Annayya Serial: ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ; ಶಿವು, ಪಾರು ನೃತ್ಯ ಕಣ್ತುಂಬಿಕೊಂಡ ವೀಕ್ಷಕರು
ಕನ್ನಡ ಸುದ್ದಿ  /  ಮನರಂಜನೆ  /  Annayya Serial: ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ; ಶಿವು, ಪಾರು ನೃತ್ಯ ಕಣ್ತುಂಬಿಕೊಂಡ ವೀಕ್ಷಕರು

Annayya Serial: ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ; ಶಿವು, ಪಾರು ನೃತ್ಯ ಕಣ್ತುಂಬಿಕೊಂಡ ವೀಕ್ಷಕರು

Annayya Serial: ಅಣ್ಣಯ್ಯ ಧಾರಾವಾಹಿ ಕಲಾವಿದರು ಸಂಕ್ರಾಂತಿ ಸಂಭ್ರಮದಲ್ಲಿದ್ದಾರೆ. ವಿಶೇಷ ಕಾರ್ಯಕ್ರಮದಲ್ಲಿ ಅಣ್ಣಯ್ಯ ಹಾಗೂ ಪಾರು ಇಬ್ಬರೂ ನೃತ್ಯ ಮಾಡಿ ವೀಕ್ಷಕರನ್ನು ರಂಜಿಸಿದ್ದಾರೆ. ಶಿವು ಪಾತ್ರಧಾರಿ ವಿಕಾಸ್ ಉತ್ತಯ್ಯ ಅವರ ತಂದೆ, ತಾಯಿ ಕೂಡ ನೃತ್ಯ ಮಾಡಿದ್ದಾರೆ.

ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ
ಅಣ್ಣಯ್ಯ ಧಾರಾವಾಹಿ ಸಂಕ್ರಾತಿ ಸಂಭ್ರಮ (Zee Kannada)

'ಅಣ್ಣಯ್ಯ ಧಾರಾವಾಹಿ' ಹಾಗೂ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಕಲಾವಿದರು 'ಸಂಕ್ರಾಂತಿ ಸಂಭ್ರಮ' ಎಂಬ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಶಾಲಿನಿ ಈ ಕಾರ್ಯಕ್ರಮ ನಿರೂಪಣೆ ಮಾಡಿದ್ದಾರೆ. ಶಿವು ಹಾಗೂ ಪಾರು ನೃತ್ಯ ಮಾಡುವ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ಜೀ ವಾಹಿನಿ ಇವರಿಬ್ಬರ ನೃತ್ಯವನ್ನು ಹಂಚಿಕೊಂಡಿದ್ದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೃತ್ಯ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು” ಎನ್ನುತ್ತಾ ಪಾರು ನೃತ್ಯ ಮಾಡಿದ್ದಾಳೆ. ಶಿವು ಪಾರುಗೆ ಜತೆಯಾಗಿದ್ದಾರೆ. ಪಾರು ಪಾತ್ರಧಾರಿ ನಿಶಾ ರವಿಕೃಷ್ಣ ಹಾಗೂ ಶಿವು ಪಾತ್ರಧಾರಿ ವಿಕಾಸ್‌ ಉತ್ತಯ್ಯ ಇಬ್ಬರೂ ಜನ ಮನ ಸೆಳೆದಿದ್ದಾರೆ. ಈ ಜೋಡಿಯನ್ನು ಜನ ಮೆಚ್ಚಿಕೊಂಡಿದ್ದು, ಧಾರಾವಾಹಿಯಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಇವರಿಬ್ಬರು ಒಂದಾದರೆ ಒಳ್ಳೆ ಜೋಡಿ ಎನ್ನುತ್ತಿದ್ದಾರೆ.

ಸಂಕ್ರಾಂತಿ ಸಂಭ್ರಮ

ಅಣ್ಣಯ್ಯ ಧಾರಾವಾಹಿಯ ಎಲ್ಲ ಕಲಾವಿದರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಅಣ್ಣಯ್ಯನ ಕುಟುಂಬ, ಅಣ್ಣಯ್ಯನ ಎಲ್ಲ ತಂಗಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನಿರೂಪಕಿ ಶಾಲಿನಿ “ಅಣ್ಣಯ್ಯ ಎಂದು ಎಲ್ಲರೂ ನಿಮ್ಮನ್ನು ಕರಿತಾರಲ್ಲ ಆಗ ನಿಮಗೆ ಹೇಗನಿಸುತ್ತದೆ?” ಎಂದು ಪ್ರಶ್ನೆ ಮಾಡಿದ್ಧಾರೆ. ಆಗ “ಅಣ್ಣಯ್ಯ ಎಂದರೆ ಅದೊಂದು ಪದವಿ, ಅಷ್ಟೇ ದೊಡ್ಡ ಜವಾಬ್ದಾರಿ, ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ನಂತರ ವೇದಿಕೆ ಮೇಲೆ ವಿಕಾಸ್‌ ಉತ್ತಯ್ಯ ಅವರ ತಂದೆ, ತಾಯಿ ಕೂಡ ಆಗಮಿಸಿ ಪ್ರಶಂಸೆ ಹಾಗೂ ಖುಷಿ ವ್ಯಕ್ತಪಡಿಸಿದ್ದಾರೆ. ಜತೆಗೆ ಅವರೂ ವೇದಿಕೆ ಮೇಲೆ ನೃತ್ಯ ಮಾಡಿದ್ದಾರೆ.

ಅಣ್ಣಯ್ಯ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಅಣ್ಯಯ್ಯ ಎಂಬ ಅಣ್ಣ ತಂಗಿಯರ ಬಾಂಧವ್ಯದ ಸೀರಿಯಲ್‌ ಮೂಡಿ ಬರುತ್ತಿದ್ದು ಹೆಚ್ಚಿನ ಜನರು ಇದನ್ನು ವೀಕ್ಷಿಸುತ್ತಿದ್ದಾರೆ. ಮಾರಿಗುಡಿ ಶಿವಣ್ಣ ಮತ್ತು ಆತನ ಸಹೋದರಿಯರ ಕಥೆ ಹೊಂದಿರುವ ಈ ಸೀರಿಯಲ್‌ ಪ್ರೇಕ್ಷಕರ ಗಮನ ಸೆಳೆದಿದೆ. ತನ್ನ ತಂಗಿಯರಿಗಾಗಿ ಇಡೀ ಜೀವನವನ್ನೇ ಮುಡಿಪಿಟ್ಟ ಅಣ್ಣಯ್ಯ ಕೊನೆಗೂ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪಾರು ಮೇಲೆ ಅವನಿಗೆ ಮನಸಾಗಿದೆ. ಮದುವೆ ಕೂಡ ಆಗಿದೆ. ಆದರೆ ಇನ್ನೂ ಪಾರು ಹಾಗೂ ಅಣ್ಣಯ್ಯ ಒಂದಾಗಿಲ್ಲ. ಅವರಿಬ್ಬರು ಯಾವಾಗ ಒಂದಾಗುತ್ತಾರೆ ಎಂಬ ಕುತೂಹಲವೇ ಧಾರಾವಾಹಿಯನ್ನು ರೋಚಕಗೊಳಿಸುತ್ತಿದೆ.

ಅಣ್ಣಯ್ಯ ಸೀರಿಯಲ್‌ ಪಾತ್ರವರ್ಗ

ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ಅಣ್ಣಯ್ಯ ಧಾರಾವಾಹಿ ಜೀ ಕನ್ನಡದಲ್ಲಿ ರಾತ್ರಿ 7.30 ಗಂಟೆಗೆ ಪ್ರಸಾರವಾಗುತ್ತಿದೆ. ಝೀ 5 ಒಟಿಟಿಯಲ್ಲೂ ಈ ಸೀರಿಯಲ್‌ ನೋಡಬಹುದು.ಅಣ್ಣಯ್ಯ ಸೀರಿಯಲ್‌ನಲ್ಲಿ ವಿಕಾಸ್‌ ಉತ್ತಯ್ಯ ನಾಯಕನಾಗಿ ನಟಿಸಿದ್ದಾರೆ.

ವಿಕಾಸ್‌ ಉತ್ತಯ್ಯ - ಶಿವು

ಗಟ್ಟಿಮೇಳ ಖ್ಯಾತಿಯ ನಿಶಾ ರವಿಕೃಷ್ಣನ್‌ ನಾಯಕಿಯಾಗಿದ್ದಾರೆ.

ನಿಶಾ ರವಿಕೃಷ್ಣನ್‌ - ಪಾರು

ಅಂಕಿತಾ ಗೌಡ, ನಾಗಶ್ರೀ ಬೇಗಾರ್‌, ಪ್ರತೀಕ್ಷಾ ಶರೀನಾಥ್‌ ಮತ್ತು ರಾಘವಿ ಅಣ್ಣಯ್ಯನ ತಂಗಿಯರಾಗಿ ಅಭಿನಯಸಿದ್ದಾರೆ. ಅಣ್ಣಯ್ಯ ಸೀರಿಯಲ್‌ನ ಎಲ್ಲಾ ಎಪಿಸೋಡ್‌ಗಳ ಕಥೆ ಇಲ್ಲಿ ಓದಬಹುದು.

Whats_app_banner