Annayya Serial: ದೊಡ್ಡವಳಾದ್ಲು ಶಿವು ಪುಟ್ಟ ತಂಗಿ ರಮ್ಯ, ಅಣ್ಣಯ್ಯನ ಕಣ್ಣಲ್ಲಿ ಆನಂದಬಾಷ್ಪ - ಅಕ್ಕಂದಿರ ಮೊಗದಲ್ಲಿ ನಗು-annayya serial kannada today episode september 9 shivu and his sisters happy for ramya smk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ದೊಡ್ಡವಳಾದ್ಲು ಶಿವು ಪುಟ್ಟ ತಂಗಿ ರಮ್ಯ, ಅಣ್ಣಯ್ಯನ ಕಣ್ಣಲ್ಲಿ ಆನಂದಬಾಷ್ಪ - ಅಕ್ಕಂದಿರ ಮೊಗದಲ್ಲಿ ನಗು

Annayya Serial: ದೊಡ್ಡವಳಾದ್ಲು ಶಿವು ಪುಟ್ಟ ತಂಗಿ ರಮ್ಯ, ಅಣ್ಣಯ್ಯನ ಕಣ್ಣಲ್ಲಿ ಆನಂದಬಾಷ್ಪ - ಅಕ್ಕಂದಿರ ಮೊಗದಲ್ಲಿ ನಗು

Annayya Serial Kannada: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಅಣ್ಣಯ್ಯನ ಪುಟ್ಟ ತಂಗಿ ದೊಡ್ಡವಳಾಗಿದ್ದಾಳೆ. ದೊಡ್ಡೋಳಾಗಿರೋ ಪುಟ್ಟ ತಂಗಿ ರಮ್ಯಾಗೆ ಆರತಿ ಸಂಭ್ರಮ ನಡೆಯುತ್ತಿದೆ.

ಅಣ್ಣಯ್ಯ ಧಾರಾವಾಹಿ
ಅಣ್ಣಯ್ಯ ಧಾರಾವಾಹಿ (ಝೀ ಕನ್ನಡ)

ಎಲ್ಲರೂ ಜಾತ್ರೆಗೆ ಹೋದ ಸಂದರ್ಭದಲ್ಲಿ ರಮ್ಯಾಳಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಅಣ್ಣಯ್ಯ ತುಂಬಾ ಗಾಬರಿ ಆಗುತ್ತಾನೆ. ತಾನೇ ಅವಳನ್ನು ಒಣಗಡೆ ಎತ್ತುಕೊಂಡು ಹೋಗುತ್ತಾನೆ. ಅವಳಿಗೆ ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಅದಾದ ನಂತರದಲ್ಲಿ ಅವನಿಗೆ ಅರ್ಥವಾಗುತ್ತದೆ ಇದು ಯಾವುದಕ್ಕೆ ಬಂದ ಹೊಟ್ಟೆ ನೋವು ಎಂದು ಅರ್ಥವಾಗುತ್ತದೆ. ಆದರೆ ಉಳಿದವರು ಯಾರೂ ಮನೆಯಲ್ಲಿ ಇರುವುದಿಲ್ಲ. ತಾನೊಬ್ಬನೇ ಅವಳಿಗೆ ಸಮಾಧಾನ ಮಾಡುತ್ತಾನೆ. ಆ ನಂತರ ಅಂಗಡಿಯಲ್ಲಿರುವವರಿಗೆ ಕಾಲ್ ಮಾಡುತ್ತಾನೆ. ಆದರೆ ಅವರ್ಯಾರೂ ಕಾಲ್ ರಿಸೀವ್ ಮಾಡೋದಿಲ್ಲ.

ನಂತರ ಅವನೇ ಅಂಗಡಿಗೆ ಹೋಗಿ ಅವರಿಗೆ ವಿಷಯ ತಿಳಿಸುತ್ತಾನೆ. ನಂತರ ಅಂಗಡಿಯಲ್ಲಿದ್ದವರು ಸಂತೋಷಪಡುತ್ತಾರೆ. ಅವನು ಅಲ್ಲಿಗೆ ಹೋದ ಮುಖ್ಯ ಕಾರಣ ರಮ್ಯಳಿಗೆ ಸ್ಯಾನಿಟರಿ ಪ್ಯಾಡ್ ತರುವುದಕ್ಕಾಗಿತ್ತು. ಆದಷ್ಟು ಬೇಗ ಅದನ್ನು ಹಿಡಿದುಕೊಂಡು ಅವನು ಮತ್ತೆ ಮನೆಗೆ ಮರಳುತ್ತಾನೆ. ಇತ್ತ ರಮ್ಯ ಮಾತ್ರ ತುಂಬಾ ನೋವಿನಿಂದ ನರಳುತ್ತಾ. ಅಳುತ್ತಾ ಇದ್ದಳು, “ ಅಣ್ಣ ಯಾಕ್ ಇಷ್ಟ್ ತಡ ಮಾಡ್ದೆ ನೀನು?” ಎಂದು ಅವನು ಬಂದ ತಕ್ಷಣ ಪ್ರಶ್ನೆ ಮಾಡುತ್ತಾಳೆ.

ಅಷ್ಟರಲ್ಲಿ ಅವರ ಮನೆಗೆ ಊರಿನ ಒಬ್ಬಳು ಹೆಂಗಸು ಯಾವುದೋ ಕೆಲಸದ ನಿಮಿತ್ತ ಬರುತ್ತಾಳೆ. ಅವಳನ್ನು ಕಂಡ ತಕ್ಷಣ ಇವನಿಗೆ ತುಂಬಾ ಸಂತೋಷ ಆಗುತ್ತದೆ “ ದೇವರು ಬಂದ ಹಾಗೆ ಬಂದೆ ನೋಡು ನೀನು ಅಕ್ಕ” ಎಂದು ಹೇಳುತ್ತಾನೆ. ಆಗ ಅವಳು “ ಯಾಕೆ? ಏನಾಯ್ತು” ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಇವನು ನಡೆದ ವಿಚಾರವನ್ನು ಹಂಚಿಕೊಳ್ಳುತ್ತಾನೆ. ತಂಗಿಯರು ಯಾರೂ ಮನೆಯಲ್ಲಿ ಇಲ್ಲ ಎಂದು ಹೇಳುತ್ತಾನೆ.

ಅದಾದ ನಂತರದಲ್ಲಿ ಅವಳು ಒಳಗಡೆ ಬಂದು ವ್ಯವಸ್ಥೆ ಮಾಡುತ್ತಾಳೆ. ಇನ್ನು ಜಾತ್ರೆಗೆ ಹೋದವರೆಲ್ಲರೂ ಮರಳಿ ಬರುತ್ತಾರೆ. ಅವರು ಬಂದ ತಕ್ಷಣ ಅಣ್ಣ ಬಾಗಿಲಲ್ಲೇ ನಿಂತಿರುವುದನ್ನು ನೋಡಿ ಗಾಬರಿ ಆಗುತ್ತಾರೆ. “ ನೀವು ಇಲ್ಲದ ಸಮಯದಲ್ಲಿ ಇಲ್ಲಿ ಏನೆಲ್ಲ ಆಯ್ತು ಗೊತ್ತಾ? ” ಎಂದು ಅವನು ಕೇಳುತ್ತಾನೆ. ಆಗ ಅವರೆಲ್ಲ ಗಾಬರಿಯಿಂದ “ಏನಾಯ್ತು?” ಎಂದು ಪ್ರಶ್ನೆ ಮಾಡುತ್ತಾರೆ.

"ನೀವೇ ಒಳಗಡೆ ಹೋಗಿ ನೋಡಿ ಎಂದು ಹೇಳುತ್ತಾನೆ" ಆಗ ಅವರು ಹೋಗಿ ನೋಡುವಷ್ಟರಲ್ಲಿ ರಮ್ಯ ಎರಡು ದೀಪಗಳ ಮಧ್ಯದಲ್ಲಿ ಕುಳಿತಿರುತ್ತಾಳೆ. ಅವರಿಗೆ ಎಲ್ಲ ಅರ್ಥವಾಗುತ್ತದೆ. ಇನ್ನು ಈಗ ಅವಳು ಮೈನೆರೆದ ಶಾಸ್ತ್ರವನ್ನು ಅಣ್ಣಯ್ಯ ತುಂಬಾ ಸಡಗರದಿಂದ ಮಾಡುತ್ತಿದ್ದಾನೆ. ಇದನ್ನು ತುಂಬಾ ಸಂಭ್ರಮಿಸುತ್ತಿದ್ದಾನೆ.

ಝೀ ಕನ್ನಡ ವಾಹಿನಿಯಲ್ಲಿ ಅಣ್ಣಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

mysore-dasara_Entry_Point