Annayya Serial: ನವ ಜೋಡಿಗೆ ಆರತಿ ಮಾಡಿ ಬರಮಾಡಿಕೊಂಡ ಲೀಲ; ಮಾದಪ್ಪಣ್ಣನ ಮನೆಯಲ್ಲಿ ಸಿಹಿಯೂಟ ಮಾಡಿದ ಹೊಸ ಜೋಡಿ
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ನವ ಜೋಡಿಗೆ ಆರತಿ ಮಾಡಿ ಬರಮಾಡಿಕೊಂಡ ಲೀಲ; ಮಾದಪ್ಪಣ್ಣನ ಮನೆಯಲ್ಲಿ ಸಿಹಿಯೂಟ ಮಾಡಿದ ಹೊಸ ಜೋಡಿ

Annayya Serial: ನವ ಜೋಡಿಗೆ ಆರತಿ ಮಾಡಿ ಬರಮಾಡಿಕೊಂಡ ಲೀಲ; ಮಾದಪ್ಪಣ್ಣನ ಮನೆಯಲ್ಲಿ ಸಿಹಿಯೂಟ ಮಾಡಿದ ಹೊಸ ಜೋಡಿ

ಅಣ್ಣಯ್ಯ ಧಾರಾವಾಹಿ: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರಾವಾಹಿಯ ಇಂದಿನ ಎಪಿಸೋಡ್‌ನಲ್ಲಿ ಶಿವು ಹಾಗೂ ಪಾರು ಇಬ್ಬರೂ ಮಾದಪ್ಪಣ್ಣನ ಮನೆಗೆ ಊಟಕ್ಕೆ ಹೋಗಿದ್ದಾರೆ. ಅಲ್ಲಿ ಅವರನ್ನು ಸ್ವಾಗತ ಮಾಡಿ ಸತ್ಕರಿಸಿದ ರೀತಿ ಹೇಗಿತ್ತು? ಹಾಗೂ ಶಿವು, ಪಾರುಗೆ ಏನಾಯ್ತು? ಎಂಬ ಮಾಹಿತಿ ಇಲ್ಲಿದೆ.

ಶಿವು, ಪಾರುವನ್ನು ಆರತಿ ಮಾಡಿ ಬರಮಾಡಿಕೊಂಡ ಲೀಲ
ಶಿವು, ಪಾರುವನ್ನು ಆರತಿ ಮಾಡಿ ಬರಮಾಡಿಕೊಂಡ ಲೀಲ (ಜೀ ಕನ್ನಡ)

ಪಾರು ಹಾಗೂ ಶಿವು ಹೊಸದಾಗಿ ಮದುವೆಯಾದ ನವ ಜೋಡಿ ಆಗಿರುವ ಕಾರಣ ಮಾದಪ್ಪಣ್ಣನ ಮನೆಗೆ ಊಟಕ್ಕೆ ಕರೆದಿದ್ದಾರೆ. ಮೊದಲು ಕರೆದಾಗ ಅಲ್ಲಿಗೆ ಹೋಗಲು ಇಷ್ಟವಿಲ್ಲದ ಕಾರಣ ಅಣ್ಣಯ್ಯ ಸುಮ್ಮನಾಗಿದ್ದ. ಪಾರುಗೆ ಇದೆಲ್ಲ ಕಿರಿಕಿರಿ ಅನಿಸಬಹುದು ಎಂದು ಅಂದುಕೊಂಡಿದ್ದ. ಆದರೆ ಅನಿವಾರ್ಯವಾಗಿ ಈಗ ಹೋಗಲೇಬೇಕಾದ ಪ್ರಸಂಗ ಎದುರಾಗಿದೆ. ಹೀಗಾಗಿ ಶಿವು ಮನೆಯ ಎಲ್ಲರೂ ಇಂದು ಮಾದಪ್ಪಣ್ಣನ ಮನೆಗೆ ಹೋಗಿದ್ಧಾರೆ. ಅಲ್ಲಿಗೆ ಹೋಗಿರುವುದು ಎಲ್ಲರಿಗೂ ಸಂತಸವಾದರೆ, ಪಾರು ಮತ್ತು ಶಿವು ಮಾತ್ರ ಮುಜುಗರ ಮಾಡಿಕೊಳ್ಳುತ್ತಿದ್ದಾರೆ.

ಮದುವೆಯಾದ ಹೊಸತರಲ್ಲಿ ಮುಜುಗರ ಸಹಜ

ಮದುವೆಯಾದ ಹೊಸತರಲ್ಲಿ ಮುಜುಗರ ಇರುವುದು ಸಹಜ ಎಂದು ಮಾದಪ್ಪಣ್ಣ ಹೇಳುತ್ತಾರೆ. ಇನ್ನು ಪಾರು ಹಾಗೂ ಶಿವು ಮನೆಯ ಒಳಗಡೆ ಹೋಗುವ ಸಂದರ್ಭದಲ್ಲಿ ಲೀಲಮ್ಮ ಆರತಿ ಮಾಡುತ್ತಾರೆ. ಮದುವೆಯಾದ ಯಾವುದೇ ಹೊಸ ಜೋಡಿ ಊಟಕ್ಕೆ ಬರುತ್ತಾರೆ ಎಂದರೂ ಅಥವಾ ಮನೆಗೆ ಬಂದರೂ ಅವರಿಗೆ ಆರತಿ ಮಾಡುವುದು ಸಂಪ್ರದಾಯ. ಹೀಗಿರುವಾಗ ಮಾದಪ್ಪಣ್ಣ ಕೂಡ ತುಂಬಾ ಸಂತೋಷದಿಂದ ಅವರನ್ನು ಬರ ಮಾಡಿಕೊಂಡಿದ್ದಾನೆ.

ಒತ್ತಾಯಕ್ಕೆ ಸಿಹಿ ತಿಂದ ಪಾರು

ಇನ್ನು ಊಟಕ್ಕೆ ಆ ಮನೆಯ ಎಲ್ಲರನ್ನೂ ಮಾದಪ್ಪಣ್ಣನ ಹೆಂಡತಿ ಲೀಲಾ ಕರೆದಿದ್ದಾಳೆ. ಆ ಕಾರಣಕ್ಕಾಗಿ ಅವರೆಲ್ಲರೂ ಬಂದಿದ್ದಾರೆ. ಅದರಲ್ಲೂ ತುಂಬಾ ಖುಷಿಯಿಂದ ಊಟಕ್ಕೆ ಬರುವವಳೆಂದರೆ ಅಣ್ಣಯ್ಯನ ತಂಗಿ ರಶ್ಮಿ. ಹೀಗೆ ಅವರು ಮನೆಯ ಒಳಗಡೆ ಬರುತ್ತಿದ್ದಂತೆ ಬಾಗಿಲಲ್ಲೇ ನಿಲ್ಲಿಸಿ ಆರತಿ ಮಾಡಿ ಬರಮಾಡಿಕೊಳ್ಳುತ್ತಾರೆ. ಅದಾದ ನಂತರದಲ್ಲಿ, ಊಟಕ್ಕೆ ಬಡಿಸಿರುತ್ತಾರೆ. ಊಟಕ್ಕೆ ಬಡಿಸಿದಾಗ ಒಬ್ಬರಿಗೊಬ್ಬರು ತಿನ್ನಿಸಬೇಕು ಎಂಬ ಮಾತು ಬರುತ್ತದೆ. ಅದಕ್ಕೆ ಅಣ್ಣಯ್ಯನಿಗಂತು ತುಂಬಾ ಮುಜುಗರ ಆಗುತ್ತದೆ. ಅಷ್ಟೇ ಅಲ್ಲ ಪಾರು ಬೈದ್ರೆ ಏನ್ ಮಾಡೋದು ಎಂಬ ಅನುಮಾನವೂ ಆಗುತ್ತದೆ. ಆದರೆ ಅಲ್ಲಿನ ಪರಿಸ್ಥಿತಿ ಬೇರೆನೇ ಇರುತ್ತದೆ. ಎಲ್ಲರೂ ಒತ್ತಾಯ ಮಾಡಿ ತಿನ್ನಿಸಲು ಹೇಳಳುತ್ತಾರೆ.

ಆಗ ಮೊದಲಿಗೆ ಪಾರುನೇ ಅಣ್ಣಯ್ಯನಿಗೆ ಜಿಲೇಬಿ ತಿನ್ನಿಸುತ್ತಾಳೆ. ಆ ನಂತರದಲ್ಲಿ ಶಿವು ಭಯದಿಂದ ಪಾರು ಕಡೆ ನೋಡಿದಾಗ ಅವಳು ಪರವಾಗಿಲ್ಲ, ತಿನ್ನಿಸು ಎಂದು ಕಣ್ಣಿನಲ್ಲೇ ಸನ್ನೆ ಮಾಡುತ್ತಾಳೆ.. ಹೀಗೆ ಸನ್ನೆ ಮಾಡಿದನ್ನು ನೋಡಿ ಅವನು ಅವಳಿಗೆ ಸಿಹಿ ತಿನ್ನಿಸುತ್ತಾನೆ. ಹೀಗೆಲ್ಲ ಮಾಡಿದಾಗ ತಂಗಿಯರಿಗೆ ಖುಷಿ ಆಗುತ್ತದೆ.

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner