Annayya Serial: ಮೆಡಿಕಲ್ ಕ್ಯಾಂಪ್‌ಗಾಗಿ ಪೇಟೆಗೆ ಬಂದ ಶಿವು, ಪಾರು; ಸಿಕ್ಕಿತು ಸಿದ್ದಾರ್ಥ್ ಸುಳಿವು
ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಈಗ ಪೇಟೆಗೆ ಹೋಗಿದ್ದಾರೆ. ಮೆಡಿಕಲ್ ಕ್ಯಾಂಪ್ ಇದೆ ಎಂದು ಅವರಿಬ್ಬರೂ ಬಂದಿದ್ದಾರೆ. ಆದರೆ ಪಾರುಗೆ ಸಿದ್ದಾರ್ಥ್ ಬಗ್ಗೆ ಸುಳಿವು ಸಿಕ್ಕಂತಿದೆ. ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಹಾಗೂ ಪಾರು ಇಬ್ಬರೂ ಮೆಡಿಕಲ್ ಕ್ಯಾಂಪ್‌ಗೆ ಎಂದು ಬಂದಿರುತ್ತಾರೆ. ಪಾರು ಗೆಳತಿಯೊಬ್ಬಳು ಪಾರುಗೆ ಕಾಲ್ ಮಾಡಿ ಮೆಡಿಕಲ್ ಕ್ಯಾಂಪ್ ಇದೆ ನೀನೂ ಬಾ ಎಂದು ಕರೆದಿರುತ್ತಾಳೆ. ಆದರೆ ಪಾರು ಮೊದಲು ಕ್ಯಾಂಪ್‌ಗೆ ಬರೋದಕ್ಕೆ ಮನಸು ಮಾಡೋದಿಲ್ಲ. ಶಿವು ಹೇಳ್ತಾನೆ “ನಿನಗೆ ಹೇಗಂದ್ರೂ ಸಿದ್ದಾರ್ಥ್‌ನ ಹುಡುಕ ಬೇಕಲ್ಲ, ಹಾಗಾಗಿ ನೀನು ಈಗೊಮ್ಮೆ ಹೋಗಿ ಬಾ” ಎಂದು ಹೇಳುತ್ತಾನೆ. ಅವನ ಮಾತು ಪಾರುಗೆ ನಿಜ ಅನಿಸಿ ಅವಳು ಹೋಗಲು ರೆಡಿಯಾಗ್ತಾಳೆ. ಆದ್ರೆ ಅವಳ ಜೊತೆ ಶಿವು ಕೂಡ ಬರ್ತಾನೆ. ಅವಳನ್ನು ಬಿಟ್ಟು ಹೋದರಾಯ್ತು ಎಂದು ಅವನು ಅಂದುಕೊಂಡಿರುತ್ತಾನೆ.
ಹೀಗಿರುವಾಗ ಒಂದು ಕಡೆ ಬಂದು ನಿಂತು ಕಬ್ಬಿನ ಹಾಲನ್ನು ಕುಡಿಯುತ್ತಾ ಇರುತ್ತಾರೆ. ಆಗ ಅಲ್ಲೇ ಪಕ್ಕದಲ್ಲಿದ್ದ ಇನ್ನೊಬ್ಬನಿಗೆ ಕಾಲ್ ಬರುತ್ತದೆ. ಕಾಲ್ ಬಂದ ತಕ್ಷಣ ಅವನು ಮಾತು ಆರಂಭಿಸುತ್ತಾನೆ. ಯಾರು? ಯಾವ ಸಿದ್ದಾರ್ಥ್? ಏನ್ ಕೆಲಸ ಮಾಡೋದು? ಎಂದೆಲ್ಲ ಮಾತಾಡುತ್ತಾನೆ. ಆದರೆ ಆ ಮಾತಿನಲ್ಲಿ ಸ್ಪಷ್ಟತೆ ಇರೋದಿಲ್ಲ. ಅದನ್ನು ಕೇಳಿ ಪಾರು ಶಾಕ್ ಆಗ್ತಾಳೆ. ಆದರೆ ಅದು ತನ್ನ ಸಿದ್ದಾರ್ಥ್ ಇರಬಹುದು ಎಂದು ಅವಳಿಗೆ ಅನುಮಾನ ಬರುತ್ತದೆ.
ನಂತರ ಶಿವು ಇಲ್ಲ ಪಾರು ಅವರು ಬೇರೆ ಯಾರೋ ಆಗಿರ್ತಾರೆ. ನೀನು ಕಬ್ಬಿನ ಹಾಲು ಕುಡಿ ಎಂದು ಅವಳ ಗಮನ ಬೇರೆಕಡೆ ಸೆಳೆಯುತ್ತಾನೆ. ಅದಾದ ನಂತರದಲ್ಲಿ ಪಾರು ಮುಖ ಮಂಕಾಗುತ್ತದೆ. ಶಿವು ಮೆಡಿಕಲ್ ಕ್ಯಾಂಪ್ ಬಗ್ಗೆ ಚರ್ಚೆ ಮಾಡುತ್ತಾನೆ. ನಿನ್ನ ಗೆಳತಿಗೊಮ್ಮೆ ಕಾಲ್ ಮಾಡು ಎಂದು ಹೇಳುತ್ತಾನೆ. ಆದರೆ ಅವಳು ಕಾಲ್ ರಿಸೀವ್ ಮಾಡೋದಿಲ್ಲ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಪಾರು ಸಿದ್ದಾರ್ಥನ ಗುಂಗಿನಲ್ಲೇ ಮುಳುಗಿದ್ದಾಳೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.