Annayya Serial: ಅಣ್ಣಯ್ಯ ಧಾರಾವಾಹಿ ಮಹಾಸಂಚಿಕೆ; ವೀರಭದ್ರನ ಸೊಕ್ಕು ಮುರಿಯಲು ಪಾರುನೇ ಸರಿ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆಗೆ ಇನ್ನು ಕೆಲವೇ ದಿನ ಬಾಕಿ ಉಳಿದಿದೆ. ಆದರೆ ವೀರಭದ್ರನ ಕುತಂತ್ರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮತ್ತು ಪಾರ್ವತಿ ಇಬ್ಬರೂ ರಶ್ಮಿ ಮದುವೆ ಲಗ್ನ ಪತ್ರಿಕೆ ಕೊಡಲು ಪಾರು ತವರಿಗೆ ಬಂದಿದ್ದಾರೆ. ಅವರು ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿಯೇ ವೀರಭದ್ರನ ಆರ್ಭಟ ಆರಂಭವಾಗಿದೆ. ತನ್ನ ಇಬ್ಬರು ಹೆಂಡತಿಯ ಬಗ್ಗೆ ಅವನಿಗೆ ಸತ್ಯ ಗೊತ್ತಾದಂತಿದೆ. ರಶ್ಮಿ ಮದುವೆ ನಿಲ್ಲಿಸಲು ಪಾರು ತಾಯಿ ಪ್ರಯತ್ನ ಮಾಡುತ್ತಾಳೆ ಎಂಬ ವಿಚಾರವನ್ನಿಟ್ಟುಕೊಂಡು, ಪಾರು ಹಾಗೂ ಶಿವು ಬಂದಾಗ ಅವರ ಬಳಿ ತನ್ನ ಹೆಂಡತಿಯರಿಗೆ ಮಾತಾಡದಂತೆ ಸೂಚನೆ ನೀಡುತ್ತಾನೆ. ಅವರು ಸುಮ್ಮನೇ ವೀರಭದ್ರನ ಮುಂದೆ ತಲೆಯಾಡಿಸಿದರೂ ಸಹ ಆಲೋಚನೆ ಬೇರೆಯೇ ಇರುತ್ತದೆ. ಸ್ವಲ್ಪ ಸಮಯದಲ್ಲಿ ಪಾರು ಹಾಗೂ ಶಿವು ಮಾವನ ಮನೆಗೆ ಬರುತ್ತಾರೆ.
ವೀರಭದ್ರನಿಗೆ ಪಾಠ ಕಲಿಸಲು ಪಾರುನೇ ಸರಿ
ಬಂದ ತಕ್ಷಣ ಶಿವು ಒಳ್ಳೆ ರೀತಿಯಲ್ಲಿ ಮಾತಾಡಲು ಆರಂಭಿಸಬೇಕು ಎನ್ನುವಷ್ಟರಲ್ಲಿ ಪಾರು ಶಿವುಗೆ ತಿಳಿಯದ ರೀತಿಯಲ್ಲಿ ಒಂದೊಂದೇ ಕೊಂಕಾಡಲು ಆರಂಭಿಸುತ್ತಾಳೆ. ಯಾಕೆಂದರೆ ಪಾರುಗೆ ವೀರಭದ್ರನ ನಿಜ ಬಣ್ಣ ಗೊತ್ತಾಗಿದೆ. ಮೋಸ ಮಾಡಿ ಅಣ್ಣಯ್ಯನ ಆಸ್ತಿಯನ್ನು ಅವನು ಕಬಳಿಸಿದ್ದಾನೆ ಎನ್ನುವ ಸೂಚನೆ ಸಿಕ್ಕಿದೆ. ಇನ್ನೂ ಸಾಕಷ್ಟು ಉಪಾಯ ಮಾಡಿ ಶಿವು ಪೂರ್ತಿ ಆಸ್ತಿಯನ್ನು ಕಬಳಿಸುವ ಆಲೋಚನೆಯಲ್ಲಿ ವೀರಭದ್ರ ಇದ್ದಾನೆ ಎನ್ನುವ ವಿಚಾರವೂ ಗೊತ್ತಾಗಿದೆ. ಹೀಗಿರುವಾಗ ಆ ವಿಚಾರಗಳು ತನಗೆ ಗೊತ್ತಾಗಿದೆ ಎನ್ನುವುದನ್ನು ಸೂಚ್ಯವಾಗಿ ಅವಳು ವೀರಭದ್ರನಿಗೆ ತಿಳಿಸುತ್ತಿದ್ದಾಳೆ.
ವೀರಭದ್ರನೂ ಸುಮ್ಮನೆ ಕೂತಿಲ್ಲ. ಶಿವು ತನ್ನ ಪರವೇ ಇದ್ದಾನೆ ಎನ್ನುವ ರೀತಿಯಲ್ಲಿ ಮಾತಾಡಿದ್ದಾನೆ. ಅದಕ್ಕೆ ಶಿವು ಹೌದು, ಎನ್ನುವ ರೀತಿಯಲ್ಲಿ ಉತ್ತರಿಸಿದ್ದಾನೆ. ರಶ್ಮಿ ಮದುವೆ ಹತ್ತಿರ ಬರುತ್ತಿರುವ ಕಾರಣ ಈ ಮದುವೆಯನ್ನು ಹೇಗಾದರೂ ನಿಲ್ಲಿಸಬೇಕು ಎಂದು ಶಿವು ಅತ್ತೆಯರು ಉಪಾಯ ಮಾಡುತ್ತಿದ್ದಾರೆ. ಪಾರು ಬಳಿಯೂ ಅಂದು ಕಾಣಿಕೆ ನೀಡಿದ ಹಣದ ಮೇಲೆ ಬರೆದ ವಿಷಯವನ್ನು ಶಿವು ಓದಿಲ್ವಾ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಹೀಗೆ ಇನ್ನಷ್ಟು ಕುತೂಹಲಕರ ಸಂಗತಿಯೊಂದಿಗೆ ಧಾರಾವಾಹಿಯ ಮಹಾಸಂಚಿಕೆ ಪ್ರಸಾರವಾಗಲಿದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಜೀ5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
