Annayya Serial: ಅಡಕತ್ತರಿಯಲ್ಲಿ ಸಿಕ್ಕಂತಾಗಿದೆ ಸೀನನ ಬದುಕು; ಇತ್ತ ರಶ್ಮಿ, ಅತ್ತ ಪಿಂಕಿ
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ರಶ್ಮಿ ಮದುವೆ ಆದಾಗಿನಿಂದಲೂ ಎಲ್ಲರಿಗೂ ಒಂದಲ್ಲ ಒಂದು ತೊಂದರೆ ಆಗುತ್ತಲೇ ಇದೆ. ಈ ಬಾರಿ ಸೀನ ಹಾಗೂ ಲೀಲಾ ಈ ತೊಂದರೆಯಲ್ಲಿ ಸಿಲುಕಿದ್ದಾರೆ.

ಅಣ್ಣಯ್ಯ ಧಾರಾವಾಹಿಯಲ್ಲಿ ಸೀನ ಹಾಗೂ ಲೀಲಾ ಇಬ್ಬರೂ ಪಿಂಕಿಯನ್ನು ನೋಡಿ ಗಾಬರಿಯಾಗಿದ್ದಾರೆ. ಲೀಲಾಗೆ ಪಿಂಕಿಯನ್ನು ತನ್ನ ಸೊಸೆಯಾಗಿಸಿಕೊಳ್ಳಬೇಕು ಎಂಬ ಮನಸಿತ್ತು. ಆದರೆ ಅನಿವಾರ್ಯ ಕಾರಣದಿಂದಾಗಿ ರಶ್ಮಿಯನ್ನು ತನ್ನ ಸೊಸೆ ಮಾಡಿಕೊಳ್ಳಬೇಕಾಗಿ ಬಂತು. ಆದರೆ, ಈ ವಿಚಾರದಿಂದ ಸೀನ ಹಾಗೂ ಲೀಲಾ ಇಬ್ಬರೂ ಸಾಕಷ್ಟು ನೊಂದಿದ್ದಾರೆ. ಪಿಂಕಿ ಕೂಡ ನೊಂದಿದ್ದಾಳೆ. ಆದರೆ, ಸತ್ಯ ಹೇಳಿ ಎಲ್ಲವನ್ನೂ ಸರಿ ಮಾಡಿಕೊಳ್ಳಬಹುದು ಎಂಬ ಸೂಚನೆ ಸಿಗುತ್ತಿಲ್ಲ. ಸತ್ಯವನ್ನು ರಶ್ಮಿ ಹಾಗೂ ಮಾದಪ್ಪಣ್ಣನ ಮುಂದೆ ಹೇಳುವ ಧೈರ್ಯ ಲೀಲಾ ಮತ್ತು ಸೀನನಿಗೂ ಇಲ್ಲ. ಪಿಂಕಿಯೂ ಈ ಸತ್ಯ ಹೇಳಲು ಮುಂದಾಗಿಲ್ಲ.
ಸೀನನ ಮನೆಗೆ ಬಂದ ಪಿಂಕಿ
ಒಂದು ದಿನ ಹಾಗೇ ಎಲ್ಲರೂ ಮನೆಯಲ್ಲಿರುವ ಸಂದರ್ಭದಲ್ಲೇ ಪಿಂಕಿ ಧೈರ್ಯ ಮಾಡಿ ಸೀನನ ಮನೆಗೆ ಬರುತ್ತಾಳೆ. ಮನೆ ಬಾಗಿಲಿನಲ್ಲಿ ನಿಂತು ಅನುಮಾನದಿಂದ ಒಳಗಡೆ ಬರಲೋ? ಬೇಡವೋ ಎನ್ನುವಂತೆ ನೋಡುತ್ತಾ ಇರುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬಂದ ರಶ್ಮಿ, ಪಿಂಕಿಯನ್ನು ಕಂಡು “ಬಾ ಪಿಂಕಿ” ಎಂದು ಕರೆಯುತ್ತಾಳೆ. ಅವಳು ಕರೆದ ತಕ್ಷಣ ಮುಜುಗರ ಆಗುತ್ತಿದ್ದರೂ ಸಹ ಪಿಂಕಿ ಮನೆಯೊಳಗಡೆ ಬರುತ್ತಾಳೆ. ಅವಳು ಬಂದ ತಕ್ಷಣ ರಶ್ಮಿ ಮಾದಪ್ಪಣ್ಣನಿಗೆ ಪಿಂಕಿಯ ಪರಿಚಯ ಮಾಡಿಕೊಡುತ್ತಾಳೆ. “ಇವಳು ನನ್ನ ಗೆಳತಿ, ನಾನು ಮತ್ತು ಇವಳು ಇಬ್ಬರೂ ಒಂದೇ ಜಿಮ್‌ಗೆ ಹೋಗುತ್ತಿದ್ದೆವು” ಎಂದು ಹೇಳುತ್ತಾಳೆ.
ಅದಾದ ನಂತರದಲ್ಲಿ ಮಾದಪ್ಪಣ್ಣ “ ಹಾ ನನಗೂ ಗೊತ್ತು, ಅವತ್ತು ದೇವಸ್ಥಾನದಲ್ಲಿ ಬಿದ್ದವಳು ನೀನೇ ಅಲ್ವೇನಮ್ಮ?” ಎಂದು ಪ್ರಶ್ನೆ ಮಾಡುತ್ತಾರೆ. ಆಗ ಪಿಂಕಿ “ಬಿದ್ದವಳು ನಾನೇ, ಆದ್ರೆ ಬೀಳಿಸಿದವರು ಬೇರೆ” ಎಂದು ಹೇಳುತ್ತಾಳೆ. ಆಗ ಸೀನನ ಮುಖವನ್ನೇ ದುರುಗುಟ್ಟಿಕೊಂಡು ನೋಡುತ್ತಿರುತ್ತಾಳೆ. ಸೀನನಿಗೆ ಒಳಗನಿಂದ ಭಯ ಆದರೂ ಅಪ್ಪನ ಮುಂದೆ ಏನನ್ನೂ ಹೇಳಿಕೊಳ್ಳಲಾಗದೆ ಸುಮ್ಮನಿರುತ್ತಾನೆ. ಇತ್ತ ಲೀಲಾಗೆ ಎಷ್ಟು ಬಾರಿ ಪಿಂಕಿಯನ್ನು ನೋಡಿದರೂ ಇವಳೇ ನನ್ನ ಸೊಸೆ ಆಗಬೇಕಿತ್ತು ಎಂಬ ಹಂಬಲವಾಗುತ್ತದೆ.
ಅಣ್ಣಯ್ಯ ಧಾರಾವಾಹಿ
ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ.
ಅಣ್ಣಯ್ಯ ಸೀರಿಯಲ್ ಪಾತ್ರವರ್ಗ
ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.
ವಿಕಾಸ್ ಉತ್ತಯ್ಯ - ಶಿವು
ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್ ನಾಯಕಿಯಾಗಿದ್ದಾರೆ.
ನಿಶಾ ರವಿಕೃಷ್ಣನ್ - ಪಾರು
ಅಂಕಿತಾ ಗೌಡ, ನಾಗಶ್ರೀ ಬೇಗಾರ್, ಪ್ರತೀಕ್ಷಾ ಶರೀನಾಥ್ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.
