀನು ಮೂರು ಸುತ್ತು ಹಾಕಿ ತೋರಿಸು ನಂತರ ನೀನು ನಿನ್ನ ಹೆಂಡತಿಯನ್ನು ಬಿಡು ಎಂದು ಶಿವು ಹೇಳುತ್ತಾನೆ.
ಪಾರುಗೆ ಇಷ್ಟ ಆಯ್ತು ಶಿವು ಮಾತು
ಆಗ ಅವನು ಒಪ್ಪಿಕೊಂಡು ಆ ಕಲ್ಲನ್ನು ಎತ್ತಿಕೊಳ್ಳುತ್ತಾನೆ. ಆದರೆ ಮೂರು ಸುತ್ತು ಹಾಕಲು ವಿಫಲನಾಗುತ್ತಾನೆ. ಆಗ ಅವನಿಗೆ ಸತ್ಯದ ಅರಿವಾಗುತ್ತದೆ. ಮೂರು ಮಕ್ಕಳನ್ನು ಹೊತ್ತ ಅವಳಿಗೆ ಎಷ್ಟು ಕಷ್ಟ ಆಗಿರಬಹುದು ಎಂಬುದರ ಅರಿವಾಗುತ್ತದೆ. ಅವನು ಒಪ್ಪಿಕೊಳ್ಳುತ್ತಾನೆ. ಇದೆಲ್ಲವನ್ನು ನೋಡುತ್ತಾ ಪಾರುಗೆ ಶಿವು ಮೇಲೆ ಪ್ರೀತಿ ಆಗುತ್ತದೆ. ಅವಳಿಗೆ ಅವನು ಆಡಿದ ಎಲ್ಲ ಮಾತೂ ಇಷ್ಟವಾಗುತ್ತದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.